ಕುರಿ ಜೊತೆ ಬಂದ ಪ್ರತಾಪನನ್ನು ಕಂಡು ನಗೆಗಡಲಲ್ಲಿ ತೇಲಿದ 'ಕಾಮಿಡಿ ಗ್ಯಾಂಗ್'

By ಎಸ್ ಸುಮಂತ್

ವಾರ ಪೂರ್ತಿ ಕೆಲಸ ಮಾಡಿದ ಮನಸ್ಸುಗಳಿಗೆ ರಿಲೀಫ್ ನೀಡಲು ಸ್ಟಾರ್ ಸುವರ್ಣ ಸಜ್ಜಾಗಿದೆ. ಅದಕ್ಕೆಂದೇ 'ಕಾಮಿಡಿ ಗ್ಯಾಂಗ್' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಅದರಲ್ಲಿ ಮುಖ್ಯಮಂತ್ರಿ ಚಂದ್ರು, ಶೃತಿ ಹರಿಹರನ್, ಕುರಿ ಪ್ರತಾಪ್ ತೀರ್ಪುಗಾರರಾಗಿ ಕುಳಿತಿದ್ದಾರೆ. ತೀರ್ಪು ನೀಡುವುದಷ್ಟೆ ಅಲ್ಲ, ಅವರಿಂದಲೂ ಆಗಾಗ ಕಾಮಿಡಿ ಪಂಚ್ ಹೊರಗೆ ಬರುತ್ತಿರುತ್ತೆ.

ಕುರಿ ಪ್ರತಾಪ್ ಇದ್ದರೆ ಕೇಳಬೇಕಾ ಅಲ್ಲಿ ಕಾಮಿಡಿಗೇನು ಕೊರತೆ ಇರುವುದಿಲ್ಲ. ಜಡ್ಜ್ ಪ್ಲೇಸ್‌ನಲ್ಲಿ ಕುಳಿತು ಸ್ಕಿಟ್ ಹೇಗಿತ್ತು ಹೇಳಪ್ಪ ಅಂದರೂ, ಅಲ್ಲೊಂದು ಪಿಸುಕ್ ಅಂತ ಕಾಮಿಡಿ ಮಾಡಿ ನಕ್ಕು ನಲಿಸುತ್ತಾರೆ. ಇನ್ನು ಮುಖ್ಯಮಂತ್ರಿ ಚಂದ್ರು ಅವರ ವಿಚಾರವೂ ಅಷ್ಟೇ. ಅವರಿರುವಲ್ಲಿ ನಗು ಕಡಿಮೆಯಾಗುವುದಕ್ಕೆ ಸಾಧ್ಯವೇ ಇಲ್ಲ. ಅವರ ಅನುಭವಗಳನ್ನು ಧಾರೆ ಎರೆಯುತ್ತಲೆ ಮನಸ್ಸಿಗೆ ಮುದ ನೀಡುವಂತಹ ಮಾತುಗಳನ್ನು ಆಡುತ್ತಿರುತ್ತಾರೆ. ಅವರೆದುರು ಕುಳಿತವರು ಮೂಕರಾಗಿ ಅವರ ಮಾತು ಕೇಳುವಂತ ಸ್ಥಿತಿ ಆಟೋಮ್ಯಾಟಿಕ್ ನಿರ್ಮಾಣವಾಗಿ ಬಿಡುತ್ತದೆ.

ಬಾಹುಬಲಿ ಪ್ರತಾಪಕ್ಕೆ ನಡುಗಿದ 'ಕಾಮಿಡಿ ಗ್ಯಾಂಗ್'

ಬಾಹುಬಲಿ ಪ್ರತಾಪಕ್ಕೆ ನಡುಗಿದ 'ಕಾಮಿಡಿ ಗ್ಯಾಂಗ್'

'ಕಾಮಿಡಿ ಗ್ಯಾಂಗ್' ಶೋ ಶುರುವಾಗಿ ಸಾಕಷ್ಟು ವಾರಗಳು ಕಳೆದಿವೆ. ಒಂದೊಂದು ವಾರ ಒಂದೊಂದು ಕಾನ್ಸೆಪ್ಟ್‌ನಲ್ಲಿ ಸ್ಪರ್ಧಿಗಳು ನಕ್ಕು ನಲಿಸುತ್ತಾರೆ. ಅದರಂತೆ ಈ ವಾರ ಪುರಾಣದ ಅವತಾರಗಳನ್ನು ಸ್ಪರ್ಧಿಗಳು ತಾಳುತ್ತಿದ್ದಾರೆ. ಜಡ್ಜ್‌ಗಳು ಕೂಡ ಪುರಾಣದಲ್ಲಿನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೃತಿ ಹರಿಹರನ್ ಮಹಾರಾಣಿ ವೇಷದಲ್ಲಿ ಬಂದಿದ್ದರೆ, ಮುಖ್ಯಮಂತ್ರಿ ಚಂದ್ರು ಮಹಾರಾಜರ ಅವತಾರದಲ್ಲಿ ಕಂಗೊಳಿಸಿದ್ದಾರೆ. ಇಲ್ಲಿ ಸಿಕ್ಕಾಪಟ್ಟೆ ವಿಶೇಷ ಎನಿಸಿದ್ದು, ಪ್ರತಾಪ ಸಿಂಹ ಅವತಾರ. 'ಬಾಹುಬಲಿ'ಯ ಅವರತಾರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಕುರಿ ಪ್ರತಾಪನ ವಾಹನಗಳು ಯಾವುದು ಗೊತ್ತಾ?

ಕುರಿ ಪ್ರತಾಪನ ವಾಹನಗಳು ಯಾವುದು ಗೊತ್ತಾ?

ಕುರಿ ಪ್ರತಾಪ್ ಎಂದೇ ಖ್ಯಾತವಾಗಿರುವವರು ಪ್ರತಾಪ್. ಅವರ ಕಾಮಿಡಿ, ಅವರ ಪಂಚ್ ಡೈಲಾಗ್‌ಗಳಿಗೆ ವಾಹ್ವ್ ಎನ್ನದೇ ಯಾರು ಇರಲಾರದು. ಎಲ್ಲಿಯೇ ಇದ್ದರು, ಏನೇ ಮಾಡುತ್ತಿದ್ದರು ತಮ್ಮತ್ತ ಗಮನ ಕೊಡುವಂತೆ ಅವರು ಮಾಡುತ್ತಾರೆ. ಅವರಿದ್ದ ಕಡೆ ನಗು ಚೆಲ್ಲಾಪಿಲ್ಲಿಯಾಗಿರುತ್ತದೆ. ಇನ್ನು ವೇದಿಕೆ ಮೇಲೆ ಅವರ ಎಂಟ್ರಿಗೆ ಶಿಳ್ಳೆ, ಚಪ್ಪಾಳೆಗಳು ಸುರಿದಿವೆ. ಹೆಸರಿಗೆ ತಕ್ಕಂತೆ ಕುರಿಗಳನ್ನೇ ತನ್ನ ವಾಹನಗಳನ್ನಾಗಿ ಮಾಡಿಕೊಂಡಿದ್ದಾರೆ. ಕಾಮಿಡಿ ಗ್ಯಾಂಗ್‌ನೊಳಗೆ ಕುರಿಗಳನ್ನು ಹಿಡಿದುಕೊಂಡು ಎಂಟ್ರಿ ತೆಗೆದುಕೊಂಡಿದ್ದಾರೆ. ಈ ಎಂಟ್ರಿಗೆ ಕಾಮಿಡಿ ಗ್ಯಾಂಗ್ ನಕ್ಕು ನಕ್ಕು ಸುಸ್ತಾಗಿದೆ.

ಸ್ಪರ್ಧಿಗಳ ಸ್ಕಿಟ್‌ಗೆ ಜಡ್ಜ್ ಗಳು ಮಜಾ

ಸ್ಪರ್ಧಿಗಳ ಸ್ಕಿಟ್‌ಗೆ ಜಡ್ಜ್ ಗಳು ಮಜಾ

ಇಂದಿನ ಸಂಚಿಕೆಯಲ್ಲಿ (ಮೇ 15) ರಂಭೆ, ಊರ್ವಶಿಯರೆಲ್ಲಾ ಒಂದು ಸುತ್ತು ಬಂದು ಹೋಗುತ್ತಾರೆ. ಆದರೆ ಅವರು ನಮ್ಮ ನಿಮ್ಮ ಊಹೆಗೂ ನಿಲುಕದ ರಂಬೆ ಊರ್ವಶಿಯರು. ಇದನ್ನು ಕುರಿ ಪ್ರತಾಪ್ ಕೂಡ ಊಹೆ ಮಾಡಿರಲಿಲ್ಲ. ರಂಭೆ ವೇದಿಕೆಗೆ ಬರುತ್ತಿದ್ದಂತೆ ಕುರಿಗೆ ತಲೆ ತಿರುಗಿದೆ. ರಂಭೆ ಹೀಗೂ ಇರುತ್ತಾಳಾ ಎಂದು ಶಾಕ್ ಆಗಿದ್ದಾರೆ. ರಂಭೆಯ ಬ್ಯೂಟಿ ಹೀಗಿದೆ ಎಂದಿದ್ದರೆ ರಂಭೆಯ ಕನಸ್ಸನ್ನೇ ಕಾಣುತ್ತಿರಲಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಪೀಪಿ ಊದಿ ರಂಭೆಯನ್ನು ಬರಮಾಡಿಕೊಂಡಿದ್ದಾರೆ. ಆ ಪೀಪಿ ಸದ್ದಿಗೆ ಶೃತಿ ಹರಿಹರನ್ ಒಂದೆರಡು ಸ್ಟೆಪ್ ಹಾಕಿದ್ದಾರೆ.

ಕಾಮಿಡಿ ಗ್ಯಾಂಗ್‌ನಿಂದ ಹೊಸ ಹೊಸ ಅವತಾರ

ಕಾಮಿಡಿ ಗ್ಯಾಂಗ್‌ನಿಂದ ಹೊಸ ಹೊಸ ಅವತಾರ

'ಕಾಮಿಡಿ ಗ್ಯಾಂಗ್' ಹೆಸರೇ ಹೇಳುವಂತೆ ಸಂಪೂರ್ಣ ಕಾಮಿಡಿಯಿಂದ ಕೂಡಿರಲಿದೆ. ಆದರೆ ಬರೀ ಕಾಮಿಡಿ ಮಾಡುತ್ತಾ ಕೂರುವುದಕ್ಕೆ ಆಗಲ್ಲ. ಅದಕ್ಕಾಗಿ ಹೊಸ ಹೊಸ ಟೀಂ ಕಟ್ಟಿ, ಅದಕ್ಕೊಂದು ಅಂದದ ಚಂದದ ಹೆಸರಿಟ್ಟು ಕಾಮಿಡಿಯನ್ನು ಮತ್ತಷ್ಟು ವಿಜೃಂಭಿಸುವಂತೆ ಮಾಡುತ್ತಿದ್ದಾರೆ ಈ ಟೀಂ. ಅದಕ್ಕಾಗಿ ಒಟಿಟಿ ಸಾಫ್ಟವೇರ್ ಸ್ವಯಂವರ, ಆರ್ ಸಿ ಬಿ ಗೂಡಾಚಾರಿ, ಪಿಯುಸಿ ದಾನಶೂರ, ರಂಭೆ ಗೆದ್ದ ಮಾನವ, ಕಾಮಿಡಿ ಗ್ಯಾಂಗ್‌ನ ಯಮಲೋಕ, ರಾಣಿಯರ ಲೋಕ ಹೀಗೆ ಅನೇಕ ಲೋಕಗಳಲ್ಲಿ ಇವತ್ತು ಕಾಮಿಡಿ ಗ್ಯಾಂಗ್ ಸಂಚರಿಸಲಿದೆ.

More from Filmibeat

English summary
Star Suvarna Reality Show Comedy Gang Written Update On May 15th Episode. Here is the details about Kuri Prathap Entry Highlights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X