ಕೌಟುಂಬಿಕ ಧಾರಾವಾಹಿ 'ಅವನು ಮತ್ತೆ ಶ್ರಾವಣಿ'ಗೆ ಹಾರರ್ ಟಚ್; ಯಾರಿದು ಅಧಿರ?
'ಅವನು ಮತ್ತೆ ಶ್ರಾವಣಿ' ಇದೂವರೆಗೂ ಸ್ಟಾರ್ ಸುವರ್ಣದಲ್ಲಿ ಸಾಂಸಾರಿಕ ಧಾರಾವಾಹಿಯಾಗಿ ಪ್ರಸಾರ ಆಗುತ್ತಿತ್ತು. ವೀಕ್ಷಕರನ್ನು ಇಷ್ಟು ರಂಜಿಸಿದ್ದ ಈ ಧಾರಾವಾಹಿ ಈಗ ಹೊಸ ರೂಪವನ್ನು ಪಡೆದುಕೊಂಡಿದೆ. ಅಂದರೆ ಇದೀಗ ಈ ಧಾರಾವಾಹಿಯಲ್ಲೊಂದು ಬದಲಾವಣೆ ಆಗಿದೆ. ಅದನ್ನು ನೋಡಿ ಸೀರಿಯಲ್ ಪ್ರೇಮಿಗಳು ಕೂಡ ಕೊಂಚ ಶಾಕ್ ಆಗಿದ್ದಾರೆ.
ಹೌದು, 'ಅವನು ಮತ್ತೆ ಶ್ರಾವಣಿ' ಸೀರಿಯಲ್ ನೋಡುಗರ ಪಾಲಿಗೆ ಹಬ್ಬ ಎಂದು ಹೇಳಿದರೆ ತಪ್ಪಾಗದು. 'ಅವನು ಮತ್ತು ಶ್ರಾವಣಿ' ಧಾರಾವಾಹಿ ಇದೀಗ ಹಾರರ್ ಧಾರಾವಾಹಿಯಾಗಿ ಬದಲಾಗುತ್ತಿದೆ. ಶ್ರಾವಣಿಯನ್ನು ಮಟ್ಟ ಹಾಕಲು ಸಂಯುಕ್ತ ಬಹಳ ದೊಡ್ಡ ರಣತಂತ್ರ ಮಾಡುತ್ತಿರುವುದು ಮಾತ್ರ ಸತ್ಯ.

ಶ್ರಾವಣಿಯನ್ನು ಕಂಡರೆ ಸಂಯುಕ್ತಾಗೆ ಆಗುವುದೇ ಇಲ್ಲ. ಸಂಯುಕ್ತ ಜೈಲು ಪಾಲಾಗಿದ್ದರು ಕೂಡ ಇದೀಗ ಮಾಟ ಮಂತ್ರದ ಮೊರೆ ಹೋಗಿ ಜೈಲಿನಲ್ಲಿಯೇ ಕಣ್ಣು ಮುಚ್ಚಿ ಕುಳಿತುಕೊಂಡಿರುತ್ತಾಳೆ. ಆಕೆಯ ಸೆಲ್‌ನಲ್ಲಿದ್ದ ಮತ್ತೊಬ್ಬ ಖೈದಿ ಮೊದಲಿಗೆ ಸಂಯುಕ್ತಾಳನ್ನು ಕರೆಯುತ್ತಾಳೆ. ಆದರೆ ಸಂಯುಕ್ತಾ ಎಚ್ಚರಗೊಳ್ಳದೆ ಇರುವುದನ್ನು ಕಂಡು ಸಹ ಖೈದಿ ಎಚ್ಚರಿಸಲು ಪ್ರಯತ್ನಿಸುತ್ತಾಳೆ. ಆದರೆ ಒಮ್ಮಿಂದೊಮ್ಮೆಲೆ ಸಂಯುಕ್ತಾ ಕಣ್ಣು ಬಿಟ್ಟಾಗ ಆಕೆಯ ಕಣ್ಣುಗಳೆಲ್ಲಿ ಇದ್ದ ಪ್ರಕಾಶಮಾನವಾದ ಬೆಂಕಿಯ ಜ್ವಾಲೆಯನ್ನು ಕಂಡು ಪರಿಮಳ ಬೆದರಿ ಹೋಗುತ್ತಾಳೆ.
ಶ್ರಾವಣಿ ಸಂಯುಕ್ತಾಳನ್ನು ಜೈಲಿಗೆ ಹಾಕಿಸಿದ್ದೆ ತಡ ಆಕೆಯ ಸೇಡಿನ ಜ್ವಾಲೆ ಒಮ್ಮಿಂದೊಮ್ಮೆಗೆ ಭುಗಿಲೆದ್ದು ಬಿಟ್ಟಿತು. ಹಾಗಾಗಿಯೇ ಮಾಟಗಾತಿಯಾಗಿ ಬದಲಾಗುತ್ತಾಳೆ. ಈಗಾಗಲೇ 'ಅವನು ಮತ್ತೆ ಶ್ರಾವಣಿ' ಹಾರರ್ ಧಾರಾವಾಹಿಯಾಗಿ ಬದಲಾಗುತ್ತಿರುವ ಬಗ್ಗೆ ಅಧಿಕೃತವಾಗಿ ಪ್ರೋಮೋ ಕೂಡ ರಿಲೀಸ್ ಆಗಿದೆ. ವೀಕ್ಷರನ್ನು ಭಯ ಹುಟ್ಟಿಸುವ ಹಾಗೆ ಕಾಣಿಸುತ್ತಿದೆ. ಕಿರುತೆರೆ ವೀಕ್ಷಕರಿಗೆ ಈ ಧಾರಾವಾಹಿ ಈಗ ಹೊಸ ಅನುಭವವನ್ನು ನೀಡಲಿದೆ.
'ಅವನು ಮತ್ತೆ ಶ್ರಾವಣಿ' ಧಾರಾವಾಹಿ ತಂಡ ಚಿಕ್ಕದೊಂದು ಪ್ರೋಮೋ ರಿಲೀಸ್ ಮಾಡಿದ್ದಾರೆ. ಇದನ್ನು ನೋಡಿದ ವೀಕ್ಷಕರಿಗೆ ಬಹಳಷ್ಟು ಖುಷಿ ನೀಡಿದೆ. ಪ್ರೋಮೊದಲ್ಲಿ ಸಂಯುಕ್ತ ಮಾಟಗಾತಿಯ ಹಾಗೆ ಕಾಣಿಸಿಕೊಂಡಿದ್ದಾರೆ. ಕೂದಲೆಲ್ಲ ಹರಡಿಕೊಂಡು ಜೋರಾಗಿ "ಬಾ ಅಧಿರಾ , ನಿನಗಾಗಿಯೇ ಕಾಯುತ್ತಿದ್ದೆ, ನನ್ನನ್ನೇ ಅವಮಾನಿಸಿದಳು" ಎಂದು ಸಂಯುಕ್ತಾ ಹೇಳಿದಾಗ, ಆಕೆಯ ಹಿಂದೆಯೇ ದೆವ್ವದ ಕೈ ಬೆರಳುಗಳು ಕಾಣಿಸುತ್ತದೆ. ಕೂಡಲೇ ಅಧಿರಾ ಯಾರವಳು ಎಂದು ಕೇಳಿದಾಗ ಸಂಯುಕ್ತಾ ಜೊತೆಗೆ ದೆವ್ವದ ದರ್ಶನ ಆಗುತ್ತೆ.

ಆಕೆಗೆ ಏನೇನೋ ಕನಸು ಬಿದ್ದು ನಿದ್ದೆಯಿಂದ ಒಮ್ಮೆಲೆ ಎದ್ದಾಗ ಆಕೆಗೆ ಸಂಯುಕ್ತಾ ದೆವ್ವವೇ ಬಂದ ಅನುಭವ ಆಗುತ್ತದೆ. ಕೂಡಲೇ ಶ್ರಾವಣಿ ಅಲ್ಲಿಂದ ಹೊರಗೆ ಹೋದಾಗ ಅಭಿಯನ್ನು ಕಾಣುತ್ತಾಳೆ. ಶ್ರಾವಣಿ ನಿಟ್ಟುಸಿರು ಬಿಟ್ಟು ಅಭಿಯ ಹತ್ತಿರ ಬಂದಾಗ, ಒಮ್ಮೆಲೆ ಅಭಿ ದೆವ್ವ ಆಗಿ ಬದಲಾಗುತ್ತಾನೆ. ಇದು 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ಪ್ರೋಮೊದಲ್ಲಿರುವ ದೃಶ್ಯಗಳು. ಟೈಟಲ್‌ನಲ್ಲಿಯೇ ಶುರುವಾಗುತ್ತಿದೆ ಭಯಾನಕ ಸೇಡಿನ ಸಂಘರ್ಷ ಎಂದು ಟ್ಯಾಗ್ ಲೈನ್ ನೀಡಲಾಗಿದೆ. ''ಅವನು ಮತ್ತೆ ಶ್ರಾವಣಿ' ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತಿದೆ.


Click it and Unblock the Notifications










