Srirastu Subhamastu: ಸೊಸೆ ಬಂದ ಮೇಲೆ ಬದಲಾಯ್ತು ಜೀವನ.. ತುಳಸಿಗೆ ಕೆಲಸ ಸಿಗುತ್ತಾ..?

By ಎಸ್ ಸುಮಂತ್

ಸಂಧ್ಯಾಳ ಸ್ವಾರ್ಥದ ಗುಣ ಇನ್ನು ತುಳಸಿಗೆ ಗೊತ್ತಾಗುತ್ತಿಲ್ಲ. ಅವಳಾಡುವ ನಾಟಕವನ್ನೇ ಸತ್ಯ ಎಂದು ನಂಬಿದ್ದಾಳೆ. ಅದಕ್ಕೆಂದೆ ಸಂಧ್ಯಾ ಮಾತಿಗೆ ಮುಂಚೆ ತವರು ಮನೆಗೆ ಓಡಾಡುತ್ತಿದ್ದಾಳೆ. ಅಮ್ಮನ ಮನೆಗೆ ಓಡಿ ಬಂದು ಗಂಡನ ಮನೆಯವರ ಬಗ್ಗೆ ಹೇಳುತ್ತಾ ಇರುತ್ತಾಳೆ. ತುಳಸಿ ಪಾಪ ಸಂಧ್ಯಾ ಹೇಳಿದ್ದೆಲ್ಲವನ್ನು ನಂಬಿ, ಕೈಯ್ಯಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡಿದ್ದಾಳೆ.

ಸಂಧ್ಯಾಗೆ ತುಳಸಿಯನ್ನು ಯಾಮಾರಿಸುವುದು ಚೆನ್ನಾಗಿ ಗೊತ್ತು. ಅದಕ್ಕೆಂದೇ ಯಾವಾಗಲೂ ಮನೆ ಬಳಿ ಬಂದು ಗಂಡನ ಮನೆಯ ಕಷ್ಟಗಳನ್ನು ಹೇಳಿ ಭಾವನೆಯ ಮೂಲಕ ಕಟ್ಟಿ ಹಾಕುತ್ತಿದ್ದಾಳೆ. ಮನೆಗೆ ಬಂದು ನಂಗೆ ಇನ್ನು ಮುಂದೆ ಹಣ ಬೇಕು ಅಂತ ಹೇಳಿ ಹೋಗಿರುವುದು ತುಳಸಿಯ ಟೆನ್ಶನ್‌ಗೆ ಕಾರಣವಾಗಿದೆ.

ಈಗ ಮಗಳಿಗೆ ಹಣ ಒದಗಿಸಲೇಬೇಕೆಂದು ಮನಸ್ಸು ಮಾಡಿರುವ ತುಳಸಿ, ದುಡಿಯುವುದಕ್ಕಾಗಿ ಹೊರಟಿದ್ದಾಳೆ. ದುಡಿದು ಮಗಳಿಗಾಗಿ ಹಣ ಹೊಂದಿಸುವುದಕ್ಕೆ ಶುರು ಮಾಡಿದ್ದಾಳೆ. ಅದನ್ನ ಈಗ ಮನೆಯವರ ಬಳಿ ಹೇಳುವುದಾದರೂ ಹೇಗೆ ಎಂದು ಒದ್ದಾಡುತ್ತಿದ್ದಾಳೆ. ಮಾವನನ್ನು ಒಪ್ಪಿಸುವುದೇ ತುಳಸಿಗೆ ಇರುವ ಚಾಲೆಂಜ್.

ತುಳಸಿಗೆ ಕೆಲಸ ಸಿಗುತ್ತಾ..?

ತುಳಸಿಗೆ ಕೆಲಸ ಸಿಗುತ್ತಾ..?

ತುಳಸಿಗೆ ಮನೆ, ಸಂಸಾರ ಅಂತ ಬಿಟ್ರೆ ಬೇರೆ ಯಾವುದೇ ರೀತಿಯ ಕಾಂಟ್ಯಾಕ್ಟ್ ಕೂಡ ಗೊತ್ತಿಲ್ಲ. ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವುದು ಬಿಟ್ಟರೆ ಸ್ವಂತ ಜೀವನದ ಬಗೆಗೂ ಯೋಚನೆ ಮಾಡಿರಲಿಲ್ಲ. ತುಳಸಿಯ ಮಾವ ದತ್ತನೂ ಅಷ್ಟೇ ತುಳಸಿಯನ್ನು ಎಲ್ಲಿಯೂ ಕಳುಹಿಸದಂತೆ, ಮಗ ಸತ್ತಾಗಲೂ ತಂದೆಯ ಸ್ಥಾನದಲ್ಲಿ ನಿಂತು ನೋಡಿಕೊಂಡಿದ್ದಾನೆ. ಹೀಗಾಗಿ ತುಳಸಿಗೆ ಮನೆಯೇ ಪ್ರಪಂಚವಾಗಿತ್ತು. ಈಗ ಮಗಳ ನಾಟಕಕ್ಕೆ ಬಲಿಯಾಗಿ, ಕೆಲಸ ಮಾಡಲು ಹೊರಟಿದ್ದಾಳೆ.

ಸೊಸೆ ಬಂದ ಮೇಲೆ ಜೀವನ ಬದಲು

ಸೊಸೆ ಬಂದ ಮೇಲೆ ಜೀವನ ಬದಲು

ಸಿರಿ ಮತ್ತು ಸಮರ್ಥ್ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಸಿರಿ ಯಾವತ್ತು ನಾನು ನೀನು ಸಪರೇಟ್ ಆಗಿ ಇರಬೇಕು ಎಂದು ಬಯಸಿದವಳಲ್ಲ. ಫ್ಯಾಮಿಲಿ ಜೊತೆಗೆ ಇರಬೇಕೆಂದು ಬಯಸಿ ಮದುವೆಯಾದವಳು. ಸಿರಿ ಬಂದ ಮೇಲೆ ತುಳಸಿಯ ಜೀವನವೂ ಬದಲಾಯಿತು. ತುಳಸಿಯನ್ನು ಹೊರಗೆ ಕರೆದುಕೊಂಡು ಹೋಗುವುದಕ್ಕೆ ಶುರು ಮಾಡಿದಳು, ತುಳಸಿಗೆ ಹೊಸ ಪ್ರಪಂಚವನ್ನೇ ತೋರಿಸಿದ್ದಳು.

ತುಳಸಿಗೆ ಸಿಗುತ್ತಾ ಮನೆಯವರ ಬೆಂಬಲ

ತುಳಸಿಗೆ ಸಿಗುತ್ತಾ ಮನೆಯವರ ಬೆಂಬಲ

ತುಳಸಿಗೆ ಸೊಸೆ ಅಂದ್ರೆ ಒಳ್ಳೆ ಫ್ರೆಂಡ್ ಇದ್ದಂತೆ. ಏನೇ ಕಷ್ಟವಿದ್ದರೂ, ಯಾವುದೇ ಸಮಸ್ಯೆ ಬಂದರೂ ತುಳಸಿಯ ಬಳಿ ಹೇಳಿಕೊಳ್ಳುತ್ತಾಳೆ. ಹಾಗೇ ಸಿರಿಗೂ ಅಷ್ಟೇ ಅತ್ತೆ ಡಲ್ ಆಗಿದ್ದರೆ ಸತ್ಯ ಬೇಗ ಗೊತ್ತಾಗುತ್ತೆ. ಸಮಸ್ಯೆಯನ್ನು ತಿಳಿಯಲು ಯತ್ಮಿಸುತ್ತಾಳೆ. ಇಂದು ಕೂಡ ಆಗಿದ್ದು ಅದೆ. ತುಳಸಿಯ ಬಳಿ ವಿಚಾರ ಕೇಳಿದಾಗ ನನಗೂ ದುಡಿಬೇಕು ಅನ್ನಿಸ್ತಾ ಇದೆ ಎಂದಿದ್ದಾಳೆ.

ಬಾಕ್ಸ್ ಕೆಲಸ ಶುರು ಮಾಡ್ತಾಳಾ ತುಳಸಿ..?

ಬಾಕ್ಸ್ ಕೆಲಸ ಶುರು ಮಾಡ್ತಾಳಾ ತುಳಸಿ..?

ತುಳಸಿಗೆ ಈಗ ಹಣ ಬೇಕಿದೆ. ಸಂಧ್ಯಾಳಿಗೆ ಮನೆಯವರಿಗೆ ಗೊತ್ತಿಲ್ಲದೆ ಹಣ ಕೊಡಬೇಕಾದ ಅನಿವಾರ್ಯತೆ ಇದೆ. ಆದ್ರೆ, ಹಣ ತರುವುದು ಎಲ್ಲಿಂದ ಎಂಬ ಪ್ರಶ್ನೆ? ಈಗ ಸಿರಿ ಬಳಿ ಸಮಸ್ಯೆ ಹೇಳಿದ್ದಾಳೆ. ಸಿರಿ ಕೂಡ ಸಮರ್ಥ್ ಬಳಿ ಮಾತನಾಡುವುದಾಗಿ ತಿಳಸಿದ್ದಾಳೆ. ಈಗಾಗಲೇ ಆಫೀಸಲ್ಲಿ ಸಮರ್ಥ್ ಬಳಿ ಎಲ್ಲರೂ ಸಹಾಯ ಕೇಳಿದ್ದಾರೆ. ನಿಮ್ಮ ಅಮ್ಮನ ಕೈರುಚಿ ಚೆನ್ನಾಗಿದೆ. ಹೊಟೇಲ್‌ಗೆ ಕೊಡುವ ಹಣವನ್ನು ಅಮ್ಮನಿಗೆ ನೀಡುತ್ತೇವೆ. ನಮಗೂ ಬಾಕ್ಸ್ ಒದಗಿಸಬಹುದಾ ಎಂದು ಕೇಳಿದ್ದಾರೆ. ಈಗ ಸಿರಿ ಸಮಸ್ಯೆ ಹೇಳಿದರೆ ಸಮರ್ಥನಿಂದಾನೇ ಪರಿಹಾರವೂ ಸಿಗುವ ಸಾಧ್ಯತೆ ಇದೆ.


More from Filmibeat

English summary
Srirastu Subhamastu Serial Written Update on March 1st episode. Here is the details about Tulasi searching for job.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X