twitter
    For Quick Alerts
    ALLOW NOTIFICATIONS  
    For Daily Alerts

    Srirastu Shubhastu: ಮಾಧವ್ ಹೇಳಿದ ಪ್ಲ್ಯಾನ್ ವರ್ಕೌಟ್.. ದತ್ತ ಬಾಯಲ್ಲಿ ಬಂತು ನೀರು..!

    By ಎಸ್ ಸುಮಂತ್
    |

    ವಯಸ್ಸಾದ ಮೇಲೆ ಮನೆಯಲ್ಲಿರುವ ಹಿರಿಯರು ಮಕ್ಕಳಂತೆ ಆಗಿ ಬಿಡುತ್ತಾರೆ. ಮನೆಯಲ್ಲಿ ಯಾರಾದ್ರೂ ಜೋರಾಗಿ ಗದರಿದರೆ, ಹರ್ಟ್ ಆಗುವಂತೆ ನಡೆದುಕೊಂಡರೆ ಮುನಿಸಿಕೊಂಡು ಬಿಡುತ್ತಾರೆ. ತಮಗೆ ಪ್ರಾಶಸ್ತ್ಯ ಸಿಗುತ್ತಿಲ್ಲವೇನೋ ಎಂಬಂತೆ ಫೀಲ್ ಮಾಡಿಕೊಳ್ಳುತ್ತಾರೆ. ಇದೆಲ್ಲಾ ಹೇಳುವುದಕ್ಕೆ ಕಾರಣ ತುಳಸಿ ಮಾವ ದತ್ತಣ್ಣ.

    ಮನೆಯಲ್ಲಿ ಹೇಳದೆ ಕೇಳದೆ ಮೊಮ್ಮಗಳನ್ನು ಒಳಗೆ ಬಿಟ್ಟಿದ್ದಕ್ಕೆ ಮುನಿಸಕೊಂಡು ಪಾರ್ಕಿನಲ್ಲಿ ಕೂತಿದ್ದಾರೆ. ಪಾಪ ಮನೆಯಲ್ಲಿ ತುಳಸಿ ಅಳುತ್ತಾ ಕುಳಿತಿದ್ದಾಳೆ. ಮಾವನ ಬಗ್ಗೆ ಯೋಚಿಸಿ ನೊಂದುಕೊಂಡಿದ್ದಾಳೆ. ಆದರೆ, ನೋವಿನ ಸಮಯದಲ್ಲಿ ಮಾಧವ ಹೇಳಿದ ಧೈರ್ಯ, ಕೊಟ್ಟ ಸಲಹೆ ಉಪಯೋಗಕ್ಕೆ ಬಂದಿದೆ.

    ದರ್ಶನ್ 'ಕ್ರಾಂತಿ' ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕಲೆಕ್ಷನ್? ಏನಂತಾರೆ ವಿತರಕರು?ದರ್ಶನ್ 'ಕ್ರಾಂತಿ' ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕಲೆಕ್ಷನ್? ಏನಂತಾರೆ ವಿತರಕರು?

    ಸಂಧ್ಯಾ ಬಂದಿದ್ದಕ್ಕೆ ದತ್ತನಿಗೆ ಕೋಪ

    ಸಂಧ್ಯಾ ಬಂದಿದ್ದಕ್ಕೆ ದತ್ತನಿಗೆ ಕೋಪ

    ಸಂಧ್ಯಾ ಪ್ರೀತಿ ಮಾಡಿ, ಹೇಳದೆ ಕೇಳದೆ ಮನೆಯಿಂದ ಓಡಿ ಹೋದಳು ಎಂಬ ಕೋಪ ದತ್ತನಲ್ಲಿ ಜಾಸ್ತಿಯಿದೆ. ಅದರ ಜೊತೆಗೆ ಸ್ವಾರ್ಥಿ ಅನ್ನೋ ಕೋಪ ಜಾಸ್ತಿ. ಸಂಧ್ಯಾ ಕೂಡ ಯಾವಾಗಲೂ ಹಣದ ಮೇಲಿನ ಮೋಹವನ್ನೇ ಹೆಚ್ಚಾಗಿ ತೋರಿಸುತ್ತಾಳೆ. ಇದು ದತ್ತನಿಗೆ ಗೊತ್ತಿರುವ ಕಾರಣ ಅವಳನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದಾನೆ. ಆದ್ರೆ ದತ್ತನಿಗೆ ಗೊತ್ತಿಲ್ಲದೆ ಸಿರಿ ಅವಳನ್ನು ಮನೆಗೆ ಕರೆದುಕೊಂಡು ಬಂದಿರುವುದು, ತುಳಸಿ ಬಚ್ಚಿಟ್ಟಿದ್ದು ಕಂಡು ದತ್ತ ಮುನಿಸಿಕೊಂಡಿದ್ದಾನೆ. ಆದ್ರೆ, ದತ್ತ ತನ್ನ ಜವಾಬ್ದಾರಿಯನ್ನು ಮಾತ್ರ ಮರೆತಿಲ್ಲ. ಸಂಧ್ಯಾಳ ಹೆಸರಲ್ಲೂ ಹತ್ತು ಲಕ್ಷ ಹಣ ಇಟ್ಟಿದ್ದಾನೆ.

    ಪಾರ್ಕಿನಲ್ಲಿ ಬಂದು ಕುಳಿತ ದತ್ತ

    ಪಾರ್ಕಿನಲ್ಲಿ ಬಂದು ಕುಳಿತ ದತ್ತ

    ದತ್ತನಿಗೆ ಬೆಸ್ಟ್ ಫ್ರೆಂಡ್ ಅಂದ್ರೆ ಶೇಷು. ತನ್ನೆಲ್ಲಾ ನೋವು ನಲಿವುಗಳನ್ನು ಅವನ ಬಳಿಯೇ ಹೇಳಿಕೊಳ್ಳುವುದು. ಅದಕ್ಕೆ ನಾನಿಲ್ಲದೆ ಮನೆಯಲ್ಲಿ ಯಾರೆಲ್ಲಾ ನೋವು, ಸಂಕಟ ಪಡುತ್ತಿದ್ದಾರೆ ನೋಡಿಕೊಂಡು ಬಾ ಅಂತ ದತ್ತ ಅವನನ್ನೇ ಬಿಟ್ಟಿದ್ದನು. ಈಗ ಬಂದು ಪಾರ್ಕಿನಲ್ಲಿ ಕೂತಿದ್ದಾರೆ. ಶೇಷು ಎಷ್ಟು ಸಮಾಧಾನ ಮಾಡಿದರು ಸಮಾಧಾನ ಆಗುತ್ತಿಲ್ಲ. ನಾನು ಈ ರೀತಿ ಮಾಡಿದರೇನೆ ಮನೆಯವರಿಗೆ ನನ್ನ ಬೆಲೆ ಗೊತ್ತಾಗುವುದು ಎಂದು ವಾದ ಮಾಡುತ್ತಿದ್ದಾನೆ. ನಿಂಗೆ ಬೆಲೆ ಕೊಡುವುದಕ್ಕೆ ನೀನು ಮನೆಯಲ್ಲಿ ಇಷ್ಟು ನೆಮ್ಮದಿಯಾಗಿ ಇರುವುದು ಎಂದು ಶೇಷು ಹೇಳಿದರೂ ದತ್ತನದ್ದು ಮತ್ತದೆ ವಾದ, "ಈ ರೀತಿ ಮಾಡಿದಾಗ ಮುಂದೆ ನಂಗೆ ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕೆ ನೂರು ಸಲ ಯೋಚನೆ ಮಾಡಬೇಕು" ಎಂದಿದ್ದಾನೆ.

    ತುಳಸಿ ಮಾತಿಗೂ ಮೊಂಡು ಹಠ

    ತುಳಸಿ ಮಾತಿಗೂ ಮೊಂಡು ಹಠ

    ಶೇಷು ಮನೆಗೆ ಹೋದಾಗ ತುಳಸಿ ಟೆನ್ಶನ್‌ನಲ್ಲಿ ಇದ್ದಳು. ಮಾಧವನ ಜೊತೆಗೆ ಟೆನ್ಶನ್‌ನಲ್ಲಿಯೇ ಮಾತನಾಡುತ್ತಿದ್ದಳು. ಅದನ್ನು ನೋಡಿದ ಶೇಷು ಸತ್ಯ ಹೇಳಿ ಬಂದಿದ್ದ. ಪಾರ್ಕ್ ನಲ್ಲಿ ಇರುವುದನ್ನು ಹೇಳಿದ್ದ. ತುಳಸಿ ಈಗ ಅದೇ ಪಾರ್ಕಿಗೆ ಹುಡುಕಿಕೊಂಡು ಬಂದಿದ್ದಾಳೆ. ಇದನ್ನು ಕಂಡು ದತ್ತ ಪ್ರಶ್ನೆ ಮಾಡಿದ್ದಾಳೆ. "ಅಲ್ಲ ಕಣೋ ಶೇಷು ನಾನು ಇದೆ ಪಾರ್ಕಿನಲ್ಲಿ ಇದ್ದೀನಿ ಅಂತ ಹೇಗೋ ಗೊತ್ತಾಯ್ತು" ಅಂತ ಸ್ನೇಹಿತ ಮೇಲೆ ಅನುಮಾನ ಪಟ್ಟಿದ್ದಾನೆ.

    ಮಾಧವನ ಪ್ಲ್ಯಾನ್ ವರ್ಕೌಟ್ ಆಯ್ತು..?

    ಮಾಧವನ ಪ್ಲ್ಯಾನ್ ವರ್ಕೌಟ್ ಆಯ್ತು..?

    ತುಳಸಿ ಎಷ್ಟೆ ಸಮಧಾನ ಮಾಡಿದರು ಸಮಾಧಾನವಾಗುವುದಕ್ಕೆ ದತ್ತ ರೆಡಿಯಿಲ್ಲ. ತುಳಸಿಗೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಆಗ ಮಾಧವ ಹೇಳಿದ ಮಾತು ನೆನಪಿಗೆ ಬರುತ್ತೆ. "ವಯಸ್ಸಾದವರು ಮಗುವಿನಂತೆ. ತಮಗೆ ಕೊಡುತ್ತಿರುವ ಗೌರವ ಕಡಿಮೆಯಾದಂತೆ ಫೀಲ್ ಆದಾಗ ಈ ರೀತಿಯೆಲ್ಲಾ ಆಡುತ್ತಾರೆ. ಆಗ ಮಕ್ಕಳಿಗೆ ಸಮಾಧಾನ ಮಾಡಿದಂತೆ, ಅವರಿಗಿಷ್ಟವಾದದ್ದನ್ನು ನೀಡಿ ಸಮಾಧಾನ ಮಾಡಬೇಕು" ಎಂಬ ಮಾತಿನಂತೆ, ತುಳಸಿ ಮಾವನ ಬಳಿ ಹೋಗಿ "ಮಾವ ನಿಮ್ಮನ್ನು ಹುಡುಕಲು ಇನ್ನು ಬೇಗ ಬರಬೇಕು ಅಂದುಕೊಂಡೆ ಆದರೆ ನಿಮಗೆ ಇಷ್ಟ ಅಂತ ಹೆಚ್ಚಾಗಿ ಅವರೆಕಾಳು ಹಾಕಿ ತೆಳ್ಳಗೆ ಉಪ್ಪಿಟ್ಟು ಮಾಡಿದ್ದೀನಿ. ಅದರ ಮೇಲೆ ಗರಿ ಗರಿ ತುಪ್ಪ ಸುರಿದು ತಿನ್ನುವುದ ಎಂದರೆ ನಿಮಗೆ ಇಷ್ಟ ಅಲ್ವಾ. ಅದನ್ನ ಮಾಡುತ್ತಿದ್ದೆ" ಎಂದು ತುಳಸಿ ಹೇಳಿದ್ದೆ ತಡ ದತ್ತನ ಬಾಯಲ್ಲಿ ನೀರು ಬರುತ್ತಾ ಇತ್ತು.

    English summary
    Srirastu Shubhastu Serial Written Update on January 30th Episode. Here is the details.
    Monday, January 30, 2023, 18:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X