ಗುಲ್ಬರ್ಗಾದ ಪ್ರಿಯಾಂಕಾ ಚಿಂಚೋಳಿ ನಟಿ ಆದ ಆಸಕ್ತಿಕರ ಪಯಣ

By ಪ್ರಿಯಾ ದೊರೆ

ಪೌರಾಣಿಕ ಪಾತ್ರಗಳಿಂದ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕ ಚಿಂಚೋಳಿಗೆ ಈಗಲೂ ಪೌರಾಣಿಕ ಪಾತ್ರಗಳೆಂದರೆ ಬಹಳ ಇಷ್ಟವಂತೆ. ಆದರೆ ಪಶುವೈದ್ಯೆ ಆಗುವ ಕನಸು ಕಂಡಿದ್ದ ಗುಳಿಕೆನ್ನೆ ರಾಣಿ, ಅದು ಹೇಗೋ ನಟನೆಯ ಹಾದಿಯನ್ನು ಹಿಡಿದು ಬಿಟ್ಟರು. ಆದರೆ ಗುಲ್ಬರ್ಗಾದಿಂದ ಬೆಂಗಳೂರಿಗೆ ಬಂದು ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಅವರ ದಾರಿ ಸುಲಭವಾಗಿರಲಿಲ್ಲ.

ಓದಲು ಬೆಂಗಳೂರಿಗೆ ಬಂದು ಪ್ರಿಯಾಂಕಾ ಮಾಡೆಲ್ ಆದರು. ಮಾಡೆಲಿಂಗ್ ಲೋಕದಲ್ಲಿ ಮಿಂಚಿ ಗೆದ್ದ ಪ್ರಿಯಾಂಕಾ ಚಿಂಚೋಳಿ ಈಗ ಪ್ರೇಕ್ಷಕರ ನೆಚ್ಚಿನ ನಟಿ. ಪೌರಾಣಿಕ ಪಾತ್ರಗಳಿಗೂ ಸೈ, ಸಾಮಾಜಿಕ, ಕೌಟುಂಬಿಕ ಪಾತ್ರಗಳಿಗೂ ಜೈ ಎನ್ನುತ್ತಾರೆ ಪ್ರಿಯಾಂಕಾ ಚಿಂಚೋಳಿ.

ಬೆಳೆಯುತ್ತಿರುವ ಪ್ರತಿಭೆ ಪ್ರಿಯಾಂಕಾ ಚಿಂಚೋಳಿ ಇತ್ತೀಚೆಗಷ್ಟೆ ರಾಕೇಶ್ ಎಂಬುವರನ್ನು ಮದುವೆಯಾಗಿದ್ದಾರೆ. ಅವರೇನಾದರೂ ಬೆಂಗಳೂರಿಗೆ ಬಂದು ನಟನೆಯನ್ನು ಆರಿಸಿಕೊಂಡಿರಲಿಲ್ಲ ಎಂದಿದ್ದರೆ ಮನೆಯಲ್ಲಿ ಯಾವಾಗಲೋ ಮದುವೆ ಮಾಡುತ್ತಿದ್ದರು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇನ್ನು ಅವರ ಕಿರುತೆರೆ ಹಾಗೂ ಸಿನಿ ಜರ್ನಿ ಬಗ್ಗೆ ತಿಳಿಯೋಣ ಬನ್ನಿ...

ಪ್ರಿಯಾಂಕಾ ಮುಡಿಗೆ ಮಿಸ್ ಕರ್ನಾಟಕ ಕಿರೀಟ

ಪ್ರಿಯಾಂಕಾ ಮುಡಿಗೆ ಮಿಸ್ ಕರ್ನಾಟಕ ಕಿರೀಟ

ಪ್ರಿಯಾಂಕಾ ಚಿಂಚೋಳಿ ಅವರು ಮೂಲತಃ ಗುಲ್ಬರ್ಗಾದವರು. ಅಲ್ಲಿಯೇ ಪ್ರಿಯಾಂಕಾ ಅವರು ಮನೆ, ಪೂರ್ವಜರ ಆಸ್ತಿ ಇದೆ. ಪ್ರಿಯಾಂಕಾರ ತಂದೆ ಚಿಕ್ಕವಯಸ್ಸಿನಲ್ಲೇ ತೀರಿಕೊಂಡಿದ್ದಾರೆ. ಅಮ್ಮನ ಆರೈಕೆಯಲ್ಲಿ ಬೆಳೆದ ಮಗಳು ಈಕೆ. ಬಿಸಿಎ ಓದಿರುವ ಪ್ರಿಯಾಂಕಾ ಎಂಟೆಕ್ ಅನ್ನು ಮೂರನೇ ಸೆಮಿಸ್ಟರ್ ವರೆಗೂ ಮುಗಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಿರೂಪಣೆ ಮಾಡಿದ್ದ ಪ್ರಿಯಾಂಕಾ ಅವರು ಬಂಗಳೂರಿಗೆ ಬಂದಿದ್ದರು. ಇಲ್ಲಿ ಮಾಡೆಲಿಂಗ್ ಲೋಕಕ್ಕೆ ಹೆಜ್ಜೆ ಇಟ್ಟರು. ಆಗ 2011ರಲ್ಲಿ ಮಿಸ್ ಗುಲ್ಬರ್ಗಾ ಸ್ಪರ್ಧೆಯಲ್ಲಿ ಗೆದ್ದರು. ನಂತರದ ದಿನಗಳಲ್ಲಿ ಅಂದರೆ 2013ರಲ್ಲಿ ಮಿಸ್ ವಿವೆಲ್ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಮರು ವರ್ಷ 2014ರಲ್ಲಿ ಮಿಸ್ ಕರ್ನಾಟಕ ಆದರು. ನಂತರ 2017ರಲ್ಲಿ ಪ್ರಿಯಾಂಕಾ ಅವರು ವಿವೇಕ್ ಮಿಸ್ ಸೌತ್ ಇಂಡಿಯಾ ಆಗಿ ಹೊರಹೊಮ್ಮಿದರು.

ಹರ ಹರ ಮಹಾದೇವ ಎಂದ ಚಿಂಚೋಳಿ

ಹರ ಹರ ಮಹಾದೇವ ಎಂದ ಚಿಂಚೋಳಿ

ಹೀಗೆ ಮಾಡೆಲಿಂಗ್ ನಲ್ಲಿದ್ದ ಚಿಂಚೋಳಿ ಅವರಿಗೆ ಮಜಾ ಟಾಕೀಸ್ ನಲ್ಲಿ ನಟಿಸುವ ಆಸೆ ಇತ್ತು. ಆಗ ಸ್ನೇಹಿತರೊಬ್ಬರು ಹರ ಹರ ಮಹಾದೇವ ಧಾರಾವಾಹಿಯ ಆಡಿಷನ್ ನಲ್ಲಿ ಸ್ಪರ್ಧಿಸುವಂತೆ ಹೇಳಿದರು. ಗುಲ್ಬರ್ಗಾ ಕನ್ನಡ ಮಾತನಾಡುತ್ತಿದ್ದ ಪ್ರಿಯಾಂಕಾ ಅವರಿಗೆ ಸ್ಪಷ್ಟ ಕನ್ನಡ ಬರುತ್ತಿರಲಿಲ್ಲ. ಜೊತೆಗೆ ನಟನೆಯೂ ಸಹ ಗೊತ್ತಿರಲಿಲ್ಲ. ಆಯ್ಕೆ ಆಗೋದಿಲ್ಲ ಎಂದು ಕೊಂಡಿದ್ದರು. ಆದರೆ ನೂರು ಜನರಲ್ಲಿ ಸತಿ ಪಾತ್ರಕ್ಕೆ ಆಯ್ಕೆ ಆಗಿದ್ದೇ ಪ್ರಿಯಾಂಕಾ ಚಿಂಚೋಳಿ. ಮೊದಮೊದಲು ಧಾರಾವಾಹಿಯಲ್ಲಿ ನಟಿಸಲು ಹಾಗೂ ಡೈಲಾಗ್ ಹೇಳಲು ಪರದಾಡುತ್ತಿದ್ದರು. ನಂತರ ಎಲ್ಲವನ್ನೂ ಸಲೀಸಾಗಿ ಕಲಿತ ಪ್ರಿಯಾಂಕಾ ಅವರ ಪಾರ್ವತಿ ವೇಷ ಕಂಡು ಅವರ ತಾಯಿ ಖುಷಿ ಪಟ್ಟಿದ್ದರಂತೆ.

ಅಂಜನಾ ದೇವಿಯಾಗಿ ಮನಸು ತುಂಬಿದ ಗುಲ್ಬರ್ಗಾ ಬೆಡಗಿ

ಅಂಜನಾ ದೇವಿಯಾಗಿ ಮನಸು ತುಂಬಿದ ಗುಲ್ಬರ್ಗಾ ಬೆಡಗಿ

ಹರ ಹರ ಮಾದೇವ ಧಾರಾವಾಹಿ ಮೂಲಕ ಪ್ರೇಕ್ಷಕರ ಮನ ಗೆದ್ದ ಪ್ರಿಯಾಂಕಾ ಚಿಂಚೋಳಿ ಅವರಿಗೆ ನಂತರ ಸಿಕ್ಕ ಪಾತ್ರ ಅಂಜನಾ ದೇವಿ. ಜೈ ಹನುಮಾನ್ ಧಾರಾವಾಹಿಯಲ್ಲಿ ಅಂಜನಾ ದೇವಿ ಪಾತ್ರಕ್ಕೆ ಪ್ರಿಯಾಂಕಾ ಅವರು ಬಣ್ಣ ಹಚ್ಚಿದ್ದರು. ಕಿರುತೆರೆಗೆ ಪಾದಾರ್ಪಣೆ ಮಾಡಿದ ಕೂಡಲೇ ಬ್ಯಾಕ್ ಟು ಬ್ಯಾಕ್ ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಇವರಿಗೆ ಮನಸಾರೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿ ಬಂತು. ಮನಸಾರೆ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ಪ್ರಿಯಾಂಕಾ ಚಿಂಚೋಳಿ ಅವರಿಗೆ ಪೌರಾಣಿಕ ಪಾತ್ರಗಳೇ ಇಷ್ಟವಂತೆ. ಪಾರ್ವತಿ ಹಾಗೂ ದ್ರೌಪದಿ ಪಾತ್ರ ಮಾಡುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಸದ್ಯ ಪ್ರಿಯಾಂಕಾ ಚಿಂಚೋಳಿ ಅವರು ಮನಸೆಲ್ಲಾ ನೀನೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಪ್ರಿಯಾಂಕಾ

ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಪ್ರಿಯಾಂಕಾ

ಇನ್ನು ಪ್ರಿಯಾಂಕಾ ಚಿಂಚೋಳಿ ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಮಯದ ಗೊಂಬೆ, ಜೀವನದ ಜೋಕಾಲಿ, ಕೌಟಿಲ್ಯ, ರೆಮೋ ಹಾಗೂ ಅಲೆವ ಮೋಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲೆವ ಮೋಡ ಚಿತ್ರದಲ್ಲಿ ಪ್ರಿಯಾಂಕಾ ಚಿಂಚೋಳಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಲವು ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಹೊತ್ತಿರುವ ಮಹಾತ್ವಾಕಾಂಕ್ಷಿ ಪ್ರಿಯಾಂಕಾ ಚಿಂಚೋಳಿ.

More from Filmibeat

English summary
Star Suvarna Manasella Neene serial actress Priyanka Chincholi marriage education family and other things.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X