Srirastu Subhamastu: ಅಭಿ ತಲೆಕೆಡಿಸಿದ ದೀಪಿಕಾ; ಸುಮತಿ ಎಸ್ಟೇಟ್ ಗಿಫ್ಟ್ ಕೇಳುತ್ತಾನಾ ಅಭಿ?
ಮನೆ ಜನರ ಮನಸ್ಸನ್ನು ಕೆಡಿಸುತ್ತಿದ್ದಾಳೆ ದೀಪಿಕಾ. ತನ್ನ ತಂದೆಗೆ ಕೊಟ್ಟಿರುವ ಮಾತಿನ ಪ್ರಕಾರ ಮನೆ ಮಂದಿ ಜೊತೆ ನಾಟಕವಾಡಿ ಅವರ ಮನಸ್ಸನ್ನು ಗೆದ್ದು ಇದೀಗ ಅವರೆಲ್ಲರ ಮನಸ್ಸಿನಲ್ಲಿ ವಿಷದ ಬೀಜವನ್ನು ಬಿತ್ತಿ ಅವರೆಲ್ಲರನ್ನೂ ದೂರ ಮಾಡಲು ಯತ್ನಿಸುತ್ತಿದ್ದಾಳೆ. ಆದರೆ ಇದು ಮಾತ್ರ ಯಾರ ಅರಿವಿಗೂ ಬರುತ್ತಿಲ್ಲ.
ಪೂರ್ಣಿಮಾಗೆ ಔಷಧಿಯಲ್ಲಿ ವಿಷ ಬೇರೆಸಿದ್ದು ಹಾರ ಕದ್ದಿದ್ದು ಹಾಗೆಯೇ ಇದೀಗ ಸುಮತಿ ಎಸ್ಟೇಟ್ ಮೇಲೆ ಕೂಡ ದೀಪಿಕಾ ಕೆಟ್ಟ ಕಣ್ಣು ಹಾಕಿದ್ದಾಳೆ. ಅಭಿಯ ಹುಟ್ಟು ಹಬ್ಬದ ಸಂದರ್ಭದಲ್ಲಿಯೇ ಅಭಿಯ ತಲೆ ಕೆಡಿಸುವ ಪ್ಲಾನ್ ಮಾಡಿಕೊಂಡಿದ್ದಾಳೆ.

ಅಭಿ ಹತ್ತಿರ ಬಂದು ದೀಪಿಕಾ, ಅಭಿ ನನಗೆ ಒಂದು ಗಿಫ್ಟ್ ಬೇಕು ಎನ್ನುತ್ತಾಳೆ. ಅದಕ್ಕೆ ಅಭಿ ನಿನಗೆ ಏನು ಗಿಫ್ಟ್ ಬೇಕು ಕೇಳು ಎಂದು ಹೇಳುತ್ತಾನೆ. ಆಗ ಆಕೆ ನಂದಿ ಗಿರಿಯಲ್ಲಿ ಇರುವ ಸುಮತಿ ಎಸ್ಟೇಟ್ ನನಗೆ ಗಿಫ್ಟ್ ಆಗಿ ಬೇಕು ಎಂದು ಕೇಳುತ್ತಾಳೆ. ಅದನ್ನು ಕೇಳಿದ ಅಭಿಗೆ ಸಿಟ್ಟು ಬಂದು ಅದನ್ನು ಯಾರು ಮುಟ್ಟುವ ಹಾಗೆ ಇಲ್ಲ ಎನ್ನುತ್ತಾನೆ. ಆಗ ದೀಪಿಕಾ ಕೊಂಚ ಎಮೋಷನಲ್ ಡ್ರಾಮಾ ಮಾಡುತ್ತಾಳೆ.
ಫ್ಯಾಮಿಲಿ ಟ್ರೀಯಲ್ಲಿ ಸಮರ್ಥ್, ಸಂಧ್ಯಾ ಇಬ್ಬರ ಹೆಸರೂ ಸೇರಿಕೊಂಡಿದೆ. ಮುಂದೊಂದು ದಿನ ಅವರಿಬ್ಬರೂ ಆಸ್ತಿಯಲ್ಲಿ ಪಾಲು ಕೇಳಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿನು ಇಲ್ಲ. ಆಗ ಅವರು ಈ ಎಸ್ಟೇಟ್‌ನಲ್ಲಿ ಕೂಡ ಪಾಲು ಕೇಳಿದರೆ ನೀವೇನು ಮಾಡುತ್ತೀರಾ? ಎಂದಾಗ ಅಭಿ ಕೋಪದಲ್ಲಿ ಕುಸಿದು ಕುಳಿತುಕೊಳ್ಳುತ್ತಾನೆ. ಅಮ್ಮನ ಎಸ್ಟೇಟ್ ನ ನಾನು ಯಾರಿಗೂ ಬಿಟ್ಟು ಕೊಡುವುದು ಇಲ್ಲ ಎನ್ನುತ್ತಾನೆ. ಆದರೆ ಆತನ ಕೋಪ ಕಂಡು ದೀಪಿಕಾಗೆ ಒಂಥರ ಮಜಾ ಸಿಗುತ್ತಿದೆ.

ಮನಸ್ಸುಗಳನ್ನು ಒಡೆಯುತ್ತಿರುವ ದೀಪಿಕಾ
ಮನೆ ಇಬ್ಬಾಗ ಆಗಬೇಕು, ಛಿದ್ರ ಆಗಿ ಹೋಗಬೇಕು, ತನ್ನ ತಂದೆಯ ಕನಸನ್ನು ನಾನು ನನಸು ಮಾಡುತ್ತೇನೆ. ಅದಕ್ಕೆ ಈ ಮನೆಯವರನ್ನು ಚೆನ್ನಾಗಿಯೇ ಆಟ ಆಡಿಸುತ್ತೇನೆ ಎಂದು ಯೋಚನೆ ಮಾಡುತ್ತಾಳೆ. ಹಾಗೆಯೇ ಅವರನ್ನು ಆಟ ಆಡಿಸುತ್ತಿದ್ದಾಳೆ. ಅಭಿ ತನ್ನ ಹುಟ್ಟುಹಬ್ಬದ ದಿನದಂದು ಎಲ್ಲರ ಎದುರೇ ಈ ಗಿಫ್ಟ್ ನೀಡಬಹುದು ಎನ್ನುವುದು ಬಹುತೇಕ ಸ್ಪಷ್ಟ ಆಗುತ್ತಿದೆ. ತನ್ನ ತಮ್ಮನ ಹುಟ್ಟುಹಬ್ಬದ ದಿನ ಆತನಿಗೆ ಪ್ರಾಜೆಕ್ಟ್ ಒಂದನ್ನು ಕೊಡೋಣ ಎಂದು ಅವಿ ಹಾಗೂ ಪೂರ್ಣಿಮಾ ಮಾತನಾಡಿಕೊಂಡು ಇರುತ್ತಾರೆ.
ಹಠ ಹಿಡಿದ ಅಭಿ
ಅಭಿ ಈಗ ಸುಮತಿ ಎಸ್ಟೇಟ್ ಬಗ್ಗೆ ಇಷ್ಟು ತಲೆ ಕೆಡಿಸಿಕೊಂಡಿರುವಾಗ ಆತ ಅವಿ ಮಾತು ಕೇಳುತ್ತಾನಾ ಗೊತ್ತಿಲ್ಲ. ದೀಪಿಕಾ ಹೇಗೆ, ಏನು ಎಂಬುವುದು ಪೂರ್ಣಿಮಾಗೆ ತಿಳಿದು ಹೋಗಿದೆ. ದೀಪಿಕಾ ಬದಲಾಗಿದ್ದಾಳೆ ಎಂದು ಪೂರ್ಣಿಮಾ ಅಂದುಕೊಂಡಿದ್ದಳು. ಆದರೆ ಆಕೆ ಬದಲಾಗಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಪೂರ್ಣಿಮಾ ಮಾತ್ರ ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಇಲ್ಲ . ದೀಪಿಕಾ ಏನೇ ತಪ್ಪು ಮಾಡಿದರೂ ನೀನೇ ಮುಂದೆ ನಿಂತು ಅದನ್ನು ತಿದ್ದು, ಇಲ್ಲವಾದರೆ ಅನುಸರಿಸಿಕೊಂಡು ಹೋಗು ಎಂದು ಅವಿ ಹೇಳಿರುತ್ತಾನೆ .
ಹೆಂಡತಿ ಮಾತಿಗೆ ಸೊಪ್ಪು ಹಾಕಿದ ಅಭಿ
ಸಮರ್ಥ್ ಅಷ್ಟು ಸ್ಪಷ್ಟವಾಗಿ ಅಭಿ ಬಳಿ ಹೇಳಿರುತ್ತಾನೆ. ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೋ, ನನಗೆ ನಿನ್ನ ಆಸ್ತಿ ಯಾವುದು ಬೇಡ, ದಯಮಾಡಿ ಆ ಒಂದು ಕೆಲಸ ಮಾಡು ನಾನು ನಿನ್ನ ಜೊತೆ ಅದೊಂದೇ ಕೇಳಿಕೊಳ್ಳುವುದು ಎಂದು ಹೇಳಿರುತ್ತಾನೆ. ಆದರೂ ಕೂಡ ಸಮರ್ಥ್ ಮೇಲೆ ಬಹಳ ಅನುಮಾನ ಅಭಿಗೆ. ಅಪ್ಪಿತಪ್ಪಿ ಆಸ್ತಿಯಲ್ಲಿ ಪಾಲು ಕೇಳಿ ಬಿಟ್ಟರೆ ಎನ್ನುವ ಭಯ ಕಾಡುತ್ತದೆ. ಕೊನೆಗೂ ದೀಪಿಕಾ ಮಾತು ಕೇಳಿ ಏನೆಲ್ಲ ರಾದ್ಧಾಂತ ಮಾಡುತ್ತಾನೆ ಕಾದು ನೋಡಬೇಕಿದೆ.


Click it and Unblock the Notifications











