ಸ್ಟಾರ್ ಸುವರ್ಣ 'ಬೊಂಬಾಟ್ ಭೋಜನ'ದಲ್ಲಿ ಸೆಲೆಬ್ರಿಟಿಗಳ ತಂಡ
ಸಿಹಿ ಕಹಿ ಚಂದ್ರು ಅವರನ್ನು ಆಧುನಿಕ ನಳ ಮಹಾರಾಜ ಎನ್ನಬಹುದು. ಸಿಹಿ ಕಹಿ ಚಂದ್ರು ನಟನೆಯಲ್ಲಿ ಹೇಗೆ ನಿಪುಣರೋ ಹಾಗೇ ಅಡುಗೆ ಮಾಡುವುದರಲ್ಲಿ ನಿಪುಣರು. ವಿಧ ವಿಧದ ಅಡುಗೆಯನ್ನು ಮನೆಯಲ್ಲಿ ಹೇಗೆ ಮಾಡುವುದು ಎಂದು ಜನರಿಗೆ ಹೇಳಿಕೊಡುತ್ತಿದ್ದಾರೆ. ಇವರ ಕೈ ಚಳಕಕ್ಕೆ ಅನೇಕ ಮಹಿಳೆಯರೇ ಮಾರು ಹೋಗಿದ್ದಾರೆ. ಈಗ ಈ ಬೊಂಬಾಟ್ ಭೋಜನಕ್ಕೆ ಸೆಲೆಬ್ರಿಟಿಗಳ ಎಂಟ್ರಿ ಆಗಲಿದೆ.
ಸ್ಟಾರ್ ಸುವರ್ಣ 'ಬೊಂಬಾಟ್ ಭೋಜನ' ಕೇವಲ ರುಚಿಯಾದ ಅಡುಗೆಗಷ್ಟೇ ಫೇಮಸ್ ಅಲ್ಲ. ಸೂಪರ್ ರೆಸಿಪಿ ಜೊತೆ ಜೊತೆಗೆ ಉತ್ತಮ ಆರೋಗ್ಯಕ್ಕೂ ಅದ್ಭುತ ಟಿಪ್ಸ್‌ಗಳನ್ನು ನೀಡುತ್ತಾರೆ. ಅಡುಗೆ ಜೊತೆ ಜೊತೆಗೆ ಆರೋಗ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತಿರುವ ಈ ಕಾರ್ಯಕ್ರಮಕ್ಕೆ ವಾರ ಪೂರ್ತಿ ಸೆಲೆಬ್ರೆಟಿಗಳ ಆಗಮಿಸಿ, ಅಡುಗೆ ರುಚಿಯನ್ನು ಸವಿಯಲಿದ್ದಾರೆ.

'ಬೊಂಬಾಟ್ ಭೋಜನ' ಎಲ್ಲರಿಗೂ ಅಚ್ಚು ಮೆಚ್ಚು
ಸ್ಟಾರ್ ಸುವರ್ಣದ ಜನಪ್ರಿಯ ಕಾರ್ಯಕ್ರಮ 'ಬೊಂಬಾಟ್ ಭೋಜನ'. ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ' ಕಾರ್ಯಕ್ರಮದಲ್ಲಿ ಹಿರಿಯ ನಟ ದೊಡ್ಡಣ್ಣ, ಹಿರಿಯ ನಟಿ ಭವ್ಯ, ನಟಿ ಖುಷಿ, ನಿರ್ದೇಶಕ ಸುನಿ, ನಟಿ ಸಂಜನಾ ಆನಂದ್ ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಈ 'ಬೊಂಬಾಟ್ ಭೋಜನ' ಕಾರ್ಯಕ್ರಮ ಕಿರುತೆರೆ ವೀಕ್ಷಕರನ್ನು ಸೆಳೆದಿಟ್ಟುಕೊಂಡಿದೆ. ಪಾಕ ಪ್ರವೀಣ ಸಿಹಿಕಹಿ ಚಂದ್ರು ನಡೆಸಿಕೊಡುವ ಈ ಕಾರ್ಯಕ್ರಮ ವಿನೂತನ ಅಡುಗೆ ಜೊತೆ ವಿಶೇಷ ಅತಿಥಿಗಳೊಂದಿಗೆ ಮುಂದಿನ ವಾರ ಪೂರ್ತಿ ಮನರಂಜನೆಯನ್ನು ನೀಡಲಿದೆ.
ವಿನೂತನ ಶೈಲಿಯ ಅಡುಗೆ ಉಣಬಡಿಸುವ ಚಂದ್ರು.

ತಾರೆಯರೊಂದಿಗೆ ಪಾಕಶಾಲೆ
ಮುದ್ದು ಮುದ್ದಾದ ಮಾತುಗಳನ್ನು ಆಡುತ್ತಾ ಜನರನ್ನು ಮನರಂಜಿಸುತ್ತಾರೆ ಸಿಹಿ ಕಹಿ ಚಂದ್ರು. ಮಧ್ಯಾಹ್ನ 12 ಗಂಟೆ ಯಾವಾಗ ಬರುತ್ತೋ ಅಂತ ಹಲವು ಮಂದಿ ಕಾಯುತ್ತಿರುತ್ತಾರೆ. ವೀಕೆಂಡ್‌ಗಾಗಿ ಮನರಂಜನೆ ನೀಡುವ ಚಾನೆಲ್‌ಗಳು ಏನಾದರೂ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಈ ಬಾರಿ ಸ್ಟಾರ್ ಸುವರ್ಣ ಕಾರ್ಯಕ್ರಮವನ್ನು ಬೊಂಬಾಟ್ ಭೋಜನದ ಮೂಲಕ ಜನರಿಗೆ ರಂಜನೆ ನೀಡಲು ಮುಂದಾಗಿದೆ.

'ಬೊಂಬಾಟ್ ಭೋಜನ'ದಲ್ಲಿ ಮಸ್ತ್ ಮನರಂಜನೆ
'ಬೊಂಬಾಟ್ ಭೋಜನ' ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುತ್ತಿದೆ. ಅಡುಗೆ ಮಾಡಲು ಅನೇಕ ಜನರಿಗೆ ತಿಳಿದೇ ಇರುವುದಿಲ್ಲ. ಆದ್ದರಿಂದ ಇಂಥಹ ಕಾರ್ಯಕ್ರಮಗಳನ್ನು ನೋಡಿ ಹಲವು ರೆಸಿಪಿಗಳನ್ನು ಜನರು ಮನೆಯಲ್ಲಿಯೇ ತಯಾರು ಮಾಡಿಕೊಳ್ಳುತ್ತಾರೆ. ಸಿಹಿ ಕಹಿ ಚಂದ್ರು ಅಡುಗೆ ಜೊತೆ ಜೊತೆಗೆ ಹಾಸ್ಯ ಚಟಾಕಿ ಈ ಕಾರ್ಯಕ್ರಮವನ್ನು ಹಿಡಿದಿಟ್ಟಿದೆ. ಅವರ ನಗುವಿಗೆ ಮಾರು ಹೋದವರೇ ಇಲ್ಲ. ಇನ್ನೂ ರುಚಿಕರವಾದ ರೆಸಿಪಿಗಳನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಚಂದ್ರು ವಿಶೇಷವಾಗಿ ಸನ್ನದ್ದಾರಾಗಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳ ಆಗಮನವಾಗುತ್ತಿದ್ದು, ಈ ಸಂದರ್ಭದಲ್ಲಿ ಚಂದ್ರು ಯಾವ ತರಹದ ಅಡುಗೆ ತಯಾರಿಸಬಹುದು ಎಂಬ ಕುತೂಹಲ ಮಾತ್ರ ಎಲ್ಲರಲ್ಲೂ ಇದೆ.

ನಳಪಾಕದ ಜೊತೆ ಅತಿಥಿಗಳ ಮಾತು
'ಬೊಂಬಾಟ್ ಭೋಜನ' ಕಾರ್ಯಕ್ರಮದಲ್ಲಿ ಈ ವಾರ ಪೂರ್ತಿ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಮೇ ೨ರಂದು ಹಿರಿಯ ನಟ ದೊಡ್ಡಣ್ಣ, ಮೇ 3ರಂದು ರಂಗಭೂಮಿ ನಿರ್ದೇಶಕರಾದ ಝಾಫರ್ ಮೊಹಿಯುದ್ದೀನ್, ಮೇ 4ರಂದು ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ, ಮೇ 5 ಮತ್ತು6 ರಂದು ಹಿರಿಯ ನಟಿ ಭವ್ಯ ಮತ್ತು ನಿರ್ದೇಶಕ ಸಿಂಪಲ್ ಸುನಿ ಹಾಗೂ ಮೇ 7 ರಂದು ನಟಿ ಸಂಜನಾ ಆನಂದ್ 'ಬೊಂಬಾಟ್ ಭೋಜನ' ಕಾರ್ಯಕ್ರಮದಲ್ಲಿ ತಮ್ಮ ಕೈರುಚಿ ತೋರಿಸಲಿದ್ದಾರೆ. ಸೋಮವಾರದಿಂದ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಈ ವಿಶೇಷ ಅತಿಥಿಗಳ ನಳಪಾಕದ ಜೊತೆ ಮಸ್ತ್ ಮನರಂಜನೆ ಗ್ಯಾರಂಟಿ.


Click it and Unblock the Notifications











