Avanu Matte Shravani:ಶ್ರಾವಣಿಯ ಬದುಕಲ್ಲಿ ರಾವಣನಾಗಿ ಬಿಟ್ಟನಾ ಅಭಿ? ನರಕ ತೋರಿಸಲು ಅಷ್ಟೊಂದು ಕಾತುರವೇಕೆ?
ಸ್ಟಾರ್ ಸುವರ್ಣದಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ 'ಅವನು ಮತ್ತೆ ಶ್ರಾವಣಿ'ಯ ಕಥೆ ಕುತೂಹಲವನ್ನು ಹುಟ್ಟಿಸುತ್ತಿದೆ. ಇದೇ ಹೆಸರಿನ ಹಳೇ ಧಾರಾವಾಹಿಯೂ ಬೇರೆಯದ್ದೇ ರೀತಿಯಾಗಿ ಜನರನ್ನು ಸೆಳೆದಿಟ್ಟುಕೊಂಡಿತ್ತು. ಆದರೆ, ಈಗಿನ ಹೊಸ ಧಾರವಾಹಿ, ಸಿಂಪತಿ, ಕುತೂಹಲಗಳನ್ನೆಲ್ಲಾ ಒಟ್ಟಾಗಿ ಮೂಡಿವಂತೆ ಮಾಡುತ್ತಿದೆ.
ಏನು ಬೇಡವೆಂದುಕೊಂಡಳೋ ಶ್ರಾವಣಿಯ ಬದುಕಲ್ಲಿ ಅದೇ ನಡೆದು ಹೋಗಿದೆ. ಕನಸ್ಸಲ್ಲೂ ಆ ವಿಚಾರ ಬಂದರೆ ಗಾಬರಿಯಿಂದ ಎದ್ದೇಳುತ್ತಿದ್ದಳು. ಅದೇ ಅಭಿಯ ವಿಚಾರ. ಬೇಡ ಬೇಡವೆಂದು ಎಷ್ಟೇ ದೂರ ಓಡಿದರು, ವಿಧಿ ಎಂಬ ಆಟಕ್ಕೆ ನಿಜಕ್ಕೂ ಶ್ರಾವಣಿ ಲಾಕ್ ಆಗಿದ್ದಾಳೆ. ಮತ್ತೆ ಅಭಿಯ ಕೈಯನ್ನೇ ಹಿಡಿದಿದ್ದಾಳೆ. ಯಾವುದನ್ನು ನರಕ ಎಂದುಕೊಂಡಿದ್ದಳೋ ಆ ನರಕದ ಕೂಪಕ್ಕೆ ಬಂದು ಬಿದ್ದಿದ್ದಾಳೆ.

ಇಷ್ಟವಿಲ್ಲದ ಮದುವೆಗೆ ಕೊರಳೊಡ್ಡಿದ ಶ್ರಾವಣಿ
ಅಭಿ ಜೊತೆಗೆ ಶ್ರಾವಣಿಯ ತಂಗಿಯ ಮದುವೆ ಫಿಕ್ಸ್ ಆಗಿತ್ತು. ಆದರೆ, ಅಭಿಗೆ ಮೊದಲೇ ಮದುವೆ ಆಗಿದ್ದು ತಿಳಿದು, ನಿಶಿತಾಳ ಜೊತೆಗೆ ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಆಗಿತ್ತು. ಶ್ರಾವಣಿಯ ದೊಡ್ಡಪ್ಪ, ಈ ಮದುವೆಯ ಹಿಂದೆ ಯಾವುದೋ ದೊಡ್ಡ ಹುನ್ನಾರವನ್ನೇ ಮಾಡಿರುವಂತೆ ಕಾಣುತ್ತಿದೆ. ಅದಕ್ಕೆ ಅಭಿ ಕುಟುಂಬದ ಸಂಬಂಧ ಬಿಡುವುದಕ್ಕೆ ಒಪ್ಪಲೇ ಇಲ್ಲ. ನಿಶಿತಾ ಇಲ್ಲದೆ ಹೋದರೆ, ಶ್ರಾವಣಿ ಅಂತ, ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಮದುವೆ ಮಾಡಿಸಿಯೇ ಬಿಟ್ಟರು.
ಅಭಿ ಎಂದರೆ ನರಕ ಎಂದುಕೊಂಡಿದ್ದ ಶ್ರಾವಣಿ
ಅಭಿ ಕಂಡರೆ ಶ್ರಾವಣಿಗೆ ನರಕದ ಭಯ. ಯಾಕಂದ್ರೆ ಕಾಲೇಜು ದಿನಗಳಲ್ಲಿಯೇ ಇಬ್ಬರಿಗೂ ಪ್ರೀತಿಯಾಗಿತ್ತು. ಮನೆಯವರಿಗೂ ಹೇಳದೆ ಮದುವೆಯನ್ನು ಆಗಿದ್ದರು. ಇಬ್ಬರ ನಡುವಿನ ಮನ:ಸ್ತಾಪದಿಂದ ಡಿವೋರ್ಸ್ ಪಡೆದಿದ್ದಾರೆ. ಈಗ ಈ ಜೋಡಿ ಮತ್ತೆ ಮರು ಮದುವೆ ಆಗಿದೆ. ಅಭಿ ಎಂದರೆ ನರಕ, ನೆಮ್ಮದಿ ಇಲ್ಲ ಎಂಬ ಅಭಿಪ್ರಾಯಕ್ಕೆ ಶ್ರಾವಣಿ ಬಂದಾಗಿದೆ. ಹೀಗಾಗಿಯೇ ಮತ್ತೆ ಅದೇ ಕೂಪಕ್ಕೆ ಬಿದ್ದಾಗಿದೆ. ಮುಂದಿನ ಜೀವನ ಹೇಗಪ್ಪ ಎಂಬ ಚಿಂತೆಯಲ್ಲಿ ಇದ್ದಾಳೆ.

ಶ್ರಾವಣಿಗೆ ಭಯ ಹುಟ್ಟಿಸಿದ ಅಭಿ
ಶ್ರಾವಣಿಯ ಪ್ರತಿಯೊಂದು ಮಾತುಗಳು ಅಭಿಗೆ ನೆನಪಿದೆ. ಅಭಿ ಮೊದಲಿದ್ದ ಹಾಗೆ ಇಲ್ಲ. ಇಬ್ಬರಲ್ಲೂ ಅಹಂ ಅಡ್ಡಿಯಾಗುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೀಗಾಗಿ ಮದುವೆಯಾಗಿ ಮನೆಗೆ ಬಂದ ಶ್ರಾವಣಿಗೆ ಅಭಿ ಭಯ ಹುಟ್ಟಿಸಿದ್ದಾನೆ. ಇದು ನರಕ, ಇನ್ಮುಂದೆ ನರಕದಲ್ಲಿಯೇ ನೀನು ಇರುತ್ತೀಯಾ. ನಿನ್ನ ಹಳೆ ಮಾತನ್ನು ನೆನಪಿಸಿಕೊ ಅಂತೆಲ್ಲಾ ವ್ಯಂಗ್ಯವಾಗಿ ಹೇಳುವುದಲ್ಲದೆ, ಶ್ರಾವಣಿಗೆ ಥೇಟ್ ರಾವಣನಂತ ಫೀಲ್ ಬರುವ ರೀತಿ ನಡೆದುಕೊಂಡಿದ್ದಾನೆ. ಅಭಿಯ ವರ್ತನೆಗೆ ಶ್ರಾವಣಿ, ಅಕ್ಷರಶಃ ಬೆಚ್ಚಿದ್ದಾಳೆ.
ಖುಷಿ ಇರಬೇಕಾದ ಶ್ರಾವಣಿ ಕಣ್ಣಲ್ಲಿ ನೀರು
ಮೊದಲ ಬಾರಿಗೆ ಮದುವೆಯಾದಾಗ ಮನೆಯವರಿಗೆ ಗೊತ್ತಿಲ್ಲದೇ ಹೇಗೊ ಡಿವೋರ್ಸ್ ಕೂಡ ಪಡೆದು ಬಿಟ್ಟರು. ಆದರೆ ಈಗ ಮನೆಯವರ ಮುಂದೆ, ಸಂಬಂಧಿಕರ ಮುಂದೆ, ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದಾನೆ. ಶ್ರಾವಣಿಗೂ ಬೇರೆ ಆಯ್ಕೆ ಇಲ್ಲ. ಅಭಿಗೂ ಬೇರೆ ಆಯ್ಕೆಯಿಲ್ಲ. ಮಾತುಕತೆಯಲ್ಲೂ ಅಷ್ಟೇ, ವಾದದಲ್ಲೂ ಅಷ್ಟೇ ಇಬ್ಬರು ಸೋಲುವ ಮಾತೇ ಇಲ್ಲ. ಮೊದಲು ತೆಗೆದುಕೊಂಡಂತೆ ಮತ್ತೆ ಡಿವೋರ್ಸ್ ತೆಗೆದುಕೊಳ್ಳುವ ಆಯ್ಕೆಯನ್ನು ವಿಧಿಯೇ ನೀಡಿಲ್ಲ. ಹೀಗಾಗಿ ಉತ್ತರ - ದಕ್ಷಿಣದಂತೆ ಇರುವ ಶ್ರಾವಣಿ ಮತ್ತು ಅಭಿಯ ನಡುವೆ ಪ್ರೀತಿ ಚಿಗುರಲೇಬೇಕಾಗಿದೆ. ಅದಕ್ಕೆ ಬೇಕಾದ ಬೆಂಬಲ ನೀಡುವುದಕ್ಕೆ ಚೀಕೂ ಇದ್ದೇ ಇದೆ. ಆ ದಿನಗಳ ಬದಲಾವಣೆ ಹೇಗೆ ಆಗಬಹುದು ಎಂಬ ಕುತೂಹಲವಷ್ಟೇ.


Click it and Unblock the Notifications











