'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ಸ್ಪರ್ಧಿಗಳು ಇವರೇ ನೋಡಿ!
ಈಗ ಎಲ್ಲಾ ವಾಹಿನಿಗಳಲ್ಲೂ ಜೋಡಿಗಳದ್ದೇ ಕಾರುಬಾರು. ಮೂರು ತಿಂಗಳಿಗೊಂದು ಹೊಸ ಹೊಸ ರಿಯಾಲಿಟಿ ಶೋಗಳು ಪ್ರಾರಂಭವಾಗಿತ್ತವೆ. ಅದರಲ್ಲೂ ಈಗ ಸೆಲಬ್ರಿಟಿ ಜೋಡಿಗಳ ರಿಯಾಲಿಟಿ ಶೋಗೆ ಡಿಮ್ಯಾಂಡ್ ಶುರುವಾಗಿದೆ.
ಎಲ್ಲಾ ವಾಹಿನಿಗಳಲ್ಲೂ ಜೋಡಿಗಳನ್ನು ಒಟ್ಟಿಗೆ ಸೇರಿಸಿ ಆಡಿಸುವ ಈ ರಿಯಾಲಿಟಿ ಶೋಗಳು ಹೆಚ್ಚಾಗುತ್ತಿವೆ. ಕಳೆದ ತಿಂಗಳಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ.೧ ರಿಯಾಲಿಟಿ ಶೋ ಅನ್ನು ಪ್ರಾರಂಭಿಸಲಾಯ್ತು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ಆರಂಭಿಸಲು ಸಜ್ಜಾಗಿದೆ.
ಇದೇ ಶನಿವಾರ ಹಾಗೂ ಭಾನುವಾರದಿಂದ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಶುರುವಾಗಲಿದೆ. ರಾತ್ರಿ 9 ಗಂಟೆಗೆ ಈ ಶೋ ಮೂಡಿಬರಲಿದ್ದು, ಶೋ ನೋಡಲು ಸ್ಟಾರ್ ಸುವರ್ಣ ಪ್ರೇಕ್ಷಕರು ಕಾಯುತ್ತಿದ್ದಾರೆ. ಬನ್ನಿ ಹಾಗಿದ್ದರೆ ಈ ಶೋನಲ್ಲಿ ಯಾರ್ಯಾರು ಇರಲಿದ್ದಾರೆ ಎಂದು ನೋಡೋಣ.
ಅದ್ಧೂರಿ ಸೆಟ್‌ನಲ್ಲಿ ಇಸ್ಮಾರ್ಟ್ ಜೋಡಿ!
ಸ್ಟಾರ್ ಸುವರ್ಣ ವಾಹಿನಿಯ ಹೊಸ ರಿಯಾಲಿಟಿ ಶೋ ಇಸ್ಮಾರ್ಟ್ ಜೋಡಿ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಹೊಸ ಕಾನ್ಸೆಪ್ಟ್ ಜೊತೆಗೆ ಹೊಸ ಸೆಲಬ್ರಿಟಿಗಳನ್ನು ಈ ಶೋನಲ್ಲಿ ಪರಿಚಯಿಸಲಿರುವ ಸ್ಟಾರ್ ಸುವರ್ಣ, ಜೋಡಿಹಕ್ಕಿಗಳನ್ನು ಆಡಿಸಿ, ನಲಿಸಿ, ಕುಣಿಸಿ, ನಗಿಸಿ ಪ್ರೇಕ್ಷಕರನ್ನು ರಂಜಿಸಲಿದೆ. ಇದೊಂದು ರೊಮ್ಯಾಂಟಿಕ್ ಶೋ ಆಗಿದ್ದು, ಅದ್ಧೂರಿ ಸೆಟ್ ನಲ್ಲಿ ಶೂಟಿಂಗ್ ನಡೆಯಲಿದೆ. ಸೆಲೆಬ್ರಿಟಿ ಜೋಡಿಗಳು ಕೂಡ ವೇದಿಕೆಯ ಮೇಲೆ ನಕ್ಕು-ನಲಿಯಲು ಸಜ್ಜಾಗಿದ್ದಾರೆ.
ಜೋಡಿಗಳು ಯಾರು ಯಾರು..?
ಇನ್ನು ಈಗ ಬಿಟ್ಟಿರುವ ಪ್ರೋಮೋಗಳ ಪ್ರಕಾರ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ನಲ್ಲಿ ನಟಿ ದಿಶಾ ಹಾಗೂ ಪತಿ ಶಶಾಂಕ್ ಕಾಣಿಸಿಕೊಂಡಿದ್ದಾರೆ. ಇನ್ನು ಅರ್ಧಾಂಗಿ ಧಾರಾವಾಹಿಯ ನಟಿ ಅನಘಾ ಮತ್ತು ಅವರ ಪತಿ ಸಾಗರ್, ನಟ ವಿನಯ್ ಮತ್ತು ಪತ್ನಿ ಅಕ್ಷತಾ, ಜೊತೆಗೆ ಹಿರಿಯ ನಟ ಜೈಜಗದೀಶ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್ ಕೂಡ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ. ಇವರನ್ನು ಹೊರತುಪಡಿಸಿ ಮಿಕ್ಕ ಜೋಡಿಗಳನ್ನು ಇನ್ನೂ ರಿವೀಲ್ ಮಾಡಿಲ್ಲ. ಒಟ್ಟು ಹತ್ತು ಜೋಡಿಗಳು ಈ ಶೋನಲ್ಲಿ ಭಾಗಿಯಾಗಲಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆ!
ಕಿರುತೆರೆಯಲ್ಲಿ ಮಿಂಚಿ ನಂತರ ಬೆಳ್ಳಿ ಪರದೆ ಮೇಲೆ ಕರುನಾಡಿಗರನ್ನು ರಂಜಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಅವರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುವುದು ಹೊಸತೇನಲ್ಲ. ಆದರೆ ಈಗ ಜೋಡಿ ಹಕ್ಕಿಗಳ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿರುವುದೇ ಹೊಸತು. ಮೊದಲ ಬಾರಿಗೆ ಗಣೇಶ್ ಅವರು ಸ್ಟಾರ್ ಸುವರ್ಣ ವಾಹಿನಿಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಇದರ ಪ್ರೋಮೋಗಳನ್ನು ಪ್ರಸಾರ ಮಾಡಿದ್ದು, ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ.
ಪ್ರೋಮೋ ವೈರಲ್!
ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಪ್ರೋಮೋ ಮೂಲಕವೇ ಜನ ಮನ ಗೆದ್ದಿದೆ. ಈ ಶೋನ ಶೀರ್ಷಿಕೆ ಗೀತೆ ಸೊಗಸಾಗಿದೆ. ಅಲೋಕ್ ಶೀರ್ಷಿಕೆ ಗೀತೆಯನ್ನು ಕಂಪೋಸ್ ಮಾಡಿದ್ದಾರೆ. ಪ್ರೋಮೋದಲ್ಲಿ ಬರುವ ಹಾಡಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಟೈಟಲ್ ಟ್ರ್ಯಾಕ್ ರಿಚ್ ಆಗಿದ್ದು, ವೈಟ್ ಆಂಡ್ ರೆಡ್ ಕಾಂಬಿನೇಷನ್ ಜನ ಮೆಚ್ಚಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಡಿನ ಮೂಲಕ, ನೃತ್ಯದ ಮೂಲಕ ಸಂಸಾರದ ಸುಖಸಾಗರಕ್ಕೆ ಕರೆದುಕೊಂಡು ಹೋಗಿದ್ದಾರೆ.


Click it and Unblock the Notifications











