Avanu matte shravani: 'ಅವನು ಮತ್ತೆ ಶಾವಣಿ' ಆರಂಭ.. ಇದರಲ್ಲಿರೋ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್‌ಗಳಿವರೇ..!
ಸ್ಟಾರ್ ಸುವರ್ಣದಲ್ಲಿ ಹೊಸದೊಂದು ಧಾರಾವಾಹಿ ಶುರುವಾಗುತ್ತಿದೆ. ಇಷ್ಟು ದಿನ ಧಾರಾವಾಹಿ ಪ್ರಿಯರಷ್ಟೇ ನೋಡುತ್ತಿದ್ದರು. ಆದರೆ, ಇನ್ನು ಮುಂದೆ ಶ್ವಾನ ಪ್ರಿಯರು ಕೂಡ ಟಿವಿ ಮುಂದೆ ಕುಳಿತುಕೊಳ್ಳುವಂತೆ ಮಾಡುತ್ತಿದೆ 'ಅವನು ಮತ್ತೆ ಶ್ರಾವಣಿ'. ಈ ಹಿಂದೆ ಇದೇ ಹೆಸರಿನಲ್ಲಿ ಧಾರಾವಾಹಿ ಬಂದಿದ್ದರು, ಈ ಬಾರಿ ಕಥೆಯೇ ಬೇರೆ ರೀತಿಯದ್ದಾಗಿದೆ.
ನಾಯಿ ಮರಿಯಿಂದ ಶುರುವಾದ ಪ್ರೀತಿ, ನಾಯಿ ಮರಿಗಾಗಿಯೇ ಒಂದಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ. ಅಪ್ಪ ಅಮ್ಮನ ಜಗಳದಲ್ಲಿ ಮಗು ಬಡವಾಯ್ತು ಎಂಬಂತೆ, ಇಲ್ಲಿಯೂ ಅಪ್ಪ ಅಮ್ಮನ ಡಿವೋರ್ಸ್‌ನಲ್ಲಿ ನಾಯಿ ಮರಿ ಬಡವಾಗಿದೆ. ಇದನ್ನು ಈಗಾಗಲೇ ಪ್ರೋಮೋದಲ್ಲಿ ನೋಡಿದ್ದೀರಿ. ಇದೀಗ ಮನೆಯವರ ಪರಿಚಯವಾಗುತ್ತಿದೆ.

ಶ್ರಾವಣಿ ಮನೆಯಲ್ಲಿ ಯಾರೆಲ್ಲಾ ಇದ್ದಾರೆ
ನಿಶಿತಾ.. ಶ್ರಾವಣಿಯ ದೊಡ್ಡಪ್ಪನ ಮಗಳು. ಹೆಸರಿಗೆ ಮಿಡಲ್ ಕ್ಲಾಸ್.. ಆದರೆ ಬದುಕುವುದು ಹೈಕ್ಲಾಸ್. ಏನೇ ತೆಗೆದುಕೊಂಡರು ಫಸ್ಟ್ ಹ್ಯಾಂಡ್ ಬೇಕು. ಸೆಕೆಂಡ್ ಹ್ಯಾಂಡ್ ಕಡೆ ಮುಖ ಕೂಡ ಹಾಕಲ್ಲ. ಹುಡುಗ ನೋಡುವುದಕ್ಕೆ ಚೆನ್ನಾಗಿದ್ದಾನೆ, ವೆಲ್ ಸೆಟಲ್ಡ್. ನನ್ನ ಲೈಫ್ ಸೆಟಲ್ ಆಗುತ್ತೆ ಎಂಬ ಕಾರಣಕ್ಕೆ ಮದುವೆಗೆ ಒಪ್ಪಿಕೊಂಡಿದ್ದಾಳೆ. ಆ ಹುಡುಗನೇ ಶ್ರಾವಣಿಯ ಹುಡುಗ.
ಶ್ರಾವಣಿ ಮನೆಯಲಿದ್ದಾರೆ ಮುದ್ದಿನಮಣಿಗಳು
ಬಿಂದು.. ಶ್ರಾವಣಿಯ ದೊಡ್ಡಪ್ಪನ ಒಳ್ಳೆಯ ಸೊಸೆ. ವರದನ ಹೆಂಡತಿ.. ಇಬ್ಬರದ್ದು ಲವ್ ಮ್ಯಾರೇಜ್. ಮಿಡಲ್ ಕ್ಲಾಸ್ ಹುಡುಗಿಯಾಗಿರುವ ಬಿಂದುಗೆ ಫ್ಯಾಮಿಲಿ ಬಗ್ಗೆ ಕಾಳಜಿ ಜಾಸ್ತಿ. ಇನ್ನು ಇದೇ ಮನೆಯಲ್ಲಿ ಶ್ರಾವಣಿಯ ಮುದ್ದಾದ ತಮ್ಮನಿದ್ದಾನೆ. ಅವನೇ ಅಮೇಯ. ಅಕ್ಕನ ಮುದ್ದಿನ ತಮ್ಮ, ಮನೆಯವರಿಗೆಲ್ಲಾ ಮುದ್ದಿನ ಮಗ. ಓದು ಮುಗಿದಿದೆ. ಈಗ ಕೆಲಸ ಹುಡುಕುತ್ತಿದ್ದಾನೆ. ಶ್ರಾವಣಿಗೆ ದೊಡ್ಡಪ್ಪನೇ ಎಲ್ಲಾ. ದೊಡ್ಡಪ್ಪನೇ ಈಕೆಯನ್ನು ನೋಡಿಕೊಂಡಿರುವುದು. ಹೀಗಾಗಿ ನಿಶ್ಚಿತಾ, ಬಿಂದು, ವರದಾ, ಅಮೇಯ ಅಂದರೆ ಶ್ರಾವಣಿಗೆ ಪ್ರೀತಿ, ಗೌರವ ಜಾಸ್ತಿ. ಹಲವು ವರ್ಷಗಳಿಂದ ಇಂಡಿಯಾಗೆ ಬಂದಿಳಿದಿದ್ದಾಳೆ. ಇಲ್ಲಿಂದಾನೇ ಶುರುವಾಗುವುದು ಶ್ರಾವಣಿಯ ಹಳೇ ಜೀವನದ ನೆನಪು, ಅಭಿಮನ್ಯು ಹೊಸ ಜೀವನದ ಗೊಂದಲ.
ಅಭಿಮನ್ಯು ಮನೆಯಲ್ಲಿ ಯಾರೆಲ್ಲಾ ಇದ್ದಾರೆ
ಚೀಕು ಸದ್ಯಕ್ಕೆ ಅಪ್ಪ ಅಭಿಮನ್ಯು ಮನೆಯಲ್ಲಿಯೇ ಇದೆ. ಅಲ್ಲಿ ವಿಕ್ಕಿ ಅಂತ ಒಬ್ಬ ಇದ್ದಾನೆ. ಅವನು ಸಂಯುಕ್ತ ಅತ್ತೆ ಮಗ. ವಿಚಿತ್ರವಾದ ಕ್ಯಾರೆಕ್ಟರ್. ಚೀಕುಗೂ ವಿಕ್ಕಿಗೂ ಯಾವುದೇ ಜಗಳ ಇಲ್ಲ. ಆದರೂ ಚೀಕು ಏನೇ ಮಾಡಿದರೂ ಆಗಲ್ಲ. ಸಿಡ ಸಿಡ ಅಂತಾ ಇರುತ್ತಾನೆ. ಆದ್ಯನಿಗೆ ಯಾವಾಗಲೂ ಬೈಯ್ಯುವ ವಿಕ್ಕಿ, ಅಭಿ ಮುಂದೆ ಸೈಲೆಂಟ್ ಬಾಯ್.

ಅಭಿಗೆ ಯಾರಿಷ್ಟ..?
ಸಂಯುಕ್ತಾ.. ಅಭಿಯ ಸೋದರತ್ತೆ. ತುಂಬಾ ಒಳ್ಳೆಯ ಮನಸ್ಸಿರುವ ಮಹಿಳೆ. ಚೀಕುನನ್ನು ಸ್ಚಂತ ಮಗನಂತೆಯೇ ನೋಡಿಕೊಳ್ಳುತ್ತಾರೆ. ಅಭಿಮನ್ಯುಗೆ ಸಂಯುಕ್ತಾ ಎಂದರೆ ಎಷ್ಟು ಇಷ್ಟವೋ, ಚೀಕುಗು ಅಷ್ಟೇ ಇಷ್ಟ. ಅಭಿಗೆ ಅಪ್ಪ-ಅಮ್ಮ ಎಲ್ಲ ಸಂಯುಕ್ತಾನೇ ಆಗಿದ್ದಾರೆ. ಸಂಯುಕ್ತಾ ಹೇಳದೆ ಅಭಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ಸಂಯುಕ್ತಾ ಗಂಡ, ಕಲ್ಯಾಣ್. ಯಾವಾಗಲೂ ವೈಟ್ ಅಂಡ್ ವೈಟ್‌ನಲ್ಲಿರುವ ಇವರು, ತುಂಬಾ ಸ್ಮಾರ್ಟ್ ಫೆಲೋ. ಇಡೀ ಮನೆಯನ್ನು ಕಂಟ್ರೋಲ್ ಮಾಡುವ ಪ್ರಯತ್ನದಲ್ಲಿರುತ್ತಾರೆ. ಇವರಿಲ್ಲದೆ ಯಾವ ಕೆಲಸವೂ ಆಗಲ್ಲ. ಹೊರಗೆ ಹೇಗೆ ಇರಲಿ, ಮನೆಯ ಒಳಗೆ, ಹೆಂಡತಿ ಮುಂದೆ ಒಳ್ಳೆಯತನವನ್ನೇ ಮೆಂಟೈನ್ ಮಾಡ್ತಾರೆ. ಹೀಗೆ ಶ್ರಾವಣಿ ಹಾಗೂ ಅಭಿಮನ್ಯು ಮನೆಯಲ್ಲಿ ಇರುವವರ ಪರಿಚಯ ಸ್ಟಾರ್ ಸುವರ್ಣದಲ್ಲಿ ಶುರುವಾಗಿದೆ.


Click it and Unblock the Notifications











