Suvarna Ugadi Sangeetha Mahotsava : ಸ್ಟಾರ್ ಸುವರ್ಣದಲ್ಲಿ ಯುಗಾದಿ ಹಬ್ಬಕ್ಕೆ ಸಂಗೀತ ಪ್ರಿಯರಿಂದ ರಸದೌತಣ

By ಪ್ರಿಯಾ ದೊರೆ

ಯುಗಾದಿ ಹಬ್ಬಕ್ಕೆ ಇನ್ನೇನು ಎರಡೇ ದಿನ ಬಾಕಿ ಇದೆ. ಹೊಸ ವರ್ಷಾಚರಣೆಗೆ ರಾಜ್ಯದ ಜನತೆ ಕೂಡ ಸಜ್ಜಾಗಿದ್ದಾರೆ. ರಾಜ್ಯದ ಜನತೆಗೆ ಯುಗಾದಿ ಹಬ್ಬವೇ ಒಂದು ವಿಶೇಷ. ಆದರೆ ಈ ವರ್ಷದ ಹಬ್ಬ ಇನ್ನೂ ವಿಶೇಷವಾಗಿದೆ. ಈಗಾಗಲೇ ಕೆಲ ಮನೋರಂಜನಾ ವಾಹಿನಿಗಳಲ್ಲಿ ಯುಗಾದಿ ಹಬ್ಬದ ಸ್ಪೆಷಲ್ ಪ್ರೋಗ್ರಾಂಗಳು ಮೂಡಿ ಬರುತ್ತಿವೆ.

ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಯಾವ ಹಬ್ಬಗಳನ್ನೂ ಸಂಭ್ರಮ ಸಡಗರದಿಂದ ಆಚರಿಸಿರಲಿಲ್ಲ. ಮನೆಯಲ್ಲೇ ಕೂತು ಹಬ್ಬ ಮಾಡಲಾಗಿತ್ತು. ಆದರೆ ಈ ವರ್ಷ ಕೊರೊನಾ ಕಾಟ ಇಳಿದಿರುವುದರಿಂದ ರಾಜ್ಯದ ಜನತೆ ಸಡಗರ-ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇನ್ನು ಈ ವರ್ಷದ ಯುಗಾದಿ ವಿಶೇಷ ಹಬ್ಬ ಎಂದ ಮೇಲೆ ವಾಹಿನಿಗಳಲ್ಲಿ ಹಬ್ಬವನ್ನು ಆಚರಿಸೋದು ಸರ್ವೇ ಸಾಮಾನ್ಯ. ಸೆಲೆಬ್ರಿಟಿಗಳನ್ನು ಕರೆಸಿ ಮನರಂಜನಾ ಕಾರ್ಯಕ್ರಮಗಳನ್ನು ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಈಗಾಗಲೇ ಕೆಲ ವಾಹಿನಿಗಳಲ್ಲಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಸುವರ್ಣ ಯುಗಾದಿ ಸಂಗೀತ ಮಹೋತ್ಸವ

ಈ ವಾರ ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಸೆಲಬ್ರಿಟಿಗಳು, ಸಂಗೀತಗಾರರು ಭಾಗವಹಿಸಿದ್ದಾರೆ. ಗಾಯಕರ ಹಾಡಿಗೆ ಪ್ರೇಕ್ಷಕರು ತಲೆದೂಗುತ್ತಾ, ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡೋದಂತೂ ಗ್ಯಾರೆಂಟಿ. ಈ ವೀಕೆಂಡ್ ಪ್ರೇಕ್ಷಕರಿಗೆ ರಸದೌತಣ ಬಡಿಸಲು ಸ್ಟಾರ್ ಸುವರ್ಣ ಸಜ್ಜಾಗಿದೆ. ಈ ಯುಗಾದಿಗೆ ಸಂಗೀತದ ಭರ್ಜರಿ ಸಿಹಿಯೂಟವನ್ನು ಕನ್ನಡದ ಟಾಪ್ ಗಾಯಕ ಗಾಯಕಿಯರು ಉಣಬಡಿಸಲಿದ್ದು, ಹಾಡಿನ ಹಬ್ಬವನ್ನು ಸ್ಟಾರ್ ಸುವರ್ಣ ಆಚರಿಸಲಿದೆ. ಸುವರ್ಣ ಯುಗಾದಿ ಸಂಗೀತ ಮಹೋತ್ಸವ ಏಪ್ರಿಲ್ 3ರಂದು ಭಾನುವಾರ ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣಯಲ್ಲಿ ಪ್ರಸಾರವಾಗಲಿದೆ.

ಸಂಗೀತ ಪ್ರಿಯರಿಗೆ ಮನರಂಜನೆ ರಸದೌತಣ

ಭಾನುವಾರದ ಸುಂದರ ಸಂಜೆಯಲ್ಲಿ ಸ್ಟಾರ್ ಸುವರ್ಣ ಚಾನೆಲ್ ಸಂಗೀತ ಪ್ರಿಯರಿಗೆ ಅತ್ಯುತ್ತಮವಾದ ಹಾಡುಗಳ ರಸದೌತಣವನ್ನು ಉಣಬಡಿಸಲಿದೆ. ಕಾರ್ಯಕ್ರಮಕ್ಕೆ ಸಂಜಿತ್ ಹೆಗ್ಡೆ ಆಗಮಿಸಿದ್ದು, ಅದ್ಭುತಗಳಿಗೇನು ಕಡಿಮೆ ಇರೋದಿಲ್ಲ. ಗಾಯಕ ಹೇಮಂತ್ ಹಾಡು ಹಾಡಿ ರಂಜಿಸಲಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಡುಗಳಿಗೆ ಗಾಯಕರು ಧ್ವನಿ ನೀಡಿ, ಪ್ರೇಕ್ಷಕರಿಗೆ ಡಬಲ್ ಧಮಾಕ ನೀಡಲಿದೆ. ರೊಮ್ಯಾಂಟಿಕ್ ಹಾಡುಗಳಿಗೆ ವ್ಯಾಸ್ ರಾಜ್ ಕಂಠ ಪ್ರೇಕ್ಷಕರ ಸಂಭ್ರಮವನ್ನು ದುಪ್ಪಟ್ಟು ಮಾಡಲಿದೆ. ಇಂದು ನಾಗರಾಜ್ ಹಾಗೂ ಲಕ್ಷ್ಮೀ ನಾಗರಾಜ್ ಅಕ್ಕ-ತಂಗಿಯರ ಜುಗಲ್ ಬಂದಿ ಯುಗಾದಿ ಹಬ್ಬವನ್ನು ಸಂಗೀತಮಯ ಮಾಡಲಿದೆ. ಓಹಿಲಾ ಅವರ ಮನ್ಮಥ ಹಾಡು ಹಬ್ಬದ ವಾತಾವರಣಕ್ಕೆ ಇನ್ನಷ್ಟು ಮೆರುಗು ನೀಡಲಿದೆ.

Marali Manasagide serial: ಬಿಡುವು ಸಿಕ್ರೆ ಸಾಕು ಈ ಧಾರಾವಾಹಿಯ ತಾರೆಯರು ಹೇಗೆಲ್ಲಾ ಟೈಮ್ ಪಾಸ್ ಮಾಡ್ತಾರೆ ನೋಡಿ

ಸಂಗೀತ ಮಹೋತ್ಸವದಲ್ಲಿ ಸೆಲಬ್ರಿಟಿಗಳು

ಸೆಲಬ್ರಿಟಿಗಳ ಬೊಂಬಾಟ್ ಆಟಗಳನ್ನು ಈ ವೀಕೆಂಡ್ ನಲ್ಲಿ ಪ್ರೇಕ್ಷಕರು ಕಣ್ತುಂಬಿ ಕೊಳ್ಳಬಹುದು. ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮಕ್ಕೆ ಗಾಯಕ ಹಾಗೂ ನಟ ಸುನಿಲ್ ರಾವ್, ನಟಿ ಅದಿತಿ ಪ್ರಭುದೇವ, ಮಣಿಕಾಂತ್ ಕದ್ರಿ ಮತ್ತು ಬ್ರೋ ಗೌಡ ಸೇರಿದಂತೆ ಹಲವರು ಆಗಮಿಸಿದ್ದಾರೆ. ಇನ್ನು ಸುವರ್ಣ ಯುಗಾದಿ ಸಂಗೀತ ಮಹೋತ್ಸವದ ಸಂಪೂರ್ಣ ಕಾರ್ಯಕ್ರಮವನ್ನು ಶಾಲಿನಿ ಅವರು ನಡೆಸಿಕೊಡಲಿದ್ದಾರೆ. ಶಾಲಿನಿ ಈ ವಿಶೇಷ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಾರೆ. ಹಾಡು, ಕುಣಿತ, ಕಾಮಿಡಿ, ಒಂದಷ್ಟು ತರಲೆ ಎಲ್ಲವೂ ಬೆರೆತು ಸುವರ್ಣ ಯುಗಾದಿ ಸಂಗೀತ ಮಹೋತ್ಸವದ ಮೆರಗು ಹೆಚ್ಚಾಗಲಿದೆ. ನೀವು ತಪ್ಪದೇ ಈ ಭಾನುವಾರ ಸಂಜೆ ಸ್ಟಾರ್ ಸುವರ್ಣದಲ್ಲಿ ಮೂಡಿ ಬರಲಿರುವ ಸುವರ್ಣ ಯುಗಾದಿ ಸಂಗೀತ ಮಹೋತ್ಸವವನ್ನು ನೋಡಿ, ಸಂಭ್ರಮಿಸಿ.

More from Filmibeat

English summary
This weekend star suvarna telecasting yugadi special programme suvarna yugadi sangeetha mahothsava. singers and actors celebrating yugadi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X