ರಮೇಶ್ ಸಾರಥ್ಯದ 'ಕನ್ನಡದ ಕೋಟ್ಯಾಧಿಪತಿ 3'ಗೆ ಮೊದಲ ಸ್ಪರ್ಧಿ ಪುನೀತ್ ?

By Naveen

Recommended Video

ಕನ್ನಡದ ಕೋಟ್ಯಾಧಿಪತಿಯಲ್ಲಿ ರಮೇಶ್ ಹಾಗೂ ಪುನೀತ್ |Filmibeat Kannada

ಸ್ಟಾರ್ ಸುವರ್ಣ ವಾಹಿನಿ ತನ್ನ ಸೂಪರ್ ಹಿಟ್ ಶೋ ಮೂಲಕ ಮತ್ತೆ ವೀಕ್ಷಕರ ಮುಂದೆ ಬಂದಿದೆ. 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮತ್ತೆ ಬರುತ್ತಿದ್ದು, ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಲಾಂಚ್ ಮಾಡಲಾಗಿದೆ.

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಈ ಬಾರಿಯ ವಿಶೇಷ ಅಂದರೆ ನಟ ರಮೇಶ್ ಅರವಿಂದ್. ಈಗಾಗಲೇ ಸಾಕಷ್ಟು ಟಿವಿ ಕಾರ್ಯಕ್ರಮದ ಮೂಲಕ ಜನಮನ ಗೆದ್ದ ರಮೇಶ್ ಈಗ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಬದಲು ಈಗ ರಮೇಶ್ ಈ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡಿದ್ದಾರೆ.

ಅಂದಹಾಗೆ, 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಬರುತ್ತಿದೆ ಎನ್ನುವಾಗಲೇ ಹಾಟ್ ಸೀಟ್ ಮೇಲೆ ಕೂರುವ ಮೊದಲ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಆದರೆ, ಈ ಕಾರ್ಯಕ್ರಮದ ಮೊದಲ ಸಂಚಿಕೆಯ ಹಾಟ್ ಮೇಲೆ ಮೇಲೆ ಪುನೀತ್ ರಾಜ್ ಕುಮಾರ್ ಕೂತರೇ ಹೇಗಿರುತ್ತದೆ ಎನ್ನುವ ನಿರೀಕ್ಷೆ ಈಗ ಹುಟ್ಟಿದೆ. ಮುಂದೆ ಓದಿ..

ಹಾಟ್ ಸೀಟ್ ಮೇಲೆ ಪುನೀತ್

ಹಾಟ್ ಸೀಟ್ ಮೇಲೆ ಪುನೀತ್

'ಕನ್ನಡದ ಕೋಟ್ಯಾಧಿಪತಿ' ಸೀಸನ್ 3 ಕಾರ್ಯಕ್ರಮದ ಹಾಟ್ ಸೀಟ್ ಮೇಲೆ ಮೊದಲು ಪುನೀತ್ ರಾಜ್ ಕುಮಾರ್ ಅವರನ್ನು ನೋಡಲು ನಟ ರಮೇಶ್ ಅರವಿಂದ್ ಬಯಸುತ್ತಾರಂತೆ. ಈ ಕಾರ್ಯಕ್ರಮ ಅಪ್ಪು ಮೂಲಕ ಶುಭಾರಂಭ ಆಗಬೇಕು ಎನ್ನುವುದು ರಮೇಶ್ ಆಸೆ ಆಗಿದೆ.

ಪ್ರಶ್ನೆಗೆ ಉತ್ತರಿಸಿದ ರಮೇಶ್

ಪ್ರಶ್ನೆಗೆ ಉತ್ತರಿಸಿದ ರಮೇಶ್

ನಿನ್ನೆಯ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ವಾಹಿನಿಯ ನಿರೂಪಕಿ ರಮೇಶ್ ಮುಂದೆ ಒಂದು ಪ್ರಶ್ನೆ ಇಟ್ಟರು. ''ನೀವು ಈ ಕಾರ್ಯಕ್ರಮದ ಮೊದಲ ಸಂಚಿಕೆಯ ಹಾಟ್ ಸೀಟ್ ಮೇಲೆ ಯಾರನ್ನು ನೋಡಲು ಬಯಸುತ್ತಿರಾ?'' ಎಂದು ನಾಲ್ಕು ಆಯ್ಕೆಗಳನ್ನು ನೀಡಿದರು. ರಾಜ್ಯದ ಮುಖ್ಯಮಂತ್ರಿಗಳು, ಪ್ರಖ್ಯಾತ ಪತ್ರಕರ್ತರು, ಪ್ರಖ್ಯಾತ ಸಿನಿಮಾ ನಟ/ನಟಿ ಹಾಗೂ ಸಿದ್ಧಾರ್ಥ್ ಬಾಸು (ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಮೊದಲು ಪರಿಚಯ ಮಾಡಿದವರು) ಎಂದು ಆಯ್ಕೆಗಳನ್ನು ನೀಡಿದರು.

ಪುನೀತ್ ಅವರನ್ನು ನೋಡಬೇಕು

ಪುನೀತ್ ಅವರನ್ನು ನೋಡಬೇಕು

ಕಾರ್ಯಕ್ರಮದ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ರಮೇಶ್ ''ನಾನು ನನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮೊದಲು ಬಂದಿದ್ದ ವ್ಯಕ್ತಿಯನ್ನೇ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿಯ ಹಾಟ್ ಸೀಟ್ ಮೇಲೆ ಮೊದಲು ಕೂರಿಸಲು ಬಯಸುತ್ತೇನೆ. ಅದು ಪುನೀತ್ ರಾಜ್ ಕುಮಾರ್ ಅವರು.'' ಎಂದು ಹೇಳಿದರು.

ಅಪ್ಪು ಶುಭ ಹಾರೈಕೆ

ಅಪ್ಪು ಶುಭ ಹಾರೈಕೆ

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮಾಡುತ್ತಿರುವ ಬಗ್ಗೆ ರಮೇಶ್ ಪುನೀತ್ ಅವರಿಗೆ ಮೆಸೇಜ್ ಮಾಡಿ ಹೇಳಿದರಂತೆ. ಆಗ ಪುನೀತ್ ತಕ್ಷಣ ಫೋನ್ ಮಾಡಿ, ತುಂಬ ಖುಷಿ ಆಯ್ತು ನೀವು ಕಾರ್ಯಕ್ರಮದ ಮಾಡುತ್ತಿರುವುದು ಎಂದು ಸಂತೋಷದಿಂದ ಶುಭ ಹಾರೈಸಿದರಂತೆ. ಇನ್ನು ಸಿನಿಮಾಗಳ ಕೆಲಸದಿಂದಾಗಿ ಪುನೀತ್ ಈ ಬಾರಿ ಈ ಕಾರ್ಯಕ್ರಮದ ಮಾಡಲು ಆಗುತ್ತಿಲ್ಲ.

ಮೇ 7 ರಿಂದ ಆಯ್ಕೆ ಪ್ರಕ್ರಿಯೆ

ಮೇ 7 ರಿಂದ ಆಯ್ಕೆ ಪ್ರಕ್ರಿಯೆ

'ಕನ್ನಡದ ಕೋಟ್ಯಾಧಿಪತಿ 3 ' ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆ ಮೇ 7 ರಿಂದ ಶುರು ಆಗಲಿದೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ. ಹತ್ತು ದಿನಗಳ ಕಾಲ ಕೇಳಲಾಗುವ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಹಾಟ್ ಸೀಟ್ ನಲ್ಲಿ ಕುಳಿತು ಕೋಟಿಗಳಿಸುವ ಅವಕಾಶ ಪಡೆಯಬಹುದು.

ಸರಿಯಾದ ವ್ಯಕ್ತಿಗಳಿಗೆ ಅವಕಾಶ

ಸರಿಯಾದ ವ್ಯಕ್ತಿಗಳಿಗೆ ಅವಕಾಶ

''ಒಬ್ಬ ಸರಿಯಾದ ವ್ಯಕ್ತಿಗೆ ಅವಕಾಶ ಸಿಗಲೇಬೇಕು, ತಪ್ಪಾದ ವ್ಯಕ್ತಿ ಹಾಟ್ ಸೀಟ್ ಮೇಲೆ ಕೂರಲೇ ಬಾರದು '' ಎನ್ನುವುದು ಕಾರ್ಯಕ್ರಮದ ಆಯೋಜಕರ ಮುಖ್ಯ ಉದ್ದೇಶವಾಗಿದೆಯಂತೆ. ಇದೇ ಕಾರಣಕ್ಕೆ ಲಕ್ಷಾಂತರ ಜನರಲ್ಲಿ ನಿಜಕ್ಕೂ ಅರ್ಹತೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆಯಂತೆ.

ಆರು ವರ್ಷದ ನಂತರ

ಆರು ವರ್ಷದ ನಂತರ

ಈ ಬಾರಿಯ ಕಾರ್ಯಕ್ರಮದ ಮತ್ತೊಂದು ವಿಶೇಷ ಅಂದರೆ ಆರು ವರ್ಷದ ನಂತರ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮತ್ತೆ ಬರುತ್ತಿದೆ. ಈ ಕಾರಣಕ್ಕೆ ಕಾರ್ಯಕ್ರಮದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಕಾರ್ಯಕ್ರಮದ ಪ್ರಸಾರದ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಸ್ಪರ್ಥಿಗಳ ಆಯ್ಕೆ ಪ್ರಕ್ರಿಯೆ ಮೇ 7 ರಿಂದ ಶುರು ಆಗುತ್ತದೆ.

More from Filmibeat

English summary
Star Suvarna Channel popular show 'Kannadada Kotyadhipathi 3' launched yesterday (Aprli 27th). This time kannada actor Ramesh Aravind will host the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X