ಬೆಟ್ಟದ ಹೂ: ಮಾಲಿನಿ ಮಾಡಿದ ಅವಾಂತರ! ಕ್ಷಣ-ಕ್ಷಣಕ್ಕೂ ಭಯದಲ್ಲಿರುವ ಹೂವಿ-ರಾಹುಲ್
ಚನ್ನವಲ್ಸೆಯಲ್ಲಿ ಏನೋ ಸತ್ಯ ಅಡಗಿದೆ ಎಂಬುದು ಮಾಲಿನಿಗೆ ಗೊತ್ತಾದ ಕ್ಷಣದಿಂದ ಆ ಸತ್ಯದ ಹಿಂದೆ ಬಿದ್ದಿದ್ದಾಳೆ. ಹೇಗಾದರೂ ಮಾಡಿ ಆ ಸತ್ಯವನ್ನು ಕಂಡು ಹಿಡಿಯಲೇಬೇಕು ಎಂದುಕೊಂಡು ಹೂವಿಯ ಜೊತೆಗೆ ಚನ್ನವಲ್ಸೆಗೆ ಹೊರಟೆ ಬಿಟ್ಟಳು. ಅವಳ ಮಾತನ್ನು ತಳ್ಳಿ ಹಾಕುವುದಕ್ಕೂ ಆಗದೆ, ಅಲ್ಲಿ ಬಚಾವ್ ಆಗುವುದಕ್ಕೂ ಆಗದೆ ಹೂವಿ ಮೌನಿಯಾಗಿ ನಡೆದಳು. ರಾಹುಲ್ ಮಾತನಾಡದೆ ಗಾಡಿ ಓಡಿಸಿದ. ಫೈನಲಿ ಚನ್ನವಲ್ಸೆಗೇನೋ ಬಂದು ತಲುಪಿದರೂ ಆದರೆ ಬದುಕಿನ ಒಂದೊಂದು ಕ್ಷಣವೂ ಭಯದಲ್ಲೇ ಬದುಕಿದ್ದಾರೆ.
ಹೂವಿ ಎಂದರೆ ಊರಿನವರಿಗೆಲ್ಲವೂ ಖುಷಿ. ಅವಳು ಸಿಟಿಯಲ್ಲಿ ದೊಡ್ಡ ಮನೆತನದಲ್ಲಿ ಸೊಸೆಯಾಗಿದ್ದಾಳೆ ಎಂಬುದೇ ಎಲ್ಲರಿಗೂ ಖುಷಿ. ಹೀಗಾಗಿಯೇ ಊರವರೆಲ್ಲಾ ಬಂದು ಬಂದು ಮಾತನಾಡಿಸುತ್ತಿದ್ದಾರೆ. ಒಬ್ಬೊಬ್ಬರು ಬಂದಾಗಲೂ ಹೂವಿ ಮತ್ತು ರಾಹುಲ್ ಪ್ರಾಣ ಬಾಯಿಗೆ ಬಂದಂತ ವಾತಾವರಣ ನಿರ್ಮಾಣವಾಗುತ್ತಿದೆ.

ಮಾಲಿನಿಯನ್ನು ರಾಹುಲ್ ಜೊತೆ ಕಂಡು ಕಾಳಿ ಕೆಂಡಾಮಂಡಲ
ಹೂವಿ ಮನೆಗೆ ರಾಹುಲ್, ಮಾಲಿನಿ, ದೀಪ್ತಿ, ನಿಶಾಂತ್ ಬಂದಿದ್ದಾರೆ. ರಾಹುಲ್ ಮತ್ತು ಮಾಲಿನಿ ಒಂದೇ ಕೋಣೆಯಲ್ಲಿದ್ದರು. ಮಾತನಾಡುತ್ತಾ ಕುಳಿತಿದ್ದಾಗ ಕಾಳಿಗೆ ಅನುಮಾನ ಬಂದಿದೆ. ಈ ಹುಡುಗಿ ಬೇರೆ ಗಂಡಸಿನ ಕೋಣೆಗೆ ಯಾಕೆ ಹೋಗಿದ್ದಾಳೆ ಎಂದು ಕೋಪಗೊಂಡ ಕಾಳಿ, ಒಳಗೆ ನುಗ್ಗಿ ಮಾಲಿನಿಯನ್ನೇ ಕ್ಲಾಸ್ ತೆಗೆದುಕೊಂಡಿದ್ದಾಳೆ. ಬೇರೆ ಗಂಡನ ಕೋಣೆಯಲ್ಲಿ ಇರುವುದಕ್ಕೆ ನಾಚಿಕೆಯಾಗಲ್ವಾ, ಇವನೇನು ನಿನ್ನ ಗಂಡನಾ ಎಂದಾಗ, ಮಾಲಿನಿ ಹೌದು ಇವನು ನನ್ನ ಗಂಡನೇ ಎಂದಿದ್ದಾನೆ. ಇದರಿಂದ ಕಾಳಿ ಇನ್ನಷ್ಟು ಕೆಂಡಮಂಡಲಳಾದಾಗ ಅಮ್ಮು ಹೊರ ಕರೆದುಕೊಂಡು ಹೊರಟಿದ್ದಾಳೆ.

ಮಾಲಿನಿಗೆ ತಲೆಕೆಟ್ಟಿದೆ ಎಂದ ಅಮ್ಮು
ಹೂವಿಯ ಅಮ್ಮುಗೆ ಪರಿಸ್ಥಿತಿ ಅತಿರೇಕಕ್ಕೆ ಹೋಗುತ್ತೆ ಎಂಬ ಸುಳಿವು ಸಿಕ್ಕಿದೆ. ತಕ್ಷಣ ತನ್ನ ಅಮ್ಮು ಕಾಳಿಯನ್ನು ಹೊರ ಕರೆದುಕೊಂಡು ಹೋಗಿದ್ದಾಳೆ. ಹೋದವಳೆ ಮಾಲಿನಿಗೆ ತಲೆ ಸರಿ ಇಲ್ಲ. ಸಿಕ್ಕ ವಯಸ್ಸಿನಿಂದಲೂ ಹೀಗೆ ಆಗಿದೆ. ಹಳ್ಳಿ ಕಡೆಗೆ ಕರೆದುಕೊಂಡು ಬಂದರೆ ವಾತಾವರಣ ಸರಿಯಾಗಬಹುದು ಅಂತ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ನೀನು ಅವಳ ಹತ್ತಿರ ಹೋಗಬೇಡ ಎಂದಿದ್ದಾಳೆ.

ಹುಲಿಯನಿಗೂ ಸತ್ಯ ಹೇಳಲಿಲ್ಲ
ಹುಲಿಯಾ ಹೂವಿಯನ್ನು ಸ್ವಂತ ಮಗಳಂತೆ ನೋಡಿಕೊಂಡಿದ್ದಾನೆ. ಹೂವಿ ಊರಿಗೆ ಬಂದಿದ್ದಾಳೆ ಎಂದಿದ್ದೆ ತಡ ಓಡೋಡಿ ಬಂದಿದ್ದಾನೆ. ಹುಲಿಯನನ್ನು ಕಂಡು ಹೂವಿ ಕೂಡ ಸಂತಸಗೊಂಡಿದ್ದಾಳೆ. ಅಲ್ಲಿಯೇ ಇದ್ದ ದೀಪ್ತಿಯನ್ನು ಯಾರು ಎಂದು ಕೇಳಿದಾಗ ಹೂವಿ ಹೇಳುವುದಕ್ಕೆ ಹಿಂಜರಿದಿದ್ದಾಳೆ. ಆಗ ದೀಪ್ತಿ ನಾನು ಹೂವಿ ನಾದಿನಿ ಅಂತ ಹೇಳಿಕೊಂಡಿದ್ದಾಳೆ. ಬಳಿಕ ರಾಹುಲ್ ಬಂದು ಹುಲಿಯನನ್ನು ಪ್ರೀತಿಯಿಂದ ಮಾತನಾಡಿಸಿದ್ದಾನೆ. ಹುಲಿಯನಿಗೆ ಎಲ್ಲರನ್ನು ನೋಡಿ ಸಂತಸವಾಗಿದೆ. ಆದರೆ ಮಾಲಿನಿ ಬರುತ್ತಿದ್ದಂತೆ ಈಕೆ ಯಾರು ಎಂದಾಗ ಹೇಳುವುದಕ್ಕೆ ಉತ್ತರವಿಲ್ಲ. ಹಾಗೋ ಹೀಗೋ ಮಾಲಿನಿ ಸಂಬಂಧವನ್ನು ಮರೆ ಮಾಚಿ ಮುನ್ನಡೆದಿದ್ದಾರೆ.

ಮಾಲಿನಿಗೆ ಸತ್ಯದ ಅರಿವಾಗುತ್ತಾ..?
ಯಾರೇ ಬಂದರೂ ಅಲ್ಲಿ ಎಲ್ಲರ ಪರಿಚಯವಾಗುತ್ತೆ. ಆದರೆ ಮಾಲಿನಿ ಹೆಸರು ಬಂದಾಕ್ಷಣಾ ಅಲ್ಲಿ ಮರೆಮಾಚುವ ಕೆಲಸವಾಗುತ್ತಿದೆ. ಇದು ಮಾಲಿನಿಗೆ ಕೊಂಚ ಅನುಮಾನ ಮೂಡಿಸುತ್ತಿದೆ. ಆದರೆ ಎಷ್ಟೆ ಯೋಚನೆ ಮಾಡುತ್ತಾ ಹೋದರು ಅದಕ್ಕೆ ಉತ್ತರ ಸಿಗುತ್ತಿಲ್ಲ. ಊರಿನವರು ಆಶೀರ್ವಾದ ಮಾಡುವಾಗಲೂ ಹೂವಿ ನೀನು ಚೆನ್ನಾಗಿರಿ ಎಂದೇ ಆಶೀರ್ವಾದ ಮಾಡುತ್ತಿದ್ದಾರೆ. ಇದು ಮಾಲಿನಿಯ ಗೊಂದಕ್ಕೆ ಕಾರಣವಾಗಿದೆ.


Click it and Unblock the Notifications











