For Quick Alerts
  ALLOW NOTIFICATIONS  
  For Daily Alerts

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆಯ ಸ್ಟಾರ್ ದಂಪತಿ ರಾಘುವೇಂದ್ರ-ಅಮೃತಾ

  |

  ಕನ್ನಡ ಕಿರುತೆರೆಯ ಸ್ಟಾರ್ ದಂಪತಿ ರಾಘುವೇಂದ್ರ ಮತ್ತು ಅಮೃತಾ ರಾಮಮೂರ್ತಿ ಬದುಕಲ್ಲಿ ಸಂತಸ ಮನೆಮಾಡಿದೆ. ನಟಿ ಅಮೃತಾ ಮತ್ತು ರಾಘುವೇಂದ್ರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮೃತಾ ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಇತ್ತೀಚಿಗಷ್ಟೆ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ರಾಘುವೇಂದ್ರ ದಂಪತಿ, ವಾರ್ಷಿಕೋತ್ಸವದ ದಿನವೇ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪತಿ ರಾಘುವೇಂದ್ರ ಕಾಲುಮೇಲೆ ಕುಳಿತಿರುವ ಅಮೃತಾ ಫೋಟೋವನ್ನು ಶೇರ್ ಮಾಡಿ 'ನಾವಿಬ್ಬರು ಈಗ ಮೂವರು' ಎಂದು ಬರೆದುಕೊಂಡಿದ್ದಾರೆ.

  ವೀಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬರ್ತಿದೆ 'ಮಹಾಭಾರತ' ಧಾರಾವಾಹಿವೀಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬರ್ತಿದೆ 'ಮಹಾಭಾರತ' ಧಾರಾವಾಹಿ

  ಅಮೃತಾ ಪೋಸ್ಟ ಗೆ ಅಭಿಮಾನಿಗಳು ಮತ್ತು ಕಿರುತೆರೆಯ ಕಲಾವಿದರು, ಸ್ನೇಹಿತರು ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟಿ ವೈಷ್ಣವಿ ಗೌಡ, ಧನ್ಯಾ ದೀಪಿಕಾ, ದೀಪಾ ಭಾಸ್ಕರ್ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ರಘು ಮತ್ತು ಅಮೃತಾ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟದರು.

  ಮಿಸ್ಟರ್ ಅಂಡ್ ಮಿಸ್ಸಸ್ ರಂಗೇಗೌಡ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದ ಈ ಜೋಡಿ ನಡುವೆ ಆಗಲೇ ಪ್ರೀತಿ ಪ್ರಾರಂಭವಾಗಿತ್ತು. ಬಳಿಕ ಇಬ್ಬರೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಸದ್ಯ ರಾಘುವೇಂದ್ರ ಗೌಡ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಇನ್ನು ಅಮೃತಾ, ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಮೃದುಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೆ ಈ ಈ ಧಾರಾವಾಹಿಯಿಂದ ಅಮೃತಾ ಹೊರಬಂದಿದ್ದರು. ಸದ್ಯ ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ಅಮೃತಾ ಮನೆಯಲ್ಲೇ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.

  English summary
  Kannada Serial star couple Raghu Gowda and Amrutha Ramamoorthy expecting their first baby.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X