ಸೂಪರ್ ಸ್ಟಾರ್ ಶೋ 600 ಸಂಚಿಕೆ : ವೇದಿಕೆ ಮೇಲೆ ಸ್ಟಾರ್‌ಗಳ ಸಮಾಗಮ!

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕೆಂಡ್ ಮಸ್ತಿಗೇನು ಕಡಿಮೆ ಏನು ಇಲ್ಲ. ರಿಯಾಲಿಟಿ ಶೋಗಳ ಮೂಲಕವೇ ಮನರಂಜನೆ ನೀಡುತ್ತಿದ್ದಾರೆ. ಅದರಲ್ಲಿ ಸೂಪರ್ ಸ್ಟಾರ್ ಕೂಡ ಒಂದು. ನಿನ್ನೆ ಮೊನ್ನೆ ಶುರುವಾಯಿತೇನೋ ಎಂಬಂತಿರುವ ಸೂಪರ್ ಸ್ಟಾರ್ ಇದೀಗ 500 ಎಪಿಸೋಡ್‌ಗಳನ್ನ ಪೂರೈಸಿದೆ. ಆ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ.

ಸೂಪರ್ ಸ್ಟಾರ್ ವೇದಿಕೆಯಲ್ಲಿ ಇಷ್ಟು ದಿನದವರೆಗೂ ಆಟ ಆಡುವ ಮೂಲಕ ಸಖತ್ ಮನರಂಜನೆ ನೀಡುತ್ತಿದ್ದಾರೆ. ವೆರೈಟಿ ಗೇಮ್‌ಗಳು ಮನರಂಜನೆ ನೀಡುವುದಲ್ಲದೆ, ಶಾಲಿನಿ ನಿರೂಪಣೆಯೂ ಅಷ್ಟೇ ಅದ್ಭುತವಾಗಿದೆ. ಇದೀಗ ಐನೂರು ಎಪಿಸೋಡ್‌ಗಳ ಖುಷಿಯನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.

ಸ್ಟಾರ್‌ಗಳ ಆಟ-ಕುಣಿತದ ಜೊತೆಗೆ ಮನರಂಜನೆ

ಸ್ಟಾರ್‌ಗಳ ಆಟ-ಕುಣಿತದ ಜೊತೆಗೆ ಮನರಂಜನೆ

ಸೂಪರ್ ಸ್ಟಾರ್ ಶೋಗೆ 500 ಎಪಿಸೋಡ್ ಪೂರೈಸಿರುವ ಕಾರಣ ಆ ಸಂಭ್ರಮ ಮನೆ ಮಾಡಿದೆ. ಕಿರುತೆರೆಯಲ್ಲಿಯೇ ದಾಖಲೆ ಬರೆದ ಈ ಶೋಗೆ ದೊಡ್ಡ ದೊಡ್ಡ ಸ್ಟಾರ್‌ಗಳೆಲ್ಲಾ ಬಂದಿದ್ದಾರೆ. ಐಂದ್ರಿತಾ ರೇ, ದೀಪಿಕಾ ದಾಸ್, ಚಂದನಾ ಸೇರಿದಂತೆ 'ಪೆಟ್ರೋಮ್ಯಾಕ್ಸ್' ಸಿನಿಮಾ ತಂಡದವರು ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಸತೀಶ್ ನೀನಾಸಂ, ಹರಿಪ್ರಿಯ ತಂಡ ಮಸ್ತ್ ಡ್ಯಾನ್ಸ್ ಮಾಡಿ ಸಖತ್ ಮನರಂಜನೆ ನೀಡಿದ್ದಾರೆ.

ಸೆಲೆಬ್ರೆಟಿಗಳ ಕುಣಿತಕ್ಕೆ ಶಾಲಿನಿ ಸಾಥ್

ಸೆಲೆಬ್ರೆಟಿಗಳ ಕುಣಿತಕ್ಕೆ ಶಾಲಿನಿ ಸಾಥ್

ಐಂದ್ರಿತಾ ರೇ, ಚಂದನಾ, ದೀಪಿಕಾ ದಾಸ್ ಎಲ್ಲರೂ ಹಾಡಿಗೆ ಕುಣಿದಿದ್ದಾರೆ. ಐಂದ್ರಿತಾ ರೇ ನೀಲಿ ಗೌನ್‌ನಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ನೀನೆಂದರೆ ನನ್ನೊಳಗೆ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದ್ದು, ನೋಡುಗರ ಮನತಣಿಸಿದೆ. ಇನ್ನುಕಿರುತೆರೆ ನಟಿ ಚಂದನಾ ಕೂಡ ಸೂಪರ್ ಸ್ಟಾರ್ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಎಲ್ಲರಿಗೂ ಒಂದೊಂದು ಆಟವಾಡಿಸಿದ್ದಾರೆ. ದೀಪಿಕಾ ದಾಸ್‌ಗೆ ಕೂಡ ಒಂದೊಳ್ಳೆ ಗೇಮ್ ಕೊಟ್ಟು ಶಾಲಿನಿ ಹೆದರಿಸಿದ್ದಾರೆ.

ವೆರೈ ವೆರೈಟಿ ಇದೆ ಶಾಲಿನಿ ಬ್ಲೌಸ್

ವೆರೈ ವೆರೈಟಿ ಇದೆ ಶಾಲಿನಿ ಬ್ಲೌಸ್

ಶಾಲಿನಿ ಬ್ಲೌಸ್ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಫಿಲ್ಮೀ ಬೀಟ್‌ನಲ್ಲಿಯೇ ಸ್ಟೋರಿ ನೋಡಿರುತ್ತೀರಿ. ಸೂಪರ್ ಸ್ಟಾರ್ ಶೋ ಶುರುವಾದಾಗಿನಿಂದಲೂ ಶಾಲಿನಿ ವಿಭಿನ್ನ ಬ್ಲೌಸ್‌ಗಳನ್ನೆ ಹಾಕಿದ್ದಾರೆ. ಡಿಸೈನರ್ ಮೋನಿಶಾ ವಿಭಿನ್ನ ಶೈಲಿಯಲ್ಲಿ, ವಿಭಿನ್ನ ಥೀಮ್‌ನಲ್ಲಿ ಬ್ಲೌಸ್ ರೆಡಿ‌ ಮಾಡುತ್ತಾರೆ. ಈ ವಾರದ ಶೋನಲ್ಲಿಯೂ ನೀಲಿ ಬಣ್ಣದ ಡ್ರೆಸ್ ತೊಟ್ಟಿರುವ ಶಾಲಿನಿ, ಸಖತ್ ಆಕರ್ಷಿತರಾಗಿ ಕಾಣುತ್ತಿದ್ದಾರೆ. ಆದರೆ 500ರ ಸಂಭ್ರಮದ ವೇದಿಕೆಯಲ್ಲಿ ತೊಟ್ಟ ಡ್ರೆಸ್ ಅನ್ನು ಶಿಲ್ಪಾ ಎಂಬ ಡಿಸೈನರ್ ರೆಡಿ ಮಾಡಿದ್ದಾರೆ.

ವಾರದ ಮನರಂಜನೆಗಾಗಿ ಸೂಪರ್ ಸ್ಟಾರ್

ಸೂಪರ್ ಸ್ಟಾರ್ ವೇದಿಕೆಯಲ್ಲಿ ಮನರಂಜನೆಗಾಗಿ ಒಂದೊಂದು ವಿಭಿನ್ನವಾದ ಆಟಗಳು ನಡೆಯುತ್ತವೆ. ಅಷ್ಟೇ ಅಲ್ಲ ಒಂದಷ್ಟು ನೋವುಗಳ ಹಂಚಿಕೆಗೂ ಸೂಪರ್ ಸ್ಟಾರ್ ವೇದಿಕೆಯಾಗುತ್ತದೆ. ಸ್ಪೆಷಲ್ ಡೇಗಳು ಅಂದರೆ ಅಮ್ಮಂದಿರ ದಿನಕ್ಕಾಗಿ, ಅಪ್ಪಂದಿರ ದಿನಕ್ಕಾಗಿ, ಸ್ನೇಹಿತರ ದಿನ, ಮಹಿಳೆಯರ ದಿನದಂದು ವಿಶೇಷವಾದ ಕಾರ್ಯಕ್ರಮ ಮಾಡಿ, ಗೌರವ ಸೂಚಿಸುತ್ತಾರೆ. ಸೂಪರ್ ಸ್ಟಾರ್ ವೇದಿಕೆಯಲ್ಲಿ ನಟಿಯರ ಸೀಮಂತ ಕಾರ್ಯ ಮಾಡಿ, ಹಾರೈಸಿದ್ದರು. ಇನ್ನು ತಂದೆಯಂದಿರ ದಿನದಂದು ಸ್ಟಾರ್‌ಗಳ ತಂದೆಯಂದಿರನ್ನು ಕರೆಸಿ ಅಪ್ಪ ಮಕ್ಕಳಿಂದ ಮನರಂಜನೆ‌ ನೀಡಿದ್ದರು. ಅವರ ಸಂಬಂಧ ಹೇಗಿದೆ ಎಂಬುದನ್ನು ಅಭಿಮಾನಿಗಳಿಗೂ ತೋರಿಸಿದ್ದರು. ಈ ಮೂಲಕ ಇಲ್ಲಿವರೆಗೂ ಸೂಪರ್ ಸ್ಟಾರ್ ಎಲ್ಲರ ನೆಚ್ಚಿನ ಕಾರ್ಯಕ್ರಮವಾಗಿದೆ.

More from Filmibeat

English summary
Star Suvarna Reality Show Super Star Written Update On July 23rd. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X