ಲೂಸ್ ಮಾದ ಯೋಗಿ ಡೈಲಾಗ್‌ಗೆ ರೀಲ್ಸ್; ವರ್ಷ ರಾಕ್.. ಅಮೃತಾ ಶಾಕ್, ಇದು ಅಮೃತವರ್ಷಿಣಿ ವರ್ಷನ್..!

By ಎಸ್ ಸುಮಂತ್

ಹಳೆ ಧಾರಾವಾಹಿಗಳನ್ನು ನೋಡಿದವರು ಯಾರೂ ಕೂಡ ಮರೆಯುವಂತೆಯೇ ಇಲ್ಲ. ಹಿಂದಿನ ಧಾರಾವಾಹಿಯಲ್ಲೂ ಶ್ರೀಮಂತಿಕೆ ಇದ್ದರು ಈಗಿನ ಧಾರಾವಾಹಿಗಳ ರೀತಿ ಅದ್ದೂರಿತನವಾಗಲೀ, ಆಡಂಬರವಾಗಲಿ ಇರುತ್ತಾ ಇರಲಿಲ್ಲ. ಈಗಂತೂ ಪ್ರತಿಯೊಂದು ಧಾರಾವಾಹಿಯಲ್ಲೂ ಅದ್ದೂರಿತನ ಎದ್ದು ಕಾಣುತ್ತದೆ. ಆದರೆ ಈಗಲೂ ಅಮೃತವರ್ಷಿಣಿ ಧಾರಾವಾಹಿ ಎಲ್ಲರ ಮನಸ್ಸಲ್ಲೂ ಉಳಿದುಬಿಟ್ಟಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅಮೃತವರ್ಷಿಣಿ ಧಾರಾವಾಹಿ ಬರ್ತಾ ಇತ್ತು. ಅದರಲ್ಲಿ ಅಮೃತಾ ಪಾತ್ರದಲ್ಲಿ ರಜಿನಿ, ವರ್ಷಾ ಪಾತ್ರದಲ್ಲಿ ಸ್ವಾತಿ ಅಭಿನಯಿಸಿದ್ದರು. ಅಮೃತಾ ತುಂಬಾ ಸಾಫ್ಟ್ ಕ್ಯಾರೆಕ್ಟರ್, ವರ್ಷಾ ಕಿತಾಪತಿಯ ಕ್ಯಾರೆಕ್ಟರ್. ಧಾರಾವಾಹಿ ಮುಗಿದು ಬಹಳ ವರ್ಷಗಳೇ ಆಗಿವೆ. ಇತ್ತಿಚೆಗಷ್ಟೇ ಡಿಜಿಟಲ್‌ನಲ್ಲೂ ಚೆನ್ನಾಗಿಯೇ ಓಡಿತ್ತು. ಇದೀಗ ಅಮೃತವರ್ಷಿಣಿ ಫ್ರೆಂಡ್ಸ್ ಭೇಟಿ ಮಾಡಿದ್ದಾರೆ.

Star Suvarna serial amruthavarshini serial fame Rajini and Varsha reels

ಒಟ್ಟಿಗೆ ಕಾಣಿಸಿಕೊಂಡ ಅಮೃತಾ-ವರ್ಷ

ಅಮೃತ ವರ್ಷಿಣಿ ಧಾರಾವಾಹಿಯಲ್ಲಿ ಇಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಜಿನಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸ್ವಾತಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಮುಗಿದ ಮೇಲೆ ಇಬ್ಬರು ಎಲ್ಲಿಯೂ ಭೇಟಿ ಮಾಡಿರಲಿಲ್ಲ. ಈಗಲೂ ಧಾರಾವಾಹಿಯ ಕ್ರೇಜ್, ಅಮೃತ-ವರ್ಷಿಣಿ ಅಭಿಮಾನಿ ಬಳಗ ದೊಡ್ಡದಿದೆ. ಧಾರಾವಾಹಿ ಮುಗಿದು ಬಹಳ ವರ್ಷಗಳ ಬಳಿಕ ಅಮೃತ-ವರ್ಷ ಭೇಟಿ ಮಾಡಿದ್ದಾರೆ. ಆ ಫೋಟೋ-ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಫನ್ ರೀಲ್ ಮಾಡಿದ ಅಮೃತಾ ವರ್ಷಿಣಿ

ರಜಿನಿ ಫನ್ ಮಾಡೋದು ಜಾಸ್ತಿ. ರೀಲ್ಸ್ ಗಳನ್ನು ಹೆಚ್ಚಾಗಿ‌ಮಾಡ್ತಾ ಇರುತ್ತಾರೆ. ಫೋಟೋಶೂಟ್ ಮಾಡಿಸಿ, ಹೊಸ ಹೊಸ ಫೊಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅವರೆಷ್ಟು ಜಾಲಿ ಅನ್ನೋದು ಅರ್ಥವಾಗುತ್ತದೆ. ಅದರಲ್ಲೂ ಫಿಟ್ನೆಸ್ ಫ್ರೀಕ್ ಆಗಿರುವ ರಜಿನಿ, ಜಿಮ್ ನಲ್ಲೂ ಕಾಮಿಡಿ‌ ಮಾಡ್ತಾ ಇರುತ್ತಾರೆ. ಇಷ್ಟು ಜಾಲಿ ಜಾಲಿಯಾಗಿ ಇರುವ ರಜಿನಿ, ಹಿಟ್ಲರ್ ಕಲ್ಯಾಣದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಮೃತಾ ನಟನೆಗೆ ಫ್ಯಾನ್ಸ್ ಫಿದಾ

ಸ್ವಾತಿ ಹಾಗೂ ರಜಿನಿ, ಲೂಸ್ ಮಾದ ಯೋಗಿ ಡೈಲಾಗ್ ಒಂದಕ್ಕೆ ರೀಲ್ಸ್ ಮಾಡಿದ್ದಾರೆ. ಬರಲ್ಲ ಅಂತ ಹೇಳಿದ್ದೆ, ಬಂದ್ಯಲ್ಲ. ಹೋಗು ಹೊರಗೆ ಎಂಬ ಡೈಲಾಗ್ ಅದು. ಅದರಲ್ಲು ರಜಿನಿ ಸ್ಟೆಪ್ ನಿಂದ ಹೆಗರಿ ಬರುವುದು, ನಾನೇನು ನಿಂಗೆ ಜೋಕರ್ ಥರ ಕಾಣ್ತಾ ಇದ್ದೀನೇನೋ ಅನ್ನೋ ಡೈಲಾಗ್ ಗೆ ಹೊಡೆಯೋ ಥರ ಹೋಗುವುದು. ಎಲ್ಲವೂ ಹಾಸ್ಯ ಪ್ರಧಾನವಾಗಿದೆ. ರಜಿನಿ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಮೃತಾ ನಿಮ್ಮ ನಟನೆ ಸೂಪರ್ ಅಂತೆಲ್ಲಾ ಕಮೆಂಟ್ ಮಾಡುತ್ತಾ ಇದ್ದಾರೆ.

ಇಬ್ಬರು ಸೀರಿಯಲ್‌ನಲ್ಲಿ ಬ್ಯುಸಿ

ಇನ್ನು ಇಬ್ಬರು ನಟಿಯರು ಬೇರೆ ಬೇರೆ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಸ್ವಾತಿ, ಜೀ ಕನ್ನಡದ ಅಮೃತಧಾರೆ ಎಂಬ ಧಾರಾವಾಹಿಯಲ್ಲಿ ಗೌತಮ್ ಕ್ಲೋಸ್ ಫ್ರೆಂಡ್ ಫ್ಯಾಮಿಲಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಜಿನಿ ಹಿಟ್ಲರ್ ಕಲ್ಯಾಣದಲ್ಲಿ ಎಜೆ ಹೆಂಡತಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಆ ಧಾರಾವಾಹಿ ಮುಗಿದಿದ್ದು, ಈಗ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಫಿಟ್ನೆಸ್ ಫ್ರೀಕ್ ಆಗಿರುವ ರಜಿನಿ, ಒಳ್ಳೆ ಡ್ಯಾನ್ಸರ್ ಕೂಡ. ಸೋಷಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಮಾಡಿ ವಿಡಿಯೋ ಹಾಕುತ್ತಾ ಇರುತ್ತಾರೆ.

More from Filmibeat

English summary
star Suvarna serial amruthavarshini Written Update on Rajini social media episode. Here is the details about Rajini said the dialogue of the movie Yogi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X