ಜಲ ಸಂಕಷ್ಟಕ್ಕೆ ಸ್ಪಂದಿಸಿದ ಸ್ಟಾರ್ ಸುವರ್ಣ; 3,65,500 ಲೀಟರ್ ಉಚಿತ ಜಲ ವಿತರಣೆ

By ಫಿಲ್ಮಿಬೀಟ್ ಡೆಸ್ಕ್

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಬೇಸಿಗೆ ಬಿಸಿಗೆ ನೀರು ಬತ್ತಿ ಹೋಗಿವೆ. ಮಹಾನಗರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನರಂಜನ ವಾಹಿನಿ ಸ್ಟಾರ್ ಸುವರ್ಣ ಜನರ ನೆರವಿಗೆ ಬಂದಿದೆ.

'ಸುವರ್ಣ ಸಂಕಲ್ಪ' ಕಾರ್ಯಕ್ರಮದ ಮೂಲಕ "ಜಲ ಸಂಕಷ್ಟಕ್ಕೆ ಸುವರ್ಣ ಸಂಕಲ್ಪ" ಎಂಬ ಬರಹದಡಿ ಹೊಸ ಅಭಿಯಾನಕ್ಕೆ ಮುಂದಾಗಿದೆ. ಇದರ ಮೂಲಕ ನೀರಿನ ಅಭಾವಿರುವ ಬೆಂಗಳೂರಿನ ಹಲವು ಪ್ರದೇಶಗಳಿಗೆ ನೀರಿನ ಟ್ಯಾಂಕರ್‌ಗಳನ್ನು ಕಳುಹಿಸಿ ಸ್ಟಾರ್ ಸುವರ್ಣ ಜನರಿಗೆ ನೆರವಾಗುತ್ತಿದೆ.

Star Suvarna distributing free water

ಬೆಂಗಳೂರಿನ ನೀರಿನ ಅಭಾವವಿರುವ ಪ್ರದೇಶಗಳಾದ ಅಂದ್ರಹಳ್ಳಿ, ವಿದ್ಯಾಮಾನ ನಗರ್, ಚಕ್ರನಗರ, ವಾಲ್ಮೀಕಿ ನಗರ, ಬಸವಣ್ಣ ದೇವಸ್ಥಾನ ಸರ್ಕಲ್, ಸುಂಕದಕಟ್ಟೆ, ಮಾಗಡಿ ರೋಡ್, ಶ್ರೀಗಂಧ ಕಾವಲ್, ಭೈರವೇಶ್ವರ ನಗರ ಹಾಗು ವಿಘ್ನೇಶ್ವರ ನಗರ ಸೇರಿದಂತೆ ಇನ್ನು ಹಲವು ಪ್ರದೇಶಗಳಿಗೆ, ಅಲ್ಲಿರುವ ಜನರಿಗೆ ಸ್ಟಾರ್ ಸುವರ್ಣದ ವತಿಯಿಂದ ಉಚಿತ ನೀರನ್ನು ವಿತರಿಸಲಾಗುತ್ತಿದೆ. ಇದಕ್ಕೆ ವಿದ್ವಾನ್ ಡಾ|| ಗೋಪಾಲಕೃಷ್ಣ ಗುರೂಜಿಯವರ ನೆರವು ನೀಡಿದ್ದಾರೆ.

ಸ್ಟಾರ ಸುವರ್ಣ ಇಲ್ಲಿವರೆಗೆ ಸುಮಾರು 3,65,500 ಲೀಟರ್‌ಗಿಂತನೂ ಅಧಿಕ ನೀರನ್ನು ಸಂಕಷ್ಟದಲ್ಲಿರುವ ಜನರಿಗೆ ವಿತರಣೆ ಮಾಡಲಾಗಿದೆ. ಪ್ರತಿದಿನ ಸುಮಾರು 60 ಸಾವಿರ ಅಧಿಕ ಲೀಟರ್‌ಗಿಂತನೂ ಅಧಿಕ ನೀರನ್ನು ಜನರಿಗೆ ತಲುಪಿಸುತ್ತಿದೆ. ಈ ಮೂಲಕ ಬೆಂಗಳೂರಿನ ಜನರಿಗೆ ನೆರವಾಗುತ್ತಿದೆ.

Star Suvarna distributing free water

ಹಾಗೇ ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಜನರಿಗೆ ನೀರನ್ನು ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡಿದೆ. ಸದ್ಯ ಕೇವಲ ಮನರಂಜನೆಯನ್ನಷ್ಟೇ ನೀಡದೆ, ಜನರ ಸಂಕಷ್ಟಕ್ಕೂ ಸ್ಪಂದಿಸುತ್ತಿರುವುದರಿಂದ ಸ್ಟಾರ್ ಸುವರ್ಣಗೆ ವೀಕ್ಷಕರು ಪ್ರಶಂಸೆ ನೀಡುತ್ತಿದ್ದಾರೆ.

More from Filmibeat

English summary
Star Suvarna distributing free water for Bengaluru people
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X