ಮೇಕಪ್ ಟಿಪ್ಸ್ ಬೇಕು ಅಂದ್ರೆ, 'ಬೆಟ್ಟದ ಹೂ' ಧಾರಾವಾಹಿಯ ಮಾಲಿನಿ ವಿಡಿಯೋ ನೋಡಿ
ಹೆಣ್ಣು ಮಕ್ಕಳಿಗೆ ಮೇಕಪ್ ಮೇಲೆ ಒಂದು ರೀತಿಯ ಸ್ಪೆಷಲ್ ವ್ಯಾಮೋಹ. ಮೇಕಪ್ ಇಲ್ಲದೆ ಹೊರ ನಡೆಯುವುದು ಸ್ವಲ್ಪ ಕಷ್ಟ. ಈ ಹಿಂದೆ ಮೇಕಪ್ ವಿಚಾರಕ್ಕೆ ಅಷ್ಟೊಂದು ಮಾನ್ಯತೆ ಕೊಡದೆ ಇದ್ದರೂ, ಸದ್ಯದ ಕಾಲ ತುಂಬಾ ಬದಲಾಗಿದೆ. ಹೀಗಾಗಿ ಮೇಕಪ್‌ಗೆ ಹೆಣ್ಣು ಮಕ್ಕಳು ಹೆಚ್ಚು ಮಾನ್ಯತೆ ಕೊಡುವಂತಾಗಿದೆ. ಬ್ರೈಡಲ್ ಮೇಕಪ್ ಎಂಬುದು ಸಾಕಷ್ಟು ಇಷ್ಟವಾಗುತ್ತೆ. ಹಾಗಂತ ಯಾವಾಗಲೂ ಮೇಕಪ್ ಮಾಡಿಕೊಂಡು ಕೂರುವುದಕ್ಕೂ ಆಗಲ್ಲ. ಯಾವಾಗಲೂ ಹಣ ಕೊಟ್ಟು ಪಾರ್ಲರ್‌ಗೆ ಹೋಗುವುದಕ್ಕೂ ಆಗಲ್ಲ. ಹಾಗಂತ ಮೇಕಪ್ ಇಲ್ಲದೆ ಹೋಗುವುದಕ್ಕೆ ಆಗಲ್ಲ. ಇದಕ್ಕೆ ಅಂತಾನೆ 'ಬೆಟ್ಟದ ಹೂ' ಧಾರಾವಾಹಿಯ ಮಾಲಿನಿ ಸಿಂಪಲ್ ಆಗಿ, ಚೆಂದವಾಗಿ ಕಾಣುವಂತ ಮೇಕಪ್ ಹೇಗೆ ಮಾಡಿಕೊಲ್ಳುವುದು ಅಂತ ತೋರಿಸಿದ್ದಾರೆ.
ಮೇಕಪ್ ಎಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಮೇಕಪ್ ಮಾಡಿಕೊಳ್ಳುವುದಕ್ಕೆ ಬಾರದೆ ಹೋದರು ಯೂಟ್ಯೂಬ್‌ನಲ್ಲಿ ಸಾಕಷ್ಟು ಬಾರಿ ಹುಡುಕಾಟವಂತು ಮಾಡಿರುತ್ತೀರಿ. ಆ ಮೇಕಪ್ ತುಂಬಾ ದುಬಾರಿಯಾಗಿದ್ದರೆ, ಇಲ್ಲಿ ಮಾಲಿನಿ ತುಂಬಾ ಸಿಂಪಲ್ ಆಗಿ ಮೇಕಪ್ ಮಾಡುವುದನ್ನು ಹೇಳಿ ಕೊಟ್ಟಿದ್ದಾರೆ. ಆ ಒಂದು ವಿಡಿಯೋ ನೋಡಲು ಮುಂದೆ ಓದಿ.

ಮಾಲಿನಿ ಎಂದರೆ ರಾಹುಲ್‌ಗೆ ಇಷ್ಟ
ಸದ್ಯ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಮಾಲಿನಿ ಮತ್ತು ರಾಹುಲ್ ನಡುವಿನ ರೊಮ್ಯಾನ್ಸ್ ಆಗಾಗ ನಡೆಯುತ್ತಲೇ ಇರುತ್ತದೆ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಮಾಲಿನಿ ಕೊಂಚ ಮೃದು ಸ್ವಭಾವದ ಹುಡುಗಿ. ಬೇರೆಯವರಿಗೆ ಮೋಸ ಮಾಡುವ ಗುಣದವಳಲ್ಲ. ಆದರೆ ಗೊತ್ತಿಲ್ಲದೆ ಹೂವಿ ಎಂಬ ಮುಗ್ಧ ಹುಡುಗಿಗೆ ಮಾಲಿನಿಯಿಂದ ಮೋಸವಾಗುತ್ತಿದೆ. ಒಂದು ವೇಳೆ ಆ ವಿಚಾರ ಗೊತ್ತಾದರೆ ಖಂಡಿತ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತಾಳೆ. ರಾಹುಲ್ ಎಂದರೆ ಅತಿಯಾದ ಪ್ರೀತಿ ಇರುವುದರಿಂದಲೇ ಕಣ್ಣಿಗೆ ಮಂಕು ಕವಿದಿದೆ. ಗಂಡನ ಮೊದಲ ಹೆಂಡತಿ ಎಂದು ತಿಳಿಯದೆ, ಮನೆ ಕೆಲಸದವಳನ್ನಾಗಿ ಮಾಡಿಕೊಂಡಿದ್ದಾರೆ. ಪ್ರೀತಿಸಿ ಹೊಸದಾಗಿ ಮದುವೆಯಾಗಿರುವ ಗಂಡ ಹೆಂಡತಿ ನಡುವೆ ಆಗಾಗ ರೊಮ್ಯಾಂಟಿಕ್ ದೃಶ್ಯಗಳು ನಡೆಯುತ್ತಲೆ ಇರುತ್ತವೆ.

ಕಿರುತೆರೆಯ ಜೀರೊ ಸೈಜ್ ನಟಿ ಮಾಲಿನಿ
ನಟಿಯರಿಗೆ ಫಿಟ್ನೆಸ್ ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ಜೀರೊ ಸೈಜ್ ಕಾಪಾಡಿಕೊಳ್ಳುವ ನಟಿಯರು ಸಿಗುವುದು ತುಂಬಾ ಕಡಿಮೆ. ಬೆಳ್ಳಿತೆರೆಯಲ್ಲಿ ಅದಿತಿ ಪ್ರಭುದೇವ ಜೀರೊ ಸೈಜ್ ನಟಿಯೆಂದೆ ಖ್ಯಾತಿ ಪಡೆದಿದ್ದಾರೆ. ಇದೀಗ ಕಿರುತೆರೆಯಲ್ಲಿ ಆ ಸರದಿ ಮಾಲಿನಿಯದ್ದು. ಮಾಲಿನಿ ಸೋಶಿಯಲ್ ಮೀಡಿಯಾದಲ್ಲಿ ಯಾವುದಾದರೂ ಫೋಟೊ ಶೇರ್ ಮಾಡಿಕೊಂಡರೂ ಅಭಿಮಾನಿಗಳು ಕಮೆಂಟ್ ಬಾಕ್ಸ್‌ನಲ್ಲಿ ನೀವೂ ಅದಿತಿ ಪ್ರಭುದೇವ ರೀತಿಯೇ ಕಾಣುತ್ತೀರಿ ಎಂದು ಹೊಗಳುತ್ತಾರೆ. ಒಂದೊಂದು ಫೋಟೊಗೂ ಸಿಕ್ಕಾಪಟ್ಟೆ ಕಮೆಂಟ್‌ಗಳು ಸಿಗುತ್ತವೆ. ಸಿಕ್ಕಾಪಟ್ಟೆ ಲೈಕ್ಸ್ ಬೀಳುತ್ತವೆ. ಇತ್ತೀಚೆಗೆ ಮಾಲಿನಿಗೆ ಅಭಿಮಾನಿಗಳು ಕೂಡ ಹೆಚ್ಚಾಗುತ್ತಿದ್ದಾರೆ.

'ಬೆಟ್ಟದ ಹೂ' ಮಾಲಿನಿ ನಿಜವಾದ ಹೆಸರೇನು?
'ಬೆಟ್ಟದ ಹೂ' ಧಾರಾವಾಹಿ ಮಾಡುವುದಕ್ಕೂ ಮುನ್ನ ಮಾಲಿನಿ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ ಟಿವಿಯ 'ಮನಸಾರೆ' ಧಾರಾವಾಹಿಯಲ್ಲೂ ಮುಖ್ಯವಾದ ಪಾತ್ರದಲ್ಲಿಯೇ ಮಿಂಚಿದ್ದರು. ಇದೀಗ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಮಾಲಿನಿಯಾಗಿ ಕಥೆಗೊಂದು ಮುಖ್ಯಘಟ್ಟ ತರುವಲ್ಲಿ ಈ ಪಾತ್ರವೇ ಪ್ರಮುಖ ಸ್ಥಾನ ವಹಿಸಲಿದೆ. ಮಾಲಿನಿ ಎಂದೇ ಖ್ಯಾತಿ ಪಡೆದಿರುವ ನಟಿಯ ನಿಜವಾದ ಹೆಸರು ಪ್ರಕೃತಿ ಕೆ ಪ್ರಸಾದ್ ಎಂಬುದು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಎಲ್ಲಾ ಫೋಟೊಗಳಲ್ಲೂ ತುಂಬಾ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ.
ತಮ್ಮ ಸ್ಟೈಲ್ ಬಗ್ಗೆ ಮಾಲಿನಿ ಹೇಳಿದ್ದೇನು?
ಪ್ರಕೃತಿ ಕೆ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ. ಆಗಾಗ ಹೊಸ ಹೊಸ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೊಸ ಹೊಸ ಹಾಡುಗಳಿಗೆ ರೀಲ್ಸ್ ಮಾಡುತ್ತಿರುತ್ತಾರೆ. ಪ್ರಕೃತಿಗೆ ಸುಮಾರು 40 ಸಾವಿರ ಫಾಲೋವರ್ಸ್ ಇದ್ದಾರೆ. ತಮ್ಮ ಫಾಲೋವರ್ಸ್‌ಗಾಗಿ ಆಗಾಗ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಹೊಸ ಹೊಸ ಡ್ರೆಸ್ ಹಾಕಿಕೊಂಡು ಇದರಲ್ಲಿ ಯಾವ ಸ್ಟೈಲ್‌ನಲ್ಲಿ ಪ್ರಕೃತಿ ನೋಡಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಬೆಂಬಲಿಗರಿಗೆ ಬಿಡುತ್ತಾರೆ. ಅದರಂತೆ ಹೇರ್ ಸ್ಟೈಲ್‌ನಲ್ಲಿಯೂ ಅಷ್ಟೇ ಹೊಸ ಹೊಸ ಹೇರ್ ಸ್ಟೈಲ್ ಮಾಡಿಸಿ, ಯಾವುದು ಇಷ್ಟವೆಂದು ಕೇಳಿದರೆ ಅಭಿಮಾನಿಗಳಲ್ಲಿ ಸಾಕಷ್ಟು ಜನರಿಗೆ ಅವರ ಗುಂಗುರು ಕೂದಲು ಇಷ್ಟವಾಗಿದೆ. ಹೆಚ್ಚು ಜನ ಕಮೆಂಟ್ ಬಾಕ್ಸ್‌ನಲ್ಲಿ ಕರ್ಲಿ ಹೇರ್ ಎಂದೇ ಮೆಸೇಜ್ ಮಾಡಿದ್ದಾರೆ.


Click it and Unblock the Notifications











