Womens Day 2026: ಮಹಿಳಾ ಆಟೋ ಚಾಲಕಿಯರೊಂದಿಗೆ ವುಮೆನ್ಸ್ ಡೇ; 'ಸುವರ್ಣ ಸಖಿ'ಯ ಗೌರವ

By ಫಿಲ್ಮಿಬೀಟ್ ಡೆಸ್ಕ್

ಇಂದು (ಮಾರ್ಚ್ 8) ವಿಶ್ವ ಮಹಿಳಾ ದಿನ. ವಿಶ್ವದೆಲ್ಲಡೆ ಮಹಿಳೆಯ ದಿನವನ್ನು ಆಚರಿಸಲಾಗಿದೆ. ಸಾಧನೆ ಮಾಡಿದ ಮಹಿಳೆಯನ್ನು ಗೌರವಿಸಲಾಗಿದೆ. ಹಾಗಂತ ದೊಡ್ಡ ಹೆಸರು ಮಾಡುವುದಷ್ಟೇ ಸಾಧನೆಯಲ್ಲ. ತಮ್ಮ ಸಂಸಾರವನ್ನು ಸರಿದೂಗಿಸುವುದಕ್ಕೆ ಮಹಿಳೆಯವರು ಮನೆಯಿಂದ ಹೊರ ಬಂದು ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಇಷ್ಟು ದಿನ ಕೇವಲ ಗಂಡಸರಿಗಷ್ಟೇ ಮಾಡುವುದಕ್ಕೆ ಸಾಧ್ಯ ಎನ್ನುವಂತಿದ್ದ ಕೆಲಸವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಮಹಿಳೆಯರು ತನ್ನ ಕುಟುಂಬವನ್ನು ಸಾಗಿಸುವುದಕ್ಕೆ ಕಷ್ಟ ಪಟ್ಟು ದುಡಿಯುತ್ತಿದ್ದಾರೆ. ಎಂಎನ್‌ಸಿಯಲ್ಲಿ ಕೆಲಸ ಮಾಡುವುದರಿಂದ ಹಿಡಿದು ಪುಡ್ ಡಿಲೇವರಿ, ಸೇರಿದಂತೆ ಆಟೋ ಚಲಾಯಿಸಿ ಜೀವನ ಸಾಗಿಸುತ್ತಿದ್ದಾರೆ. ಹಿಂದೊಂದು ಕಾಲವಿತ್ತು. ಮಹಿಳೆಯರು ಆಟೋ ಚಲಾಯಿಸುವುದಕ್ಕೆ ಹಿಂದೆ-ಮುಂದೆ ನೋಡುತ್ತಿದ್ದರು. ಆದರೆ, ಈಗ ಆಟೋ ಚಾಲಕಿಯರಾಗಿಯೂ ಸೈ ಎನಿಸಿಕೊಂಡಿದ್ದಾರೆ.

Star Suvarna celebrated Womens Day 2026 with woman auto drivers as Suvarna Sakhi

ಮಹಿಳಾ ದಿನಚರಣೆಯ ವಿಶೇಷ ದಿನದಂದು ಬೆಂಗಳೂರಿನಲ್ಲಿ ಇರುವ ಆಟೋ ಚಾಲಕಿಯನ್ನು ಕರೆದು ಸನ್ಮಾನ ಮಾಡಲಾಗಿದೆ. ಕನ್ನಡದ ಮನರಂಜನಾ ವಾಹಿನಿ ಸ್ಟಾರ್ ಸುವರ್ಣ ಇಂತಹದ್ದೊಂದು ಸಮಾಜಮುಖಿ ಕೆಲಸಕ್ಕೆ ಮುಂದಾಗಿತ್ತು. ನಗರದಲ್ಲಿ ಮಹಿಳಾ ಆಟೋ ಚಾಲಕಿಯರನ್ನು ತಮ್ಮದೇ ಸುವರ್ಣ ಸಖಿ ವೇದಿಕೆ ಮೇಲೆ ಸನ್ಮಾನ ಮಾಡಲಾಗಿದೆ.

ಕನ್ನಡ ಮನರಂಜನೆಯ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಸ್ಟಾರ್ ಸುವರ್ಣ ಕನ್ನಡಿಗರ ಮನಗೆದ್ದು ಎರಡನೇ ಸ್ಥಾನದಲ್ಲಿದ್ದಾರೆ. 'ಸ್ಟಾರ್ ಸುವರ್ಣ' ವಾಹಿನಿಯು ಸದಾ ಮಹಿಳೆಯರ ಪರವಾಗಿ ಈ ಹಿಂದಿನಿಂದಲೂ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ 'ಸುವರ್ಣ ಸಖಿ' ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮಹಿಳೆ ಪರವಾಗಿರುವ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ.

Star Suvarna celebrated Womens Day 2026 with woman auto drivers as Suvarna Sakhi

ಈ ಸಮಾಜದಲ್ಲಿ ಮಹಿಳೆಗೆ ವಿಶೇಷ ಸ್ಥಾನ-ಮಾನವಿದೆ. ಮಹಿಳೆ ಅನ್ನೋದು ಕೇವಲ ಪದಕ್ಕಷ್ಟೇ ಅಲ್ಲ ಸೀಮಿತ ಅಲ್ಲ. ಮಹಿಳೆ ಅನ್ನೋದೊಂದು ಶಕ್ತಿ. ಪ್ರೀತಿ, ತಾಳ್ಮೆ ಹಾಗೂ ತ್ಯಾಗದ ಇನ್ನೊಂದು ರೂಪ. ಆಧುನಿಕ ಸಮಾಜದಲ್ಲಿರೋ ಕಟ್ಟುಪಾಡುಗಳನ್ನೂ ಮೀರಿ ಪ್ರತಿ ಕ್ಷೇತ್ರದಲ್ಲೂ ಆಕೆ ಸಾಧನೆಯ ಶಿಖರಕ್ಕೆ ಏರುತ್ತಿದ್ದಾಳೆ. ಮೊದಲೆಲ್ಲ ಗಂಡಸರಷ್ಟೇ ಆಟೋ ಡ್ರೈವರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಈಗ ತಾನು ಯಾವುದಕ್ಕೂ ಕಮ್ಮಿಯಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ಮಹಿಳಾ ಆಟೋ ಏರಿ ಸಾರಥಿಯಾಗಿದ್ದಾರೆ.

ತಮ್ಮ ಕಷ್ಟ, ನೋವುಗಳನ್ನು ಪಕ್ಕಕ್ಕೆ ಇಟ್ಟು ಕುಟುಂಬದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಸಮಾಜದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಿರುವ ಬೆಂಗಳೂರಿನ ಕೆಲವು ಮಹಿಳಾ ಆಟೋ ಚಾಲಕಿಯರಿಗೆ ಸ್ಟಾರ್ ಸುವರ್ಣ ವಾಹಿನಿ ಗೌರವಿಸಿ, ಕಿಟ್‌ಗಳನ್ನು ವಿತರಿಸಿದೆ. ಹಾಗೇ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದೆ.

More from Filmibeat

English summary
Star Suvarna celebrated Womens Day 2026 with woman auto drivers as Suvarna Sakhi.
Read more about: womens day tv show auto driver
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X