For Quick Alerts
  ALLOW NOTIFICATIONS  
  For Daily Alerts

  'ನಂ 1 ಯಾರಿ' ಶೋದಲ್ಲಿ 7 ಸಂಚಿಕೆ ಬಾಕಿ : ಮುಂದೆ ಯಾರ್ ಯಾರ್ ಬರ್ತಾರೆ ?

  By Naveen
  |
  'ನಂ 1 ಯಾರಿ' ಶೋನಲ್ಲಿ 7 ಸಂಚಿಕೆ ಬಾಕಿ : ಮುಂದೆ ಯಾರ್ ಯಾರ್ ಬರ್ತಾರೆ ? | Filmibeat Kannada

  ಸದ್ಯ ಪ್ರಸಾರ ಆಗುತ್ತಿರುವ ಕನ್ನಡ ಕಿರುತೆರೆಯ ಕಾರ್ಯಕ್ರಮಗಳ ಪೈಕಿ 'ನಂ 1 ಯಾರಿ ವಿತ್ ಶಿವಣ್ಣ' ಶೋ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ. ಪ್ರತಿ ಭಾನುವಾರ 8 ಗಂಟೆಗೆ ಈ ಕಾರ್ಯಕ್ರಮಕ್ಕಾಗಿ ಟಿವಿ ಮುಂದೆ ಕೂರುವ ವೀಕ್ಷಕರ ಸಂಖ್ಯೆ ತುಂಬ ದೊಡ್ಡದಿದ್ದೆ. ಹೆಚ್ಚು ಜನಪ್ರಿಯತೆ ಇದ್ದರೂ ಸಹ ಈ ಕಾರ್ಯಕ್ರಮ ಕೇವಲ 13 ಸಂಚಿಕೆ ಮಾತ್ರ ಪ್ರಸಾರ ಆಗಲಿದೆ. ಈಗಾಗಲೇ 6 ಸಂಚಿಕೆ ಪ್ರಸಾರ ಆಗಿದ್ದು ಇನ್ನೂ 7 ಬಾಕಿ ಇದೆ.

  ಕಾರ್ಯಕ್ರಮದ ಸಂಚಿಕೆಗಳ ಸಂಖ್ಯೆ ಕಡಿಮೆ ಇರುವ ಕಾರಣ ಯಾವ ಯಾವ ನಟ, ನಟಿಯರು ಈ ಶೋಗೆ ಬರುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಉಪೇಂದ್ರ, ಶರಣ್, ಧನಂಜಯ್, ವಸಿಷ್ಟ, ಆರ್ಯ ಸೇರಿದಂತೆ ಅನೇಕ ಸ್ಟಾರ್ ನಟರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ ಮುಂದಿನ ಸಂಚಿಕೆಗಳಿಗೆ ಬರುವ ಅತಿಥಿಗಳ ಪಟ್ಟಿ ಇದೀಗ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ಮುಂದೆ ಓದಿ...

  'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.? 'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.?

  ರಮೇಶ್ ಅರವಿಂದ್

  ರಮೇಶ್ ಅರವಿಂದ್

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಇದೀಗ ನಟ ರಮೇಶ್ ಅರವಿಂದ್ ಬಂದಿದ್ದಾರೆ. ನಟ ರಮೇಶ್ ಜೊತೆಗೆ ಗೌರವ್ ಎನ್ನುವ ಅವರ ಸ್ನೇಹಿತರೊಬ್ಬರು ಯಾರಿ ಯಾಗಿ ಕಾರ್ಯಕ್ರಮದಲ್ಲಿ ಸಾಥ್ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಟಿ ಪಾರೂಲ್ ಯಾದವ್ ಕೂಡ ಭಾಗಿಯಾಗಿದ್ದಾರೆ. ಈಗಾಗಲೇ ಈ ಕಾರ್ಯಕ್ರಮ ಪ್ರೊಮೋ ಹೊರ ಬಂದಿದ್ದು ಇದೇ ಭಾನುವಾರ ಕಾರ್ಯಕ್ರಮ ಪ್ರಸಾರ ಆಗಲಿದೆ.

  ರಕ್ಷಿತಾ - ರಾಗಿಣಿ ದ್ವಿವೇದಿ

  ರಕ್ಷಿತಾ - ರಾಗಿಣಿ ದ್ವಿವೇದಿ

  ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಹಾಗೂ ರಾಗಿಣಿ ದ್ವಿವೇದಿ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಅತಿಥಿ ಆಗಲಿದ್ದಾರೆ. ಈಗಾಗಲೇ ಇವರ ಸಂಚಿಕೆಯ ಚಿತ್ರೀಕರಣ ನಡೆದಿದೆ. ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ಗ್ಲಾಮರ್ ಕ್ವೀನ್ ರಾಗಿಣಿ ಇಬ್ಬರು ಬಹಳ ವರ್ಷಗಳಿಂದ ಒಳ್ಳೆಯ ಸ್ನೇಹಿತೆಯರಾಗಿದ್ದು, ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ. ಈ ಹಿಂದೆ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಸಹ ಈ ಇಬ್ಬರು ನಟಿಯರು ಜೊತೆಗೆ ಬಂದಿದ್ದರು.

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.? 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?

  ಯೋಗರಾಜ್ ಭಟ್ - ವಿ.ಹರಿಕೃಷ್ಣ

  ಯೋಗರಾಜ್ ಭಟ್ - ವಿ.ಹರಿಕೃಷ್ಣ

  ನಿರ್ದೇಶಕ ಯೋಗರಾಜ್ ಭಟ್ ಅವರ ಪರಮಾಪ್ತ ಗೆಳೆಯರಲ್ಲಿ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಪ್ರಮುಖರಾದವರು. ಈ ಇಬ್ಬರು ಈಗ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿಯೂ ಒಂದಾಗಿದ್ದಾರೆ. ಈಗಾಗಲೇ ಈ ಸಂಚಿಕೆಯ ಚಿತ್ರೀಕರಣವಾಗಿದ್ದು, ಪ್ರಸಾರ ಯಾವಾಗ ಎನ್ನುವ ಬಗ್ಗೆ ಸದ್ಯದಲ್ಲಿಯೇ ತಿಳಿಯಲಿದೆ. 'ಗಾಳಿಪಟ' ಚಿತ್ರದಿಂದ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಜೋಡಿ ಒಂದಾಗಿದ್ದು, ಇಲ್ಲಿಯವರೆಗೆ ಅವರ ಸ್ನೇಹ ಮುಂದುವರೆದಿದೆ. ಭಟ್ಟರ ಬಹುಪಾಲು ಚಿತ್ರಕ್ಕೆ ಹರಿಕೃಷ್ಣ ಸಂಗೀತ ಇದೆ.

  ಕಿಚ್ಚ ಸುದೀಪ್ - ಪ್ರೇಮ್

  ಕಿಚ್ಚ ಸುದೀಪ್ - ಪ್ರೇಮ್

  ಈಗಾಗಲೇ ನಟ ಸುದೀಪ್ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿರುವ ಸುದ್ದಿ ಎಲ್ಲರಿಗೆ ತಿಳಿದಿದೆ. ಸುದೀಪ್ ಗೆ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರೇಮ್ ಜೊತೆಯಾಗಿದ್ದಾರೆ. ಸುದೀಪ್ ಮತ್ತು ಪ್ರೇಮ್ ಇಬ್ಬರು ಒಳ್ಳೆಯ ಗೆಳೆಯರಾಗಿದ್ದಾರೆ. ಈ ಸಂಚಿಕೆಯಲ್ಲಿ ಇಡೀ 'ದಿ ವಿಲನ್' ಟೀಂ ಯಾರಿ ಮನೆಯಲ್ಲಿ ಇರಲಿದ್ದಾರೆ. ವಿಶೇಷ ಅಂದರೆ ಸುದೀಪ್ ಅವರ ಈ ಸಂಚಿಕೆ ಕಾರ್ಯಕ್ರಮದ ಕೊನೆಯ ಸಂಚಿಕೆಯಾಗಿ ಪ್ರಸಾರ ಮಾಡುವ ಸಾಧ್ಯತೆ ಹೆಚ್ಚಾಗಿದೆ.

  ರಮೇಶ್ ಜೊತೆಗೆ 'ನಂ 1 ಯಾರಿ' ಶೋಗೆ ಬಂದವರು ಯಾರು? ರಮೇಶ್ ಜೊತೆಗೆ 'ನಂ 1 ಯಾರಿ' ಶೋಗೆ ಬಂದವರು ಯಾರು?

  ಶ್ರೀ ಮುರಳಿ - ನರ್ತನ್

  ಶ್ರೀ ಮುರಳಿ - ನರ್ತನ್

  'ಮಫ್ತಿ' ಸಿನಿಮಾದ ಸಮಯದಲ್ಲಿಯೇ ನಿರ್ದೇಶಕ ನರ್ತನ್ ಮತ್ತು ನಟ ಶ್ರೀ ಮುರಳಿ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಬಂದಿದ್ದರು. ಈ ಸಂಚಿಕೆ ಈ ಹಿಂದೆಯೇ ಪ್ರಸಾರ ಆಗಬೇಕಿತ್ತು. ಆದರೆ ಇದುವರೆಗೆ ಈ ಸಂಚಿಕೆ ಹೊರಬಂದಿಲ್ಲ. ಹೀಗಿರುವಾಗ ಕಾರ್ಯಕ್ರಮ ಮುಗಿಯುವುದರ ಒಳಗಾದರು ಈ ಸಂಚಿಕೆ ಪ್ರಸಾರ ಆಗುತ್ತದೆಯೋ ಇಲ್ವೋ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  ದರ್ಶನ್ ಬರಬೇಕು

  ದರ್ಶನ್ ಬರಬೇಕು

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟ ದರ್ಶನ್ ಬರಬೇಕು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಹಿಂದೆಯೇ ಒಂದು ಫೋಲ್ ಏರ್ಪಡಿತ್ತು. ಅದರಲ್ಲಿ ಸಾಕಷ್ಟು ಅಭಿಮಾನಿಗಳು ಡಿ ಬಾಸ್ ಮತ್ತು ಶಿವರಾಜ್ ಕುಮಾರ್ ಅವರನ್ನು ಒಟ್ಟಿಗೆ ಈ ಕಾರ್ಯಕ್ರಮದಲ್ಲಿ ನೋಡಲು ಬಯಸಿದ್ದರು.

  7 ಸಂಚಿಕೆ ಬಾಕಿ ಉಳಿದಿದೆ

  7 ಸಂಚಿಕೆ ಬಾಕಿ ಉಳಿದಿದೆ

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಆರು ಸಂಚಿಕೆಗಳು ಪ್ರಸಾರ ಆಗಿದೆ. ಇನ್ನೂ ಏಳು ಸಂಚಿಕೆಗಳು ಪ್ರಸಾರ ಆದರೆ, ಕಾರ್ಯಕ್ರಮ ಮುಗಿಯುತ್ತದೆ. ಈ ಕಾರ್ಯಕ್ರಮದಲ್ಲಿ ಕೇವಲ ಹದಿಮೂರು ಸಂಚಿಕೆಗಳಷ್ಟೇ ಪ್ರಸಾರ ಆಗಲಿದೆ. ಕಾರಣ, 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಆಯೋಜಕರು ಪ್ಲಾನ್ ಮಾಡಿದ್ದೇ ಹದಿಮೂರು ಸಂಚಿಕೆಗಳು. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಾಲ್ ಶೀಟ್ ಪಡೆದದ್ದು ಕೂಡ ಹದಿಮೂರು ಸಂಚಿಕೆಗಳಿಗಾಗಿ. ಹೀಗಾಗಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದರೂ, ಅನಿವಾರ್ಯವಾಗಿ ಶೋಗೆ ಶುಭಂ ಹಾಡಬೇಕಾಗಿದೆ.

  English summary
  Star Suvarna channels popular show 'No1 yari with Shivanna' program guest list. Kannada actor Sudeep, Ramesh Aravind, director Yogaraj Bhat will be part of this show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X