Neenadhe Naa Serial:ವೇದಾಳನ್ನು ತವರು ಮನೆಯಲೇ ಬಿಡಲು ಹೊರಟ ಮಾವ-ಗಂಡ.. ಮುಂದೇನಾಯ್ತು?
ವೇದಾಳದ್ದು ತಾನು ನಂಬಿರುವಂತ ಸಿದ್ಧಾಂತದ ಮೇಲೆಯೆ ಬದುಕಬೇಕೆಂಬ ಹಠ. ಅವಳ ಬದುಕು ನಡೆಯುತ್ತಿರುವುದು ಕೂಡ ಹಾಗೆ. ಅದಕ್ಕಾಗಿಯೇ ಗಂಡನ ಮನೆಯಲ್ಲಿಯೇ ವಾಸ ಮಾಡುತ್ತಿದ್ದಾಳೆ. ಈಗಾಗಲೇ ಗಂಡನ ಮನೆಯವರು ಕೂಡ ಅದನ್ನು ಸ್ವೀಕರಿಸಿದ್ದಾರೆ. ಅತ್ತೆಯಂತು ಸೊಸೆಯೆಂದು ಒಪ್ಪಿಕೊಂಡು ಆಗಿದೆ. ಮನೆಯ ಹಿರಿ ಸೊಸೆ ಕೂಡ ತಂಗಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾಳೆ.
ಇದೆಲ್ಲದ ನಡುವೆ ಕೋಳಿ ಜಗಳ ಮಾಡಿಕೊಳ್ಳುವ ವಿಕ್ರಾಂತ್ - ವೇದಾ ನಡುವಲ್ಲಿ ಗೊತ್ತಿಲ್ಲದೇ ಪ್ರೀತಿ ಚಿಗುರಿ ಆಗಿದೆ. ಆದರೆ, ಅದು ಅರಿವಿಗೆ ಬರುತ್ತಿಲ್ಲ. ಮೇಷ್ಟ್ರ ಮನೆಗೆ ಬೆಸ್ಟ್ ಸೊಸೆ ಎಂಬುದನ್ನು ವೇದಾ ನಿರೂಪಿಸಿ ಆಗಿದೆ. ವಿಕ್ರಾಂತ್ ಸಮಸ್ಯೆಯಲ್ಲಿ ಸಿಲುಕಿದಾಗೆಲ್ಲಾ ಕಾಪಾಡಿದ್ದು, ಮನೆಯ ಮರ್ಯಾದೆ ಉಳಿಸಿದ್ದು ಇದೇ ವೇದಾ. ಆದರೆ, ಇಂದು ಮಾವನ ಮನೆಯವರು ನಡೆದುಕೊಳ್ಳುತ್ತಿರುವುದೇ ಬೇರೆ.

ಮಗಳೆಂದರೆ ಈಗಲೂ ಒಲವು ಹೆಚ್ಚು
ವೇದಾಳ ತವರು ಮನೆಯಲ್ಲಿ ವೇದಾಳಿಗೆ ಸ್ಪೆಷಲ್ ಪ್ರೀತಿ ಇದೆ. ಮಗಳೆಂದರೆ ಎಲ್ಲರಿಗೂ ಪ್ರೀತಿಸ. ಬರೀ ತಂದೆಯ ಪ್ರೀತಿ ಅಷ್ಟೇ ಅಲ್ಲ, ಅಣ್ಣನಿಗೂ ತಂಗಿಯೆಂದರೆ ಪ್ರೀತಿ. ಅವಳಿದ್ದರೆ ಮನೆಗೆ ಕಳೆ ಜಾಸ್ತಿಯಾಗುತ್ತೆ ಎಂದೇ ಎಲ್ಲರೂ ನಂಬಿದ್ದಾರೆ. ಆದರೆ, ವೇದಾ ಮದುವೆಯಾಗಿ, ಗಂಡನ ಮನೆ ಸೇರಿದ ಮೇಲೆ ಅಪ್ಪ ಮತ್ತು ಅಣ್ಣ ಬೇಸರದಲ್ಲಿಯೇ ಇದ್ದಾರೆ. ಯಾಕೆಂದರೆ, ವೇದಾಳ ಮದುವೆ ತಮ್ಮಿಷ್ಟದಂತೆ ನಡೆದಿಲ್ಲ ಎಂಬುದಕ್ಕೆ ಎಲ್ಲರಿಗೂ ಕೋಪವಿದೆ.
ಸಂತಸದಿಂದ ಗಣೇಶ ಹಬ್ಬ ಮಾಡಿದ ಕುಟುಂಬ
ವೇದಾಳ ಶ್ರೀಮಂತಿಕೆಯನ್ನು ಸ್ವೀಕರಿಸುವುದಕ್ಕೆ ಮೇಷ್ಟ್ರಿಗೆ ಇಷ್ಟವಿರಲಿಲ್ಲ. ಆದರೆ, ಈ ಬಾರಿಯ ಗಣೇಶ ಹಬ್ಬಕ್ಕೆ ಎಲ್ಲರೂ ಮನೆಗೆ ಬಂದಿದ್ದಾರೆ. ಪ್ರತಿ ವರ್ಷ ಗಣೇಶನ ಹಬ್ಬದಲ್ಲಿ ವೇದಾಳ ಜೊತೆಗೆ ಹಬ್ಬ ಆಚರಿಸುತ್ತಿದ್ದರು. ಈ ಬಾರಿ ಮಗಳು ಇಲ್ಲ ಎನ್ನುವ ಬೇಸರ ಕಳೆದದ್ದು ಮೇಷ್ಟ್ರು. ವೇದಾಳ ಮನೆಯಲ್ಲಿಯೇ ಹಬ್ಬ ಆಚರಣೆ ಮಾಡುವುದಕ್ಕೆ ಓಕೆ ಎಂದರು. ಇಡೀ ಮನೆಯವರೆಲ್ಲಾ ವೇದಾಳ ಮನೆಗೆ ಹೋಗಿ ಹಬ್ಬ ಆಚರಣೆ ಮಾಡಿದ್ದಾರೆ. ಸಂತಸದಿಂದ ಗಣೇಶನನ್ನು ಬರ ಮಾಡಿಕೊಂಡಿದ್ದಾರೆ.

ವೇದಾಳನ್ನು ವಾಪಾಸ್ ನೀಡಿದ ಮೇಷ್ಟ್ರು
ವೇದಾಳ ಮನೆಯಿಂದ ಎಲ್ಲಾ ಹಬ್ಬ ಮುಗಿಸಿ ಹೊರಡುವಾಗ ಉಡುಗೊರೆಯನ್ನು ನೀಡಲು ಬಂದರು. ಆದರೆ ಮೇಷ್ಟ್ರು, ಅವರಿಗೆ ಅದ್ಭುತವಾದ ಗಿಫ್ಟ್ ನೀಡಿದ್ದರು. ನಿಮ್ಮ ಖುಷಿಯನ್ನ ನಿಮ್ಮ ಮನೆಯಲ್ಲಿಯೇ ಬಿಟ್ಟು ಹೋಗುತ್ತೀವಿ ಅಂತ ಹೇಳಿ ವೇದಾಳ ಮನೆಯವರಿಗೆ, ವೇದಾ, ಅತ್ತೆ, ಅಕ್ಕನಿಗೆ ಶಾಕ್ ನೀಡಿದ್ದರು. ವಿಕ್ರಾಂತ್ ಕೂಡ ಮಾವನ ಬಳಿ ಅದನ್ನೇ ಹೇಳಿದ. 'ನನ್ನ ಜೊತೆಗಿದ್ದರೆ ವೇದಾ ಅಷ್ಟು ಸಂತೋಷವಾಗಿರಲ್ಲ. ಇಲ್ಲಿಯೇ ಇರಲಿ. ಅವಳ ಮುಂದಿನ ಜೀವನ ಚೆನ್ನಾಗಿರಲಿ' ಎಂದಿದ್ದಾನೆ.
ಮಾವನಿಗೆ ಪ್ರಶ್ನಿಸಿದ ವೇದಾ?
ವೇದಾಳನ್ನು ತಂದೆಯ ಕೈಗೆ ಒಪ್ಪಿಸಿ ಮೇಷ್ಟ್ರು ಹೊರಡುವುದಕ್ಕೆ ಹೋದಾಗ, ನೋವಿನ ಕಟ್ಟೆ ವೇದಾಳಿಂದ ಹೊಡೆದಿತ್ತು. "ಮುಗೀತಾ ನಿಮ್ಮ ವ್ಯಾಪಾರ ವ್ಯವಹಾರ. ನನ್ನ ವಿಚಾರವನ್ನ ಯಾರನ್ನ ಕೇಳಿ ಮಾತನಾಡುತ್ತಿದ್ದೀರಿ" ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ಮಾವ,"ನನ್ನ ಮನೆಗೆ ನೀನು ಯಾರನ್ನ ಕೇಳಿ ಬಂದೆ" ಎಂದಾಗ, ವೇದಾ, "ಈಗಲೂ ಯಾರನ್ನು ಕೇಳದೇ ಬರುತ್ತೀನಿ. ಅದು ನನ್ನ ಮನೆ ಕ್ಷಮೆ ಇರಲಿ, ನೀವೇ ಹೇಳಿದಂತೆ ಇಷ್ಟು ತಿಂಗಳು ನಾನು ನಿಮ್ಮ ಮನೆಯಲ್ಲಿದ್ದೀನಿ. ಊರವರೆಲ್ಲಾ ನನ್ನನ್ನು ಏನಂತ ಕರೆಯುತ್ತಾರೆ ಮಾವ" ಎಂದು ವೇದಾ ಕೇಳಿದರೆ ಮೇಷ್ಟ್ರ ಬಳಿ ಉತ್ತರವಿಲ್ಲ.


Click it and Unblock the Notifications











