Srirastu Shubhamastu ; ತುಳಸಿ ಬಿಗಿದಪ್ಪಿ ಚುಂಬಿಸಿದ ಮಾಧವ, ನಾಚಿ ನೀರಾದ ಪತ್ನಿ ..!
ತುಳಸಿ ಬುದ್ಧಿವಾದ ಅರಿತ ಅವಿನಾಶ್ ತನ್ನ ತಂದೆಯನ್ನು ಇದುವರೆಗೆ ಕೂಡ ದ್ವೇಷ ಮಾಡಿಕೊಂಡು ಬಂದೆ. ಅವರಿಗೆ ತನ್ನಿಂದ ಅದೆಷ್ಟು ನೋವು ಆಗಿರಬೇಡ. ಆದರೆ ಆ ನೋವನ್ನು ಅದ್ಯಾರ ಬಳಿಯೂ ಹೇಳಿಕೊಳ್ಳದೆ ಒಬ್ಬರೇ ಅನುಭವಿಸುವ ಹಾಗೆ ಆಯಿತಲ್ಲ ಎಂದು ಬಹಳ ಬೇಸರ ಪಟ್ಟುಕೊಂಡು ಇರುತ್ತಾನೆ. ತನ್ನ ಮಗನಿಗೆ ಏನು ಆಗ ಬಾರದು ಎನ್ನುವ ಉದ್ದೇಶದಿಂದ ಮಾಧವ ಅವಿನಾಶ್ ಗೆ ಗೂಂಡಾಗಳು ಹೊಡೆಯುವ ಸಂದರ್ಭದಲ್ಲಿ ಮಾಧವ ಅಡ್ಡ ಬರುತ್ತಾನೆ. ಅವಿನಾಶ್ ಗೆ ಬೀಳುವ ಪೆಟ್ಟು ನೇರವಾಗಿ ಮಾಧವನಿಗೆ ಬೀಳುತ್ತದೆ.
ಆದರೆ ಇದೆಲ್ಲವನ್ನೂ ನೋಡಿದ ಅವಿನಾಶ್ ಗೆ ತನ್ನಿಂದ ಆದ ತಪ್ಪು ಏನು ಎಂಬುವುದು ಅರಿವಾಗುತ್ತದೆ. ಆಫೀಸ್ ಗೆ ಹೋಗಬೇಕಾದರೆ ಅದೆಷ್ಟು ಬಾರಿ ತನ್ನ ತಂದೆಯನ್ನು ಅವಮಾನ ಮಾಡಿದ್ದೇನೋ, ಸಣ್ಣ ವಯಸ್ಸಿನಿಂದಲೂ ತನ್ನ ತಂದೆಯೊಂದಿಗೆ ಮಾತನಾಡದೆ ಅವರಿಗೆ ಎಷ್ಟು ಸಂಕಟವಾಗಿದೆಯೋ ಎಂದು ತಿಳಿದು ಬಹಳ ನೋವು ಅನುಭವಿಸುತ್ತಾನೆ. ಆದರೆ ಇದೀಗ ಬೆಳಗ್ಗೆ ಎದ್ದ ಕೂಡಲೇ ಅವಿನಾಶ್ ತನ್ನ ತಂದೆಗಾಗಿ ಸ್ಪೆಷಲ್ ಕಾಫಿ ರೆಡಿ ಮಾಡುತ್ತಿರುತ್ತಾನೆ.

ಆತನಿಗೆ ತನ್ನ ತಂದೆಯನ್ನು ಇನ್ನಾದರೂ ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಬಯಕೆ.ಅಪ್ಪ ಆದಷ್ಟು ಬೇಗ ಚೇತರಿಕೆಯನ್ನು ಹೊಂದಲೀ.ಅಪ್ಪ ಎಲ್ಲರ ಹಾಗೆ ಓಡಾಡಿಕೊಂಡು ಖುಷಿಯಾಗಿರಬೇಕು ಎನ್ನುವುದು ಅವಿನಾಶ್ ಬಯಕೆ. ಇನ್ನೂ ಅಡುಗೆ ರೂಮ್ ಗೆ ತುಳಸಿ ಹಾಗೂ ಪೂರ್ಣಿಮಾ ಬರುತ್ತಾರೆ. ಅವಿನಾಶ್ ಕಾಫಿ ಮಾಡುತ್ತಿರುವುದು ನೋಡಿ ಶಾಕ್ ಆಗುತ್ತದೆ ಅವರಿಬ್ಬರಿಗೆ.ಇದ್ಯಾರಿಗೆ ಕಾಫಿ ಎಂದಾಗ ಅವಿ ಅದು ಅವರಿಗೆ ಎಂದು ಹೇಳುತ್ತಿರುತ್ತಾನೆ. ಕೊನೆಗೆ ತನ್ನ ಅಪ್ಪನಿಗೆ ಎಂದು ಹೇಳುತ್ತಾನೆ.
ಅಪ್ಪನಿಗಾಗಿ ಬಿಸಿ ಬಿಸಿ ಕಾಫಿ ಮಾಡಿದ ತುಳಸಿ
ಇದನ್ನು ಕೇಳಿದ ಪೂರ್ಣಿಮಾ ಹಾಗೂ ತುಳಸಿ ಗೆ ನಗು ಬರುತ್ತದೆ. ಹಾಗೆಯೇ ಅವಿನಾಶ್ ಹಿಂದೆ ಹೋಗುತ್ತಾರೆ. ಮಾಧವ ಬೆಡ್ ಮೇಲೆ ಮಲಗಿ ಇರುತ್ತಾರೆ. ಅಪ್ಪ ಎಂದು ಅವಿ ಕರೆದ ಧ್ವನಿ ಕೇಳಿದ ಮಾಧವ ಮೆತ್ತಗೆ ಕಣ್ಣು ತೆರೆದು ನೋಡುತ್ತಾನೆ. ಅವಿನಾಶ್ ಅಪ್ಪ ಎಂದು ಕರೆಯುವುದು ನೋಡಿ ಮಾಧವ ಗೆ ಬಹಳಷ್ಟು ಖುಷಿ. ಆ ಖುಷಿಯನ್ನು ತಡೆದುಕೊಳ್ಳಲು ಆತನಿಂದ ಆಗುತ್ತಿರಲಿಲ್ಲ. ಮಗ ಕೊಟ್ಟ ಕಾಫಿ ಕುಡಿಯುತ್ತಾರೆ ಮಾಧವ.

ಅಪ್ಪನಿಗೆ ಜ್ವರ ಬಂದದನ್ನು ನೋಡಿ ಆತಂಕಗೊಂಡ ಅವಿ
ಇನ್ನೂ ಮಾಧವನ ಹಣೆ ಮುಟ್ಟಿದ ಅವಿನಾಶ್ ಗೆ ಅಪ್ಪ ಇದೇನಿದು ಮೈ ಎಲ್ಲ ಸುಡುತ್ತಿದೆ ಎಂದಾಗ ಅಲ್ಲಿಗೆ ಬಂದ ತುಳಸಿ ಮಾಧವನ ಹಣೆ ಮುಟ್ಟಿ ನೋಡುತ್ತಾರೆ. ಮಾಧವ ಹಣೆ ಕೊಂಚ ಬಿಸಿ ಇರುತ್ತದೆ. ಆದರೆ ತುಳಸಿಗೆ ಅದಾಗಲೇ ತಿಳಿದು ಹೋಗಿತ್ತು ಯಾಕಾಗಿ ಹೀಗೆಲ್ಲ ಆಗುತ್ತಿದೆ ಎಂದು. ಆದರೆ ಅವಿನಾಶ್ ಗಾಬರಿಗೊಂಡು ಡಾಕ್ಟರ್ ಗೆಲ್ಲ ಕರೆ ಮಾಡಿ ಏನು ಮಾಡಬೇಕು ಎಂದು ತಿಳಿದುಕೊಂಡು ಜ್ವರ ಮಾತ್ರೆ ಮಾಧವಗೆ ಕೊಡುತ್ತಾನೆ. ಹಾಗೆಯೇ ಜ್ಯೂಸ್ ಕೂಡ ಮಾಡಿಕೊಂಡು ತರುತ್ತಾನೆ. ಇದನ್ನೆಲ್ಲ ನೋಡಿದ ಮಾಧವಗೆ ಬಹಳ ಖುಷಿ ಆಗುತ್ತದೆ.
ಖುಷಿಯಲ್ಲಿ ಕಾಲ ಕಳೆಯುತ್ತಿರುವ ಮಾಧವ
ಇನ್ನೂ ಅವಿನಾಶ್ ಮಾಧವ ಎದುರು ಸಿಕ್ಕಿ ಸ್ವಲ್ಪ ಸ್ಕಿಪ್ ಆಗಿ ಮಾಧವನ ಮೇಲೆ ಬಿದ್ದಿರುತ್ತಾನೆ. ಇದನ್ನು ನೋಡಿದ ಅವಿ ಬಹಳ ಕೋಪದಿಂದ ಮೈ ಮೇಲ್ ಇದ್ದ ಕೋಟ್ ಅನ್ನು ಪೂರ್ಣಿಮಾ ಕೈ ಗೆ ಕೊಟ್ಟು ಇದು ನನಗೆ ಇನ್ನೂ ಮೇಲೆ ಕಾಣಬಾರದು ಎಂದು ಹೇಳಿರುತ್ತಾನೆ. ಅವಿ ಆಫೀಸ್ ಗೆ ಹೋದ ಬಳಿಕ ಆ ಕೋಟ್ ಅನ್ನು ಮಾಧವ ತೆಗೆದುಕೊಂಡು ರೂಮ್ ಗೆ ಹೋಗುತ್ತಾನೆ. ಇನ್ನೂ ಆ ಕೋಟ್ ಹುಡುಕಿ ಅವಿನಾಶ್ ಆಫೀಸ್ ಗೆ ಆ ಕೋಟ್ ಹಾಕಿಕೊಂಡು ಹೋಗುತ್ತಾನೆ ಇದನ್ನು ನೋಡಿದ ಮಾಧವ ಗೆ ಸ್ವರ್ಗಕ್ಕೆ ಮೂರೆ ಗೇಣು ಎನ್ನುವ ಹಾಗೆ ಬಹಳ ಖುಷಿಪಡುತ್ತಾನೆ. ನನ್ನ ಮಗ ನನ್ನನ್ನು ಕೊನೆಗೂ ಒಪ್ಪಿಕೊಂಡ. ಇದಕ್ಕೆಲ್ಲ ಕಾರಣ ತುಳಸಿ ಅವರು. ತುಳಸಿ ಅವರು ಇಲ್ಲ ಎಂದಾದರೆ ನನ್ನ ಮಗ ನನ್ನ ಜೊತೆ ಸಾಯುವವರೆಗೆ ಮಾತನಾಡುತ್ತಾ ಇರಲಿಲ್ಲ ಎಂದು ಹೇಳುತ್ತಾನೆ. ಹಾಗೆಯೇ ಬಹಳ ಖುಷಿ ಪಡುತ್ತಾ ಇರುತ್ತಾನೆ. ಜೋರಾಗಿ ಕೂಗಾಡುತ್ತ ಇರುತ್ತಾನೆ. ಇದನ್ನೆಲ್ಲ ನೋಡಿದ ತುಳಸಿ ಮಾಧವನ ಬಳಿ ಬಂದು ಏನಾಯಿತು ಎಂದಾಗ ತುಳಸಿ ಅವರೇ ನಾನು ಬಹಳ ಖುಷಿಯಾಗಿದ್ದೇನೆ.ನನ್ನ ಖುಷಿ ಗೆ ನೀವೇ ಕಾರಣ. ನಿಮ್ಮ ಮೇಲೆ ಇದ್ದ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ ಎಂದು ತುಳಸಿಯನ್ನು ಬಿಗಿದಪ್ಪಿ ಮುತ್ತು ಕೊಡುತ್ತಾರೆ ಮಾಧವ. ತುಳಸಿ ಗೆ ಮಾಧವ ಕೊಟ್ಟ ಸಿಹಿ ಮುತ್ತಿಗೆ ಫುಲ್ ಶಾಕ್ ಆಗುತ್ತದೆ.


Click it and Unblock the Notifications











