Srirastu Shubhamastu ;ತುಳಸಿ ಮಾಧವ ಮರು ಕಲ್ಯಾಣ,ಮನೆಯವರ ಖುಷಿಗೆ ಅಡ್ಡಗಾಲಾಗುತ್ತಾಳಾ ದೀಪಿಕಾ?

By ಪೂರ್ವ

ಮಾಧವ ಹಾಗೂ ತುಳಸಿ ಮರು ಮದುವೆಗೆ ಬಹಳ ಅದ್ದೂರಿಯಾಗಿ ತಯಾರಾಗುತ್ತಿದೆ. ತುಳಸಿಗೆ ಮರು ಮದುವೆಯಾಗಲು ಅಷ್ಟೊಂದು ಇಷ್ಟವಿರುವುದಿಲ್ಲ ಮನೆಯವರ ಒತ್ತಾಯಕ್ಕೆ ಮಣಿದು ಆಕೆ ಮರುಮದುವೆಗೆ ಒಪ್ಪಿಗೆ ನೀಡುತ್ತಾಳೆ. ತುಳಸಿಗೆ ಮುಜುಗರ ಏಕೆಂದರೆ ಎದೆ ಎತ್ತರಕ್ಕೆ ಬೆಳೆದ ಮಕ್ಕಳಿರಬೇಕಾದರೆ ನಾವು ಪುನಃ ಮದುವೆಯಾಗುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಆಕೆಯ ವಾದ ಆದರೆ ಆಕೆಯ ಮದುವೆ ನೋಡಲೇಬೇಕೆನ್ನುವುದು ಆಕೆಯ ಮಕ್ಕಳ ಆಸೆ ಕೂಡ ತನ್ನ ತಂದೆ ತಾಯಿ ಮದುವೆಯಾದರು ಅವರ ಮದುವೆಯನ್ನು ನಮಗೆ ಕಣ್ಣಾರೆ ನೋಡಲು ಸಾಧ್ಯವಾಗಲಿಲ್ಲ ಎನ್ನುವುದು ಮಕ್ಕಳಿಗೆ ಕೊರಗಿತ್ತು.

ಆದರೆ ಇದೀಗ ವಿವಾಹ ವಾರ್ಷಿಕೋತ್ಸವದ ದಿನ ಮಕ್ಕಳೆಲ್ಲರೂ ಸೇರಿ ತಂದೆ ತಾಯಿಗೆ ಮತ್ತೊಮ್ಮೆ ಮರುಮದುವೆ ಮಾಡಿಸುವ ತಯಾರಿಯಲ್ಲಿದ್ದಾರೆ. ಇನ್ನು ಸಿರಿ ತುಳಸಿಯನ್ನ ಅದೆಷ್ಟೋ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ಚೆನ್ನಾಗಿ ಮಸಾಜ್ ಗಳನ್ನು ಮಾಡಿಸಿಕೊಂಡು ಬನ್ನಿ ಎಂದು ಎಷ್ಟೇ ಹೇಳಿದರು ಕೂಡ ಆಕೆ ಒಪ್ಪಿರುವುದಿಲ್ಲ ಕೊನೆಗೆ ಎಲ್ಲರ ಒತ್ತಡಕ್ಕೆ ಮಣಿದು ಬ್ಯೂಟಿ ಪಾರ್ಲರ್ಗೆ ಹೋಗಿ ಮನೆಗೆ ಬರುತ್ತಾಳೆ ತುಳಸಿಯನ್ನ ನೋಡಿದ ಸಿರಿ ಹೇಳುತ್ತಾಳೆ ಅತ್ತೆ ಇದೀಗ ನಿಮ್ಮ ಮುಖಕ್ಕೊಂದು ಕಳೆ ಬಂದಿದೆ ನೀವು ಇವಾಗ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ ಹುಣ್ಣಿಮೆ ಚಂದ್ರನ ಹಾಗೆ ಮಿರಮಿರ ಎಂದು ಮಿಂಚುತ್ತಿದ್ದೀರಾ ಎಂದು ಹೇಳುತ್ತಾಳೆ

srirastu shubhamastu serial 30th july written update

ಇದನ್ನು ಕೇಳಿದ ತುಳಸಿ ಪುಟ್ಟ ಎಂದು ಹೇಳಿದಾಗ ಮತ್ತೆ ಯಾರು ಹೀಗೆ ಹೇಳಿದರು ಎಂದು ಕೇಳಿದಾಗ ತುಳಸಿಗೆ ಕೊಂಚ ನಾಚಿಕೆಯಾಗುತ್ತದೆ ಸಂಧ್ಯಾ ಅಮ್ಮನಿಗಾಗಿ ಜ್ಯೂಸ್ ಮಾಡಿಕೊಳ್ಳುತ್ತಾಳೆ ಆಗ ಅಡುಗೆ ಮನೆಯಲ್ಲಿ ಏನಾದರೂ ಕೆಲಸ ಇದ್ದರೆ ಹೇಳಿ ನಾನು ಬಂದು ಸೇರುತ್ತೇನೆ ಎಂದು ಹೇಳಿದಾಗ ಸಿರಿ ಹೇಳುತ್ತಾಳೆ. ಅಮ್ಮ ಅಡುಗೆ ಮನೆಯಲ್ಲಿ ನೀವು ಮಾಡುವಂತಹ ಕೆಲಸ ಏನು ಇಲ್ಲ ಎಲ್ಲವನ್ನ ನಾವು ಮಾಡಿ ಮುಗಿಸಿದ್ದೇವೆ ನೀವು ಮದುಮಗಳು ಮದುಮಗಳ ಹಾಗೆಯೇ ಇರಿ ನೀವು ಎಂದು ಹೇಳಿ ಅತ್ತೆಯನ್ನು ಸಿಂಗಾರ ಮಾಡಬೇಕು ಎಂದು ಕರೆದುಕೊಂಡು ಹೋಗಬೇಕಾದರೆ ಅತ್ತ ಕಡೆಯಿಂದ ಮಾಧವ ತನ್ನ ಹೆಂಡತಿಯನ್ನು ನೋಡಿ ಸನ್ನೆ ಮಾಡುತ್ತಿರುತ್ತಾನೆ.

ಮಾಧವನ ಸನ್ನೆ ನೋಡಿ ನಾಚಿ ನೀರಾದ ತುಳಸಿ

ಆತ ಸನ್ನೆ ಮಾಡುತ್ತಿರುವುದನ್ನು ನೋಡಿದ ಸಿರಿ ಹಾಗೂ ಪೂರ್ಣಿಮಾ ಎಲ್ಲರೂ ಕೂಡ ಓಹೋ ಹುಣ್ಣಿಮೆ ಚಂದ್ರ ಎಂದು ಹೇಳಿದ್ದು ಯಾರು ಎನ್ನುವುದು ನಮಗೆ ತಿಳಿಯಿತು ಎಂದು ಜೋರಾಗಿ ಕಿರುಚುತ್ತಾರೆ. ಅವರ ಮಾತು ಕೇಳಿದ ತುಳಸಿ ನಾಚಿ ನೀರಾಗುತ್ತಾಳೆ. ತುಳಸಿಯನ್ನು ಮದುಮಗಳ ಹಾಗೆ ಸಿಂಗಾರ ಮಾಡಲಾಗುತ್ತದೆ. ತುಳಸಿ ಯ ಸಿಂಗಾರ ಮುಗಿದ ಬಳಿಕ ಆಕೆಯ ಮುಖ ನೋಡಿದ ಪೂರ್ಣಿಮಾ ಅತ್ತೆ ನೀವು ಅದೆಷ್ಟು ಮುದ್ದು ಮುದ್ದಾಗಿ ಕಾಣಿಸುತ್ತಿದ್ದಿರಾ? ಎಂದು ಹೇಳಿದಾಗ ತುಳಸಿ ಗೆ ನಾಚಿಗೆ ಆಗಿ ಕೊಂಚ ಕೋಪ ಬಂದವರ ಹಾಗೆ ನಟನೆ ಮಾಡುತ್ತಾರೆ.

srirastu-shubhamastu-serial-30th-july-written-update

ಮಕ್ಕಳ ಮಾತಿಗೆ ಹುಸಿ ಮುನಿಸು ಮಾಡಿಕೊಂಡ ತುಳಸಿ

ಈ ವಯಸ್ಸಲ್ಲಿ ಇದೆಲ್ಲ ಬೇಕ? ಮದುವೆ ಆದ ದಿನಕ್ಕೆ ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿದ್ದರೆ ಸಾಕಿತ್ತು ಎಂದು ಹೇಳಿದಾಗ ಸಿರಿ ಮತ್ತು ಪೂರ್ಣಿಮಾ ಹೇಳುತ್ತಾರೆ ಅವೆಲ್ಲ ಆಗುವುದು ಇಲ್ಲ. ನೀವು ನಮ್ಮ ಎಲ್ಲರೆದುರು ಮದುವೆ ಆಗಬೇಕು. ಆಗ ನಮಗೆ ಒಂದು ಖುಷಿ ಎಂದು ಹೇಳಿದಾಗ ತುಳಸಿ ಸುಮ್ಮನಾಗುತ್ತಾರೆ. ಇತ್ತ ಶಾರ್ವರಿ ಮತ್ತು ದೀಪಿಕಾ ಇವರಿಬ್ಬರೂ ಮನೆ ಮಂದಿಯನ್ನು ದೂಷಣೆ ಮಾಡುತ್ತಿರುತ್ತಾರೆ. ದೀಪಿಕಾ ಮನೆ ಮಂದಿಯ ಖುಷಿ ಗೆ ಎಳ್ಳು ನೀರು ಬಿಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X