ಗಣೇಶ ಚತುರ್ಥಿ: ಸ್ಟಾರ್ ಸುವರ್ಣದಲ್ಲಿ 4 ಧಾರಾವಾಹಿಗಳ ಮಹಾಸಂಗಮ
ಗಣೇಶ ಚತುರ್ಥಿ ಅಂದ್ರೆ ಕುಟುಂಬ, ಸಂಬಂಧಿಕರು, ಸ್ನೇಹಿತರು ಒಂದೇ ಮನೆಯಲ್ಲೇ ಎಲ್ಲರೂ ಸೇರಿ ಹಬ್ಬ ಆಚರಿಸುವ ಸಂಪ್ರದಾಯ. ಇದನ್ನೇ ತೆರೆಮೇಲೂ ತರುವ ಪ್ರಯತ್ನ ಮಾಡಿದೆ ಸ್ಟಾರ್ ಸುವರ್ಣ ವಾಹಿನಿ.
ಕನ್ನಡ ಧಾರಾವಾಹಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಲ್ಕು ಧಾರಾವಾಹಿಗಳ ಸಂಗಮವಾಗಲಿದೆ. ಸೆಪ್ಟೆಂಬರ್ 14 ರಂದು ಸಂಜೆ 7 ಗಂಟೆಗೆ ಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಗಣೇಶ ಚತುರ್ಥಿ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.
'ಮುದ್ದು ಲಕ್ಷ್ಮಿ', 'ಸರ್ವಮಂಗಳ ಮಾಂಗಲ್ಯೇ', 'ಶ್ರೀ' ಧಾರಾವಾಹಿಗಳ ಮಹಾಸಂಗಮವಾಗಲಿದೆ. ಮೊತ್ತೊಂದು ವಿಶೇಷ ಸಂಗತಿ ಅಂದ್ರೆ ಸ್ಟಾರ್ ಸುವರ್ಣ ವಾಹಿನಿ 'ಕೃಷ್ಣ ತುಳಸಿ' ಎನ್ನುವ ಹೊಸ ಧಾರಾವಾಹಿಯೊಂದನ್ನು ಸೆಪ್ಟೆಂಬರ್ 17ರಂದು ತೆರೆಗೆ ತರಲಿದೆ.

ಸೆಪ್ಟೆಂಬರ್ 10 ರಿಂದ - 14 ರವೆರೆಗೆ ಉಳಿದ ಧಾರಾವಾಹಿಗಳಲ್ಲಿ 'ಕೃಷ್ಣ ತುಳಿಸಿ'ಯ ಎಲ್ಲಾ ಪಾತ್ರಧಾರಿಗಳ ಪರಿಚಯವಾಗಲಿದೆ. ಕಥೆ ಮತ್ತು ಚಿತ್ರಕಥೆ ಮಟ್ಟದಲ್ಲಿ ಬದಲಾವಣೆಗಳನ್ನು ತಂದು ಬೇರೆ ಧಾರಾವಾಹಿಗಳಲ್ಲಿ ಪಾತ್ರಗಳನ್ನು ಪರಿಚಯಿಸುವ ಪ್ರಯತ್ನ ಇದೇ ಮೊದಲಾಗಿದ್ದು, ತೆಜಸ್ವಿ ಪಾತ್ರವನ್ನು ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ , ತುಳಸಿ ಪಾತ್ರವನ್ನು ಸರ್ವಮಂಗಳ ಮಾಂಗಲ್ಯೇ ಕಥೆಯಲ್ಲಿ ಪರಿಚಯಿಸಲಾಗುತ್ತಿದೆ.
ಇನ್ನು 'ಶ್ರೀ' ಧಾರಾವಾಹಿಯಲ್ಲಿ ಕೃಷ್ಣನ ಪ್ರವೇಶವಾಗಲಿದೆ. ಕೃಷ್ಣ ಮತ್ತು ತುಳಸಿ ಪಾತ್ರದಲ್ಲಿ ಯುವ ಪ್ರತಿಭೆಗಾಳಾದ ಸ್ವರಾಜ್ ಮತ್ತು ಪ್ರಿಯಾಂಕ ಕಾಣಿಸಿಕೊಳ್ಳಲಿದ್ದಾರೆ. ತೇಜಸ್ವಿ ಪಾತ್ರದಲ್ಲಿ ನಿರೂಪಕರಾಗಿ ಕನ್ನಡಿಗರ ಮನೆಮಾತಾಗಿದ್ದ ರೆಹಮಾನ ಹಸೀಬ್ ಧಾರಾವಾಹಿ ಪ್ರಪಂಚದಲ್ಲಿ ಪದಾರ್ಪಣೆ ಮಾಡಲಿದ್ದಾರೆ.

ಎಲ್ಲಾ ಧಾರಾವಾಹಿಗಳ ಕಥೆಯಲ್ಲಿ ರೋಚಕತೆ ಇರಲಿದ್ದು ವೀಕ್ಷಕರಿಗೆ ಪ್ರತಿ ದಿನ ಮನರಂಜನೆಗೆ ಕೊರತೆಯಿಲ್ಲ. ಸ್ಟಾರ್ ಸುವರ್ಣ ಪರಿವಾರ ಒಂದಾಗಿ ಈ ಬಾರಿ ಗಣೇಶ ಚತುರ್ಥಿ ಆಚರಿಸುತ್ತಿದ್ದು ಮುದ್ದು ಮುಖಗಳು ಒಟ್ಟಾಗಿ ಹಬ್ಬದ ಕಳೆ ಹೆಚ್ಚಿಸಲಿವೆ.

ಇದಕ್ಕಾಗಿ ಖಾಸಗಿ ರೆಸಾರ್ಟ್ ಒಂದರಲ್ಲಿ 8 ಅಡಿ ಎತ್ತರದ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಟಾಪಿಸಲಾಗಿದೆ. ಮಹಾಸಂಗಮದಲ್ಲಿ ಮಹಾ ವಿಘ್ನಗಳು ಎದುರಾಗಲಿದ್ದು ವಿಘ್ನ ನಿವಾರಕನಿಂದ ಈ ಸಂಕಷ್ಟಗಳ ನಿವಾರಿಣೆಯಾಗುತ್ತಾ ಅನ್ನೋದು ತಿಳಿಯಬೇಕಾದರೆ, ಸೋಮವಾರದಿಂದ ಶುಕ್ರವಾರ ಪ್ರತಿದಿನ ರಾತ್ರಿ 7.30ರಿಂದ - 9ಗಂಟೆವರೆಗೆ ಸ್ಟಾರ್ ಸುವರ್ಣ ವಾಹಿನಿ ನೋಡಬೇಕಾಗಿದೆ.


Click it and Unblock the Notifications











