For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ಹೂವಿ ತಾಯಿಗೆ ಸತ್ಯ ಗೊತ್ತಾಯ್ತು.. ಮುಂದೇನು ಮಾಡುತ್ತಾಳೆ..?

  By ಎಸ್ ಸುಮಂತ್
  |

  ಸತ್ಯ ಎಷ್ಟೇ ಮುಚ್ಚಿಟ್ಟರು ಮಡಿಲಲ್ಲಿ ಕಟ್ಟಿಕೊಂಡ ಕೆಂಡದಂತೆಯೇ ಸರಿ. ಅದು ಯಾವಾಗ ಮಡಿಲನ್ನು ಸುಡುತ್ತೆ ಎಂಬುದು ಗೊತ್ತಿರಲ್ಲ. ಇದೀಗ ಹೂವಿಯ ಬದುಕು ಕೆಂಡದಿಂದ ಸುಡುತ್ತಿರುವ ಜೀವನವೇ ಆಗಿದೆ. ಮಾಲಿನಿ ಎಂಬ ಕೆಂಡ ಈಗ ಹೂವಿಯ ಮಡಿಲಿಗೆ ಬಿದ್ದಿದ್ದು ಸುಡುತ್ತಲೇ ಇದೆ. ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ದಾರಿಯೂ ಹೂವಿಗೆ ತಿಳಿಯುತ್ತಿಲ್ಲ. ಆದರೂ ಮೌನಿಯಾಗಿ ಕುಳಿತು ಬಿಟ್ಟಿದ್ದಾಳೆ.

  ಹೂವಿ ಕಂಡರೆ ಕೊಂದೆ ಬಿಡಬೇಕು ಎಂದು ಕೊಂಡಿದ್ದ ಮಾಲಿನಿ ಇದೀಗ ಇದ್ದಕ್ಕಿದ್ದ ಹಾಗೇ ಹೂವಿಯ ಜೊತೆಗೇನೆ ಚನ್ನವಲ್ಸೆಗೆ ಹೊರಟಿದ್ದಾಳೆ. ಅದು ಫುಲ್ ಖುಷಿಯಾಗಿ. ಯಾರ ಮುಖದಲ್ಲೂ ಇರದ ಸಂತೋಷ ಮಾಲಿನಿ ಮುಖದಲ್ಲಿ ಕಾಣುತ್ತಿದೆ. ಅದಕ್ಕೆಲ್ಲ ಕಾರಣ ಮುಚ್ಚಿಟ್ಟಿರುವ ಸತ್ಯವನ್ನು ತಿಳಿಯಲೇಬೇಕು ಎಂಬ ಕೆಟ್ಟ ಹಠ.

  ಹೂವಿಯನ್ನು ಮನೆಗೆ ಕರೆದುಕೊಂಡು ಬರುತ್ತೀನಿ ಅಂತ ಹೋಗಿದ್ದಂತ ಮಾಲಿನಿ ಇದ್ದಕ್ಕಿದ್ದ ಹಾಗೇ ತನ್ನ ನಿರ್ಧಾರವನ್ನೇ ಬದಲಾಯಿಸಿಕೊಂಡು ಚನ್ನವಲ್ಸೆಗೆ ಎಲ್ಲರನ್ನು ಕರೆದುಕೊಂಡು ಹೊರಟಿದ್ದಾಳೆ. ಈ ವಿಚಾರವನ್ನು ನಿಶಾಂತ್, ಕರೆ ಮಾಡಿ ಮನೆಯವರಿಗೆ ತಿಳಿಸಿದ್ದಾರೆ. ಇದಕ್ಕೆ ದೊಡ್ಡಪ್ಪ ತುಂಬಾನೇ ಆತಂಕಗೊಂಡಿದ್ದಾರೆ. ಹೂವಿ ಎಂದರೆ ಅಷ್ಟು ಕೋಪ ಮಾಡಿಕೊಳ್ಳುತ್ತಿದ್ದ ಮಾಲಿನಿ ಅದ್ಯಾಕೇ ಚನ್ನವಲ್ಸೆಗೆ ನಡೆದಳು ಎಂದು ಆತಂಕ ಹೊರ ಹಾಕಿದ್ದಾರೆ.

  ಚನ್ನವಲ್ಸೆ ಸತ್ಯ ತಿಳಿಯಲು ಹೊರಟಿದ್ದೇನೆಂದ ಮಾಲಿನಿ

  ಚನ್ನವಲ್ಸೆ ಸತ್ಯ ತಿಳಿಯಲು ಹೊರಟಿದ್ದೇನೆಂದ ಮಾಲಿನಿ

  ಇನ್ನು ಮಾಲಿನಿ ನಡವಳಿಕೆ ಮಂದ್ರಾಗೆ ಆತಂಕ ಸೃಷ್ಟಿಸಿದೆ. ಇದರಿಂದ ಮತ್ತೆ ಮತ್ತೆ ಕರೆ ಮಾಡಿದ್ದಾಳೆ. ಶಾಪಿಂಗ್ ಮಾಡುತ್ತಿದ್ದ ಮಾಲಿನಿ, ಮಂದ್ರಾ ಕರೆ ರಿಸೀವ್ ಮಾಡಿ ಕಾರಣ ಇಲ್ಲದೆ ನಾನು ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ರಾಹುಲ್ ಅವತ್ತು ಯಾವುದೋ ಸತ್ಯವನ್ನು ಹೇಳುವುದಕ್ಕೆ ಹೊರಟಿದ್ದ. ಆ ಸತ್ಯ ಚನ್ನವಲೆಯಲ್ಲಿದೆ ಎಂಬುದು ಗೊತ್ತಾಗಿದೆ. ಅದಕ್ಕೆಂದೆ ಹೊರಟಿರುವುದು ಎಂದಿದ್ದಾಳೆ. ಇದನ್ನು ಕೇಳಿದ ಮಂದ್ರಾಗೆ ಹೊಸದೊಂದು ಆತಂಕ ಶುರುವಾಗಿದೆ. ಒಂದು ವೇಳೆ ಏನನ್ನೋ ಮಾಡಲು ಹೋಗಿ ಇನ್ನೇನೋ ಆದರೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಳೆ.

  ದೀಪ್ತಿ ಬಳಿ ಹೂವಿ ಚರ್ಚೆ

  ದೀಪ್ತಿ ಬಳಿ ಹೂವಿ ಚರ್ಚೆ

  ಇತ್ತ ಮಾಲಿನಿಯ ನಡವಳಿಕೆ ಹೂವಿಗೂ ಅನುಮಾನ ಕಾಡುವಂತೆ ಮಾಡಿದೆ. ನನ್ನ ನೆರಳು ಕಂಡರೆ ಆಗದಂತೆ ಇರುವ ಮಾಲಿನಿ ಅಕ್ಕ ಇದ್ದಕ್ಕಿದ್ದ ಹಾಗೇ ಇಷ್ಟೊಂದು ಪ್ರೀತಿ ಯಾಕೆ ತೋರಿಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಏನೋ ಫ್ಲ್ಯಾನ್ ಮಾಡಿಕೊಂಡಿಯೇ ಹೊರಟಿದ್ದಾರೆ ಎನಿಸುತ್ತಿದೆ. ನನಗೆ ತುಂಬಾ ಆತಂಕವಾಗುತ್ತಿದೆ. ಈ ಸಮಸ್ಯೆಯಿಂದ ಹೇಗೆ ಹೊರಗೆ ಬರುವುದು ಎಂಬುದೇ ತಿಳಿಯುತ್ತಿಲ್ಲ. ಇಲ್ಲಿಂದ ಓಡಿ ಹೋಗಿ ಬಿಡಬೇಕು ಎನಿಸುತ್ತಿದೆ ಎಂದಿದ್ದಾಳೆ. ಅದಕ್ಕೆ ದೀಪಪ್ತಿ ಸಮಾಧಾನ ಮಾಡಿದ್ದಾಳೆ.

  ಮಾಲಿನಿ ಅಂದುಕೊಂಡಂತೆ ಆಯಿತಾ..?

  ಮಾಲಿನಿ ಅಂದುಕೊಂಡಂತೆ ಆಯಿತಾ..?

  ಹೂವಿ ತಾಯಿ ಯಾವತ್ತಿಗೂ ನನ್ನ ಜೀವನ ಹಾಳಾದಂತೆ ಮಗಳ ಜೀವನ ಹಾಳಾಗಬಾರದು ಎಂದೇ ಬಯಸಿದ್ದರು. ಗಂಡನ ಪ್ರೀತಿ ಸಿಗದೆ ಬದುಕಿದ್ದ ಗೌರ, ಮಗಳಿಗೆ ಆ ರೀತಿಯ ಸಮಸ್ಯೆ ಆಗಬಾರದು ಎಂದು ಬಯಸಿದ್ದರು. ಆದರೆ ಈಗ ಏನು ಆಗಬಾರದ್ದೋ ಅದೇ ಆಗಿದೆ. ಸತ್ಯ ತಿಳಿದ ತಾಯಿಯನ್ನು ಹೂವಿಗೆ ಎದುರಿಸಲು ಆಗುತ್ತಿಲ್ಲ. ನನ್ನ ಜೀವನದಂತೆ ಆಗಿ ಹೋಯ್ತಲ್ಲ ಹೂವಿ ಎಂದಾಗ ಹೂವಿಗೆ ದುಃಖ ಬಿಟ್ಟರೆ ಬೇರೆ ಏನು ಕಾಣುತ್ತಿಲ್ಲ. ಆದರೆ ಅದನ್ನು ಹೇಗೆ ತಿಳಿಸಬೇಕು ಎಂಬುದು ಹೂವಿಗೆ ಗೊತ್ತಾಗುತ್ತಿಲ್ಲ. ಸತ್ಯ ಹೇಗೆ ಗೊತ್ತಾಯ್ತು ಎಂಬುದನ್ನು ಯೋಚನೆ ಮಾಡಲು ಆಗದಷ್ಟು ಮಂಕಾಗಿ ಹೋಗಿದ್ದಾಳೆ.

  English summary
  Star suvarna serial Bettada hoo Written Update on October 8th episode. Here is the details about hoovi tension.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X