ಶ್ರೀರಸ್ತು ಶುಭಮಸ್ತು ಖ್ಯಾತಿಯ ರಾಧಾ ಟೀಚರ್ ಬೋಲ್ಡ್ ಟೂರ್ ಹೇಗಿತ್ತು ನೋಡಿ!
'ರಾಧಾ ರಮಣ' ಧಾರಾವಾಹಿಯಾದ ಮೇಲೆ ಶ್ವೇತಾ ಪ್ರಸಾದ್ ಅಷ್ಟಾಗಿ ಎಲ್ಲೂ ಕಾಣಿಸಲಿಲ್ಲ. ಸಿನಿಮಾಗಾಗಿ ತಯಾರಿ ನಡೆಯುತ್ತಿದೆ ಎಂಬ ಮಾತು ಓಡಾಡುತ್ತಿದೆ. ಈ ಮಧ್ಯೆ ಶ್ವೇತಾ ಪ್ರಸಾದ್ ಸಖತ್ ಬೋಲ್ಡ್ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜೀರೋ ಸೈಜ್ ಮೆಂಟೈನ್ ಮಾಡುತ್ತಿದ್ದಾರೆ. ಧಾರಾವಾಹಿಗಳಲ್ಲೂ ಆಗಾಗ ಬಂದು ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಇದೀಗ ಹೊಸದೊಂದು ವಿಡಿಯೋ ಮೂಲಕ ಬೇಜಾನ್ ಸದ್ದು ಮಾಡುತ್ತಿದ್ದಾರೆ.
ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನಟಿ. ಫೋಟೊಶೂಟ್ ಮಾಡಿಸಿ, ಒಳ್ಳೊಳ್ಳೆ ಫೋಟೊಗಳನ್ನು ಪೋಸ್ಟ್ ಮಾಡುತ್ತಾ, ಫ್ಯಾನ್ಸ್‌ಯಿಂದ ಬರುವ ಕಮೆಂಟ್‌ಗಳಿಗೆ ರಿಪ್ಲೇ ಮಾಡುತ್ತಾ, ಇನ್ನಷ್ಟು ಹತ್ತಿರವಾಗುತ್ತಿರುತ್ತಾರೆ. ಇದೀಗ ಹೊಸ ವಿಡಿಯೋ ಒಂದನ್ನು ಹಾಕಿ ಹುಚ್ಚೆಬ್ಬಿಸಿದ್ದಾರೆ.

ಫ್ರೆಂಡ್ಸ್ ಜೊತೆ ವಿದೇಶದಲ್ಲಿ ಮೋಜು ಮಸ್ತಿ
ಶ್ವೇತಾ ಪ್ರಸಾದ್ ಸದ್ಯ ಪ್ರದೀಪ್ ಬಿಟ್ಟು ಸ್ನೇಹಿತೆಯ ಜೊತೆ ಬ್ಯಾಂಕಾಕ್‌ಗೆ ಹಾರಿದ್ದಾರೆ. ಅಲ್ಲಿನ ಬೀದಿ ಬೀದಿಯಲ್ಲಿ ಅಡ್ಡಾಡುತ್ತಾ, ಸ್ಪೆಷಲ್ ಫುಡ್ ಟೇಸ್ಟ್ ಮಾಡುತ್ತಾ, ಸ್ಟೇ ಆಗಿರುವ ರೂಮಿನಲ್ಲಿ ರೀಲ್ಸ್ ಮಾಡಿಕೊಂಡು ಮಸ್ತ್ ಮಜಾ ಮಾಡುತ್ತಿದ್ದಾರೆ. ಅವರಿಗೆ ಜೊತೆಯಾಗಿ ಸ್ನೇಹಿತೆ ಇದ್ದು, ಎಲ್ಲೆಡೆ ಸುತ್ತಾಡುತ್ತಿದ್ದಾರೆ. ಧಾರಾವಾಹಿಗಳಲ್ಲಿ ಆಗಾಗ ಗೆಸ್ಟ್ ರೋಲ್ ಒಪ್ಪಿಕೊಳ್ಳುತ್ತಾ, ವೆಬ್ ಸಿರೀಸ್ ಒಂದನ್ನು ಮಾಡಿ ಮುಗಿಸಿರುವ ಶ್ವೇತಾ ಪ್ರಸಾದ್ ಸಿನಿಮಾಗೂ ತಯಾರಿ ನಡೆಸುತ್ತಿದ್ದಾರೆ. ಸದ್ಯ ಬ್ಯಾಂಕಾಕ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಬಿಕಿನಿ ತೊಟ್ಟು ನೀರಿಗಿಳಿದ ರಾಧಾ ಟೀಚರ್
ಆಗಾಗ ವಿದೇಶಕ್ಕೆ, ಫ್ರೆಂಡ್ಸ್ ಜೊತೆಗೆ ಟ್ರಿಪ್ ಹೊಡೆಯುತ್ತಲೇ ಇರುತ್ತಾರೆ ನಟಿ ಶ್ಚೇತಾ ಪ್ರಸಾದ್. ಇದೀಗ ಬ್ಯಾಂಕಾಕ್ ಕಡೆಗೆ ಹೆಜ್ಜೆ ಬೆಳೆಸಿದ್ದಾರೆ. ಅಲ್ಲಿ ನೋಡಿ, ಆನಂದಿಸಬೇಕಾದ ಸ್ಥಳಗಳು ಸಾಕಷ್ಟಿದೆ. ಹೀಗಾಗಿಯೇ ಶ್ವೇತಾ ಪ್ರಸಾದ್ ಎಲ್ಲೆಡೆ ಅಡ್ಡಾಡುತ್ತಿದ್ದಾರೆ. ಅದರಲ್ಲೂ ಲಿಯೊನಾರ್ಡೊ ಡಿಕಾಪ್ರಿಯೊ ಸಿನಿಮಾ ಶೂಟಿಂಗ್ ನಡೆದ ಸ್ಥಳವನ್ನು ಕಣ್ತುಂಬಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ಅಲ್ಲಿನ ಬೀಚ್‌ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ರೆಡ್ ಕಲರ್ ಬಿಕಿನಿ ತೊಟ್ಟು, ಅಡ್ಡ ಬರುವ ದೊಡ್ಡ ಅಲೆಗೆ ಮೈಯೊಡ್ಡಿ ನಿಂತಿದ್ದಾರೆ. ಇದು ನೋಡುವುದಕ್ಕೂ ಅತಿ ಸುಂದರ ವಿಡಿಯೋ ಎನಿಸುತ್ತಿದೆ. ಈ ವಿಡಿಯೋಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.

ಶ್ವೇತಾ ಪ್ರಸಾದ್ ಹೊಸ ಲುಕ್ಕಿಗೆ ಕ್ಲೀನ್ ಬೋಲ್ಡ್
ಶ್ವೇತಾ ಪ್ರಸಾದ್ ಇತ್ತೀಚೆಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ಸಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ಇರುವ ಫೋಟೊಗಳು ಸಹ ಸಿಕ್ಕಾಪಟ್ಟೆ ಕಿಕ್ ಹುಟ್ಟುಹಾಕುವಂತದ್ದೇ ಇದೆ. ಇದೀಗ ಬ್ಯಾಂಕಾಕ್‌ನಲ್ಲಿ ಬೀಚ್‌ನಲ್ಲಿ ಕೊಟ್ಟ ಪೋಸ್‌ಗೆ ನೆಟ್ಟಿಗರು ಮಾತ್ರವಲ್ಲ ಸೆಲೆಬ್ರೆಟಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ನಟಿ ಶ್ವೇತಾ ಚಂಗಪ್ಪ ವಾವ್ ಹಾಟ್ ಎಂದು ಕಮೆಂಟ್ ಹಾಕಿದ್ದಾರೆ. ಉಳಿದಂತೆ ನಾ ಮುಂದು ತಾ ಮುಂದು ಅಂತ ನೆಟ್ಟಿಗರು ಕೂಡ ಹಾಟೆಸ್ಟ್ ನಟಿ ಎಂಬುದನ್ನೇ ಹೆಚ್ಚು ಕಮೆಂಟ್ ಹಾಕಿದ್ದಾರೆ. ಹಾಟ್, ಹಾಟಿ, ಫಿಟ್ನೆಸ್ ಬ್ಯೂಟಿ ಹೀಗೆ ಅನೇಕ ಕಮೆಂಟ್‌ಗಳಲ್ಲಿ ಹಾಟ್ ಕ್ವೀನ್ ಎಂಬುದೇ ಅಗ್ರಸ್ಥಾನ ಪಡೆದುಕೊಂಡಿದೆ.
ಶ್ವೇತಾ ಪ್ರಸಾದ್ ಬ್ಯುಸಿ
ನಟಿ ಶ್ವೇತಾ ಪ್ರಸಾದ್ ಧಾರಾವಾಹಿ ಬಿಟ್ಟ ಮೇಲೆ ಹೆಚ್ಚೆಚ್ಚು ಫೋಟೊಶೂಟ್‌ಗಳನ್ನು ಮಾಡಿಸಿದ್ದಾರೆ. ಶ್ವೇತಾ ಪ್ರಸಾದ್ ಪೋಸ್ಟ್ ಮಾಡುವ ಒಂದೊಂದು ಫೋಟೊಗೂ ಸಖತ್ ಕಮೆಂಟ್‌ಗಳು ಬರುತ್ತವೆ. ಅದರಲ್ಲೂ ಗ್ರೀನ್ ಗೌನ್‌ನಲ್ಲಿ ಶ್ವೇತಾ ಮಾಡಿಸಿರುವ ಫೋಟೊಶೂಟ್ ಹಲವರಿಗೆ ಅಚ್ಚುಮೆಚ್ಚು. ಸದ್ಯ ಪ್ರದೀಪ್ ಮಾಡುತ್ತಿರುವ ವೆಬ್ ಸಿರೀಸ್‌ನಲ್ಲೂ ಜೊತೆಯಾಗಿದ್ದಾರೆ. ಒಂದೊಳ್ಳೆ ಪಾತ್ರಕ್ಕಾಗಿ ಕಾಯುತ್ತಿರುವ ಶ್ವೇತಾ ಪ್ರಸಾದ್ ಸದ್ಯ ಬ್ಯಾಂಕಾಕ್ ಮೂಡಿನಲ್ಲಿದ್ದಾರೆ.


Click it and Unblock the Notifications











