ಬೆಟ್ಟದ ಹೂ: ಮಾಲಿನಿ ಎದುರೇ ರಾಹುಲ್‌ನನ್ನು ಯಜಮಾನ ಎಂದು ಸಿಕ್ಕಿ ಬಿದ್ದಳು ಹೂವಿ!

By ಎಸ್ ಸುಮಂತ್

ಮಾಲಿನಿ ಮತ್ತು ರಾಹುಲ್ ನಡುವೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಅದು ಮಾಲಿನಿಯ ಅರಿವಿಗೆ ಬಾರದೆಯೂ ಇಲ್ಲ. ರಾಹುಲ್‌ನಲ್ಲಿ ಏನೋ ಬದಲಾವಣೆ ಆಗಿ ಎಂಬುದಂತು ಮಾಲಿನಿಯ ಗಮನಕ್ಕೆ ಬಂದಿದೆ. ಹೀಗಾಗಿ ಆ ಬದಲಾವಣೆ ಏನು, ರಾಹುಲ್ ಹೀಗೆ ಆಡುವುದಕ್ಕೆ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳಲು ಮಾಲಿನಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾಳೆ. ಆ ಪ್ರಯತ್ನದಲ್ಲಿ ಹೂವಿಯ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುವಂತೆ ನೋವು ಉಂಟು ಮಾಡುತ್ತಿದ್ದಾಳೆ.

ರಾಹುಲ್ ಅದ್ಯಾವಾಗ ಆಫೀಸ್ ಕೆಲಸ ಇದೆ, ಚೆನ್ನೈಗೆ ಹೋಗುತ್ತೀದ್ದೀನಿ ಅಂತ ಹೇಳಿ ಹೋದನೋ ಅಂದಿನಿಂದಲೂ ಮಾಲಿನಿಗೆ ಅನುಮಾನದ ಹೊಗೆಯಾಡುತ್ತಿದೆ. ಅದೇ ಸಮಯದಲ್ಲಿ ಹೂವಿ ಕೂಡ ಹೋಗಿ ಕುಳಿತಿದ್ದಳು. ಮತ್ತೆ ರಾಹುಲ್, ಹೂವಿಯನ್ನು ಕರೆತಂದಾಗಿನಿಂದ ಮಾಲಿನಿಯ ವರ್ತನೆ ಸಂಪೂರ್ಣ ಬದಲಾಗಿದೆ. ಹೂವಿ ಮೇಲೆ ವಿನಾಕಾರಣ ಕೋಪಗೊಳ್ಳುತ್ತಿದ್ದಾಳೆ, ಅನುಮಾನ ವ್ಯಕ್ತಪಡಿಸುತ್ತಿದ್ದಾಳೆ. ಇದೀಗ ಹೂವಿ, ರಾಹುಲ್‌ನನ್ನು ಯಜಮಾನರು ಅಂತೇಳಿ ಸರಿಯಾಗಿ ಲಾಕ್ ಆಗಿದ್ದಾಳೆ.

ಹೂವಿಯ ಸಿಂಧೂರದ ಮೇಲೆ ಕಣ್ಣು

ಹೂವಿಯ ಸಿಂಧೂರದ ಮೇಲೆ ಕಣ್ಣು

ಸಿಂಧೂರವನ್ನು ಎಲ್ಲಾ ಹೆಣ್ಣು ಮಕ್ಕಳು ಇಡುತ್ತಾರೆ. ಆದರೆ ಬೈತಲೆ ತೆಗೆಯುವ ಜಾಗದಲ್ಲಿ ಸಿಂಧೂರ ಇಡುವುದು ಮದುವೆಯಾದವರು ಮಾತ್ರ. ಆದರೆ ಹೂವಿ ಮನೆಯಲ್ಲಿ ಯಾರಿಗೂ ಯಾವ ಸತ್ಯವನ್ನು ಹೇಳಿಲ್ಲ. ಆದರೆ ಸಿಂಧೂರ ಇಟ್ಟುಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾವಿತ್ರಿ ವ್ರತದ ದಿನ ಇದೇ ರೀತಿ ಸಿಂಧೂರ ಇಟ್ಟುಕೊಂಡಿದ್ದ ಹೂವಿ ಏನೋ ಒಂದು ನೆಪ ಹೇಳಿ ತಪ್ಪಿಸಿಕೊಂಡಿದ್ದಳು. ಮನೆಯವರೆಲ್ಲ ಅದನ್ನು ಮರೆತಿದ್ದರು. ಆದರೆ ಇದೀಗ ಮತ್ತೆ ಸಿಂಧೂರ ಧರಿಸಿ ಸಿಕ್ಕಿ ಬಿದ್ದಿದ್ದಾಳೆ. ಅದು ಈ ಬಾರಿ ರಾಹುಲ್ ಕೊಟ್ಟ ಸಿಂಧೂರವನ್ನೇ ಧರಿಸಿದ್ದಾಳೆ. ಆ ಸಿಂಧೂರ ಕಾಣದಂತೆ ಕೂದಲನ್ನು ಬಿಟ್ಟುಕೊಂಡಿದ್ದಾಳೆ. ಆದರೂ ಫ್ಯಾನ್ ಹಾಕಿದ ಪರಿಣಾಮ, ಹೂವಿಯ ಸಿಂಧೂರ ರಹಸ್ಯ ಬಟಾ ಬಯಲಾಗಿತ್ತು. ಅದೇ ವಿಚಾರಕ್ಕೆ ಮಾಲಿನಿ ರಾದ್ಧಾಂತ ಮಾಡಿದ್ದಳು.

ಊಟದಿಂದ ಮೇಲೆಳಿಸಿದ್ದ ಮಾಲಿನಿ

ಊಟದಿಂದ ಮೇಲೆಳಿಸಿದ್ದ ಮಾಲಿನಿ

ಮಧ್ಯರಾತ್ರಿಯಲ್ಲಿ ರಾಹುಲ್ ಹೂವಿಗೆ ಊಟ ಬಡಿಸಿದ್ದಾನೆ. ಇದು ಮಾಲಿನಿ ಕೋಪ ಮತ್ತಷ್ಟು ಹೆಚ್ಚು ಮಾಡಲು ಕಾರಣವಾಗಿದೆ. ಊಟ ಮಾಡುತ್ತಿದ್ದ ಹೂವಿ ಬಳಿ ಬಂದ ಮಾಲಿನಿ, ಉಪ್ಪಿನಕಾಯಿ ಬೇಕಾ, ಬೇರೆ ಏನಾದರೂ ಬೇಕಾದರೆ ಹೇಳು ಮಾಡಿ ಬಡಿಸುತ್ತೀನಿ ಎಂದು ಅಣಕವಾಡಿದ್ದಾಳೆ. ಬಳಿಕ ಎದ್ದೇಳೆ ಮೇಲೆ ಅಂತ ಗದರಿದ್ದಾಳೆ. ಅಲ್ಲಿಯೇ ರಾಹುಲ್ ಅದನ್ನು ತಡೆದಿದ್ದಾನೆ. ಸಿಂಧೂರದ ವಿಚಾರ ಅವಳು ನನಗೆ ಹೇಳಲೆಬೇಕು ಎಂದು ಮಾಲಿನಿ ಹಠ ಮಾಡಿದರು, ಅದು ಅವಳ ವೈಯಕ್ತಿಕ ವಿಚಾರ. ಅದನ್ನೆಲ್ಲಾ ಕೇಳುವುದಕ್ಕೆ ದೊಡ್ಡವರಿದ್ದಾರೆ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾನೆ.

ಸತ್ಯ ತಿಳಿಯದೆ ಬಿಡುವುದಿಲ್ಲ ಮಾಲಿನಿ

ಸತ್ಯ ತಿಳಿಯದೆ ಬಿಡುವುದಿಲ್ಲ ಮಾಲಿನಿ

ಮಾಲಿನಿಗೆ ತಲೆಯಲ್ಲಿ ಹುಳ ಬಿಟ್ಟಂತೆ ಆಗಿ ಬಿಟ್ಟಿದೆ. ಹೂವಿಯನ್ನು ಮೊದ ಮೊದಲಿಗೆ ಮಾಲಿನಿ ಕೂಡ ತುಂಬಾನೇ ಪ್ರೀತಿಸುತ್ತಿದ್ದಳು. ಆದರೆ ಇದೀಗ ಮಾತಿಗೆ ಮುಂಚೆ ಮನೆ ಕೆಲಸದವಳು ಎಂದೇ ಹೇಳುತ್ತಾಳೆ. ನಿನ್ನೆಯೆಲ್ಲಾ ಹೂವಿ ಮೇಲೆ ದ್ವೇಷ ಕಾಡಿದ್ದ ಮಾಲಿನಿ, ಇದೀಗ ಹೂವಿಯನ್ನು ಕಾಲೇಜಿಗೆ ಬಿಡುವುದಕ್ಕೆ ತನ್ನ ಕಾರಿನಲ್ಲಿಯೇ ಕರೆದುಕೊಂಡು ಹೊರಟಿದ್ದಾಳೆ. ಅದರ ಹಿಂದೆ ಸತ್ಯ ತಿಳಿಯುವ ಉದ್ದೇಶ ಬಿಟ್ಟರೆ ಬೇರೆ ಏನು ಇಲ್ಲ.

ಮಾಲಿನಿ ಮುಂದೆಯೇ ಯಜಮಾನರು ಎಂದಳಾ

ಮಾಲಿನಿ ಮುಂದೆಯೇ ಯಜಮಾನರು ಎಂದಳಾ

ಮಾಲಿನಿಗೆ ಹೂವಿ ಮೇಲೆ ಅದೆಷ್ಟು ಕೋಪ ಶುರುವಾಗಿದೆಯೋ ರಾಹುಲ್ ಮೇಲೆ ಅಷ್ಟೇ ಅನುಮಾನ ಆರಂಭವಾಗಿದೆ. ಹೂವಿ ಕಂಡರೆ ರಾಹುಲ್ ಯಾಕೆ ಇಷ್ಟು ಸಾಫ್ಟ್ ಆಗುತ್ತಾನೆ ಎಂಬ ಅನುಮಾನ. ಅದನ್ನು ಸಾಕಷ್ಟು ಸಲ ಬಾಯಿ ಬಿಟ್ಟು ಕೂಡ ಕೇಳಿದ್ದಾಳೆ. ಆದರೆ ರಾಹುಲ್ ಉತ್ತರ ನೀಡಿಲ್ಲ. ಇದೀಗ ಹೂವಿ ಬಳಿ ಬಾಯಿ ಬಿಡಿಸಲು ಹೊರಟಿದ್ದಾಳೆ. ಹೂವಿ ಕಾರಿನಲ್ಲಿ ಹಿಂದೆ ಕೂರಲು ಹೋದಾಗ, ಮುಂದೆಯೇ ಕೂರಲು ಹೇಳಿದ್ದಾಳೆ. ಅದು ನಿಮ್ಮ ಸ್ಥಾನ ಎಂದಾಗ ಒಂದು ಸಲ ಕುಳಿತರೆ ನನ್ನ ಸ್ಥಾನಕ್ಕೆ ಯಾವ ಕುತ್ತು ಬರಲ್ಲ ಎಂದು ಹೂವಿಯನ್ನು ಮಾಲಿನಿ ಮುಂದೆಯೇ ಕೂರಿಸಿಕೊಂಡಿದ್ದಾಳೆ. ಆಗ ರಾಹುಲ್ ಕಂಡರೆ ಏನು ಅನ್ನಿಸುತ್ತೆ ಎಂದಾಗ ಯಜಮಾನರು ಎಂದಿದ್ದಾಳೆ. ಇದನ್ನು ಕೇಳಿ ಮಾಲಿನಿ ಶಾಕ್ ಆಗಿದ್ದಾಳೆ.

More from Filmibeat

English summary
Star suvarna serial Bettada hoo & Marali manasagide Written Update on September 1st episode. Here is the details about hoovi tell truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X