For Quick Alerts
  ALLOW NOTIFICATIONS  
  For Daily Alerts

  ದಸರಾ ಸಂಭ್ರಮ: ಮೈಸೂರಿನಲ್ಲಿ ಸ್ಟಾರ್ ಸುವರ್ಣದಿಂದ 'ಸುವರ್ಣೋತ್ಸವ'!

  |

  ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿದೆ. ಕಳೆದೊಂದು ವಾರದಿಂದ ನಾಡ ಹಬ್ಬಕ್ಕೆ ಮೈಸೂರು ನಗರ ಸಿಂಗಾರಗೊಂಡಿದೆ. ಮೈಸೂರಿನ ಬೀದಿ ಬೀದಿಗಳು ಜಗಮಗಗೊಳಿಸುತ್ತಿವೆ. ಬಣ್ಣ ಬಣ್ಣದ ದೀಪಗಳಿಂದ ಅಲಂಕಾರಗೊಂಡಿವೆ.

  ಈ ನಾಡ ಹಬ್ಬದಂದೇ ಸ್ಟಾರ್ ಸುವರ್ಣ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಿರೋ ಸ್ಟಾರ್ ಸುವರ್ಣ ದಸರಾ ವೇಳೆನೂ ತನ್ನ ವೀಕ್ಷಕರಿಗೆ 'ಸುವರ್ಣೋತ್ಸವ' ಕಾರ್ಯಕ್ರಮದ ಮೂಲಕ ಮನರಂಜನೆ ನೀಡಲು ಮುಂದಾಗಿದೆ.

  ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!

  ಈಗಾಗಲೇ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ', 'ಜೇನುಗೂಡು', 'ಮರಳಿ ಮನಸಾಗಿದೆ', 'ಬೆಟ್ಟದ ಹೂ' ಅಂತಹ ಧಾರಾವಾಹಿಗಳು ಪ್ರೇಕ್ಷಕರ ಮನಸ್ಸು ಗೆದ್ದಿವೆ. ಹೀಗಾಗಿ ದಸರಾ ಹಬ್ಬಕ್ಕೂ ವೀಕ್ಷಕರಿಗೆ ಮನರಂಜನೆ ನೀಡಲು ಸ್ಟಾರ್ ಸುವರ್ಣ ಮುಂದಾಗಿದೆ. ಈ ಕಾರಣಕ್ಕೆ 'ಸುವರ್ಣೋತ್ಸವ' ಎಂಬ ಕಾರ್ಯಕ್ರಮವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ನಡೆಸುತ್ತಿದೆ.

  ಈ ಅದ್ದೂರಿ ಕಾರ್ಯಕ್ರಮದಲ್ಲಿ ಕಿರುತೆರೆಯ ನೆಚ್ಚಿನ ಅಡುಗೆ ಶೋ 'ಬೊಂಬಾಟ್ ಭೋಜನ' ಖ್ಯಾತಿಯ ಸಿಹಿ ಕಹಿ ಚಂದ್ರು ಭಾಗವಹಿಸಲಿದ್ದಾರೆ. ಇವರೊಂದಿಗೆ 'ಮುದ್ದುಮಣಿಗಳು' ಧಾರಾವಾಹಿ ಖ್ಯಾತಿಯ ಕ್ಯೂಟ್ ಕಪಲ್ ಶಿವು ಹಾಗೂ ದೃಷ್ಟಿ , 'ಬೆಟ್ಟದ ಹೂ' ಧಾರಾವಾಹಿಯ ಹೂವಿ ಪಾತ್ರಧಾರಿ, ಸುನೇತ್ರ ಪಂಡಿತ್, ನಾರಾಯಣ ಸ್ವಾಮಿ ಸೇರಿದಂತೆ ಹಲವು ಕಲಾವಿದರು ಮೈಸೂರಿನ ರಂಜಿಸಲು ಒಂದೇ ವೇದಿಕೆ ಮೇಲೆ ಸೇರುತ್ತಿದ್ದಾರೆ.

  Star Suvarna Organizing Suvarnotsav Program In Mysore On Dasara Festival

  ಇವರೆಲ್ಲರೊಂದಿಗೆ ಹಾಡು, ಹರಟೆ, ಆಟಗಳ ಜೊತೆಗೆ ಮನೋರಂಜನೆಯ ಮಹಾಮೇಳವೇ ನಡೆಯಲಿದೆ. ಸ್ಟಾರ್ ಸುವರ್ಣ ವಾಹಿನಿಯ 'ಸುವರ್ಣೋತ್ಸವ' ಕಾರ್ಯಕ್ರಮವು ಇದೇ ಅಕ್ಟೋಬರ್ 1 ರಂದು ಶನಿವಾರ ಸಂಜೆ 5 ಗಂಟೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮೈಸೂರಿಗರನ್ನು ಸ್ವಾಗತಿಸುತ್ತಿದೆ.

  English summary
  Star Suvarna Organizing Suvarnotsav Program In Mysore On Dasara Festival, Know More.
  Friday, September 30, 2022, 23:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X