ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ: 'ನಾಗರಪಂಚಮಿ' 'ಕಾವೇರಿ ಕನ್ನಡ ಮೀಡಿಯಂ'
ಸ್ಟಾರ್ ಸುವರ್ಣದಲ್ಲಿ ಈಗಾಗಲೇ ಹಲವು ಧಾರಾವಾಹಿಗಳು ಮನರಂಜನೆ ನೀಡುತ್ತಿವೆ. ಈಗ ಆ ಸಾಲಿಗೆ ಹೊಸ ಧಾರಾವಾಹಿಗಳ ಸೇರ್ಪಡೆಯೂ ಆಗುತ್ತಿದೆ. ವಿಭಿನ್ನ ಕಥೆಗಳನ್ನೊಳಗೊಂಡ ಧಾರಾವಾಹಿಗಳಿಗೆ ಜನ ಮೆಚ್ಚುಗೆ ನೀಡುತ್ತಿದ್ದಾರೆ. ಹೊಸದಾಗಿ ಸೇರ್ಪಡೆಯಾಗುತ್ತಿರುವ ಧಾರಾವಾಹಿ ಕೂಡ ಮತ್ತಷ್ಟು ವಿಭಿನ್ನತೆಯನ್ನು ಹೊಂದಿದೆ.
ಪೌರಾಣಿಕ ಧಾರಾವಾಹಿಗಳಾದ 'ರೇಣುಕಾ ಯಲ್ಲಮ್ಮ', 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ', ತಂದೆ ಮಗಳ ಬಾಂಧವ್ಯ ಸಾರುವ 'ನಮ್ಮ ಲಚ್ಚಿ', ಕೌಟುಂಬಿಕ ಕಥೆಯನ್ನು ಸಾರುವ 'ಕಥೆಯೊಂದು ಶುರುವಾಗಿದೆ'. 'ರಾಣಿ' ಹೀಗೆ ಹಲವು ಧಾರಾವಾಹಿಗಳು ಕಣ್ಮನ ಸೆಳೆಯುತ್ತಿವೆ. ಅದರ ಜೊತೆಗೆ ಈಗ ನಾಗದೇವತೆ, ಕನ್ನಡದ ಬಗೆಗಿನ ಧಾರಾವಾಹಿ ಸೇರ್ಪಡೆಯಾಗುತ್ತಿದೆ.

ಹೊಸ ಧಾರಾವಾಹಿಗಳನ್ನು ನೋಡಲು ರೆಡಿಯಾಗಿ
ಇದು ಕಿರುತೆರೆ ಜಗತ್ತು. ಕಿರುತೆರೆಯಲ್ಲಿ ಒಳ್ಳೊಳ್ಳೆ ಧಾರಾವಾಹಿಗಳು ಜನರನ್ನು ಆಕರ್ಷಣೆ ಮಾಡುತ್ತಿವೆ. ಒಂದಕ್ಕಿಂತ ಒಂದು ಅದ್ಭುತವಾಗಿದೆ. ವೈಭವೀಕರಣ ಹೆಚ್ಚಾಗಿದೆ. ಶ್ರೀಮಂತಿಕೆಯ ಧಾರಾವಾಹಿಗಳು ಹೆಚ್ಚಾಗಿದೆ. ಧಾರಾವಾಹಿಗಳ ಲೋಕದಲ್ಲಿಯೇ ಕಾಂಪಿಟೇಷನ್ ಜಾಸ್ತಿಯಾಗಿದೆ. ಹೀಗಿರುವಾಗ ಹೊಸ ಹೊಸ ಆವಿಷ್ಕಾರಗಳು ಜಾಸ್ತಿಯಾಗುತ್ತಲೇ ಇರಬೇಕಾಗಿದೆ. ಅದಕ್ಕೆ ಸ್ಟಾರ್ ಸುವರ್ಣ ಕೈ ಹಾಕಿದೆ. ಇಂದು ಅಂತಾನೇ ಅಲ್ಲ. ಮೊದಲಿನಿಂದಲೂ ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡು, ಧಾರಾವಾಹಿಗಳ ಪ್ರಯೋಗ ಮಾಡುತ್ತಿದೆ. ಆಗಾಗ ಸ್ಟಾರ್ ಸುವರ್ಣದಲ್ಲಿ ಧಾರಾವಾಹಿಗಳು ಹುಟ್ಟಿಕೊಳ್ಳುತ್ತವೆ. ಬದಲಾವಣೆಗಳು ಕಾಣುತ್ತವೆ. ಕೆಲವೊಂದು ಸಲ ಕಥೆ ಸರಿಯಾಗಿ ರೀಚ್ ಆಗದೆ ಇದ್ದಲ್ಲಿ, ನಿಲ್ಲಿಸಿರುವ ಉದಾಹರಣೆಗಳು ಇದೆ. ಇದೀಗ ಹೊಸದಾಗಿ ಧಾರಾವಾಹಿಗಳು ಸೇರ್ಪಡೆಯಾಗಿದೆ.
'ನಾಗಪಂಚಮಿ' ಧಾರಾವಾಹಿ ಆರಂಭ
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಅರ್ಧಾಂಗಿ' ಧಾರಾವಾಹಿ ಎಲ್ಲರಿಗೂ ನೆನಪಿದ್ದೆ ಇರುತ್ತೆ. ಅದರಲ್ಲಿ ಆಕ್ಸಿಡೆಂಟ್‌ನಿಂದ ನೆನಪಿನ ಶಕ್ತಿಯನ್ನೆಲ್ಲಾ ಕಳೆದುಕೊಂಡಿದ್ದ ಗಂಡನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದ ಹೆಣ್ಣಿನ ಕಥೆ. ಆ ಧಾರಾವಾಹಿ ಹಾಗೂ ಕ್ಯೂಟ್ ಹೀರೋನಾ ಎಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದರು. ಯಾಕಂದ್ರೆ, ಆ ಧಾರಾವಾಹಿ ಅರ್ಧಕ್ಕೆ ನಿಂತಿತ್ತು. ಆದರೆ, ಈಗ ಮತ್ತೆ ಆ ಹೀರೋ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ 'ನಾಗರಪಂಚಮಿ' ಧಾರಾವಾಹಿ. ಭೂಲೋಕದಲ್ಲಿ ಹಾವುಗಳ ಕೊಲ್ಲುವ ವ್ಯಕ್ತಿಗೆ ನಾಗಲೋಕಕ್ಕೆ ಸಂಬಂಧಿಸಿದವರೇ ಹೇಗೆ ಕಾವಾಲಾಗಿರುತ್ತಾರೆ ಎಂಬ ಸಂಗತಿ. ಹಾವುಗಳೆಲ್ಲಾ ಒಗ್ಗಟ್ಟಾಗಿ ಬಂದರು, ಪಂಚಮಿ ಆತನನ್ನು ಹೇಗೆ ಕಾಪಾಡುತ್ತಾಳೆ ಎಂಬ ಕಥೆ ಬರುತ್ತಿದೆ.

ಕನ್ನಡ ಕಲಿಸಿಕೊಡಲು ಬರ್ತಿದ್ದಾಳೆ ಕಾವೇರಿ
ಮತ್ತೊಂದು ಧಾರಾವಾಹಿ ಎಂದರೆ ಅದು 'ಕಾವೇರಿ ಕನ್ನಡ ಮೀಡಿಯಂ'. ಕನ್ನಡದ ಉಳಿವಿಗಾಗಿ, ಕನ್ನಡ ಶಾಲೆಗಳ ಉಳುವಿಗಾಗಿ ಶಿಕ್ಷಕಿಯ ಹೋರಾಟದ ಕಥೆ. ಕನ್ನಡ ಶಾಲೆಗಳು ಉಳಿಯಬೇಕೆಂದರೆ ಬೇರೆಯವರ ಷರತ್ತುಗಳಿಗೆ ತಲೆ ಬಾಗಲೇಬೇಕಾದ ಪರಿಸ್ಥಿತಿ ಆ ಶಿಕ್ಷಕಿಗೆ. ಆಂಗ್ಲ ಮಾಧ್ಯಮದ ಶಾಲೆಯ ಹಾವಳಿಯ ಮುಂದೆ ತಮ್ಮ ಕನ್ನಡ ಶಾಲೆ ಉಳಿವಿಕೆಗಾಗಿ ಹೇಗೆ ಹೋರಾಡುತ್ತಾಳೆ ಅನ್ನೋದು. ಪ್ರಿಯಾ ಆಚಾರ್ಯ ಶಿಕ್ಷಕಿಯ ಪಾತ್ರ ಮಾಡಿದ್ದಾರೆ.
ಬದುಕಿನಲ್ಲಿ ಗೆಲುವು ಕಾಣುತ್ತಾಳಾ ಅನುಪಮಾ?
ಅನುಪಮಾಗೆ ವೀಕ್ಷಕರ ಬೆಂಬಲವಿದೆ. ಮನೆ, ಮಕ್ಕಳು, ಸಂಸಾರ ಎಂದು ಕೂತರೆ ಆ ಹೆಣ್ಣು ವೀಕ್ ಅನ್ನೋದಲ್ಲ. ಅವಳಿಂದ ಏನು ಆಗಲ್ಲ ಅನ್ನೋದಲ್ಲ. ಅನುಪಮಾಳನ್ನು ಆಕೆ ಗಂಡ ಅದೇ ರೀತಿ ಕಾಣುವುದು. ಆದರೆ, ಅನುಪಮಾ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು. ಮನೆ, ಸಂಸಾರವನ್ನು ಅಷ್ಟು ಅದ್ಭುತವಾಗಿ ನಿಭಾಯಿಸುವ ಅನುಪಮಾಳಿಗೆ ಮನೆಯ ಹೊರಗಿನ ಕೆಲಸ ಕಷ್ಟವೇನು ಅಲ್ಲ. ಕಾವ್ಯಾ ಮತ್ತು ತನ್ನ ಗಂಡನ ಅಕ್ರಮ ಸಂಬಂಧ ತಿಳಿದ ಮೇಲೆ ಇನ್ನಷ್ಟು ಗಟ್ಟಿಯಾಗಿದ್ದಾಳೆ. ಗಂಡನನ್ನು ವಿರೋಧೊಸಿ, ಬದುಕನ್ನು ಕಟ್ಟಿಕೊಳ್ಳಲು ಹೊರಟಿದ್ದಾಳೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 10.30ಕ್ಕೆ ಅನುಪಮಾ ಬರಲಿದ್ದಾಳೆ.


Click it and Unblock the Notifications











