Pushpa Reels: ತೆರೆ ಮೇಲೆ ಶತ್ರು, ರೀಲ್ಸ್‌ನಲ್ಲಿ ನೀನೆ ನನ್ನ ಯಜಮಾನಪ್ಪಅಂತಾಳೆ ಮೂಲಂಗಿ ಮಾದವ್ವ

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರೋ 'ಜೇನುಗೂಡು' ಧಾರಾವಾಹಿಯಲ್ಲಿ ಹೆಚ್ಚು ಮನರಂಜನೆ ನೀಡೋದು ಅಂದ್ರೆ ಅದು ದಿಯಾ ಮತ್ತೆ ಶಶಾಂಕ್ ಜಗಳ. ಇಬ್ಬರು ಎದುರು ಬದುರಾದ್ರೆ ಸಾಕು ಯಾವಾಗಲೂ ಕಿತ್ತಾಡುತ್ತಲೇ ಇರ್ತಾರೆ. ಆಕೆಯ ನಡವಳಿಕೆ ಈತನಿಗೆ ಹಿಡಿಸಲ್ಲ, ಈತನ ಗುಮ್ಮತನ ಆಕೆಗೆ ಅಂಟಲ್ಲ. ಆದರೆ, ಮುಂದೊಂದು ದಿನ ಇಬ್ಬರು ಗಂಡ ಹೆಂಡತಿಯರಾಗಬೇಕಾದ ಸ್ಥಿತಿ ಬಂದು ಒದಗಿದೆ.

'ಜೇನುಗೂಡು' ಅಂದ್ರೆ ಪ್ರತ್ಯೇಕವಾಗಿ ಬೇಕಾಗಿಲ್ಲ. ಯಾಕಂದ್ರೆ ಕೂಡು ಕುಟುಂಬವನ್ನು 'ಜೇನುಗೂಡು' ಅಂತಾನೆ ಕರೆಯೋದು. ಈ ಕೂಡು ಕುಟುಂಬದಲ್ಲಿ ಸಂತೋಷ, ನೆಮ್ಮದಿ, ಮನರಂಜನೆಗೆ ಎಲ್ಲಿಯೂ ಬರವಿಲ್ಲ. ಎಷ್ಟೇ ಓದಿದ್ರು, ಎಷ್ಟೇ ದೊಡ್ಡಮಟ್ಟದ ಸಂಬಳ ಬಂದರೂ ಮನೆಯಲ್ಲಿ ಒಬ್ಬರಿಗೊಬ್ಬರು ಗೌರವ ಕೊಡದೆ ಬದುಕುವುದೇ ಇಲ್ಲ.

ಇಂಥ ಅದ್ಭುತ ಕುಟುಂಬದ ಮೇಲೆ ಡಾಕ್ಟರ್‌ಗೆ ಲವ್ ಆಗಿದೆ. ನನ್ನ ಮಗಳು ಒಳ್ಳೆ ಸಂಸ್ಕಾರವಂತಳಾಗಬೇಕಂದ್ರೆ ಈ ಮನೆಯೇ ಬೆಸ್ಟ್ ಅಂತ ಡಿಸೈಡ್ ಮಾಡಿ ಆಗಿದೆ. ಇದಕ್ಕೆ ಮಗಳನ್ನು ಒಪ್ಪಿಸೋಕೆ ಡಾಕ್ಟರ್ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ಮೂಲಂಗಿ ಮಾದವ್ವನಿಗೆ ಏಲಿಯನ್ ಮೇಲೆ ಲವ್ ಆಯ್ತಾ?

ಈ ಟೈಟಲ್ ನೋಡಿ ನಿಮಗೆ ಕನ್ಫ್ಯೂಸ್ ಆಗಿರೋದಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ದಿಯಾ ಕ್ಯಾರೆಕ್ಟರ್ ನಿಮ್ಗೆ ಗೊತ್ತಿಲ್ಲದೆ ಏನು ಇಲ್ಲ ಬಿಡಿ. ಎಷ್ಟು ಮೊಂಡಿ ಅವಳು. ಆದರೆ ಮನಸ್ಸು ಮಾತ್ರ ಮಲ್ಲಿಗೆ. ಏನು ಮಾಡೋದು, ಮನೆಯವರ ಆಸೆ ದಿಯಾಗೂ ಶಶಾಂಕ್ ಮೇಲೆ ಮನಸ್ಸಾಗಬೇಕೆಂಬುದೆ ಆಗಿದೆ. ಆದರೆ ಅದೆಲ್ಲಾ ಸಾಧ್ಯವಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.

Star Suvarnas Jenugoodu serial Artists Shashank Diya reels on Pushpa song

ಈ ಎಲ್ಲಾ ಗೊಂದಲಗಳ ನಡುವೆಯೂ ಫೈನಲಿ ಮನೆಯವರೆಲ್ಲಾ ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡಿ ಮದುವೆಗೆ ಒಪ್ಪಿಸಿದ್ದಾರೆ. ಶಶಾಂಕ್ ಮನೆಯ ಯಜಮಾನನಿಗೆ ನೋವಾಗಬಾರದು ಅಂತ ಒಪ್ಪಿದ್ರೆ, ದಿಯಾ ಅಪ್ಪನ ಮಾತಿಗೆ ಕಟ್ಟು ಬಿದ್ದು, ಕಂಡಿಷನ್ಸ್ ಹಾಕಿ ಒಪ್ಪಿದ್ದಾಳೆ.

ತೆರೆ ಹಿಂದೆ ಏನಿದು ದಿಯಾ-ಶಶಾಂಕ್ ಆಟ?

ನಾವೀಗ ಇಷ್ಟೆಲ್ಲಾ ಹೇಳಿದ್ದು ಧಾರಾವಾಹಿಯ ಆನ್ ಸ್ಕ್ರೀನ್ ಮ್ಯಾಟರ್. ಆದರೆ ಅವರಿಬ್ಬರು ತೆರೆ ಹಿಂದೆ ಹೇಗಿರುತ್ತಾರೆ ಅಂತ ನೀವೊಮ್ಮೆ ನೋಡ್ಬೇಕು. ಮನಸ್ಸಲ್ಲಿ ಖುಷಿ ಮೂಡುತ್ತೋ? ಕೋಪ ಮೂಡುತ್ತೋ ಗೊತ್ತಿಲ್ಲ. ಅದು ನಿಮ್ಮ ಮೂಡಿನ ಮೇಲೆ ಡಿಪೆಂಡ್ ಆಗಿರುತ್ತೆ.

ಯಾಕಂದ್ರೆ ಎಲ್ಲಾ ಧಾರಾವಾಹಿಗಳಲ್ಲೂ ಇದು ಕಾಮನ್. ನಾವೂ ತೆರೆ ಮೇಲೆ ಅವರನ್ನು ಕೇವಲ ಪಾತ್ರಧಾರಿಗಳಾಗಿ ನೋಡಿರ್ತೀವಿ. ತೆರೆ ಹಿಂದೆ ಅವರ ಬಾಂಧವ್ಯ, ಅವರ ಸ್ನೇಹ, ಅವರ ಸ್ಪೆಷಲ್ ಮೂಮೆಂಟ್ ಕ್ಯಾಪ್ಚರ್ ಆಗಿರುತ್ತೆ. ಅದೆಲ್ಲಾ ಸಿಗೋದು ಅವರ ಸೋಶಿಯಲ್ ಮೀಡಿಯಾದಲ್ಲಿ.

ಮೂಲಂಗಿ ಮಾದವ್ವನಿಗೆ ಕಾಡ್ತಿದೆ 'ಪುಷ್ಪ' ಸಾಂಗ್

ಸ್ಟಾರ್ ಸುವರ್ಣ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅದು ಇದೇ ಮೂಲಂಗಿ ಮಾದವ್ವ ಹಾಗೂ ಏಲಿಯನ್ ಎಂಜಾಯ್ ಮಾಡಿರೋ ಬಗ್ಗೆ. ಶಶಾಂಕ್ ಅದೇ ಗತ್ತು, ಗಾಂಭೀರ್ಯದಿಂದ ಸೇಮ್ ಟು ಸೇಮ್ ಅಲ್ಲು ಅರ್ಜುನ್ ರೇಂಜಿಗೆ ಪೋಸ್ ಕೊಟ್ಟಿದ್ದಾರೆ. ಇನ್ನು ದಿಯಾ ಸೀರೆಯಲ್ಲಿ ಕ್ಯೂಟ್ ಕ್ಯೂಟ್ ಆಗಿ ಡಾನ್ಸ್ ಮಾಡಿದ್ದಾರೆ. ಇಬ್ಬರನ್ನು ಆಕ್ಟಿಂಗ್ ಮನಸ್ಸಿನೊಳಗೆ ಕಚಗುಳಿ ಇಟ್ಟಿದ್ದಂತು ಸುಳ್ಳಲ್ಲ.

ಸಾಮು ಅನ್ನೊ ಲೈನ್ ಗೆ ಇಬ್ಬರು ರೀಲ್ಸ್ ಮಾಡಿದ್ದಾರೆ. ಧಾರಾವಾಹಿಯಲ್ಲಿ ಯಾವಾಗಲೂ ಗುರು ಗುರು ಅಂತಿರೋ ಶಶಾಂಕ್ ಮುಖ ನೋಡಿದವರಿಗೆ ಈ ರೀಲ್ಸ್‌ನಲ್ಲಿ ವಾವ್ ಏಲಿಯನ್ ಇಷ್ಟೊಂದು ಸ್ಮಾರ್ಟ್ ಆಗಿದ್ದಾನಾ ಅಂತ ಅನ್ನಿಸುತ್ತೆ. ಇಬ್ಬರ ಜೋಡಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದೆ.

More from Filmibeat

English summary
Star Suvarna's Jenugoodu serial Artists Shashank Diya reels on Pushpa song. Here is the details about
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X