ಒಂದೊಂದು ಸೀರಿಯಲ್‌ನಲ್ಲೂ ಒಂದೊಂದು ರೀತಿಯ ಸ್ನೇಹ-ಬಾಂಧವ್ಯ: ಫ್ರೆಂಡ್‌ಶಿಪ್ ಡೇ ಸ್ಪೆಷಲ್!
ಇವತ್ತು ಸ್ನೇಹಿತರ ದಿನಾಚರಣೆ. ಎಲ್ಲರೂ ತಮ್ಮ ತಮ್ಮ ಸ್ನೇಹಿತರಿಗೆ ಶುಭಕೋರಿ, ಗಿಫ್ಟ್‌ಗಳನ್ನು ನೀಡಿ ಆಚರಣೆ ಮಾಡುತ್ತಾರೆ. ತಮ್ಮ ಸ್ನೇಹಿತರ ಬಗ್ಗೆ ತಮಗಿರುವ ಭಾವನೆಗಳನ್ನು ಅಕ್ಷರದ ಮೂಲಕ ವ್ಯಕ್ತಪಡಿಸಿ, ಶುಭ ಹಾರೈಸುತ್ತಾರೆ. ಅವರ ಗುಣಗಳು, ತಮ್ಮ ಜೀವನಕ್ಕೆ ಅವರ ಪಾತ್ರ ಎಂಥದ್ದು ಎಂಬುದನ್ನು ಸ್ನೇಹಿತರ ಬಗ್ಗೆ ಬರೆದ ಸಾಲುಗಳೇ ತಿಳಿಸಿ ಬಿಡುತ್ತವೆ. ಅದೇ ರೀತಿ ಇದೀಗ ಸ್ಟಾರ್ ಸುವರ್ಣ ತಮ್ಮೆಲ್ಲ ಆರ್ಟಿಸ್ಟ್ ಗಳ ಬಗ್ಗೆಯೂ ಅಕ್ಷರದ ಮೂಲಕ ಬರೆದು, ಫ್ರೆಂಡ್‌ಶಿಪ್ ಡೇ ಮಹತ್ವ ಸಾರಿದೆ.
ಸ್ಟಾರ್ ಸುವರ್ಣ ವೇದಿಕೆ ಒಂದೊಂದು ರೀತಿಯ ಸ್ಪೆಷಲ್ ಕಾರ್ಯಕ್ರಮಕ್ಕೆ ಖ್ಯಾತಿ ಪಡೆದಿದೆ. ಅದು ತಾಯಂದಿರ ದಿನ, ಮಹಿಳೆಯರ ದಿನ, ಅಪ್ಪಂದಿರ ದಿನಕ್ಕಾಗಿ ಸ್ಪೆಷಲ್ ಎಪಿಸೋಡ್‌ಗಳನ್ನು ಮಾಡುತ್ತಾರೆ. ಅದೇ ರೀತಿ ಇದೀಗ ಸ್ನೇಹಿತರ ದಿನಕ್ಕಾಗಿ ವಿಶೇಷ ವಿಡಿಯೋ ಮೂಲಕ, ವಾಹಿನಿಯ ಸ್ನೇಹಿತರಂತಿರುವ ಎಲ್ಲರಿಗೂ ಶುಭಕೋರಿದ್ದಾರೆ.

'ರಾಜಿ' ಮತ್ತು ಕರ್ಣನ ಸ್ನೇಹ ಎಂಥದ್ದು?
ಸ್ಟಾರ್ ಸುವರ್ಣದಲ್ಲಿ 'ರಾಜಿ' ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ರಾಜಿ ಮತ್ತು ಕರ್ಣ ಮೊದಲಿನಿಂದಲೂ ಸ್ನೇಹಿತರಾಗಿದ್ದವರು. ಆದರೆ ಅಪ್ಪನ ಆಸೆಗೆ, ಅನಿವಾರ್ಯತೆಗೆ ಸಿಲುಕಿ ಕರ್ಣ, ರಾಜಿಯನ್ನು ಮದುವೆಯಾಗಿದ್ದಾನೆ. ಇವತ್ತು ಸ್ನೇಹಿತರ ದಿನಾಚರಣೆ. ಈ ಕಾರಣಕ್ಕೆ ಕರ್ಣನ ಬಗ್ಗೆ ಒಂದೆರಡು ಮಾತುಗಳು ಇಲ್ಲಿವೆ. ನಿನ್ನ ಸ್ನೇಹವೇ ಅನನ್ಯ. ನಿನ್ನನ್ನು ಸ್ನೇಹಿತನಾಗಿ ಪಡೆದ ನಾನೇ ಧನ್ಯ ಎಂದು ಕರ್ಣ ತನ್ನ ಸ್ನೇಹಿತನಿಗೆ ಹೇಳುತ್ತಿದ್ದಾಳೆ.

'ಅರ್ಧಾಂಗಿ'ಯ ಸ್ನೇಹದ ಬಗ್ಗೆ ಸುಮಧುರ ಮಾತು
'ಅರ್ಧಾಂಗಿ' ಧಾರಾವಾಹಿ ಮುಗ್ದ ಹುಡುಗನನ್ನು ಮದುವೆಯಾದ ಮುಗ್ದ ಹುಡುಗಿಯ ಕಥೆ. ಏನು ಅರಿಯದ ಹುಡುಗನನ್ನು ಮದುವೆಯಾಗಿ, ಯಾರಿಗೂ ಹೇಳದಂತ ನೋವು ಅನುಭವಿಸುತ್ತಿದ್ದಾಳೆ. ಆದರೆ ಅವನನ್ನು ಬದಲಾಯಿಸುವುದು ಆಕೆಯ ಕೈನಲ್ಲಿಯೇ ಇದೆ. ತನ್ನ ಮುಗ್ಧ ಗಂಡನ ಬಗ್ಗೆ ಹೇಳಿದ ಮಾತು ಇಲ್ಲಿದೆ. ಅಳುವಾಗ ನಗಿಸಿ, ನಗುವಲ್ಲಿ ನಲಿಸಿ, ಹರೆಯದಲ್ಲೂ ಮಕ್ಕಳಂತಾಗಿಸುವ ಇವರ ಅನುಬಂಧದ ಹೆಸರೇ ಸ್ನೇಹ ಎಂದಿದ್ದಾರೆ. ಸ್ನೇಹಕ್ಕೆ ಉತ್ತಮ ಉದಾಹರಣೆ ನೀಡಿದ್ದಾರೆ.

ಶ್ರವಂತ್ ಬಗ್ಗೆ ದೃಷ್ಟಿ ಹೇಳಿದ್ದೇನು?
ಮುದ್ದು ಲಕ್ಷ್ಮೀಯ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಈ ಮುಂಚೆ ಶ್ರವಂತ್ ಮತ್ತು ದೃಷ್ಟಿ ಮದುವೆ ಮಾಡಲು ಪ್ರಯತ್ನ ನಡೆದಿತ್ತು. ಆದರೆ ಬಳಿಕ ಅದೇನೇನೋ ಆಗಿ ದೃಷ್ಟಿ ಮತ್ತು ಶಿವು ನಿಜವಾದ ಪ್ರೀತಿ ಒಂದಾಗಿತ್ತು. ಶ್ರವಂತ್ ಮತ್ತು ದೃಷ್ಟಿ ಬಗೆಗಿನ ಸ್ನೇಹದ ಸಾಲುಗಳು ಇಲ್ಲಿವೆ. ಸುಂದರ ಸ್ನೇಹದಲ್ಲಿ ಸ್ವಾರ್ಥ ಇರುವುದಿಲ್ಲ. ಅದು ದೇವರಷ್ಟೇ ಪವಿತ್ರ, ಆಕಾದಷ್ಟು ಎತ್ತರ ಇವರಿಬ್ಬರ ಸ್ನೇಹ. ಹಾಗೇ ಭೂಮಿ ಮತ್ತು ಶಿವು ಸ್ನೇಹ ಎಂಥದ್ದು ಎಂಬುದಕ್ಕೂ ಉದಾಹರಣೆಯ ಸಾಲುಗಳು ಇಲ್ಲಿವೆ. ಬದುಕನ್ನು ಸಹನೀಯನೀಯವೂ, ಸುಂದರವೂ ಆಗಿಸುವಂಥಹ ಮುಗ್ದ ಸ್ನೇಹ ಅವರದ್ದು.

ಪರಿ ಮತ್ತು ಹೂವಿಯ ಸ್ನೇಹದ ಬಗೆ ಗೊತ್ತಾ?
'ಬೆಟ್ಟದ ಹೂ' ಧಾರಾವಾಹಿಯಲ್ಲಿ ಪರಿ, ಹೂವಿಯನ್ನು ಮನಸಾರೆ ಇಷ್ಟಪಡುತ್ತಿದ್ದ. ಆದರೆ ಹೂವಿಗೆ ರಾಹುಲ್ ಜೊತೆ ಮದುವೆಯಾಗಿದೆ. ಅವರಿಬ್ಬರ ಸ್ನೇಹ ಈ ಮುಂಚೆ ಹೇಗಿತ್ತು ಎಂಬ ಸಾಲುಗಳು ಇಲ್ಲಿವೆ. ಬೆಟ್ಟದಷ್ಟು ಗೆಳೆತನ ತುಂಬಿದೆ ಹೂವಿ ಮತ್ತು ಪ್ರಕಾಶನ ನಡುವೆ. ಅದೇ ರೀತಿ 'ಮರಳಿ ಮನಸಾಗಿದೆ'ಯಲ್ಲಿ ಸ್ಪಂದನಾ ಮತ್ತು ಅಜಯ್ ಗೆಳೆತನಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸಿದ್ದಾರೆ.


Click it and Unblock the Notifications











