Srirastu Shubhamastu ; ತವರು ಮನೆ ಬಿಟ್ಟು ಗಂಡನ ಮನೆಗೆ ಬಂದ ತುಳಸಿ, ಮನೆ ತುಂಬಿಸಿಕೊಂಡ ಮಾಧವನ ಮುದ್ದಿನ ಮಗ..!

By ಪೂರ್ವ

ತುಳಸಿಗೆ ತವರು ಮನೆಯಿಂದ ಗಂಡನ ಮನೆಗೆ ಹೋಗಲು ಬಲು ಬೇಸರ.ತನ್ನ ಮಗ ಸಮರ್ಥ್ ಹಾಗೂ ಆಕೆಯ ಮಗಳು ಸಂಧ್ಯಾಳನ ಬಿಟ್ಟು ಹೋಗಲೆಂದು ಬಹಳ ಬೇಸರವಾಗುತ್ತದೆ. ಅದರ ಜೊತೆಗೆ ತಂದೆಯ ಸ್ಥಾನದಲ್ಲಿರುವ ಮಾವನನ್ನ ಬಿಟ್ಟು ಹೋಗಲೆಂದು ತುಳಸಿಯ ಮನಸ್ಸು ಕೇಳುವುದೇ ಇಲ್ಲ . ಎಲ್ಲರನ್ನ ತೊರೆದು ತುಳಸಿ ಹಾಗೂ ಮಾಧವ ಇಬ್ಬರು ಮದುವೆಯಾಗಿರುತ್ತಾರೆ . ಆದರೆ ತುಳಸಿ ಹಾಗೂ ಮಾಧವ ಇಬ್ಬರ ಮದುವೆಯಾಗಿ ಈಗಾಗಲೇ ಒಂದು ವರ್ಷ ಕಳೆದು ಹೋಗಿದೆ .

ಒಂದು ವರ್ಷದ ಆನಿವರ್ಸರಿ ಕಾರ್ಯಕ್ರಮಕ್ಕೆ ತುಳಸಿ ಹಾಗೂ ಮಾಧವನ ಮರುಮದುವೆಯನ್ನು ಮನೆಯವರೆಲ್ಲರೂ ಸೇರಿ ಮಾಡುತ್ತಾರೆ. ಅದು ಬೇರೆ ಕನ್ಯೆಯನ್ನು ತೋರಿಸುವುದರಿಂದ ಮಾಧವನ ಮನೆಯ ಹೊಸ್ತಿಲು ತುಳಿಯುವವರೆಗೂ ಕೂಡ ಮಾಡಬೇಕಾದ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಒಂದು ಕಡೆ ಅಮ್ಮ ಅಪ್ಪ ಮಗಳ ಮದುವೆ ಮಾಡಬೇಕಾದರೆ ಧಾರೆ ಎರೆದು ಕೊಡುತ್ತಾರೆ.

srirastu shubhamastu serial 6th August written update

ಆದರೆ ಇಲ್ಲಿ ಮಗನೇ ತನ್ನ ತಾಯಿಯನ್ನು ಮಾಧವನಿಗೆ ಧಾರೆ ಎರೆದು ಕೊಡುತ್ತಾನೆ. ಈ ವೇಳೆ ಸಮರ್ಥ್ ಬಹಳ ಭಾವುಕವಾಗುತ್ತಾನೆ. ಆತನಿಗೆ ಬಹಳ ನೋವು ಆಗುತ್ತದೆ. ತನ್ನ ತಾಯಿಗೆ ಕೊಡಬಾರದ ನೋವನ್ನ ಕೊಟ್ಟಿರುವೆ ಆದರೆ ಆಕೆ ನನ್ನನ್ನು ಚಿಕ್ಕ ವಯಸ್ಸಿನಿಂದಲೂ ಕೂಡ ಪುಟ್ಟ ಗುಬ್ಬಿಮರಿ ಆಗಿ ನೋಡಿಕೊಂಡು ಬಂದಿದ್ದಾಳೆ. ಆದರೆ ಇದೀಗ ಆಕೆಯನ್ನ ಬೇರೆ ಮನೆಗೆ ಕಳುಹಿಸಿದ ಎಂದು ನೆನೆದುಕೊಂಡರೆ ಸಮರ್ಥ್ ಗೆ ಅಳು ಬರುತ್ತದೆ. ಆದರೆ ಆತ ಅಮ್ಮನಿಗಾಗಿ ಧಾರೆ ಸೀರೆಯನ್ನು ಕೂಡ ತಂದಿರುತ್ತಾನೆ. ಆ ಸೀರೆಯನ್ನ ಉಟ್ಟುಕೊಂಡೆ ಹಸೆಮಣೆ ಏರಿರುತ್ತಾಳೆ ತುಳಸಿ.

ಅಮ್ಮನನ್ನು ಧಾರೆ ಎರೆದುಕೊಟ್ಟ ಸಮರ್ಥ್

ಮದುವೆ ಎಲ್ಲ ಮುಗಿದ ಬಳಿಕ ಹೆಣ್ಣು ತವರು ಮನೆಯಿಂದ ಗಂಡನ ಮನೆಗೆ ಹೋಗಲೇಬೇಕಾಗುತ್ತದೆ. ಆದರೆ ತುಳಸಿಯನ್ನ ಗಂಡನ ಮನೆಗೆ ಕಳುಹಿಸಲು ಯಾರು ಕೂಡ ರೆಡಿ ಇರುವುದಿಲ್ಲ.ನನ್ನ ಅಮ್ಮ ನನ್ನ ಜೊತೆ ಇರಬೇಕಾದರೆ ಹಂಗಿಸಿ ಮಾತನಾಡುತ್ತಿದ್ದೆ, ಆದರೆ ಆಕೆ ಕೊಂಚವು ಕೋಪ ಮಾಡಿಕೊಳ್ಳದೆ ನನ್ನ ಜೊತೆ ಸದಾ ನಗುತ್ತಾ ಇರುತ್ತಿದ್ದಳು. ಇದೀಗ ಆಕೆ ಬೇರೆ ಮನೆಗೆ ಹೋಗುತ್ತಿದ್ದಾಳೆ. ಎಂದು ನೆನಪಿಸಿಕೊಂಡಾಗಲೇ ಸಮರ್ಥ್ ಕಣ್ಣಾಲಿಗಳು ತುಂಬಿ ಬರುತ್ತದೆ ಆತನಿಗೆ ಮಾತೆ ಬಾರದಾಗುತ್ತದೆ

srirastu-shubhamastu-serial-6th-august-written-update

ಅಮ್ಮನ ಮುಖ ನೋಡಿ ಅತ್ತ ಸಮರ್ಥ್

ಸಮರ್ಥ್ ಬಳಿಗೆ ಬಂದ ತುಳಸಿ, ಪಾಪು ನೀನು ನನ್ನನ್ನ ದಾರಿ ಎರೆಡು ಕೊಟ್ಟು ನನ್ನ ತಂದೆಯು ಸ್ಥಾನವನ್ನು ನೀನು ತುಂಬಿದ್ಧಿಯಾ? ನನಗೆ ನಿಮ್ಮೆಲ್ಲರನ್ನ ಬಿಟ್ಟು ಹೋಗಲು ಬಹಳ ನೋವಾಗುತ್ತಿದೆ ಎಂದು ಕಣ್ಣೀರಿಟ್ಟಾಗ ಅಮ್ಮನನ್ನು ಸಾಂತ್ವನ ಮಾಡಿ ಅಲ್ಲಿಂದ ಕಳುಹಿಸುತ್ತಾನೆ.
ಇನ್ನು ತುಳಸಿ ಹಾಗೂ ಮಾಧವ ನೇರವಾಗಿ ಮಾಧವನ ಮನೆಗೆ ಹೋಗುತ್ತಾರೆ ಆಗ ಶಾರ್ವರಿ ಆರತಿ ಹಿಡಿದುಕೊಂಡು ಮನೆಯ ಎದುರಿಗೆ ಬಂದು ನಿಲ್ಲುತ್ತಾಳೆ. ಇದನ್ನು ನೋಡಿದ ಅವಿನಾಶ್ ಚಿಕ್ಕಮ್ಮ ಇವತ್ತು ನಾನೇ ಆರತಿಯನ್ನು ಮಾಡಿ ಅಮ್ಮನನ್ನ ಮನೆಯ ಒಳಗೆ ತುಂಬಿಸಿಕೊಳ್ಳುತ್ತೇನೆ ಎನ್ನುತ್ತಾನೆ


ಅಪ್ಪ ಅಮ್ಮನಿಗೆ ಆರತಿ ಬೆಳಗಿಸಿ ಅವಿ

ಅಪ್ಪ ಹಾಗೂ ಅಮ್ಮ ಮೊದಲ ಬಾರಿಗೆ ಮದುವೆಯಾಗಿ ಬಂದಾಗ ನಾನು ತುಳಸಿ ಅಮ್ಮನಿಗೆ ಹೇಳಿದ್ದೆ ನೀವು ಯಾವತ್ತೂ ನನ್ನ ಅಮ್ಮನ ಸ್ಥಾನವನ್ನ ತುಂಬಲು ಸಾಧ್ಯವಿಲ್ಲ ಎಂದು ನನ್ನ ಅಮ್ಮನ ಫೋಟೋ ಬಳಿ ಬಂದು ಹೇಳಿದ್ದೆ ಆದರೆ ತುಳಸಿ ಅಮ್ಮ ನನಗೆ ಅಮ್ಮನ ಸ್ಥಾನವನ್ನು ನೀಡಿದ್ದಾರೆ ಅವರಿಗೆ ನಾನೇ ಈ ಬಾರಿ ಆರತಿ ಎತ್ತಿ ಮನೆ ಒಳಗೆ ತುಂಬಿಸಿಕೊಳ್ಳುತ್ತೇನೆ ಎಂದು ಹೇಳುತ್ತಾನೆ ಇದನ್ನು ಕೇಳಿದ ಮಾದವನ ತಮ್ಮ ಮಹೇಶ ಕೂಡ ನಾನು ಕೂಡ ನಿಮ್ಮೊಟ್ಟಿಗೆ ಆರತಿ ಮಾಡಲು ಬರುತ್ತೇನೆ ಎಂದು ಹೇಳುತ್ತಾನೆ ಹಾಗೆಯೇ ಅಭಿಯನ್ನ ಕೂಡ ಆರತಿ ಮಾಡಲು ಕರೆದುಕೊಂಡು ಬರುತ್ತಾನೆ. ಹಾಗೆಯೇ ತುಳಸಿ ಹಾಗೂ ಮಾದವನಿಗೆ ಮಕ್ಕಳೇ ಆರತಿ ಎತ್ತಿ ಮರೆತುಂಬಿಸಿಕೊಳ್ಳುತ್ತಾರೆ. ಇದನ್ನೆಲ್ಲಾ ನೋಡಿದ ಶಾರ್ವರಿಗೆ ಬಹಳ ಕೋಪ ಬರುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X