ಸೋಮವಾರದಿಂದ 'ಸ್ಟಾರ್ ಸುವರ್ಣ' ಹೊತ್ತು ತರ್ತಿದೆ ಭರಪೂರ ಮನರಂಜನೆಯ ರಸದೌತಣ..!

ಹೊಸ ಹೊಸ ಬಗೆಯ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ಸ್ಟಾರ್ ಸುವರ್ಣ ವಾಹಿನಿ ಸದಾ ಮುಂದಿರುತ್ತೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಸೋಮವಾರದಿಂದ ಸ್ಟಾರ್ ಸುವರ್ಣ ವಾಹಿನಿ ಹೊಸ ಬಗೆಯ ಮನರಂಜನೆಯ ರಸದೌತಣ ಹೊತ್ತು ತರುತ್ತಿದೆ. ಮಧ್ಯಾಹ್ನದ ಮನರಂಜನೆ ಅಡಿಯಲ್ಲಿ ಎರಡು ಧಾರಾವಾಹಿಗಳನ್ನು ಪ್ರಸಾರ ಮಾಡಲು ಅಣಿಯಾಗಿದೆ.

ಹೌದು,ಮಧ್ಯಾಹ್ನದ ಮನರಂಜನೆ ಅಡಿಯಲ್ಲಿ ಎರಡು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸ್ಟಾರ್ ಸುವರ್ಣ ಸಜ್ಜಾಗಿದೆ. ಆ ಪೈಕಿ ಒಬ್ಬನ ಮೋಸವನ್ನು ನಿರೂಪಿಸಲು ಮತ್ತೆ ಇಬ್ಬರು ಪಡುವ ಪ್ರಯತ್ನದ ಕಥೆಯನ್ನ ಹೊಂದಿರುವ 'ಪ್ರೀತಿಗಾಗಿ' ಎಂಬ ಹೊಸ ಧಾರಾವಾಹಿ ಇದೇ ಸೋಮವಾರದಿಂದ ಮಧ್ಯಾಹ್ನ ಒಂದು ಘಂಟೆಗೆ ಪ್ರಸಾರವಾಗಲಿದೆ.

star-suvarna-is-set-to-launch-two-new-entertaining-shows-this-monday-check-out-the-details-here

ಇನ್ನೂ ಬೇರೆಯವರ ಖುಷಿಯಲ್ಲಿ ತನ್ನ ಸಂತೋಷವನ್ನು ಕಾಣುವ ಮುಗ್ದ ಗಣೇಶನ ಕಥೆಯನ್ನೊಂದಿರುವ ''ಪಾಪ ಗಣೇಶ'' ಇದೇ ಸೋಮವಾರದಿಂದ ಮಧ್ಯಾಹ್ನ 02-30ಕ್ಕೆ ಪ್ರಸಾರವಾಗಲಿದೆ. ಕೋಪ- ದ್ವೇಷದಿಂದ ಶುರುವಾಗಿ ಪ್ರೀತಿಯ ಮಳೆ ಸುರಿಸಲಿರುವ ಪ್ರೇಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ ಅರಗಿಣಿ-02 ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಅಂದರೆ ಮಧ್ಯಾಹ್ನ 01-30ಕ್ಕೆ ಪ್ರಸಾರವಾಗಲಿದೆ.

ಈ ಧಾರಾವಾಹಿಗಳಲ್ಲದೇ ಈ ಸೋಮವಾರದಿಂದ ಬದಲಾದ ಸಮಯದಲ್ಲಿ ದೇಶದ ಗೃಹಿಣಿಯ ಹೃದಯವನ್ನು ಗೆದ್ದ '' ಅನುಪಮ'' ಧಾರಾವಾಹಿ ಮಧ್ಯಾಹ್ನ 02 ಘಂಟೆಗೆ ಪ್ರಸಾರವಾಗಲಿದೆ. ಈ ಧಾರಾವಹಿಗಳ ಜೊತೆ ಸೂಪರ್ ನ್ಯಾಚುರಲ್ ಕ್ರೈಮ್ ಥ್ರಿಲ್ಲರ್ ಕಥೆಯನ್ನೊಂದಿರುವ ಹೊಸ ಕಾರ್ಯಕ್ರಮ ''ಸೂಪರ್ ಕಾಪ್ಸ್ VS ಸೂಪರ್ ವಿಲನ್ಸ್'' ಈ ಸೋಮವಾರದಿಂದ ಸಂಜೆ 04-30ಕ್ಕೆ ಪ್ರಸಾರವಾಗಲಿದೆ. ಇನ್ನೂ ಕರ್ನಾಟಕದೆಲ್ಲ ಗೃಹಿಣಿಯರಿಗೆ ಮನರಂಜನೆಯ ಬಾಡೂಟವನ್ನೂ ಬಡಿಸಲು ಈ ಸೋಮವಾರದಿಂದ ಸಂಜೆ 05-30ಕ್ಕೆ ಸುವರ್ಣ ವಾಹಿನಿಯಲ್ಲಿ ''ಸುವರ್ಣ ಗೃಹಮಂತ್ರಿ'' ಕಾರ್ಯಕ್ರಮ ಪ್ರಸಾರವಾಗಲಿದೆ.

ಹೀಗೆ ಹಲವು ಬಗೆಯ ಕಾರ್ಯಕ್ರಮದ ಮೂಲಕ ಸ್ಟಾರ್ ಸುವರ್ಣ ವಾಹಿನಿ ಕನ್ನಡಿಗರ ಹೃದಯವನ್ನೂ ಇನ್ನೊಮ್ಮೆ ಗೆಲ್ಲಲು ಸಿದ್ಧವಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಯಾವ ಧಾರಾವಾಹಿ/ ಕಾರ್ಯಕ್ರಮ ಪ್ರೇಕ್ಷಕರ ಹೃದಯ ಗೆಲ್ಲುತ್ತೆ ಎನ್ನುವುದಕ್ಕೆ ಉತ್ತರ ಸದ್ಯದಲ್ಲಿ ಸಿಗಲಿದೆ.

More from Filmibeat

Read more about: tv serial star suvarna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X