Avanu matte shravani: ಅಭಿಮನ್ಯು ಹೆಸರಿಗೆ ಬೆಚ್ಚಿಬಿದ್ದಿದ್ದಾಳೆ ಶ್ರಾವಣಿ.. ಚೀಕು ಕಣ್ಣಿಗೆ ಬಿದ್ದರೂ ಸಾಕು..!
'ಅವನು ಮತ್ತೆ ಶ್ರಾವಣಿ' ಹೊಸದಾಗಿ ಶುರುವಾಗಿರುವ ಧಾರಾವಾಹಿ. ಸ್ಟಾರ್ ಸುವರ್ಣದಲ್ಲಿ ಕೆಲ ದಿನಗಳ ಹಿಂದಷ್ಟೇ ಶುರುವಾಗಿದೆ. ಆರಂಭವಾಗಿ ಮೂರು ದಿನಗಳಾಗಿದ್ದು, ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಹಳೆಯ ಪ್ರೀತಿಯೇ ಮತ್ತೆ ಎದುರು ಬದುರಾಗುವ ಸಾಧ್ಯತೆ ಇದೆ.
ಶ್ವಾನಕ್ಕೆ ಒಂದ್ಸಲ ಪ್ರೀತಿ ಕೊಟ್ಟರೆ ತನ್ನ ಮಾಲೀಕರನ್ನು ಆ ಶ್ವಾನ ಯಾವತ್ತಿಗೂ ಮರೆಯುವುದಿಲ್ಲ. ಜೊತೆಗೆ ಹೆಚ್ಚಿನ ಪ್ರೀತಿಯನ್ನೇ ನೀಡುತ್ತದೆ. ಈಗ ಶ್ರಾವಣಿ ಮತ್ತು ಅಭಿಮನ್ಯು ವಿಚಾರದಲ್ಲಿಯೂ ಅದೇ ಆಗಿದ್ದು, ನಿಶ್ಚಿತಾರ್ಥದ ದಿನ ಚೀಕು ತನ್ನ ಅಪ್ಪ ಅಮ್ಮನನ್ನು ಮುಖಾ ಮುಖಿ ಮಾಡುವ ಸಾಧ್ಯತೆ ಇದೆ.

ಹೆಸರು ಕೇಳಿನೇ ಶ್ರಾವಣಿ ಶಾಕ್
ಶ್ರಾವಣಿ ವಿದೇಶದಿಂದ ಬಂದಿರುವುದೇ ತಂಗಿಯ ಮದುವೆಗಾಗಿ. ನಿಶ್ಚಿತಾ ಮದುವೆಯಾಗುತ್ತಿದ್ದಾಳೆ ಎಂಬ ಖುಷಿ ಒಂದು ಕಡೆಯಾದರೆ, ಇನ್ನು ಶಿಕ್ಷಣವೇ ಮುಗಿದಿಲ್ಲ ಇಷ್ಟು ಬೇಗ ಮದುವೆ ಯಾಕೆ ಎಂಬ ಬೇಸರ ಮತ್ತೊಂದು ಕಡೆ. ಇದರ ನಡುವೆ ನಿಶ್ಚಿತಾ ಮದುವೆಯಾಗುತ್ತಿರುವ ಹುಡುಗನ ಹೆಸರನ್ನೇ ಶ್ರಾವಣಿ ತಿಳಿದುಕೊಂಡಿರಲಿಲ್ಲ. ತಮ್ಮನ ಬಳಿ ಕಡೆಗೂ ಹೆಸರನ್ನ ಕೇಳಿದ್ದಾಳೆ. ನಿಶ್ಚಿತಾ ಮದುವೆಯಾಗುತ್ತಿರುವ ಹುಡುಗ, ಅಭಿ, ಅಭಿಮನ್ಯು ಎಂದೇ ಹೇಳಿದ್ದಾನೆ. ಒಂದು ಕ್ಷಣ ಶ್ರಾವಣಿಗೆ ಮರಿಬೇಕು ಎಂದುಕೊಂಡಿದ್ದ ನೆನಪೆಲ್ಲಾ ಕಣ್ಣ ಮುಂದೆ ಬಂದಿದೆ. ಆ ಹೆಸರನ್ನು ಕೇಳಿಯೇ ಗಾಬರಿಯಾಗಿದ್ದಾಳೆ.
ಅಭಿಮನ್ಯುಗಾಗಿ ಶ್ರಾವಣಿಯ ಹುಡುಕಾಟ
ಅಭಿಮನ್ಯು ಮತ್ತು ಶ್ರಾವಣಿ ಈ ಮೊದಲೇ ಮದುವೆಯಾಗಿ, ಮುರಿದುಕೊಂಡವರು. ಅಭಿಮನ್ಯುವನ್ನು ಬಿಟ್ಟ ಮೇಲೆ ಶ್ರಾವಣಿ ಫಾರಿನ್ ಹೋಗಿ ಬಿಟ್ಟಳು. ಈಗ ತಂಗಿಯ ಮದುವೆಗಾಗಿ ಬಂದಿದ್ದಾಳೆ. ನೋಡಿದರೆ ಅದೇ ಹೆಸರಿನ ಹುಡುಗನ ಜೊತೆಗೆ ನಿಶ್ಚಿತಾರ್ಥ ನಡೆಯುತ್ತಿದೆ. ಆದರೆ, ಆ ಹೆಸರಿನವನೇ ನನ್ನ ಅಭಿಮನ್ಯುನಾ ಎಂಬ ಆತಂಕ ಅವಳಲ್ಲಿ ಕಾಡುತ್ತಿದೆ. ಅದಕ್ಕೆ ಇಡೀ ಸಮಾರಂಭದಲ್ಲೆಲ್ಲಾ ಶ್ರಾವಣಿಯ ಕಣ್ಣು ಅಭಿಮನ್ಯುನನ್ನೇ ಹುಡುಕುತ್ತಿದೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ. ಶ್ರಾವಣಿ ಜೊತೆಗಿರುವ ಫ್ರೆಂಡ್ ಎಷ್ಟೇ ಸಮಾಧಾನ ಮಾಡಿದರು ಶ್ರಾವಣಿ ಮಾತ್ರ ಸಮಾಧಾನ ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಬದಲಿಗೆ ಈ ಅಭಿಮನ್ಯು ಆ ಅಭಿಮನ್ಯು ಆಗಿರಬಾರದು ಎಂದೇ ಬಯಸುತ್ತಿದ್ದಾಳೆ.

ಶ್ರಾವಣಿಯ ವಾಸನೆಗೆ ಬೊಗಳಿದ ಚೀಕು
ನಾಯಿ ಮರಿಗಳಿಗೆ ಹೇಗೆ ಇದ್ದರು, ಎಲ್ಲಿಯೇ ಇದ್ದರು ತಮ್ಮ ಮಾಲೀಕರನ್ನು ವಾಸನೆಯಿಂದಾನೇ ಕಂಡು ಹಿಡಿಯುತ್ತಾರೆ ಎಂಬ ಮಾತಿದೆ. ಶ್ವಾನಗಳು ನಡೆದುಕೊಳ್ಳುವುದು ಕೂಡ ಅದೇ ರೀತಿ. ಈಗ ಚೀಕು ಕೂಡ ಹಾಗೇ ನಡೆದುಕೊಳ್ಳುತ್ತಿದ್ದಾನೆ. ನಿಶ್ಚಿತಾರ್ಥದ ಸಮಾರಂಭದಲ್ಲಿ ಶ್ರಾವಣಿ ಬಂದಿದ್ದಾಳೆ ಅನ್ನೋ ವಾಸನೆ ಚೀಕುಗೆ ಸಿಕ್ಕಿದೆ. ಅದಕ್ಕೆ ಆದ್ಯಾಳ ಕೈಯಿಂದ ಬಿಡಿಸಿಕೊಂಡು ಓಡಿ ಹೋಗಲು ಪ್ರಯತ್ನ ಪಡುತ್ತಿದ್ದಾನೆ. ಆದರೆ ಆದ್ಯಾ ಅದನ್ನು ಕಟ್ಟಿನೇ ಹಾಕಿದ್ದಾಳೆ.
ಚೀಕು ಕೂಗು ಅರ್ಥವಾಗುತ್ತಾ ಅಭಿಮನ್ಯುಗೆ..?
ಚೀಕು ಶಬ್ದ ಕೇಳಿಸಿಕೊಂಡು ಅಭಿಮನ್ಯುನೇ ಬಂದಿದ್ದಾನೆ. ಚೀಕುಗೆ ಒಂದೆರಡು ಸಮಾಧಾನದ ಮಾತುಗಳನ್ನ ಆಡಿದಾಗ ಅದು ಸುಮ್ಮನೆ ಆಗಿದೆ. ಆದರೆ ಆದ್ಯಾ ಇದೇ ಸಮಯಕ್ಕೆ ನಿನ್ನದೇ ಎಂಗೇಜ್ಮೆಂಟ್ ಎಂದ ಕೂಡಲೇ ಚೀಕು ಬೊಗಳುವುದಕ್ಕೆ ಆರಂಭಿಸಿದೆ. ಆಗಲು ಚೀಕುನನ್ನೆ ಸಮಾಧಾನ ಮಾಡಿ, ಅಭಿಮನ್ಯು ಮುಂದೆ ನಡೆದಿದ್ದಾನೆ. ಇದರಿಂದ ಚೀಕು ಮನಸ್ಸಿಗೂ ಬೇಸರವಾಗಿದೆ. ಆ ಕಡೆ ಗಂಡಿನ ಕೋಣೆ ಹುಡುಕಿದ ಶ್ರಾವಣಿ ಆ ಅಭಿಮನ್ಯು ಯಾರೆಂದು ನೋಡಲು ಹೋಗಿದ್ದಾಳೆ. ಆದರೆ, ಆ ಸಮಯದಲ್ಲೂ ಶ್ರಾವಣಿಯ ಎದೆ ಬಡಿತ ಜೋರಾಗಿದೆ.


Click it and Unblock the Notifications











