Don't Miss!
- News
ಎನ್ಐಎಗೆ ಭಯೋತ್ಪಾದನಾ ದಾಳಿಯ ಬೆದರಿಕೆ ಸಂದೇಶ: ಮುಂಬೈನಲ್ಲಿ ಹೈ ಅಲರ್ಟ್!
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Srirastu Subhamastu: ಮಾಡದ ತಪ್ಪಿಗೆ ಅನಾಥನಾದ ಮಾಧವ : ಪೂರ್ಣಿಯಿಂದ ಮನೆ ಸೇರುತ್ತಾನಾ?
ಮಾಧವ ಅದೆಷ್ಟು ಮುಗ್ಧ ಎಂದರೆ ಯಾರು ಎಷ್ಟೇ ನೋವು ಮಾಡಿದರೂ ತಿರುಗಿಸಿ ಒಂದು ಮಾತನಾಡುವುದಿಲ್ಲ. ತನಗಾದ ನೋವನ್ನು ತನ್ನಲ್ಲಿಯೇ ನುಂಗಿಕೊಂಡು ಸುಮ್ಮನೆ ಇರುತ್ತಾನೆ. ಅದು ಅವಿನಾಶ್‌ಗೆ ಅರ್ಥವೇ ಆಗುತ್ತಿಲ್ಲ. ಬದಲಿಗೆ ಇನ್ನಷ್ಟು ನೋವು ಕೊಡುತ್ತಲೇ ಇದ್ದಾನೆ. ಪ್ರಪಂಚದಲ್ಲಿ ಅತಿ ಹೆಚ್ಚು ಪ್ರೀತಿಸುವ ಹೆಂಡತಿಯ ಪ್ರಾಣ ಉಳಿಸಿದ್ದು ಮಾಧವ ಎನ್ನುವುದಕ್ಕಿಂತ, ಮಗುವನ್ನೇ ತಂದೆಯೇ ಕೊಂದರೂ ಎಂಬ ಮೂಢ ನಂಬಿಕೆಯೇ ಜಾಸ್ತಿ ಇದೆ.
ಪೂರ್ಣಿ ಮಗುವನ್ನು ಕಳೆದುಕೊಂಡಿರುವುದು ಅಲ್ಲದೆ ತಾಯಿಯಂತೆ ಪ್ರೀತಿಸುವ ಮಾವನಿಂದಾನೂ ದೂರವಾಗಿದ್ದಾಳೆ. ಮನೆಯಲ್ಲೆಲ್ಲಾ ಹಿತ ಶತ್ರುಗಳೇ ತುಂಬಿರುವ ಕಾರಣ, ಮುಚ್ಚಿಟ್ಟ ಸತ್ಯ ಹೊರಗೆ ಬರುವುದಕ್ಕೆ ಬಹಳ ಸಮಯವೇನು ಆಗಲಿಲ್ಲ. ಆದರೆ ಸತ್ಯ ತಿಳಿದ ಮೇಲೆ ಪೂರ್ಣಿಯ ಹಠ ಬದಲಾಗಿದೆ.
'ಅಂಜಲಿ'
ಧಾರಾವಾಹಿಯ
ಮುದ್ದು
ಗುಮ್ಮ
ಈಗೇನು
ಮಾಡ್ತಿದ್ದಾರೆ
ಗೊತ್ತಾ?

ಪೂರ್ಣಿ ಸಮಾಧಾನ ಮಾಡಲು ಬಂದ ಸಿರಿ
ಪೂರ್ಣಿಗೆ ಎಲ್ಲರೂ ಬಹಳ ಬೇಗ ಇಷ್ಟವಾಗುವುದಿಲ್ಲ. ಆದರೆ ಸಿರಿ ತುಂಬಾನೇ ಇಷ್ಟವಾಗಿಬಿಟ್ಟಿದ್ದಾಳೆ. ಪೂರ್ಣಿಗೂ ಅಷ್ಟೇ ಸಿರಿ ಬೆಸ್ಟ್ ಫ್ರೆಂಡ್ ಆಗಿದ್ದಾಳೆ. ಇಬ್ಬರು ಒಬ್ಬರಿಗೊಬ್ಬರು ಭೇಟಿ ಮಾಡುತ್ತಾ ಇರುತ್ತಾರೆ. ಸಿರಿ, ಸೀಮಂತವನ್ನು ನೋಡಿ ಹೋದವಳು ಮತ್ತೆ ಮನೆ ಕಡೆ ಬಂದಿರಲಿಲ್ಲ. ಆಗಿದ್ದ ಅನಾಹುತವೂ ತಿಳಿದಿರಲಿಲ್ಲ. ಕಡೆಗೆ ಎಲ್ಲಾ ಅರ್ಥವಾದ ಮೇಲೆ ಪೂರ್ಣಿಯನ್ನು ನೋಡುವುದಕ್ಕೆ ಮನೆಗೆ ಬಂದಿದ್ದಾಳೆ. ಅಲ್ಲಿ ಎದುರಿಗೆ ಶಾರ್ವರಿ ಮತ್ತು ಮಕ್ಕಳು ಸಿಕ್ಕಿದ್ದಾರೆ. ಮೊದಲೇ ಇವರಿಗೆ ಸಿರಿಯನ್ನು ಕಂಡರೆ ಆಗುವುದಿಲ್ಲ. ಸಿರಿ ತಂದಿದ್ದ ಚಕ್ಕಲಿಯನ್ನು ಡಸ್ಟ್ ಬಿನ್‌ಗೆ ಹಾಕಿ ಅವಮಾನ ಮಾಡಿದ್ದಾರೆ.

ಪೂರ್ಣಿಗೆ ಸಮಾಧಾನ ಮಾಡಿದ ಸಿರಿ
ಪೂರ್ಣಿ ಸಂಪೂರ್ಣವಾಗಿ ನೊಂದು ಹೋಗಿದ್ದಳು. ಮಗುವಿನ ಮೇಲೆ ಸಾಕಷ್ಟು ಕನಸು ಇತ್ತು. ಜೊತೆಗೆ ದೂರವಾದ ತಂದೆ -ಮಗನನ್ನು ಒಂದು ಮಾಡುವುದಕ್ಕೆ ಈ ಮಗುವೇ ದಾರಿಯಾಗಿತ್ತು. ಆದರೆ ಈ ರೀತಿಯಾಗಿದ್ದು ನುಂಗಕಾರದ ನೋವಾಗಿತ್ತು. ಇಂಥ ಸಮಯದಲ್ಲಿ ಮಾವನ ಸಮಾಧಾನದ ಮಾತುಗಳು ಇರಲಿಲ್ಲ. ಸಿರಿಯ ಆಗಮನ ಪೂರ್ಣಿಗೆ ಖುಷಿ ಕೊಟ್ಟಿತ್ತು. ಒಂದಷ್ಟು ಸಮಾಧಾನದ ಮಾತುಗಳನ್ನಾಡಿ ಪೂರ್ಣಿಯ ಮನಸ್ಸನ್ನು ಹಗುರಗೊಳಿಸಿದಳು.

ಪೂರ್ಣಿಗೆ ಮಾತು ಕೊಟ್ಟ ಅವಿನಾಶ್
ಪೂರ್ಣಿಗೆ ಬೆಡ್ ರೆಸ್ಟ್ ನ ಅಗತ್ಯವಿದೆ. ಅದು ಅವಿನಾಶ್‌ಗೂ ಗೊತ್ತು. ಹೀಗಾಗಿ ಅವಳನ್ನು ತುಂಬಾ ಹುಷಾರಾಗಿ ನೋಡಿಕೊಳ್ಳುತ್ತಾನೆ. ಹಾಗೆ ಅತಿಯಾಗಿ ಪ್ರೀತಿಯನ್ನು ಮಾಡುತ್ತಾನೆ. ಪೂರ್ಣಿ ಡಲ್ ಆಗಿದ್ದ ಕಾರಣ, ಏನು ಬೇಕು ಎಂದು ಕೇಳಿದ್ದಾನೆ. ನಾನು ಕೇಳಿದ್ದನ್ನು ಕೊಡಿಸುತ್ತೀರಾ ಅಂತ ಪೂರ್ಣಿ ಕನ್ಫರ್ಮ್ ಮಾಡಿಕೊಂಡಿದ್ದಾಳೆ. ಅವಿನಾಶ್‌ಗೆ ಪೂರ್ಣಿಯ ಆಸೆ ಬಿಟ್ಟರೆ ಬೇರೆ ಏನು ಬೇಕಾಗಿಲ್ಲ. ಹೀಗಾಗಿ ಏನು ಕೇಳು ಮಾಡುತ್ತೀನಿ ಎಂದು ಪ್ರಾಮೀಸ್ ಮಾಡಿದ್ದಾನೆ. ಆದ್ರೆ ಪೂರ್ಣಿ ಇಟ್ಟ ಡಿಮ್ಯಾಂಡ್‌ಗೆ ಅವಿನಾಶ್ ಸುಸ್ತಾಗಿದ್ದಾನೆ.

ಮಾಧವನನ್ನು ಹುಡುಕಿ ಹೊರಟ ಪೂರ್ಣಿ
ಹೆಂಡತಿಯ ಕಷ್ಟ ನೋಡಿ ನಿಂಗೆ ಏನು ಬೇಕು ಹೇಳು ಕೊಡಿಸುತ್ತೀನಿ ಎಂದಿದ್ದು ಅವಿನಾಶ್. ಆದರೆ ಮಾವ ಬೇಕು ಎಂದಾಕ್ಷಣ ಅವಿನಾಶ್ ರಿಯಾಕ್ಷನ್ ಚೆಂಜ್ ಆಗಿದೆ. ಅದು ಸಾಧ್ಯವೇ ಇಲ್ಲ ಪೂರ್ಣಿ ಎಂದು ಎದ್ದು ನಿಂತಿದ್ದಾನೆ. ಪೂರ್ಣಿಗೂ ಮನಸ್ಸಿಗೆ ನೋವಾಗಿ ಅವಳೇ ಮಾವನನ್ನು ಹುಡುಕಲು ಹೊರಟಿದ್ದಾಳೆ. ಅವಿನಾಶ್ ಎಷ್ಟೇ ತಡೆದರು, ಮಾವನನ್ನು ಕರೆಸಿದರೆ ನಿಮ್ಮ ಮಾತು ಕೇಳ್ತೀನಿ. ಇಲ್ಲಂದ್ರೆ ನನ್ನ ಬಿಟ್ಟು ಬಿಡಿ ಎಂದು ಹೇಳಿ ಹೊರಟಾಗಲೇ ತಲೆ ಸುತ್ತಿ ಬಿದ್ದಿದ್ದಾಳೆ.