Pooja Lokesh: ಕಿರುತೆರೆಗೆ ಮತ್ತೆ ಮರಳಿದ ಪೂಜಾ ಲೋಕೇಶ್.. 'ಸೀತಾ ರಾಮ'ನಿಗೆ ಈಕೆಯೇ ಖಡಕ್ ವಿಲನ್

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಸೀತಾರಾಮ'ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಪೂಜಾ ಲೋಕೇಶ್. ದಶಕಗಳ ನಂತರ ಮತ್ತೆ ಕಿರುತೆರೆಗೆ ವಾಪಸ್ ಆಗಿರುವ ಪೂಜಾ ಲೋಕೇಶ್ ಅವರು ಒಂದು ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ವೈಷ್ಣವಿ ಗೌಡ 'ಅಗ್ನಿಸಾಕ್ಷಿ' ನಂತರ ಸ್ವಲ್ಪ ದಿನ ಬ್ರೇಕ್ ತೆಗೆದುಕೊಂಡಿದ್ದು ಈಗ 'ಸೀತಾ ರಾಮ'ದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೇ ಧಾರಾವಾಹಿಯಲ್ಲಿ ಪೂಜಾ ಲೊಕೇಶ್ ಖಡಕ್ ವಿಲನ್ ಆಗಿ ರೀ ಎಂಟ್ರಿ ಕೊಡುತ್ತಿದ್ದಾರೆ.

Srujan Lokesh sister Pooja Lokesh returns with kannada serial Seetha Rama as Khadak villain

ಇನ್ನು ಧಾರಾವಾಹಿಯಲ್ಲಿ ಪೂಜಾಗೆ ಭಾರ್ಗವಿ ಎಂಬ ಪಾತ್ರ ಸಿಕ್ಕಿದ್ದು, ಭಾರ್ಗವಿ ದೇಸಾಯಿ ಮನೆತನದ ಎರಡನೇ ಸೊಸೆ. ಯಾವುದೋ ಒಂದು ಅಹಿತಕರ ಘಟನೆಯಿಂದ ಆಕೆ ದೇಸಾಯಿ ಮನೆಯನ್ನೇ ನಾಶ ಮಾಡುವುದಾಗಿ ಪಣತೊಡುತ್ತಾಳೆ. ಅಂತೆಯೇ ಧಾರಾವಾಹಿಯ ನಾಯಕ ಶ್ರೀರಾಮನ ಜೀವನವನ್ನೂ ಹಾಳು ಮಾಡಲು ಯೋಚಿಸುತ್ತಾಳೆ.

ಇತ್ತ ಹಳೆಯದೊಂದು ಪ್ರೇಮ ಭಂಗವಾದ ನಂತರ ಯಾರೊಂದಿಗೂ ಪ್ರೀತಿ ಪ್ರೇಮಕ್ಕೆ ಬೀಳಬಾರದೆಂದು ಪಣತೊಟ್ಟಿರುವ ಧಾರಾವಾಹಿಯ ನಾಯಕ ಶ್ರೀರಾಮ ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಆಗಿರುತ್ತಾನೆ. ಆತ ಹೇಗೆ ಧಾರಾವಾಹಿಯಲ್ಲಿ ಸೀತೆಯ ಪ್ರೀತಿಗೆ ಬೀಳುತ್ತಾನೆ ಎಂಬುದೇ ಕಥೆ.

ದಶಕಗಳ ನಂತರ ಮತ್ತೆ ಧಾರಾವಾಹಿಗೆ ಬಂದಿರುವ ಖುಷಿಯನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೂಜಾ ಲೋಕೇಶ್ "ಹಲೋ ವರ್ಷಗಳ ದೊಡ್ಡ ಬ್ರೇಕ್ ನಂತರ ಮತ್ತೆ ಧಾರಾವಾಹಿ ಬರೆದಿರುವುದು ಬಹಳ ಖುಷಿ ಇದೆ. ನನ್ನ ಮೊದಲ ಧಾರಾವಾಹಿಯಂತೆ ಈ ಧಾರಾವಾಹಿ ಬಗ್ಗೆ ಉತ್ಸುಕಳಾಗಿದ್ದೇನೆ. ಮೊದಲ ಬಾರಿಗೆ ನೆಗೆಟಿವ್ ರೋಲ್ ಮಾಡಲು ಬಂದಿದ್ದೇನೆ. ಕಲಿಯಲು ಬಹಳಷ್ಟು ಇದೆ. ಶೂಟಿಂಗ್ ಹಾಗೂ ಪ್ರೊಡಕ್ಷನ್‌ಗೆ ಕಾಯುತ್ತಿದ್ದೇನೆ." ಎಂದು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

Srujan Lokesh sister Pooja Lokesh returns with kannada serial Seetha Rama as Khadak villain

ನಟಿ ಪೂಜಾ ಲೋಕೇಶ್ ಕನ್ನಡದ ಮೇರು ನಟ ದಿವಂಗತ ಲೋಕೇಶ್ ಅವರ ಪುತ್ರಿ. ಇವರ ತಮ್ಮ ಸೃಜನ್ ಲೋಕೇಶ್ ಹಾಗೂ ತಾಯಿ ಗಿರಿಜಾ ಲೋಕೇಶ್. ಇವರು ಯೂಟ್ಯೂಬ್ ನಲ್ಲಿ ತಮ್ಮ ತಾಯಿ ಹಾಗೂ ಅತ್ತಿಗೆಯೊಂದಿಗೆ ಆಗಾಗ ಒಂದಷ್ಟು ಫನ್ನಿ ವಿಡಿಯೋಗಳನ್ನು ಬಿಡುತ್ತಾ ಜನರಿಗೆ ಹತ್ತಿರವಾಗಿದ್ದರು. ಇದೀಗ ಮತ್ತೆ ಧಾರಾವಾಹಿಗೆ ವಾಪಸ್ ಆಗಿರುವುದು ಎಲ್ಲರಿಗೂ ಬಹಳ ಸಂತಸ ತಂದಿದೆ.

ಇದೇ ಸೋಮವಾರದಿಂದ ಈ ಧಾರಾವಾಹಿ ಪ್ರಾರಂಭವಾಗಿದ್ದು ಇದರಲ್ಲಿ ನೆಗೆಟಿವ್ ರೋಲ್‌ನಲ್ಲಿ ಪೂಜಾ ಲೋಕೇಶ್ ಅವರು ಕಾಣಿಸಿಕೊಂಡರೆ, ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್ ಚಿನ್ನಪ್ಪ ಹಾಗೂ ಬಾಲ ನಟಿ ರಿತ್ತು ಸಿಂಗ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಈ ಎಲ್ಲಾ ನಟರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಲವಷ್ಟು ಪೋಸ್ಟ್‌ಗಳನ್ನು ಹಾಕಿಕೊಳ್ಳುತ್ತಿದ್ದು ಇದೇ ಸೋಮವಾರದಿಂದ ಧಾರಾವಾಹಿ ಆರಂಭವಾಗಿದೆ. ಬಹಳ ತಿಂಗಳುಗಳು ಕಾದ ನಂತರ ಈ ಧಾರಾವಾಹಿ ಶುರುವಾಗಿದ್ದು ಇದೀಗ ಪ್ರೇಕ್ಷಕರನ್ನು ಕಿರುತೆರೆ ಪ್ರಿಯರನ್ನು ಬಹಳ ಕುತೂಹಲಕ್ಕೆ ಇಳಿಸಿದೆ.

More from Filmibeat

English summary
Srujan Lokesh sister Pooja Lokesh returns with kannada serial Seetha Rama as Khadak villain, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X