ಸೆಕೆಂಡ್ಸ್ ಅಂದ್ರೇನೆ ಮುಟ್ಟದ ನಿಶ್ಚಿತಾ.. ಶ್ರಾವಣಿಯ ಗಂಡನ ವಿಚಾರದಲ್ಲಿ ಸಿದ್ಧಾಂತ ಗಾಳಿಗೆ ತೂರುತ್ತಾಳಾ?

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ ಇಂದಿನಿಂದ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ಶುರುವಾಗಿದೆ. ವಿಭಿನ್ನ ಕಥೆಯನ್ನು ಹೊತ್ತು ಧಾರಾವಾಹಿ‌ ಎಲ್ಲರ‌ನ್ನು ಸೆಳೆಯುವ ನಿರೀಕ್ಷೆಯಿಂದ ಬರುತ್ತಿದೆ‌. ಅದರಲ್ಲೂ ಶ್ವಾನ ಪ್ರಿಯರಿಗಾಗಿಯೇ ಹೆಚ್ಚು ಗಮನ ಹರಿಸಿದೆ. ಈಗಾಗಲೇ ಪ್ರೋಮೋಗಳಿಂದ, ಸಾಂಗ್ ನಿಂದ ಎಲ್ಲರನ್ನು ಸೆಳೆದಿದೆ.

ಡಿಫ್ರೆಂಟ್ ಆಗಿ ಮನೆಯವರ ಪರಿಚಯವನ್ನು ಮಾಡಿಕೊಡಲಾಗಿದೆ. ಈ ಧಾರಾವಾಹಿಯಲ್ಲಿ ಹೈಲೈಟ್ ಅಂದರೆ ಅದು ಚೀಕು ಎಂಬ ಶ್ವಾನ. ಆ‌ ಶ್ವಾನಕ್ಕೆ ಅಪ್ಪ ಅಮ್ಮನೇ ಈ ಧಾರಾವಾಹಿಯ ನಾಯಕ-ನಾಯಕಿ. ಈ ಚೀಕುಗೆ ಯಾರೆಲ್ಲಾ ಇಷ್ಟ ಆಗ್ತಾರೆ ಎಂಬುದೇ ಧಾರಾವಾಹಿಯ ಮುಖ್ಯವಾದ ವಿಚಾರ. ಹಾಗಾದರೆ, ಮೊದಲ ದಿನದ ಎಪಿಸೋಡ್ ಹೇಗಿರಲಿದೆ ಅನ್ನೋದನ್ನ ನೋಡಿ.

star-suvarna-serial-avanu-matte-shravani

ಶ್ರಾವಣಿ ಕಂಡು ಮನೆಯವರೆಲ್ಲಾ ಖುಷಿ

ಶ್ರಾವಣಿಗೆ ಮನೆಯವರೆಂದರೆ ಪ್ರೀತಿ ಜಾಸ್ತಿ. ಮನೆಯವರಿಗೂ ಶ್ರಾವಣಿ ಎಂದರೆ ಇನ್ನಿಲ್ಲದ ಪ್ರೀತಿ. ಅವಳನ್ನು ನೋಡುವುದಕ್ಕೆ ಹಂಬಲಿಸುತ್ತಾ ಇರುತ್ತಾರೆ. ಅದರಂತೆ ತಂಗಿಯ ಮದುವೆಗಾಗಿ ಈಗ ಶ್ರಾವಣಿ ವಿದೇಶದಿಂದ ಮನೆಗೆ ಬಂದಿದ್ದಾಳೆ. ಮನೆಯವರೆಲ್ಲಾ ಅವಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಣ್ಣ-ಅತ್ತಿಗೆ, ತಮ್ಮ-ತಂಗಿ ಎಲ್ಲರಿಗೂ ಶ್ರಾವಣಿಯನ್ನು ನೋಡಿದ ಖುಷಿ ಜೋರಾಗಿತ್ತು. ಅದರಲ್ಲೂ ನಿಶ್ಚಿತಾಗೆ, ಶ್ರಾವಣಿ ಫಾರಿನ್‌ನಿಂದ ಏನೆಲ್ಲಾ ಗಿಫ್ಟ್ ತಂದಿದ್ದಾಳೆ ಎಂಬುದರ ಮೇಲೆಯೇ ಕಣ್ಣು ಇತ್ತು.

ಶ್ರಾವಣಿಯ ತಲೆಯಲ್ಲಿ ತಂಗಿಯದ್ದೇ ಚಿಂತೆ

ನಿಶ್ಚಿತಾಳ ಮದುವೆಗಾಗಿಯೇ ಶ್ರಾವಣಿ ಮನೆಗೆ ಬಂದಿದ್ದಾಳೆ. ಆದರೆ, ಅವಳ ತಲೆಯಲ್ಲಿ ತಂಗಿಯದ್ದೇ ಚಿಂತೆ. ಬಹಳ ಸಮಯ ಕಾದಳು. ಅದನ್ನು ಕೇಳದೆ ಸುಮ್ಮನೆ ಇದ್ದಳು. ಆದರೆ, ಕಡೆಯಲ್ಲಿ ಶ್ರಾವಣಿ ಅದನ್ನು ಕೇಳಿಯೇ ಬಿಟ್ಟಿದ್ದಾಳೆ. ನಿಶಿ, ನಿನಗೆ ಈ ಮದುವೆ ನಿಜವಾಗಲೂ ಇಷ್ಟ ಇದೆಯಾ. ಅದರಲ್ಲೂ ನೀನಿನ್ನು ಡಿಗ್ರಿಯನ್ನೇ ಪೂರ್ತಿ ಮಾಡಿಲ್ಲ. ಆದರೂ ಯಾಕೆ ಇಷ್ಟು ಬೇಗ ಮದುವೆ ಆಗುತ್ತಾ ಇದ್ದೀಯಾ ಎಂದೇ ಕೇಳಿದ್ದಾಳೆ‌. ಅದಕ್ಕೆ ಮನೆಯವರೆಲ್ಲಾ ಸೇರಿ ನಿಶ್ವಿತಾಳನ್ನು ರೇಗಿಸಿದ್ದಾರೆ.

star-suvarna-serial-avanu-matte-shravani

ಮನೆಯವರಿಗೆ ಗೊತ್ತು ನಿಶ್ಚಿತಾ ಪ್ಲ್ಯಾನ್

ನಿಶ್ಚಿತಾಗೆ ರಿಚ್ ಲೈಫ್ ಅಂದರೆ ಬಹಳ ಇಷ್ಟ. ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿಯೇ ಹುಟ್ಟಿದ್ದರು, ಲೈಫ್ ಲೀಡ್ ಮಾಡುವುದು ಮಾತ್ರ ರಾಯಲ್ ಆಗಿನೇ. ಹೀಗಾಗಿ ಮದುವೆಯಾಗುವ ಹುಡುಗ ಕೂಡ ಶ್ರೀಮಂತನೇ ಆಗಬೇಕು ಎಂಬುದು ಅವಳ ಆಸೆ. ಅಭಿಮನ್ಯು ಸಿಕ್ಕಾಪಟ್ಟೆ ಶ್ರೀಮಂತ ಕುಟುಂಬದ ಕುಡಿ. ಅದಕ್ಕಾಗಿಯೇ ನಿಶ್ಚಿತಾ, ಲೈಫ್ ಸೆಟಲ್ ಆಗುತ್ತೆ ಎಂಬ ಕಾರಣಕ್ಕೇನೆ ಒಪ್ಪಿಕೊಂಡಿದ್ದಾಳೆ. ಇದು ಮನೆಯವರಿಗೆಲ್ಲಾ ಗೊತ್ತು. ಆದರೆ ಶ್ರಾವಣಿಗೆ, ಲೈಫ್ ಬೋರ್ ಆಗ್ತಾ ಇತ್ತು ಅದಕ್ಕೆ ಮದುವೆ ಆಗುತ್ತಾ ಇದ್ದೀನಿ ಅಂತ ನಿಶ್ಚಿತಾ ಹೇಳಿ ಕಾಲೆಳೆದಿದ್ದಾಳೆ.

ಚೀಕುಗಾಗಿ ಒಂದಾಗುತ್ತಾರಾ ಶ್ರಾವಣಿ-ಅಭಿಮನ್ಯು..?

ನಿಶ್ಚಿತಾ ಯಾವತ್ತೂ ಕೂಡ ಸೆಕೆಂಡ್ ಹ್ಯಾಂಡ್ ಕಡೆ ತಿರುಗಿಯೂ ನೋಡುವುದಿಲ್ಲ. ಸೆಕೆಂಡ್ ಹ್ಯಾಂಡ್ ಫೋನ್, ಬಟ್ಟೆ ಏನನ್ನು ಮುಟ್ಟುವುದಿಲ್ಲ. ಆದರೆ, ಈಗ ಶ್ರೀಮಂತ ಎಂಬ ಕಾರಣಕ್ಕೆ ಈಗಾಗಲೇ ಮದುವೆಯಾಗಿರುವ, ಚೀಕು ಎಂಬ ಶ್ವಾನಕ್ಕೆ ಅಧಿಕೃತ ಅಪ್ಪ ಅಮ್ಮ ಆಗಿರುವ ಅಭಿಮನ್ಯುನನ್ನು ಮದುವೆಯಾಗಲು ಹೊರಟಿದ್ದಾಳೆ. ನಿಶ್ಚಿತಾಗೆ ಸತ್ಯಾಂಶ ಗೊತ್ತಿಲ್ಲ. ಹೇಳುವವರು ಯಾರು ಇಲ್ಲ. ಒಂದು ವೇಳೆ ಅಭಿಮನ್ಯು ತನ್ನ ಅಕ್ಕನ ಗಂಡ ಎಂಬುದು ತಿಳಿದರೆ, ನಿಶ್ಚಿತಾ ಹಣಕ್ಕೆ ಬೆಲೆ ಕೊಡುತ್ತಾಳಾ? ತನ್ನ ಸಿದ್ಧಾಂತಕ್ಕೆ ಬೆಲೆ ಕೊಡುತ್ತಾಳಾ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

More from Filmibeat

English summary
Star suvarna serial Avanu Matte Shravani Written Update on October 2nd episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X