Avanu matte shravani: ಸ್ಟಾರ್ ಸುವರ್ಣದಲ್ಲಿ ಬರ್ತಿದೆ 'ಅವನು ಮತ್ತೆ ಶ್ರಾವಣಿ'.. ಮೇಕಿಂಗ್ ವಿಡಿಯೋ ಹೇಗಿದೆ ನೋಡಿ?

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿಗಳ ಆಗಮನವಾಗುತ್ತಾ ಇರುತ್ತದೆ. ಕೆಲವೊಮ್ಮೆ ಈ ಹಿಂದೆ ಫೇಮಸ್ ಆಗಿದ್ದ ಟೈಟಲ್‌ನಲ್ಲಿಯೇ ಹೊಸ ಕಥೆಯನ್ನು ಶುರು ಮಾಡಲಾಗುತ್ತದೆ. ಆದರೆ, ಈಗ ಮೂಡಿ ಬರಲು ರೆಡಿಯಾಗಿರುವ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ವಿಭಿನ್ನತೆಯಿಂದ ಕೂಡಿದೆ. ಹಳೆ ಹೆಸರೇ ಆದರೂ ಹೊಸ ರೂಪದಲ್ಲಿ ಬರುತ್ತಿದೆ. ಸ್ಟಾರ್ ಸುವರ್ಣ ಪ್ರಿಯರಲ್ಲಂತೂ ಕುತೂಹಲ ಹೆಚ್ಚಿಸಿದೆ.

ಈ ಬಾರಿ ಮೂಡಿ ಬರುತ್ತಿರುವ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ಕೇವಲ ಧಾರಾವಾಹಿ ಪ್ರಿಯರನ್ನಷ್ಟೇ ಅಲ್ಲ, ಮುಖ್ಯವಾಗಿ ಶ್ವಾನ ಪ್ರಿಯರನ್ನು ಸೆಳೆಯುತ್ತಿದೆ. ದೂರವಾದ ಇಬ್ಬರನ್ನು ಶ್ವಾನ ಹೇಗೆ ಒಂದು ಮಾಡುತ್ತದೆ ಎಂಬ ಭಾವನಾತ್ಮಕ ದೃಶ್ಯಗಳು ಇದರಲ್ಲಿ ಸೆರೆಯಾಗಿವೆ.

avanu-matthe-shravani-kannada-serial

ಅಂದು ಮಗು.. ಇಂದು ಶ್ವಾನ..!

ಈ ಹಿಂದೆ ಸ್ಟಾರ್ ಸುವರ್ಣದಲ್ಲಿ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ಎಲ್ಲರ ಗಮನ ಸೆಳೆದಿತ್ತು. ಅಲ್ಲಿ ಭಾವನೆಗಳ ಒಡನಾಟವೇ ಹೆಚ್ಚಾಗಿತ್ತು. ಅದು ತಂದೆ ಮಗುವಿನ ಬಾಂಧವ್ಯ, ತಾಯಿ ಮಗುವಿನ ಬಾಂಧವ್ಯ. ಅದೇ ಹೆಸರಿನಲ್ಲಿ ಮತ್ತೆ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ಶುರುವಾಗುತ್ತಾ ಇದೆ. ಈ ಬಾರಿಯೂ ಅಷ್ಟೇ ಭಾವನೆಗಳು ನೋಡುಗರನ್ನು ಟಚ್ ಮಾಡುತ್ತದೆ. ಆದರೆ, ಹೆಚ್ಚು ಕನೆಕ್ಟ್ ಆಗುವುದು ಶ್ವಾನ ಪ್ರಿಯರಿಗೆ. ಭೂಮಿ ಮೇಲೆ ಇತ್ತೀಚೆಗಿನ ದಿನಗಳಲ್ಲಿ ಶ್ವಾನ ಪ್ರಿಯರು ಹೆಚ್ಚಾಗುತ್ತಲೆ ಇದ್ದಾರೆ. ಅಂಥವರಿಗೆ ಈ ಧಾರಾವಾಹಿ ಸಿಕ್ಕಾಪಟ್ಟೆ ಬೇಗ ಕನೆಕ್ಟ್ ಆಗುತ್ತದೆ.

ಮೇಕಿಂಗ್ ವಿಡಿಯೋ ಹೇಗಿದೆ..?

ಎಲ್ಲಾ ಧಾರಾವಾಹಿಗಳಿಗೂ ಅದರದ್ದೇ ಆದ ಟೈಟಲ್ ಟ್ರ್ಯಾಕ್ ಇದ್ದೆ ಇರುತ್ತದೆ. ಆ ಟ್ರ್ಯಾಕ್ ಮೂಲಕವೇ ಧಾರಾವಾಹಿಯ ಮುಂದಿನ ಘಟನೆಗಳನ್ನು ಅಳೆಯಬಹುದು. ಇದೀಗ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲೂ ಟೈಟಲ್ ಟ್ರ್ಯಾಕ್ ಇದೆ. ಅದರ ಮೇಕಿಂಗ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಗೋಕರ್ಣ ಬೀಚ್‌ನಲ್ಲಿ, ಆ ಮುದ್ದು ಶ್ವಾನದೊಂದಿಗೆ ಹಾಡನ್ನು ಮಾಡಲಾಗಿದೆ.

avanu-matthe-shravani-kannada-serial

ಶ್ರಾವಣಿ ಹಂಚಿಕೊಂಡ ಅನುಭವವೇನು..?

ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಪೂಜಾ ರಮೇಶ್ ಕಾಣಿಸಿಕೊಂಡಿದ್ದಾರೆ. ಗೋಕರ್ಣ ಬೀಚ್‌ನಲ್ಲಿ ನಡೆದ ಶೂಟಿಂಗ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ. "ಗೋಕರ್ಣದ ಬಳಿ ಮತ್ತೊಂದು ದ್ವೀಪ ಇದೆ. ಅಲ್ಲಿಗೆ ಹೋಗಿದ್ದೆವು. ಬೆಳಗ್ಗೆ ಅಲ್ಲಿಗೆ ಹೋದರೆ ಏನು ಕಾಣುವುದಿಲ್ಲ, ಎಲ್ಲವೂ ಕ್ಲೋಸ್ ಆಗಿರುತ್ತದೆ. ಅಲ್ಲಿಗೆ ಬೋಟ್ ಮೂಲಕ ಹೋದೆವು. ಅಲ್ಲಿ ಶೂಟ್ ಮಾಡುವಾಗ ಎಲ್ಲಾ ಉಲ್ಟಾ ಹೇಳಬೇಕಿತ್ತು. ಅದು ಬಹಳ ಕಷ್ಟ ಆಯಿತು" ಎಂದಿದ್ದಾರೆ.

ಬೀಚ್ ಸಾಂಗ್ ನಿರೀಕ್ಷೆ ಠುಸ್

'ಅವನು ಮತ್ತೆ ಶ್ರಾವಣಿ' ಟೈಟಲ್ ಸಾಂಗ್ ಅನ್ನು ಬೀಚ್ ಬಳಿ ಶೂಟ್ ಮಾಡಲಾಗಿದೆ. ಈ ಬಗ್ಗೆ ಅನುಭವ ಹಂಚಿಕೊಂಡ ಸ್ಕಂದ ಅಲಿಯಾಸ್ ಅಭಿಮನ್ಯು, 'ಬೀಚ್ ಸಾಂಗ್ ಅಂದರೆ ಮಜಾ ಮಾಡಬಹುದು ಅಂದುಕೊಂಡೆ ಹೋದೆವು. ಆದರೆ ಅಲ್ಲಿ ಎಲ್ಲಾ ಉಲ್ಟಾ ಆಗಿತ್ತು. ಬೀಚ್‌ನಲ್ಲಿ ಶೂಟ್ ಮಾಡಿದಾಗಲೇ ಗೊತ್ತಾಗಿದ್ದು ಕಾನ್ಸೆಪ್ಟ್ ಉಲ್ಟಾ ಇದೆ ಅಂತ. ಇಬ್ಬರು ಟೇಕ್ ಮೇಲೆ ಟೇಕ್ ತೆಗೆದುಕೊಳ್ಳುತ್ತಾ ಇದ್ದೆವು" ಎಂದು ಬೀಚ್ ಬಳಿ ನಡೆದ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಆ ‌ಮುದ್ದು ಶ್ವಾನ ಕೂಡ ತಮ್ಮ ಬೀಚ್ ಅನುಭವ ಹೇಗಿತ್ತು ಅನ್ನೋದನ್ನ ಬೌಬೌ ಅಂತ ಬೊಗಳೋ ಮೂಲಕ ಹೇಳಿಕೊಂಡಿದೆ.

More from Filmibeat

English summary
Star suvarna serial Avanu Mathe Shravani Written Update on Making video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X