Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Srirastu Subhamastu:ಮಗನಿಂದ ಮಾಧವನನ್ನು ಮತ್ತಷ್ಟು ದೂರ ಮಾಡಿದೆ ಪೂರ್ಣಿಯ ಸ್ಥಿತಿ..!
ಮನೆಯಲ್ಲಿ ಅಪ್ಪ ಮಗನನ್ನು ಒಂದು ಮಾಡುವುದಕ್ಕೆ ಪೂರ್ಣಿ ಸಾಕಷ್ಟು ಶ್ರಮಪಟ್ಟಿದ್ದಾಳೆ. ಸೀಮಂತದ ಕಾರ್ಯಕ್ರಮದಲ್ಲಿ ಇಬ್ಬರನ್ನು ಒಟ್ಟು ಮಾಡುವ ನೆಪಗಳನ್ನು ಹುಡುಕಿದ್ದಾಳೆ. ಆದಷ್ಟು ಅಪ್ಪ ಮಗನನ್ನು ಒಟ್ಟಿಗೆ ನಿಲ್ಲಿಸಿದ್ದಾಳೆ. ಒಂದೇ ರೀತಿಯಲ್ಲಿ ಡ್ರೆಸ್ ಮಾಡಿಕೊಳ್ಳುವಂತೆ ಮಾಡಿದ್ದಾಳೆ. ಒಟ್ಟಾಗಿ ಓಡಾಡುವಂತೆ ಮಾಡಿದ್ದಾಳೆ.
ತಂದೆಯ ಮುಖವನ್ನು ನೋಡಿದರೂ ಕೆಂಡಕಾರುತ್ತಿದ್ದ ಅವಿನಾಶ್, ಪೂರ್ಣಿಗಾಗಿ ಅಪ್ಪನ ಪಕ್ಕದಲ್ಲಿಯೇ ನಿಂತಿದ್ದ. ಪೂರ್ಣಿಗಾಗಿ ಅಪ್ಪನ ಜೊತೆಯಲ್ಲಿಯೇ ಊಟ ಬಡಿಸಿದ್ದ. ಇದೆಲ್ಲವನ್ನು ನೋಡುತ್ತಿದ್ದ ಶಾರ್ವರಿಗೆ ಮಾತ್ರ, ಯಾವುದನ್ನು ಸಹಿಸುವುದಕ್ಕೆ ಸಾಧ್ಯವಾಗಲಿಲ್ಲ.
ಕಿರುತೆರೆ
ನಂತರ
ಹಿರಿತೆರೆಗೆ
ಕಾಲಿಟ್ಟ
ನಿಶಾ
ಹೆಗಡೆ

ಶಾರ್ವರಿಯ ನಾಟಕ ಶುರು
ಪ್ರೀತಿಯ ಸೊಸೆ ಪೂರ್ಣಿಯನ್ನು ಮಾಧವ ಕಷ್ಟಪಟ್ಟು ಆಸ್ಪತ್ರೆಗೆ ತಂದು ಸೇರಿಸಿದ್ದಾನೆ. ಆದರೆ, ಆಸ್ಪತ್ರೆಯಲ್ಲಿ ಶಾರ್ವರಿ ಮಾಡಿದ ಕೆಟ್ಟತನವೇ ವರ್ಕೌಟ್ ಆಗಿದೆ. ಮಗು ಬದುಕುವ ಎಲ್ಲಾ ಸಾಧ್ಯತೆಯೂ ಕಡಿಮೆ ಇದೆ. ವೈದ್ಯರು ಕೂಡ ಸಾಕಷ್ಟು ಶ್ರಮ ಹಾಕಿದ್ದಾರೆ. ಎಷ್ಟೇ ಕಷ್ಟ ಪಟ್ಟರು, ಪೂರ್ಣಿಯ ಮಗು ಉಳಿಸುವುದಕ್ಕೆ ಸಾಧ್ಯವಾಗಿಲ್ಲ. ಈ ಟೆನ್ಶನ್‌ನಲ್ಲಿ ಮಾಧವ ಇದ್ದಾರೆ. ಶಾರ್ವರಿಯನ್ನು ಬಹಳ ಒಳ್ಳೆಯವಳು ಎಂದುಕೊಂಡು, ಅವಳಿಗೆ ಕರೆ ಮಾಡಿದ್ದಾನೆ ಮಾಧವ.

ಕರೆ ಸ್ವೀಕರಿಸಿದೆ ನಾಟಕ
ಮಾಧವನಿಗೆ ಸಿಕ್ಕಾಪಟ್ಟೆ ಟೆನ್ಶನ್ ಆಗಿದೆ. ಆ ಕಡೆ ಮಗು ಉಳಿಯಬೇಕೆಂದರೆ ತಾಯಿ ಉಳಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮಾಧವನಿಗೆ ಬೇರೆ ಆಯ್ಕೆಯಿಲ್ಲ. ಸೊಸೆಯನ್ನೇ ಮಗಳನ್ನಾಗಿ ನೋಡಿಕೊಂಡಿದ್ದ, ಮಗು ಮತ್ತೆ ಆಗಬಹುದು. ಆದರೆ ಸೊಸೆ ಉಳಿಯುವುದು ಬಹಳ ಮುಖ್ಯವೆಂದು ಭಾವಿಸಿದ್ದ. ಈ ಸಮಯದಲ್ಲಿ ಶಾರ್ವರಿಗೂ ವಿಷಯ ಮುಟ್ಟಿಸಲು ಕರೆ ಮಾಡಿದರೆ, ಶಾರ್ವರಿಗೆ ಖುಷಿಯೋ ಖುಷಿ. ತಾನಂದುಕೊಂಡಿದ್ದ ಆಸೆ ನೆರವೇರಿದೆ ಎಂಬುದು ಸಾಬೀತಾಗಿದೆ. ಅದಕ್ಕೆ ದೇವರಿಗೆ ಈಡುಗಾಯಿ ಕೂಡ ಒಡೆದು ಬಂದಿದ್ದಾಳೆ. ಮಾಧವ ಸಂಕಷ್ಟದಲ್ಲಿದ್ದಾನೆ ಎಂಬುದು ಗೊತ್ತಾಗಿಯೇ ಫೋನ್ ನೆಗ್‌ಲೆಟ್ ಮಾಡಿದ್ದಾಳೆ.

ತುಳಸಿಯಿಂದ ಸಿಕ್ತು ಮಾಧವನಿಗೆ ದಾರಿ
ತುಳಸಿ, ಮಾಧವನ ದೊಡ್ಡ ಫ್ಯಾನ್, ಮಾಧವನ ಬುದ್ದಿ ಮಾತುಗಳನ್ನು ಯಾವಾಗಲೂ ಕೇಳುತ್ತಲೇ ಇರುತ್ತಾಳೆ. ಈಗಾಗಲೇ ಕ್ಯಾಮೆರಾದಿಂದಾಗಿ ಇಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಮಾಧವನ ಮನಸ್ಸು ಕೂಡ ತುಳಸಿಗೆ ಅರ್ಥವಾದಂತೆ ಕಾಣುತ್ತಿದೆ. ಅದಕ್ಕೆ ಆತ ಕಷ್ಟದಲ್ಲಿರುವುದು ತುಳಸಿಯ ಮನಸ್ಸಿಗೆ ನಾಟಿದೆ. ತಕ್ಷಣ ಕರೆ ಮಾಡಿದ್ದಾಳೆ. ಮಾಧವ ಮಾತನಾಡುವುದಕ್ಕೆ ಆಗುವುದಿಲ್ಲ ಎಂದರು ಕೂಡ, ಸಮಾಧಾನದ ಮಾತುಗಳನ್ನು ಆಡಿದ್ದಾಳೆ. ಆಗ ಮಾಧವ ಕೂಡ ಆ ಮಾತುಗಳನ್ನು ಫಾಲೋ ಮಾಡಿ, ನಿರ್ಧಾರ ತೆಗೆದುಕೊಂಡಿದ್ದಾನೆ.

ತಂದೆಯ ಕೊಳಪಟ್ಟಿ ಹಿಡಿದ ಮಗ
ಬಹಳ ವರ್ಷಗಳ ಹಿಂದೆ ಮಾಧವ ಕಾರು ಡ್ರೈವ್ ಮಾಡಿದ್ದ. ಆಗಿನ್ನು ಅವಿನಾಶ್ ಚಿಕ್ಕ ಮಗು. ಕಾರು ಅಪಘಾತ ಉಂಟಾಗಿ, ಅವತ್ತು ಅವಿನಾಶ್ ತಾಯಿಯನ್ನು ಕಳೆದುಕೊಂಡಿದ್ದ. ಚಿಕ್ಕಪ್ಪ ದೇಹದ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಅದೆಲ್ಲವು ಅವಿನಾಶ್ ತನ್ನ ತಂದೆಯನ್ನು ದ್ವೇಷಿಸುವುದಕ್ಕೆ ಕಾರಣವಾಗಿತ್ತು. ಇದೀಗ ಪೂರ್ಣಿಯನ್ನು ಆಸ್ಪತ್ರೆಗೆ ಕರೆದು ತಂದಿದ್ದಾನೆ. ಅವಿನಾಶ್ ಕೋಪ ಮತ್ತಷ್ಟು ಹೆಚ್ಚಾಗಿದೆ. ನನ್ನ ಹೆಂಡತಿಯನ್ನು ಬಲಿ ಪಡೆಯಬೇಕು ಎಂದುಕೊಂಡಿದ್ದೀಯಾ ಎಂದು, ತಂದೆಯ ಸ್ಥಿತಿಯನ್ನು ಗಮನಿಸದೆ, ಕೊಳಪಟ್ಟಿ ಹಿಡಿದು, ಅವಿನಾಶ್ ಪ್ರಶ್ನಿಸಿದ್ದಾನೆ. ಅತ್ತ ಮಾಧವ ಮೊದಲೇ ದುಃಖದಲ್ಲಿದ್ದಾನೆ. ಸೊಸೆಗೆ ಹಿಂಗಾಯ್ತಲ್ಲ ಎಂಬ ಬೇಸರ, ನೋವು ಅವನಲ್ಲಿದೆ. ಆದರೆ ಮಗನಾದವನು ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ, ಮತ್ತಷ್ಟು ನೋಯಿಸಿದ್ದಾನೆ. ಶಾರ್ವರಿ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದ್ದು, ತಂದೆ ಮಗನ ಬಾಂಧವ್ಯ ಇನ್ನಷ್ಟು ದೂರವಾಗಿದೆ, ದ್ವೇಷ ಹೆಚ್ಚಾಗಿದೆ.