»   » 'ಹರ ಹರ ಮಹಾದೇವ' ಧಾರಾವಾಹಿಯ 'ಪಾರ್ವತಿ'ಯನ್ನ ಕಿಕ್ ಔಟ್ ಮಾಡಿದ ಸ್ಟಾರ್ ಸುವರ್ಣ .!

'ಹರ ಹರ ಮಹಾದೇವ' ಧಾರಾವಾಹಿಯ 'ಪಾರ್ವತಿ'ಯನ್ನ ಕಿಕ್ ಔಟ್ ಮಾಡಿದ ಸ್ಟಾರ್ ಸುವರ್ಣ .!

Posted By:
Subscribe to Filmibeat Kannada
ಹರ ಹರ ಮಹಾದೇವ ಧಾರಾವಾಹಿಯ ಪಾರ್ವತಿಗೆ ಕ್ಲೀನ್ ಚಿಟ್ | Oneindia Kannada

'ಹರ ಹರ ಮಹಾದೇವ' ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರತಿ ನಿತ್ಯ ಪ್ರಸಾರವಾಗುವ ಧಾರಾವಾಹಿ. ಶಿವನ ಜೀವನ ಚರಿತ್ರೆಯನ್ನ ಸಾರುವ 'ಹರ ಹರ ಮಹಾದೇವ' ಸಾಕಷ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೇಕಿಂಗ್ ವಿಚಾರವಾಗಿ ಹಾಗೂ ಕಲಾವಿದರ ಅಭಿನಯದಿಂದ ಜನಮೆಚ್ಚುಗೆ ಗಳಿಸಿರುವ 'ಹರ ಹರ ಮಹಾದೇವ' ಧಾರಾವಾಹಿಯಿಂದ ಪಾರ್ವತಿ ಪಾತ್ರಧಾರಿಯನ್ನ ತೆಗೆದು ಹಾಕಲಾಗಿದೆ.

'ಹರ ಹರ ಮಹಾದೇವ'.... ಪೌರಾಣಿಕ ಹಿನ್ನಲೆ ಇರುವ ಧಾರಾವಾಹಿ ಆದ್ದರಿಂದ, ಪಾತ್ರಧಾರಿಗಳನ್ನ ಆಯ್ಕೆ ಮಾಡೋದ್ರ ಜೊತೆಗೆ ಅವ್ರನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಸಿತ್ತು 'ಸ್ಟಾರ್ ಸುವರ್ಣ' ವಾಹಿನಿ. ಆದ್ರೆ, ಕೊಟ್ಟ ಪಾತ್ರವನ್ನ ಸರಿಯಾಗಿ ನಿರ್ವಹಿಸದ ಕಾರಣ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕರಿಗೆ ಗೇಟ್ ಪಾಸ್ ನೀಡಲಾಗಿದೆ. ಮುಂದೆ ಓದಿರಿ....

ಪ್ರಿಯಾಂಕಾ ಅಲಿಯಾಸ್ ಪಾರ್ವತಿ ಕಿಕ್ ಔಟ್

'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಶಿವನ ಸತಿಯಾಗಿ ಅಭಿನಯಿಸುತ್ತಿದ್ದ ನಟಿ ಪ್ರಿಯಾಂಕಾ ಸರಿಯಾಗಿ ಅಭಿನಯಿಸುತ್ತಿಲ್ಲ ಹಾಗೂ ಸರಿಯಾದ ಸಮಯಕ್ಕೆ ಸೆಟ್ ಗೆ ಬರೋದಿಲ್ಲ ಎನ್ನುವ ಕಾರಣದಿಂದ 'ಹರ ಹರ ಮಹಾದೇವ' ತಂಡ ಪ್ರಿಯಾಂಕಾ ರನ್ನ ತೆಗೆದು ಹಾಕಿದೆ.

ಡೈಲಾಗ್ ಹೇಳಲ್ಲ

ಪಾರ್ವತಿ ಪಾತ್ರಕ್ಕೆ ಗುಲಬರ್ಗಾ ಮೂಲದ ಪ್ರಿಯಾಂಕಾ ಚಿಂಚೋಳಿ ಅವ್ರನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿ ನಡೆದಿತ್ತು. ಆದ್ರೆ, ಇತ್ತೀಚಿನ ಕೆಲವು ದಿನಗಳಿಂದ, ಹೇಳಿದ ಸಮಯಕ್ಕೆ ಬಾರದೆ, ಡೈಲಾಗ್ ಸರಿಯಾಗಿ ಪ್ರಸೆಂಟ್ ಮಾಡದೆ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಪ್ರಿಯಾಂಕಾ ಕಿರಿಕಿರಿ ಮಾಡಿದ್ದಾರೆ.

ಸಾಕಾಯ್ತು ದೇವಿ ಪಾರ್ವತಿ ಸಹವಾಸ

ಪ್ರತಿ ದಿನಾ ಚಿತ್ರೀಕರಣಕ್ಕೆ ತಡವಾಗಿ ಬರೋದು, ಸೆಟ್ ನ ಪ್ರತಿಯೊಬ್ಬರು ಇವರಿಗಾಗಿ ಕಾಯುವುದು ಸಾಮಾನ್ಯ ಆಗಿ ಹೋಗಿತ್ತು, ಇದರಿಂದ ಬೇಸತ್ತು ಹೋದ ವಾಹಿನಿ ಮುಖ್ಯಸ್ಥರು ಪಾರ್ವತಿ ಪಾತ್ರಧಾರಿ ಪ್ರಿಯಾಂಕಾರನ್ನ ಕರೆಸಿ ಗೇಟ್ ಪಾಸ್ ಕೊಟ್ಟು ಕಳುಹಿಸಿದ್ದಾರೆ

ಸತಿಯೇ ಈಗ ಪಾರ್ವತಿ

ಪ್ರಿಯಾಂಕಾರನ್ನ ಹೊರ ಕಳುಹಿಸಿದ 'ಹರ ಹರ ಮಹಾದೇವ' ತಂಡ ಈಗ ಪಾರ್ವತಿ ಪಾತ್ರಕ್ಕೆ ಹೊಸ ನಟಿಯನ್ನ ಕರೆತಂದಿದೆ. ಈ ಹಿಂದೆ ಸತಿ ಪಾತ್ರವನ್ನ ನಿರ್ವಹಿಸಿದ ನಟಿ ಸಂಗೀತ ಅವ್ರೇ ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ.

English summary
'Hara Hara Mahadeva' serial team has changed Parvathi character. Instead of Priyanka, Actress Sangeetha is playing Parvathi role now.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada