Don't Miss!
- News
ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರಿಂದ ಚುನಾಯಿತ ಸರ್ಕಾರಗಳಿಗೆ ತೊಂದರೆ : ಅರವಿಂದ್ ಕೇಜ್ರಿವಾಲ್
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Srirastu Subhamastu:ಅಭಿಮಾನಿಗಳ ಆಸೆ ಈಡೇರುತ್ತಾ? ಪೂರ್ಣಿ ಮಗು ಬದುಕುತ್ತಾ..?
ಮನಸ್ಸಿಗೆ ನಾಟುವಂತ, ನಮ್ಮ ನಡುವೆಯೇ ನಡೆಯುವಂತ ಕಥೆಗಳನ್ನು ಆರಿಸಿಕೊಂಡಾಗ, ಜನ ಅದನ್ನು ಧಾರಾವಾಹಿಯ ರೀತಿ ನೋಡುವುದಿಲ್ಲ. ನಮ್ಮ ಸುತ್ತಮುತ್ತಲಿನ ಕಥೆ ಎಂಬುವಂತೆ ಫೀಲ್ ಮಾಡುತ್ತಾರೆ. ತೆರೆ ಮೇಲೆ ನಟಿಸುವವರು ಕೂಡ ಅಷ್ಟೇ ನೈಜವಾಗಿ ನಟಿಸಿದಾಗಲೂ ಕಥೆ ನಮ್ಮ ಮೇಲೆ ಬೇರೆಯದ್ದೇ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಕಥೆಯೂ ಅದೇ ಆಗಿದೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಆರಂಭವಾದ ಮೊದಲ ವಾರವೇ ಜನರನ್ನು ತನ್ನತ್ತ ಸೆಳೆದು ಆಗಿದೆ. ಟಿಆರ್‌ಪಿಯಲ್ಲೂ ಮೂರನೇ ಸ್ಥಾನದಲ್ಲಿ ಕುಳಿತುಕೊಂಡು ಆಗಿದೆ. ಕಥೆ ಸಾಗುತ್ತಿರುವ ರೀತಿ, ಪಾತ್ರಗಳ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಫೇವರಿಟ್ ಸೀರಿಯಲ್ ಆಗಿದೆ.
ಮೊದಲ
ಬಾರಿಗೆ
ಖಳನಾಯಕಿಯಾಗಿ
ಮೋಡಿ
ಮಾಡುತ್ತಿರೋ
ನಟಿ
ಸುಕೃತಾ
ನಾಗ್!

ಹೊಟ್ಟೆ ನೋವಿನಿಂದ ನರಳುತ್ತಿರುವ ಪೂರ್ಣಿ
ಮಾಧವನ ಮನೆಯಲ್ಲಿ ಯಾರಿಗೂ ತಿಳಿಯದಂತ ದೊಡ್ಡ ಶತ್ರು ಇದ್ದಾಳೆ. ಅವಳೇ ಶಾರ್ವರಿ. ಎಲ್ಲರಿಗೆ ಒಳಿತನ್ನೇ ಬಯಸುತ್ತೀನಿ ಎಂದೇ ಚೆಂದವಾದ ಮಾತನ್ನು ಆಡುತ್ತಾಳೆ. ಆದರೆ ಒಳಗೊಳಗೆ ದ್ವೇಷದ ಕೆಂಡಕಾರುತ್ತಾಳೆ. ಇದರಿಂದಾಗಿ ಈಗ ಪೂರ್ಣಿಯ ಪ್ರಾಣ ಕೂಡ ಅಪಾಯಕ್ಕೆ ಸಿಲುಕಿದೆ. ಪೂರ್ಣಿ ಹೊಟ್ಟೆಯೊಳಗಿರುವ ಮಗು ವಿಷಹಾರ ಸೇವಿಸಿ, ಇಂದು ಆಸ್ಪತ್ರೆ ಸೇರುವಂತೆ ಆಗಿದೆ.

ಭಯದಿಂದಾನೇ ಕಾರು ಓಡಿಸಿದ ಮಾಧವ
ಪಕ್ಕಾ ಪ್ಲ್ಯಾನ್ ಮಾಡಿದ್ದ ಶಾರ್ವರಿ ವಿಷ ಊಟ ತಿನ್ನಿಸಿ, ಮನೆಯಲ್ಲಿ ಯಾರು ಇಲ್ಲದಂತೆ ಪ್ಲ್ಯಾನ್ ಮಾಡಿದ್ದಳು. ಪೂರ್ಣಿ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದಳು. ಡ್ರೈವರ್ ಕೂಡ ಮನೆಯಲ್ಲಿ ಇರಲಿಲ್ಲ. ಏನು ಮಾಡಬೇಕೆಂದು ತಿಳಿಯದೆ, ಕಾರಿನ ಡ್ರೈವರ್ ಸೀಟಿನಲ್ಲಿ ಮಾಧವ ಕುಳಿತೇ ಬಿಟ್ಟ. ಹಳೆ ಕಹಿ ಘಟನೆ ನೆನಪಿಗೆ ಬಂದರೂ ಸಹ, ಕೈ ನಡುಗಿದರೂ ಕೂಡ, ಮನಸ್ಸನ್ನು ಗಟ್ಟಿ ಮಾಡಿಕೊಂಡು ಕಾರು ಚಲಾಯಿಸಿದ. ಧೈರ್ಯವಾಗಿ ಪೂರ್ಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

ಮಗನಿಂದ ಮತ್ತಷ್ಟು ದೂರ ಆಗ್ತಾನಾ..?
ಹಳೇ ಘಟನೆಯಿಂದ ತಂದೆ ಮಗ ಈಗಾಗಲೇ ದೂರವಾಗಿದ್ದಾರೆ. ಮಾಧವನ ತಪ್ಪಿಲ್ಲದೆ ಇದ್ದರು ದ್ಷೇಷ ಮಾಡುತ್ತಾ ಇದ್ದಾನೆ. ಮಾಧವನ ಮುಖ ಕಂಡರೆ ಆಗದಷ್ಟು ದ್ವೇಷ ಮಾಡುತ್ತಿದ್ದಾನೆ. ಪೂರ್ಣಿ ಈ ದ್ವೇಷವನ್ನು ಮರೆಸಿ, ಅಪ್ಪ-ಮಗನನ್ನು ಒಂದು ಮಾಡುವುದಕ್ಕೆ ಟ್ರೈ ಮಾಡಿದ್ದಳು. ಆದರೆ ಈಗ ಪೂರ್ಣಿಯ ಜೀವ ಮತ್ತು ಮಗು ಜೀವ ಅಪಾಯದಲ್ಲಿದೆ. ಮಾಧವ ಹೇಗೋ ಧೈರ್ಯ ಮಾಡಿ ಪೂರ್ಣಿಯನ್ನು ಆಸ್ಪತ್ರೆಗೆ ಕರೆತಂದ. ಆದರೆ ಕಂಡೀಷನ್ ಇಬ್ಬರಲ್ಲಿ ಒಬ್ಬರ ಜೀವ ಉಳಿಸಬಹುದಾಗಿದೆ. ಮಾಧವನ ಆಯ್ಕೆ ಪೂರ್ಣಿಯೇ ಆಗಿದೆ. ಇದರಿಂದ ಮಗ ಅವಿನಾಶ್‌ಗೆ ಮತ್ತಷ್ಟು ದ್ವೇಷ ಹೆಚ್ಚಾಗುವ ಸಾಧ್ಯತೆಯೂ ಇದೆ.

ಅಭಿಮಾನಿಗಳ ಆಸೆ ಈಡೇರಿಸುತ್ತಾರಾ ನಿರ್ದೇಶಕರು..?
ನಮ್ಮ ಸುತ್ತಮುತ್ತಲಲ್ಲಿಯೇ ನಡೆದ ಕಥೆಯಂತೆ ಸಾಗಿದಾಗ ಅದು ಧಾರಾವಾಹಿಯ ರೀತಿ ಜನ ನೋಡುವುದಿಲ್ಲ.ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು ಜನ ತಮ್ಮ ಕಥೆಯಂತೆಯೇ ನೋಡುತ್ತಿದ್ದಾರೆ. ಅದಕ್ಕಾಗಿಯೇ ಇದೀಗ ಪೂರ್ಣಿಯ ಮಗು ಅಪಾಯದಲ್ಲಿದೆ ಎಂದು ಗೊತ್ತಾದಾಗ ಫುಲ್ ಎಮೋಷನಲ್ ಆಗಿದ್ದಾರೆ. ನಮಗೆ ಮಗು ಮತ್ತು ತಾಯಿ ಇಬ್ಬರನ್ನು ಉಳಿಸಿಕೊಡಿ, ಮಗು ಇಲ್ಲವಾದರೆ ಮಾಧವ್ ಸರ್ ಮೇಲೆ ಮಗನ ಕೋಪ ಹೆಚ್ಚಾಗುತ್ತೆ. ಆ ರೀತಿಯೆಲ್ಲಾ ಆಗುವುದು ಬೇಡ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ನಿರ್ದೇಶಕ ಸುದೇಶ್ ಕೆ ರಾವ್ ಅವರಿಗೆ ಸಿಕ್ಕಾಪಟ್ಟೆ ಮನವಿ ಮಾಡುತ್ತಿದ್ದಾರೆ. ನಿರ್ದೇಶಕರ ತೀರ್ಮಾನ ಜನಕ್ಕಾಗಿ ಬದಲಾಗುವುದಾದರೂ ಇದು ತಡವಾಗಿದೆ. ಯಾಕಂದ್ರೆ ಶೂಟ್ ಆಗಿ ಎಷ್ಟೋ ದಿನಗಳಾದ ಕಾರಣ ದೃಶ್ಯದಲ್ಲಿ ಬದಲಾವಣೆಯೂ ಕಷ್ಟವಾಗುತ್ತೆ. ನಿರ್ದೇಶಕರು ಮನಸ್ಸು ಮಾಡಿದ್ರೆ ಬದಲಾಗಲೂ ಬಹುದು.