Srirastu Shubhamastu ; ತುಳಸಿ ಮಾಧವನ ಮದುವೆ ಸಂಭ್ರಮ ,ಧಾರೆ ಸೀರೆಯಲ್ಲಿ ಕಂಗೊಳಿಸಿದ ನಟಿ..!

By ಪೂರ್ವ

ಶಾರ್ವರಿ ಮದುವೆ ಮನೆಯಲ್ಲಿ ಕೂಡ ಅಣ್ಣ ತಮ್ಮಂದಿರ ಮಧ್ಯೆ ಹುಳಿ ಹಿಂಡುವುದನ್ನು ಬಿಟ್ಟಿಲ್ಲ. ಯಾಕೆಂದರೆ ಆಕೆಗೆ ರಾಮ ಲಕ್ಷ್ಮಣ ನ ಹಾಗೆ ಇರುವ ಅಣ್ಣ ತಮ್ಮಂದಿರು ಯಾವತ್ತೂ ಒಂದಾಗದ ಹಾಗೆ ಆಗಬೇಕು ಅವರಿಬ್ಬರೂ ಬೇರೆ ಬೇರೆಯಾಗಿ ಉಳಿಯಬೇಕು ಎಂಬ ಆಸೆ. ಆದರೆ ಅಭಿ ಶಾರ್ವರಿಯ ಮಾತು ಕೇಳುತ್ತಾನೆ ಆದರೆ ಕೇಳುವುದಿಲ್ಲ ಅವಳಿಗೆ ತನ್ನ ತಂದೆ ಮಾದವನ ಮೇಲೆ ಬಹಳಷ್ಟು ಕೋಪ ಇತ್ತು ಆದರೆ ತುಳಸಿ ಅವಿಯ ಬಳಿ ನೀನು ಮಾಡುತ್ತಿರುವುದು ಸರಿಯಲ್ಲ.ನೀನು ಮಾಡುತ್ತಿರುವ ಕೆಲಸ ತಪ್ಪು ಎಂದು ಕೊಂಚ ಖಡಕ್ ಆಗಿ ಹೇಳುತ್ತಾಳೆ. ಆದರೆ ತನ್ನ ತಪ್ಪನ ಅರಿತು ತನ್ನ ತಂದೆಯ ಜೊತೆ ಕ್ಷಮೆಯಾಚಿಸುತ್ತಾನೆ ಅವಿ . ಆದರೆ ಇದರಿಂದ ಶಾರ್ವರಿ ಕೊಂಚ ವಿಚಲಿತಳಾಗುತ್ತಾಳೆ. ಅಭಿ ಇದೀಗ ತುಳಸಿ ಹಾಗೂ ಮಾಧವನ ಪರ ಸೇರಿಕೊಂಡಿದ್ದಾನೆ ಆದರೆ ಅಭಿ ಕೂಡ ಹಾಗೆ ಆಗಬಹುದು ಎನ್ನುವ ಆಲೋಚನೆ ಶಾರ್ವರಿಗೆ ಇರುತ್ತದೆ.

ಹೀಗೆ ಆಗಬಾರದು , ಒಂದಾಗಿರುವ ಅವಿ ಹಾಗೂ ಅಭಿ ದೂರ ದೂರ ಆಗಬೇಕು ಅವರಿಬ್ಬರು ದೂರವಾದರೆ ನಮಗೆ ಬಹಳ ಲಾಭ ಇದೆ. ಮಾಧವ ಕಣ್ಣೀರಲ್ಲಿ ಕೈ ತೊಳೆಯುವುದೇ ನನ್ನ ಉದ್ದೇಶ ಎಂದು ಮನದಲ್ಲಿ ಹೇಳುತ್ತಾಳೆ. ಇನ್ನೂ ತುಳಸಿ ಮಾತ್ರ ಮದುವೆಯ ದಿನ ಹತ್ತಿರ ಬರುತ್ತಿದ್ದ ಹಾಗೆಯೇ ಮದುಮಗಳ ಕಳೆ ಉಕ್ಕಿ ಹರಿಯುತ್ತದೆ. ಇನ್ನೂ ಸಮರ್ಥ್ ಗೆ ತನ್ನ ಅಮ್ಮನ ಮದುವೆಯ ಭಾಗ್ಯ ಸಿಕ್ಕಿದೆ. ಆಕೆಗಾಗಿ ಸಮರ್ಥ್ ಸೀರೆಯನ್ನು ತಂದಿರುತ್ತಾನೆ. ಅಮ್ಮ ಧಾರೆ ಸೀರೆ ನಿನಗೆ ತಂದಿದ್ದೇನೆ. ನೀನು ಈ ಸಾರಿ ಉಟ್ಟುಕೊಂಡು ಹಸೆಮಣೆ ಏರಬೇಕು ಎಂದು ಹೇಳುತ್ತಾರೆ.

srirastu shubhamastu serial 2th August written update

ಮಕ್ಕಳ ಮನಸ್ಸಿಗೆ ಬೇಸರ ಮಾಡದ ತುಳಸಿ

ಇದನ್ನು ಕೇಳಿದ ತುಳಸಿ ಗೆ ಬಹಳ ಖುಷಿ ಆಗುತ್ತದೆ. ಪುಟ್ಟ ನೀನು ನನಗೆ ಸೀರೆ ಕೊಟ್ಟಿದ್ದಿಯಾ? ನನಗೆ ಇದಕ್ಕಿಂತ ದೊಡ್ಡ ಖುಷಿ ಬೇರೆ ಯಾವುದೂ ಕೂಡ ಇಲ್ಲ. ಈ ಸೀರೆಯನ್ನು ನಾನು ಧಾರೆಗೆ ಉಟ್ಟುಕೊಳ್ಳುತ್ತೇನೆ ಎಂದು ಹೇಳಿದಾಗ ಇತ್ತ ಕಡೆಯಿಂದ ಪೂರ್ಣಿಮಾ ಹಾಗೂ ಅವಿ ಬರುತ್ತಾರೆ. ಅಮ್ಮ ನಿಮ್ಮ ಮದುವೆಗೆ ಧಾರೆ ಸೀರೆ ತಂದಿದ್ದೇವೆ ನೀವು ಈ ಸಾರಿ ಉಟ್ಟುಕೊಂಡು ದಯವಿಟ್ಟು ಹಸೆಮಣೆ ಏರಬೇಕು ಎಂದು ಹೇಳಿದಾಗ ಸಮರ್ಥ್ ಮನಸ್ಸಿಗೆ ಕೊಂಚ ಬೇಸರ ಆಗುತ್ತದೆ.

ಅವಿ ಕೊಟ್ಟ ಸೀರೆ ನೋಡಿ ಬೇಸರಗೊಂಡ ಸಮರ್ಥ್

ಆಗ ತುಳಸಿ ಗೆ ಎನು ಮಾಡಬೇಕು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ. ಮದುವೆಯ ದಿನ ಬಂತು. ಎಲ್ಲರೂ ಖುಷಿಯಿಂದ ಇರುತ್ತಾರೆ. ಮಧವನನ್ನು ಮದುಮಗನ ಹಾಗೆ ಸಿಂಗಾರ ಮಾಡಿ ಮಂಟಪಕ್ಕೆ ಕರೆದುಕೊಂಡು ಬರುತ್ತಾರೆ. ಹಾಗೆಯೇ ತುಳಸಿಯನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಬರಬೇಕಾದರೆ ತುಳಸಿಗೆ ಬಹಳ ಖುಷಿ ಆಗುತ್ತದೆ. ಹಾಗೆಯೇ ಅಮ್ಮನನ್ನು ನೋಡಿದ ಸಮರ್ಥ್ ಹಾಗೂ ಅವಿಗೆ ಕೂಡ ಬಹಳ ಖುಷಿ ಆಗುತ್ತದೆ.

srirastu-shubhamastu-serial-2th-august-written-update

ತುಳಸಿ ನೋಡಿ ಖುಷಿಪಟ್ಟ ಸಮರ್ಥ್

ಇನ್ನೂ ತುಳಸಿ ಇಬ್ಬರ ಕಡೆಗೂ ನೋಡಿ ಸೀರೆ ಚೆನ್ನಾಗಿದೆಯಾ ಎಂದು ಕೇಳಿದಾಗ ಇಬ್ಬರಿಗೂ ಖುಷಿ ಆಗುತ್ತದೆ. ಹಾಗೆಯೇ ಸಮರ್ಥ್ ಅವಿಯನ್ನು ಅಣ್ಣ ಎಂದು ಕರೆದಾಗ ಮಾತ್ರ ಅಭಿ ಗೆ ಕೊಂಚ ಸಿಟ್ಟು ಹೆಚ್ಚಾಗಿ ಬಿಡುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X