Don't Miss!
- Sports
IND vs NZ: ಟಿ20 ಕ್ರಿಕೆಟ್ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್
- News
ಡಿಕೆಶಿಯ ಸಂಬಂಧಿ, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಪಿ.ಶರತ್ ಚಂದ್ರ ಎಎಪಿ ಸೇರ್ಪಡೆ
- Technology
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Srirastu Subhamastu:ಅವಿನಾಶ್ ಹೋಗುವ ಮನಸ್ಸಿಲ್ಲದಿದ್ದರೂ ಕಳುಹಿಸಿ ತಪ್ಪು ಮಾಡಿದ್ಲಾ ಪೂರ್ಣಿ..?
ಶತ್ರುಗಳು ಮನೆಯ ಹೊರಗಿನವರಾದರೆ ಕಂಡು ಹಿಡಿದು, ಸದೆ ಬಡಿಯಬಹುದು. ಆದರೆ ಮನೆಯೊಳಗೆ ಇರುವ ಶತ್ರುಗಳನ್ನು ಕಂಡು ಹಿಡಿಯುವುದಾದರೂ ಹೇಗೆ..? ಪೂರ್ಣಿಯ ವಿಚಾರದಲ್ಲಿಯೂ ಅದೇ ಆಗಿದೆ. ಮನೆಯೊಳಗೆ ಅತ್ತೆಯ ಸ್ಥಾನದಲ್ಲಿ ನಿಂತು, ಮನಸ್ಸೊಳಗೆ ವಿಷ ಕಾರುತ್ತಿದ್ದಾಳೆ ಶಾರ್ವರಿ.
ಪೂರ್ಣಿ ಈಗ ಐದು ತಿಂಗಳ ಗರ್ಭಿಣಿ. ಮನೆಯಲ್ಲಿ ನಡೆದ ಹಳೆ ಘಟನೆಯಿಂದ ಮಾಧವ ಮತ್ತು ಮಗ ಅವಿನಾಶ್ ದೂರ ದೂರ ಆಗಿದ್ದಾರೆ. ಯಾರು, ಏನೇ ಹೇಳಿದರು ಇಬ್ಬರು ಒಂದಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ ಮಗುವಿನ ನೆಪ ಇಬ್ಬರನ್ನು ಒಂದು ಮಾಡುತ್ತಿದೆ. ಇದನ್ನು ಶಾರ್ವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
Tripura
Sundari:'ಕುಲವಧು'
ಧಾರಾವಾಹಿಯ
ದಿಶಾ
ಮದನ್
ಮಹಾರಾಣಿ
ಉತ್ಕಲಾ
ಅವತಾರದಲ್ಲಿ
ಪ್ರತ್ಯಕ್ಷ!

ಸ್ಲೋ ಪಾಯಿಸನ್ ಕೊಟ್ಟ ಶಾರ್ವರಿ
ಪೂರ್ಣಿಯ ಆಸೆಗಳಲ್ಲಿ ಗಂಡ ಮತ್ತು ಮಾವನ ಕೈನಿಂದ ಊಟ ಮಾಡುವ ಆಸೆ ಕೂಡ ಇತ್ತು. ಆ ಊಟದಲ್ಲಿ ಮಗು ಬದುಕುಳಿಯ ಬಾರದು ಅಂತ ವಿಷವನ್ನು ಬೆರೆಸಿ ಏನು ಆಗದವಳಂತೆ ಶಾರ್ವರಿ ನಿಂತಿದ್ದಾಳೆ. ಮಾಧವ ಮತ್ತು ಅವಿನಾಶ್ ಒಂದಾಗುವುದು ಶಾರ್ವರಿಗೆ ಬೇಡದ ವಿಚಾರವಾಗಿದೆ. ಹೀಗಾಗಿ ಮಗುವನ್ನೇ ಕೊಲೆ ಮಾಡುವುದಕ್ಕೆ ಸಿದ್ಧಳಾಗಿದ್ದಾಳೆ.

ಪಾಪಮ್ಮನಿಗೆ ಅನುಮಾನ
ಶಾರ್ವರಿ ಮಾಡಿದ ಪ್ಲ್ಯಾನ್ ಅದಾಗಲೇ ವರ್ಕೌಟ್ ಆಗುವುದಕ್ಕೆ ಶುರುವಾಗಿದೆ. ಪೂರ್ಣಿಗೆ ಸಣ್ಣದಾಗಿ ಹೊಟ್ಟೆ ನೋವು ಬರುವುದಕ್ಕೆ ಶುರುವಾಗಿತ್ತು. ಇದನ್ನು ಪೂರ್ಣಿ ಪಾಪಮ್ಮನ ಬಳಿ ಹೇಳಿದ್ದಳು. ಬಿಸಿ ನೀರನ್ನು ತಂದುಕೊಟ್ಟ ಪಾಪಮ್ಮ ಹೊಟ್ಟೆ ನೋವಾಗುತ್ತಿರುವುದು ಎಲ್ಲಿ ಎಂದು ಕೇಳಿದ್ದರು. ಅದಕ್ಕೆ ಪೂರ್ಣಿ ಹೊಟ್ಟೆ ನೋವಿನ ಜಾಗವನ್ನು ತೋರಿಸಿದಳು. ಆಗ ಪಾಪಮ್ಮನಿಗೆ ಭಯ ಉಂಟಾಗಿದೆ. ಅಲ್ಲಿ ಹೊಟ್ಟೆ ನೋವು ಬರುವಂತಿಲ್ಲ. ಇರು ಡಾಕ್ಟರ್ ಅನ್ನು ಕರೆಸಲು ಹೇಳುತ್ತೀನಿ ಎಂದಾಗ, ಅಲ್ಲಿಯೇ ನಿಂತಿದ್ದ ಶಾರ್ವರಿ, ನಾನೇ ಡಾಕ್ಟರ್‌ಗೆ ಕಾಲ್ ಮಾಡುತ್ತೀನಿ ಎಂದು ಏನೋ ಒಂದು ನೆಪ ಹೇಳಿದ್ದಾಳೆ.

ಅವಿನಾಶ್‌ಗೆ ಹೋಗುವ ಮನಸ್ಸು ಬರಲಿಲ್ಲ
ತುಂಬಾ ಪ್ರೀತಿ ಮಾಡುವವರಿಗೆ ಏನಾದರೂ ಸಮಸ್ಯೆ ಬರುತ್ತೆ ಅಂದ್ರೆ ಸೆವೆನ್ ಸೆನ್ಸ್ ನಿಂದ ತಿಳಿಯುತ್ತೆ ಎಂಬ ಮಾತಿದೆ. ಅದರಂತೆ ಅವಿನಾಶ್ ಮತ್ತು ಪೂರ್ಣಿ ತುಂಬಾನೇ ಪ್ರೀತಿ ಮಾಡುವವರು. ಮಗುವಿಗಾಗಿ ಇಬ್ಬರು ಪ್ರಾಣವನ್ನೇ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಪೂರ್ಣಿ ಹೇಳಿದಂತೆಲ್ಲಾ ಕೇಳುತ್ತಾನೆ ಅವಿನಾಶ್. ಇಷ್ಟು ಪ್ರೀತಿ ಮಾಡುವ ಅವಿನಾಶ್‌ಗೆ ಪೂರ್ಣಿಗೆ ಎದುರಾಗುವ ತೊಂದರೆ ಬಗ್ಗೆ ಗೊತ್ತಾಯ್ತು ಎನಿಸುತ್ತದೆ. ಅದಕ್ಕೆ ನಾನು ಆಫೀಸಿಗೆ ಹೋಗುವುದಿಲ್ಲ ಎಂದು ಹಠ ಮಾಡಿ ಕುಳಿತಿದ್ದ. ಆದರೆ ಪೂರ್ಣಿ, ಇಲ್ಲ ನೀವೂ ಹೋಗಿ. ಮಾತ್ರೆ ತೆಗೆದುಕೊಂಡು, ಮಲಗಿದರೆ ಎಲ್ಲವೂ ಸರಿಯಾಗುತ್ತೆ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾಳೆ.

ಪೂರ್ಣಿಯನ್ನು ಕಾಪಾಡುತ್ತಾನಾ ಮಾಧವ..?
ಮನೆಯಲ್ಲಿ ಯಾರು ಇಲ್ಲದಂತೆ ಶಾರ್ವರಿ ಪ್ಲ್ಯಾನ್ ಮಾಡಿದ್ದಳು. ತಾನು ದೇವಸ್ಥಾನಕ್ಕೆ ಹೋಗುವವಳಂತೆ ಹೋದಳು. ಮನೆಯಲ್ಲಿ ಡ್ರೈವರ್ ನನ್ನು ಬಿಡದೆ ಕರೆದೊಯ್ದಳು. ಈಗ ಮನೆಯಲ್ಲಿ ಉಳಿದದ್ದು ಮನೆಕೆಲಸದವರು ಮಾತ್ರ. ಅಲ್ಲಿದ್ದವರಿಗೆ ಯಾರಿಗೂ ಡ್ರೈವಿಂಗ್ ಬರುತ್ತಿರಲಿಲ್ಲ. ಆದರೆ ಇದೆ ಸಮಯಕ್ಕೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಾಪಮ್ಮ ಮಾಧವನನ್ನು ಕರೆದು ಸಮಸ್ಯೆಯನ್ನು ಹೇಳಿದ್ದಾರೆ. ಬೇರೆ ದಾರಿ ಕಾಣದೆ ಮಾಧವನೇ ಕಾರಿನಲ್ಲಿ ಪೂರ್ಣಿಯನ್ನು ಕೂರಿಸಿಕೊಂಡು ಹೊರಟಿದ್ದಾರೆ. ಆದರೆ ಮಾಧವನಿಗೆ ಹಳೆಯ ಘಟನೆ ತುಂಬಾನೇ ಕಾಡುತ್ತಿದೆ, ಕೈ ನಡುಗುತ್ತಿದೆ. ಆದರೆ ವಿಧಿಯಿಲ್ಲ. ಮಾಧವ ಈಗ ಪೂರ್ಣಿಯನ್ನು ಕಾಪಾಡಬೇಕಾದ ಅನಿವಾರ್ಯತೆ ಇದೆ.