6 ವರ್ಷದ 'ಮೆಗಾ ಧಾರಾವಾಹಿ' ಅಂತ್ಯ

By Bharath Kumar

Recommended Video

6 ವರ್ಷದ 'ಮೆಗಾ ಧಾರಾವಾಹಿ' ಅಂತ್ಯ | Filmibeat Kannada

ಟಿವಿ ಪ್ರೇಕ್ಷಕರಿಗೊಂದು ಬೇಸರದ ಸಂಗತಿ. ಅದರಲ್ಲೂ ಸ್ಟಾರ್ ಸುವರ್ಣ ವೀಕ್ಷಕರಿಗೆ ಇದು ನಿರಾಸೆ ಮೂಡಿಸಬಹುದು. ಸುಮಾರು 6 ವರ್ಷದಿಂದ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದ ಮೆಗಾ ಧಾರಾವಾಹಿಯೊಂದು ಅಂತ್ಯವಾಗುತ್ತಿದೆ.

ಇಂದಿನ ಸೀರಿಯಲ್ ಗಳ ಸ್ಪರ್ಧೆಯಲ್ಲಿ ಕೆಲವು ಧಾರಾವಾಹಿಗಳು ಜನರ ಮನ್ನಣೆ ಸಿಗದೆ ಕೆಲವೇ ಎಪಿಸೋಡ್ ಗಳ ನಂತರ ನಿಂತು ಹೋಗುತ್ತೆ. ಇನ್ನು ಕೆಲವೂ ಧಾರಾವಾಹಿಗಳು ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾದರೇ, ವರ್ಷಾನುಗಟ್ಟಲೇ ಪ್ರಸಾರವಾಗುತ್ತೆ. ಹೀಗೆ, ವರ್ಷಗಳ ಕಾಲ ಸೂಪರ್ ಸಕ್ಸಸ್ ಕಂಡಿದ್ದ 'ಅಮೃತವರ್ಷಿಣೆ' ಈಗ ತನ್ನ ಕೊನೆಯ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.

ಹಾಗಿದ್ರೆ, 'ಅಮೃತ ವರ್ಷಣಿ'ಯ ಕೊನೆಯ ಶೋ ಯಾವಾಗ? ಎಂಬ ಮಾಹಿತಿ ತಿಳಿಯಲು ಮುಂದೆ ಓದಿ.....

ನವೆಂಬರ್ 24 ರಂದು ಅಂತ್ಯ

ನವೆಂಬರ್ 24 ರಂದು ಅಂತ್ಯ

'ಅಮೃತವರ್ಷಣಿ' ಧಾರಾವಾಹಿ ತನ್ನ ಕೊನೆಯ ಪ್ರದರ್ಶನಕ್ಕೆ ಸಜ್ಜಾಗಿದ್ದು, ನವೆಂಬರ್ 24 ರಂದು ಕೊನೆಯ ಕಂತು ಪ್ರಸಾರವಾಗಲಿದೆ. ನಂತರ ನವೆಂಬರ್ 27 ರಿಂದ ಡಿಸೆಂಬರ್ 1 ರ ವರೆಗು ರಾತ್ರಿ 9.30ಕ್ಕೆ ಈ ವಿಶೇಷ ಸಂಚಿಕೆಗಳ ರಸದೌತಣ ನೀಡಲಿದೆ ಸ್ಟಾರ್ ಸುವರ್ಣ ವಾಹಿನಿ.

1700 ಕಂತುಗಳ ಮೆಗಾ ಧಾರಾವಾಹಿ

1700 ಕಂತುಗಳ ಮೆಗಾ ಧಾರಾವಾಹಿ

ಇಲ್ಲಿಯವರೆಗೂ ಸುಮಾರು 1700ಕ್ಕೂ ಅಧಿಕ ಕಂತುಗಳು 'ಅಮೃತವರ್ಷಿಣಿ' ಧಾರಾವಾಹಿ ಪ್ರಸಾರವಾಗಿತ್ತು. ಅತಿ ಹೆಚ್ಚು ವರ್ಷಗಳು ಪ್ರಸಾರವಾದ ಸೀರಿಯಲ್ ಗಳ ಪೈಕಿ ಅಮೃತವರ್ಷಿಣಿಯೂ ಒಂದಾಗಿದೆ.

2012ರಲ್ಲಿ ಆರಂಭವಾಗಿದ್ದ 'ಅಮೃತವರ್ಷಿಣಿ'

2012ರಲ್ಲಿ ಆರಂಭವಾಗಿದ್ದ 'ಅಮೃತವರ್ಷಿಣಿ'

19 ಮಾರ್ಚ್ 2012....ಸುವರ್ಣ ಯುಗ ಪ್ರಾರಂಭವಾದ ದಿನ. ಅಂದು ಸ್ಟಾರ್ ಸುವರ್ಣ ಪರಿವಾರಕ್ಕೆ ಹೊಸದಾಗಿ ಸೇರ್ಪಡೆಗೊಂಡ ಧಾರಾವಾಹಿ ಅಮೃತವರ್ಷಿಣಿ. ತನ್ನ ಮೊದಲ ಪ್ರಸಾರದಿಂದಲೇ ಪ್ರೇಕ್ಷಕರ ಮನ ಸೆಳೆದು ಕಿರುತೆರೆ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಸೃಷ್ಠಿಸಿದೆ. ಅಮ್ಮನಂತ ಅತ್ತೆ, ಮಗಳಂತ ಸೊಸೆ.. ಇದೇ ಅಮೃತವರ್ಷಿಣಿಯ ಕಥೆಯಾಗಿತ್ತು.

ವೀಕ್ಷಕರು ಬೇಸರ

ವೀಕ್ಷಕರು ಬೇಸರ

'ಅಮೃತವರ್ಷಿಣಿ' ಧಾರಾವಾಹಿ ಅಂತ್ಯವಾದ ಹಿನ್ನೆಲೆ ಟಿವಿ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಳ್ಳೆ ಧಾರಾವಾಹಿ ಮಿಸ್ ಆಯ್ತು ಎಂದು ಕಾಮೆಂಟ್ ಮಾಡ್ತಿದ್ದಾರೆ.

More from Filmibeat

English summary
Star suvarna channel's Famous Serial Amruthavarshini last episode on november 24th. ಸ್ಟಾರ್ ಸುವರ್ಣ ವಾಹಿನಿಯ ಖ್ಯಾತ ಧಾರಾವಾಹಿ ಅಮೃತ ವರ್ಷಣಿ ಅಂತ್ಯವಾಗುತ್ತಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X