ಕನ್ನಡ ಭಾಷೆ, ಶಿಕ್ಷಕ ವೃಂದ ಹಿನ್ನೆಲೆಯಲ್ಲಿ ಮೂಡಿ ಬರ್ತಿದೆ ಹೊಸ ಧಾರಾವಾಹಿ

ಇತರೆ ಮನರಂಜನಾ ವಾಹಿನಿಗಳಿಂತಲೂ ಸ್ಟಾರ್ ಸುವರ್ಣ ವಾಹಿನಿ ವಿಭಿನ್ನವಾಗಿ ನಿಲ್ಲುತ್ತದೆ. ಸ್ಟಾರ್ ಸುವರ್ಣ ವಾಹಿನಿಯ ಪ್ರತಿಯೊಂದು ಕಾರ್ಯಕ್ರಮ ಕೂಡ ಡಿಫರೆಂಟ್ ಆಗಿ ಇರುತ್ತವೆ. ಯಾವುದೋ ಒಂದು ಕಥೆಯ ಎಳೆಯನ್ನು ಇಟ್ಟುಕೊಂಡು ವರ್ಷಾನುಗಟ್ಟಲೆ ಧಾರಾವಾಹಿ ಪ್ರಸಾರ ಮಾಡುವ ಬದಲು ಈ ವಾಹಿನಿಯಲ್ಲಿ ಅತ್ಯುತ್ತಮ ಕಥೆಗಳನ್ನು ಹೊತ್ತು ಹೊಸ ಹೊಸ ಧಾರಾವಾಹಿಗಳು ಮೂಡಿ ಬರುತ್ತವೆ.

ಸಾಮಾಜಿಕ ಕಥೆಯುಳ್ಳ ಧಾರಾವಾಹಿಗಳ ಜೊತೆಗೆ ಪೌರಾಣಿಕ ಧಾರಾವಾಹಿಗಳು ಕೂಡ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿವೆ. ಇದೀಗ ವಿಭಿನ್ನ ಕಥೆಯೊಂದನ್ನು ಹೊತ್ತು ತರುತ್ತಿದೆ ವಾಹಿನಿ. ಸಂಗೀತದ ಬಗ್ಗೆ ವಿಶೇಷವಾದ ಕತೆ ಇರುವ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಮೂಡಿ ಬರುತ್ತಿದೆ. ಇದರ ಜೊತೆಗೆ ಕಳೆದ ತಿಂಗಳು ಕಿವಿ ಕೇಳದವರ ಪರಿಸ್ಥಿತಿಯನ್ನು ತೋರಲು ಮತ್ತೊಂದು ಧಾರಾವಾಹಿಯನ್ನು ಪ್ರಾರಂಭಿಸಲಾಗಿದೆ.

Star suvarna Kaveri Kannada Medium new Serial Launched soon

ಇದೀಗ ಕನ್ನಡ ಭಾಷೆಯ ಮೇಲೆ ಕಥೆಯೊಂದು ಶುರುವಾಗಲಿದೆ. ಭಾಷೆ, ಸಂಗೀತಾ, ಅಂಗವೈಕಲ್ಯ ಹೀಗೆ ಹಲವು ವಿಚಾರಗಳ ಆಧಾರದ ಮೇಲೆ ಧಾರಾವಾಹಿಯ ಕತೆಗಳು ಮೂಡಿ ಬರುತ್ತಿವೆ. ಕಳೆದ ಎರಡು ತಿಂಗಳಿನಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಗಳ ಪರ್ವ ಆರಂಭವಾಗಿದೆ. ತಿಂಗಳಿಗೊಂದು ಧಾರಾವಾಹಿಗಳು ಶುರುವಾಗುತ್ತಿವೆ. ರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ರಾಣಿ ಅಂತಹ ಧಾರಾವಾಹಿಗಳು ಕಳೆದು ಎರಡು ತಿಂಗಳಲ್ಲಿ ಪ್ರಾರಂಭವಾಗಿದೆ.

ಇದೀಗ ಮತ್ತೊಂದು ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ಈ ಕಥೆ ಕನ್ನಡ ಭಾಷೆ ಹಾಗೂ ಶಿಕ್ಷಕ ವೃಂದಕ್ಕೆ ಸಂಬಂಧಿಸಿದ್ದಾಗಿದ್ದು, ಧಾರಾವಾಹಿಯ ಪ್ರೋಮೋ ಕೂಡ ಅದ್ಭುತವಾಗಿದೆ. ಈಗಾಗಲೇ ಹೊಸ ಕತೆಯ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಧಾರಾವಾಹಿ ಯಾವುದು ಎಂದು ಕೇಳುತ್ತಿದ್ದೀರಾ..?

ಈ ಧಾರಾವಾಹಿಯ ಹೆಸರು 'ಕಾವೇರಿ ಕನ್ನಡ ಮೀಡಿಯಂ'. ಈ ಹಿಂದೆ 'ರಾಜು ಕನ್ನಡ ಮೀಡಿಯಂ' ಎನ್ನುವ ಕನ್ನಡ ಸಿನಿಮಾ ಬಂದು ಗೆದ್ದಿತ್ತು. ಪ್ರೊಮೋದಲ್ಲಿ ಇವತ್ತು ಕಾಲೇಜಿನಲ್ಲಿ ಮೊದಲ ಕ್ಲಾಸ್. ನೀವೆಲ್ಲಾ ಕನ್ನಡ ಟೀಚರ್ ಟ್ರೈನಿಂಗ್‌ಗೆ ಸೇರಿದ್ದೀರಾ, ಅದೇನ್‌ ಮಾಡ್ತಿರೋ ನೋಡ್ಬೇಕು ಎಂದು ಮೇಷ್ಟ್ರು ಹೇಳುತ್ತಾರೆ. ಯಾರಪ್ಪಾ ರಮೇಶ್, ಪಿಯುಸಿ, ಡಿಗ್ರಿ ಜಸ್ಟ್ ಪಾಸ್. ನೀನ್ಯಾಕೆ ಬಂದಿದ್ದು ಎಂದು ಕೇಳುತ್ತಾರೆ. ಆಗ ರಮೇಶ್, ಡಬಲ್ ಡಿಗ್ರಿ ಇದ್ರೆ ಬ್ಯಾಂಕ್‌ನಲ್ಲಿ ಲೋನ್ ಸ್ವಲ್ಪ ಜಾಸ್ತಿ ಕೊಡ್ತಾರೆ ಅದಕ್ಕೆ ಬಂದೆ ಎನ್ನುತ್ತಾರೆ.

Star suvarna Kaveri Kannada Medium new Serial Launched soon

ನಂತರ ಮೇಷ್ಟ್ರು, ಯಾರಮ್ಮಾ ಕಾವೇರಿ, ಎಲ್ಲದರಲ್ಲೂ ಡಿಸ್ಟಿಂಕ್ಷನ್ ತಗೊಂಡು ಇಂಜಿನಿಯರ್, ಡಾಕ್ಟರ್ ಆಗಬಹುದಿತ್ತು. ಟೀಚರ್ ಟ್ರೈನಿಂಗ್‌ಗೆ ಬಂದಿದ್ದೇಕೆ ಎಂದು ಕೇಳಿದಾಗ ಕಾವೇರಿ, ಟೀಚರ್ ಆಗಬೇಕು ಎನ್ನುವುದು ನನ್ನ ಕನಸು. ನಾನು ಓದಿರುವ ಓದು, ನಾನು ನಂಬಿರೋ ಭಾಷೆ, ಯಾವತ್ತೂ ನನ್ನ ಕೈ ಬಿಡಲ್ಲ ಸರ್ ಎನ್ನುತ್ತಾಳೆ. ಸ್ಟಾರ್ ಸುವರ್ಣ ಹೆಮ್ಮೆಯಿಂದ ಅರ್ಪಿಸುತ್ತಿದೆ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿ. ಶೀಘ್ರದಲ್ಲೇ ಸೀರಿಯಲ್ ಶುರುವಾಗುತ್ತೆ ಎಂದು ಪ್ರೋಮೋ ಪ್ರಸಾರವಾಗಿದೆ.

ಪ್ರೋಮೋ ನೋಡಿ ಎಲ್ಲರು ಖುಷಿ ಪಟ್ಟಿದ್ದಾರೆ. ಧಾರಾವಾಹಿಯನ್ನು 7.30ರ ಸ್ಲಾಟ್‌ಗೆ ಪ್ರಸಾರ ಮಾಡುವಂತೆ ಕಮೆಂಟ್‌ ಮಾಡಿದ್ದಾರೆ. 'ಮರಳಿ ಮನಸಾಗಿದೆ' ಧಾರಾವಾಹಿಯ ನಟಿ ದಿವ್ಯಾ ವಾಗೂಕರ್ ಹೀರೋಯಿನ್ ಎಂದು ಗೆಸ್ ಮಾಡಿದ್ದಾರೆ. ಇನ್ನು ಈ ಧಾರಾವಾಹಿ ರಿಮೇಕ್ ಎಂದು ಕೂಡ ಕಮೆಂಟ್ ಮಾಡಿದ್ದಾರೆ. 'ಬಾಂಗ್ಲಾ ಮೀಡಿಯಂ' ಎಂಬ ಧಾರಾವಾಹಿಯ ರಿಮೇಕ್ ಎಂದು ಹೇಳಿದ್ದಾರೆ. ಇನ್ನು ಕೆಲವರು ಯಾವ ಧಾರಾವಾಹಿ ಅಂತ್ಯವಾಗುತ್ತದೆ ಎಂದು ಊಹಿಸಿ ತಿಳಿಸಿದ್ದಾರೆ. ಒಟ್ನಲ್ಲಿ ಸ್ಟಾರ್ ಸುವರ್ಣ ವಾಹಿನಿ ಪ್ರೇಕ್ಷಕರು ಪ್ರೋಮೋವನ್ನು ಇಷ್ಟ ಪಟ್ಟಿದ್ದು, ಧಾರಾವಾಹಿಯನ್ನು ನೋಡಲು ಕುತೂಹಲಗೊಂಡಿದ್ದಾರೆ.

More from Filmibeat

English summary
Star suvarna Kaveri Kannada Medium new Serial Launched soon. Here is the details about New promo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X