twitter
    For Quick Alerts
    ALLOW NOTIFICATIONS  
    For Daily Alerts

    Yash Journey: ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಧಾರಾವಾಹಿ ಜರ್ನಿ ಹೇಗಿತ್ತು?

    By ಪೂರ್ವ
    |

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತರಾಗಿದ್ದ ಯಶ್ ಇಂದು ರಾಕಿಂಗ್ ಸ್ಟಾರ್ ಯಶ್ ಆಗಿ ಕೆಜಿಎಫ್ ಚಿತ್ರದ ಮೂಲಕ ದೇಶ-ವಿದೇಶದಲ್ಲಿ ತಮ್ಮದೇ ಆದ ಹವಾ ಕ್ರಿಯೆಟ್ ಮಾಡಿದ್ದಾರೆ. ಯಶ್ ಅಭಿನಯ ಜರ್ನಿ ಬಗ್ಗೆ ಒಂದು ಸಣ್ಣ ಝಲಕ್ ಇಲ್ಲಿದೆ.

    ಯಶ್ 2004ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಉತ್ತರಾಯಣ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಬಳಿಕ ಅದೇ ವರ್ಷದಲ್ಲಿ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದ ಗೋಕುಲ' ಧಾರಾವಾಹಿಯಲ್ಲಿ ನಟಿಸಿದ್ದರು. ಯಶ್ ಒಟ್ಟು 5 ಧಾರಾವಾಹಿಯಲ್ಲಿ ನಟಿಸಿದ್ದು, 'ನಂದ ಗೋಕುಲ' ಧಾರಾವಾಹಿ ಮೂಲಕವೇ ಬೆಳ್ಳಿತೆರಿಗೆ ಎಂಟ್ರಿ ನೀಡಿದ್ದರು. ರಾಧಿಕಾ ಹಾಗೂ ಯಶ್ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಲೋಕವನ್ನು ಒಟ್ಟಿಗೆ ಪ್ರವೇಶಿಸಿದ್ದರು.

    ಕಿರುತೆರೆಯಿಂದ ಹಿರಿತೆರೆಗೆ ಬಂದು ಸಾಧನೆ ಮಾಡಿದವರು ಹಲವಾರು ಜನ ಸ್ಟಾರ್‌ಗಳಿದ್ದಾರೆ. ಅದೇ ರೀತಿ ನಟ ಯಶ್ ಕೂಡ ಟಿವಿ ಹಿನ್ನೆಲೆಯಿಂದಲೆ ಬಂದವರು. ಕಿರುತೆರೆಯಲ್ಲಿ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತ ಬಂದ ಅವರು ತಲುಪಿದ್ದು ಸ್ಯಾಂಡಲ್‌ವುಡ್‌ಗೆ. ಅಲ್ಲಿಂದ ಅವರು ಮಾಡಿದ ದಾಖಲೆಗಳಲ್ಲೆವೂ ಈಗ ಇತಿಹಾಸ.

    ರಂಗಭೂಮಿ ಹಿನ್ನೆಲೆ ಹೊಂದಿರುವ ಯಶ್ ಅನೇಕ ಕನಸುಗಳನ್ನು ಕಟ್ಟಿಕೊಂಡು ಕಿರುತೆರೆಗೆ ಕಾಲಿಟ್ಟರು. 'ನಂದ ಗೋಕುಲ' ಸೀರಿಯಲ್ ಮೂಲಕ ಅವರಿಗೆ ಕಿರುತೆರೆಗೆ ಎಂಟ್ರಿ ಸಿಕ್ಕಿತು. ಕಿರುತೆರೆ ಪ್ರೇಕ್ಷಕರಿಗೆ ಯಶ್ ಪರಿಚಿತರಾದರು. ಅವರು ನ್ಯಾಷನಲ್ ಸ್ಟಾರ್ ಆಗುತ್ತಾರೆ ಎಂದು ಆಗ ಯಾರೂ ಊಹಿಸಿರಲಿಲ್ಲ.

    ಅದೇ 'ನಂದಗೋಕುಲ' ಧಾರಾವಾಹಿಯಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ನಟಿಸಿದ್ದರು. ಆ ದಿನಗಳಲ್ಲಿ ಯಶ್ ಮತ್ತು ರಾಧಿಕಾ ನಡುವೆ ಪರಸ್ಪರ ಪರಿಚಯ ಆಯಿತು. ಆ ಪರಿಚಯ ನಂತರ ಪ್ರೀತಿಗೆ ತಿರುಗಿತು. ಹೀಗಾಗಿ ಯಶ್‌ಗೆ ಪ್ರೇಯಸಿ ಸಿಕ್ಕಿದ್ದೇ ಕಿರುತೆರೆ ಮೂಲಕ ಎನ್ನಬಹುದು. ಇಬ್ಬರೂ ಜೊತೆ ಜೊತೆಯಾಗಿ ಬಣ್ಣದ ಲೋಕದಲ್ಲಿ ಪ್ರಯಾಣ ಬೆಳೆಸಿ ದೊಡ್ಡ ಮಟ್ಟಕ್ಕೆ ಬೆಳೆದರು.

    ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್

    ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್

    ಮುಖ್ಯ ಪಾತ್ರಗಳಲ್ಲದೇ ಕೆಲವು ಸೀರಿಯಲ್‌ಗಳಲ್ಲಿ ಯಶ್ ಅತಿಥಿ ಪಾತ್ರ ಕೂಡ ಮಾಡಿದ್ದರು. ಆರಂಭದ ಕಷ್ಟದ ದಿನಗಳಲ್ಲಿ ಅವರು 'ಸಿಲ್ಲಿ ಲಲ್ಲಿ', 'ಮುಕ್ತ', 'ಮಳೆಬಿಲ್ಲು' ಮುಂತಾದ ಧಾರಾವಾಹಿಗಳಲ್ಲಿ ಅತಿಥಿ ಪಾತ್ರ ನಿಭಾಯಿಸಿದರು. ಅದೇ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಎಂಬುದು ಹೆಮ್ಮೆಯ ಸಂಗತಿ. 'ಮೊಗ್ಗಿನ ಮನಸು' ಸಿನಿಮಾ ಮೂಲಕ ಯಶ್ ಅವರು 2008ರಲ್ಲಿ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದರು. ಆದರೆ ಅದಕ್ಕೂ ಕೆಲವೇ ಸಮಯ ಮುಂಚೆ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಆ ಧಾರಾವಾಹಿಯಿಂದ ಯಶ್‌ಗೆ ಕರುನಾಡಿನಾದ್ಯಂತ ದೊಡ್ಡಮಟ್ಟದ ಖ್ಯಾತಿ ಸಿಕ್ಕಿತ್ತು.

    ಮತ್ತೊಂದು ಬಾರಿ ಕಿರುತೆರೆಗೆ ಎಂಟ್ರಿ ನೀಡಿದ ರಾಕಿ

    ಮತ್ತೊಂದು ಬಾರಿ ಕಿರುತೆರೆಗೆ ಎಂಟ್ರಿ ನೀಡಿದ ರಾಕಿ

    ಹೀಗೆ ಕಿರುತೆರೆಯಿಂದ ಹಿರಿತೆರೆಗೆ ಜಿಗಿದ ಯಶ್ ಮತ್ತೆ ಕಿರುತೆರೆಗೆ ಬಂದಿದ್ದು ಒಬ್ಬ ಸಾಧಕನಾಗಿ ಹೌದು, ರಮೇಶ್ ಅರವಿಂದ ನಡೆಸಿಕೊಡುವ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್‌ನಲ್ಲಿ ಯಶ್ ಬಂದು ಕುಳಿತುಕೊಂಡರು. ಕೆಲವೇ ವರ್ಷಗಳಲ್ಲಿ ಅವರು ಮಾಡಿದ ಈ ಸಾಧನೆಗೆ ಭೇಷ್ ಎನ್ನಲೇ ಬೇಕು.

    ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ್ದ ಯಶ್ ತಂದೆ

    ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ್ದ ಯಶ್ ತಂದೆ

    ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳ ಮಗನಾಗಿ 8 ಜನವರಿ 1986 ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಯಶ್ ತಂದೆ ಬಿಎಂಟಿಸಿ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಟ ಯಶ್ ಮಹಾರಾಜ ಹೈಸ್ಕೂಲ್‌ನಲ್ಲಿ ಶಾಲಾಶಿಕ್ಷಣವನ್ನು ಪಡೆದು, ಬಾಲ್ಯದ ದಿನಗಳನ್ನು ಮೈಸೂರಿನ ಪಡವಾರಹಳ್ಳಿಯಲ್ಲಿ ಕಳೆದರು. ತಮ್ಮ ಶಾಲಾಶಿಕ್ಷಣದ ನಂತರ, ಅವರು ನಾಟಕಕಾರ ಬಿ ವಿ ಕಾರಂತರಿಂದ ರೂಪುಗೊಂಡ ಬೆನಕ ನಾಟಕ ಶಾಲೆಯನ್ನು ಸೇರಿದರು.

    ಸಿನಿಮಾ ನಾಯಕನಾಗಿ ಜರ್ನಿ

    ಸಿನಿಮಾ ನಾಯಕನಾಗಿ ಜರ್ನಿ

    ಯಶ್ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾದ ಅಶೋಕ್ ಕಶ್ಯಪ್ ನಿರ್ದೇಶನದ 'ಗೋಕುಲ' ಧಾರವಾಹಿಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅಂತಹ 'ಮಳೆಬಿಲ್ಲು' ಮತ್ತು 'ಪ್ರೀತಿ ಇಲ್ಲದ ಮೇಲೆ' ಹಾಗೂ ಇನ್ನೂ ಹಲವಾರು ಧಾರವಾಹಿಗಳಲ್ಲಿ ಕಾಣಿಸಿಕೊಂಡರು. ಇವರು ಪ್ರಿಯಾ ಹಾಸನ್ ನಿರ್ದೇಶನದ 'ಜಂಭದ ಹುಡುಗಿ' (2007) ಚಲನಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ಪೋಷಕ ನಟನೆಗಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದರು. ಯಶ್ ನಂತರ ಚಿತ್ರಗಳಲ್ಲಿ ರಾಕಿ (2008), ಕಳ್ಳರ ಸಂತೆ (2009), ಗೋಕುಲ (2009) ನಲ್ಲಿ ನಾಯಕ ಪಾತ್ರಗಳಲ್ಲಿ ನಟಿಸಿದರು.

    English summary
    Actor Yash acted in some serials before he became hero. Here is the journey of Yash.
    Thursday, April 7, 2022, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X