ಹೂವಿಯ ಹಿನ್ನೆಲೆ ಹುಡುಕಲು ಹೊರಟ ಮಾಲಿನಿ: ಸ್ವಂತ ತಂಗಿ ಎಂದು ತಿಳಿದರೆ ಅರಗಿಸಿಕೊಳ್ಳುತ್ತಾಳಾ..?
'ಬೆಟ್ಟದ ಹೂ' ಧಾರಾವಾಹಿಯಲ್ಲಿ ದಿನಕ್ಕೊಂದರಂತೆ ಟ್ವಿಸ್ಟ್‌ಗಳು ಸಿಗುತ್ತಿವೆ. ಅಖಿಲ್ ವಿಚಾರದಲ್ಲಿ ರಾಹುಲ್ ಸುದ್ದಿ ಮಾಡಿದ್ದ ಎಂಬ ಕಾರಣಕ್ಕೆ ಮಾಲಿನಿ ಪ್ರೀತಿ ಪ್ರೇಮದ ನಾಟಕವಾಡಿ ಮದುವೆಯಾಗಿದ್ದಾಳೆ. ಇದರ ನಡುವೆ ಹೂವಿಯ ಜೊತೆ ರಾಹುಲ್ ಮಾತನಾಡಿದರೆ ಸಹಿಸುವುದಕ್ಕೆ ಸಾಧ್ಯವಿಲ್ಲ ಎನ್ನುವ ರೀತಿ ಆಡುತ್ತಿದ್ದಾಳೆ. ಇದೇ ಕಾರಣಕ್ಕೆ ನಾನು ಮನೆಗೆ ಬರಬೇಕು ಅಂದರೆ ಹೂವಿ ಮನೆಯಲ್ಲಿ ಇರಬಾರದು ಎಂದು ಕಂಡೀಷನ್ ಹಾಕಿದ್ದಳು. ಇದೇ ಕಾರಣಕ್ಕೆ ಹೂವಿಯನ್ನು ಮಂದಾರ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ.
ಚನ್ನವಲ್ಸೆ ಎಂಬ ಒಂದೇ ಒಂದು ಕಾರಣಕ್ಕೆ ಮಂದಾರ, ಹೂವಿಗೆ ಇನ್ನಿಲ್ಲದ ಕಷ್ಟಗಳನ್ನು ನೀಡುತ್ತಿದ್ದಾಳೆ. ಆದರೆ ಹೂವಿ ಏನನ್ನು ಮಾಡಲಾಗದೆ, ಹಾಸ್ಟೆಲ್ ಹುಡುಕಲು ಹೊರಟಿದ್ದಾಳೆ. ಇದೆಲ್ಲದರ ನಡುವೆ ಮಾಲಿನಿ ಈಗ ಹೂವಿಯ ಹಿನ್ನೆಲೆ ಹುಡುಕಲು ಹೊರಟಿದ್ದಾಳೆ. ಹೂವಿ ನಿಜ ರೂಪ ತಿಳಿದರೆ ಮಾಲಿನಿ ಅದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ.

ಮಂದಾರಾಳಿಂದ ಹೂವಿಯ ಮೇಲೆ ಹಲ್ಲೆ
ಮಗಳ ಸಂಸಾರ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಗೌತಮ್, ಹೂವಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತೀನಿ ಅಂತ ಹೇಳಿ ಕರೆದುಕೊಂಡು ಬಂದರು. ಆದರೆ ಹೂವಿಗೆ ಪ್ರತಿ ಕ್ಷಣ ಹಿಂಸೆ ನೀಡುತ್ತಿದ್ದಾಳೆ ಮಂದಾರಾ. ಕಾಲೇಜಿನಿಂದ ರಾಹುಲ್ ತನ್ನ ಗಾಡಿಯಲ್ಲಿ ಹೂವಿಯನ್ನು ಮನೆಗೆ ಬಿಟ್ಟಿದ್ದನ್ನು ಮಂದಾರಾ ನೋಡಿದ್ದಾಳೆ. ಇದೊಂದೆ ಕಾರಣಕ್ಕೆ ಹೂವಿಯ ಮೇಲೆ ಹಲ್ಲೆಯನ್ನು ಮಾಡಿದ್ದಾಳೆ. ಎಲ್ಲದನ್ನೂ ಹೂವಿ ಸಹಿಸಿಕೊಂಡಿದ್ದಾಳೆ.

ಹೂವಿಗೆ ಸತ್ಯ ಗೊತ್ತಾಗುವುದು ಯಾವಾಗ?
ಗೌತಮ್ ಮನೆಗೆ ಬರುವಷ್ಟರಲ್ಲಿ ಮಂದಾರ ಕೈಬರಹ ಹೂವಿಯ ಕೆನ್ನೆ ಮೇಲೆ ಇತ್ತು. ಇದನ್ನು ಗಮನಿಸಿದ ಗೌತಮ್ ಸತ್ಯವನ್ನು ತಿಳಿದುಕೊಂಡ. ಮಂದಾರಾಳನ್ನು ಕರೆದು ಒಡೆದ ಎಂದು ಕೇಳಿದಾಗ, ಒಡೆಯೋದು ಅಲ್ಲ ಸಾಯಿಸಿ ಬಿಡುತ್ತೀನಿ ಎಂದಾಗ ಮಂದಾರಾ ಮೇಲೆ ಕೈ ಮಾಡಲು ಹೋಗಿದ್ದಾನೆ. ಮಂದಾರಾ ಅಲ್ಲಿಂದ ನೇರವಾಗಿ ಮಾಲಿನಿ ಮನೆಗೆ ಹೋಗಿದ್ದಾಳೆ. ಆ ಗ್ಯಾಪ್‌ನಲ್ಲಿ ಹೂವಿಯನ್ನು ಸಮಾಧಾನ ಮಾಡುವ ಭರದಲ್ಲಿ ಗೌತಮ್. ಇದೆಲ್ಲಾ ನೀನು ಅನುಭವಿಸಬೇಕಾದ್ದು ಎಂದಾಗ ಪಕ್ಕದಲ್ಲಿಯೇ ಇದ್ದ ತಾಯಿ ಸತ್ಯ ಹೇಳದಂತೆ ತಡೆದಿದ್ದಾರೆ.

ಸತ್ಯ ಗೊತ್ತಾದರೆ ಮಾಲಿನಿಯ ಸ್ಥಿತಿ ಹೇಗಿರುತ್ತೆ?
ಮಾಲಿನಿ ಮನೆಗೆ ಕೋಪದಲ್ಲಿಯೇ ಬಂದ ಮಂದಾರ ಕಳೆದ 20 ವರ್ಷದಿಂದ ಮುಚ್ಚಿಟ್ಟಿದ್ದ ಸತ್ಯವನ್ನು ಮಗಳ ಬಳಿ ಹೇಳಿದ್ದಾಳೆ. ಚನ್ನವಲ್ಸೆಯಲ್ಲಿ ನಿಮ್ಮ ಅಪ್ಪನಿಗೆ ಯಾವುದೋ ಪ್ರೀತಿಯಾಗಿತ್ತು. ಆ ಮಹಿಳೆ ಜೊತೆ ಸಂಬಂಧವೂ ಇತ್ತು. ಹೂವಿಗೂ ಅವರಿಗೂ ಏನೋ ಕನೆಕ್ಷನ್ ಇದೆ ಎಂದಾಗ ತಂದೆ ಈ ರೀತಿ ಮಾಡಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಾಲಿನಿ ಕುಗ್ಗಿ ಹೋದಳು. ಈಗ ಈ ಹೂವಿ ಯಾರು ಎಂಬುದನ್ನು ನಾನು ತಿಳಿದುಕೊಳ್ಳುತ್ತೀನಿ ಅಂತ ಹೊರಟಿದ್ದಾಳೆ.

ಮಾಲಿನಿಗಾಗಿ ಕೆಟ್ಟವಳಾಗುತ್ತಾಳಾ ಹೂವಿ?
ಗೌತಮ್ ನಡವಳಿಕೆಯಿಂದ ಸಿಟ್ಟಾದ ಮಂದಾರ ಈಗ ಚಕ್ರವರ್ತಿ ಗೂಡಲ್ಲೂ ನೆಮ್ಮದಿ ಹಾಳು ಮಾಡಲು ಬಂದಿದ್ದಾಳೆ. ಬಂದವಳೆ ರಾಹುಲ್ ಮೇಲೆ ಕಿರುಚಾಡಿದ್ದಾಳೆ. ಮಂದಾರ ಆಡಿದ ಅವತಾರಕ್ಕೆ ರಾಹುಲ್ ಅಮ್ಮ ಮತ್ತು ದೊಡ್ಡಮ್ಮ ಹೂವಿ ಮತ್ತು ರಾಹುಲ್ ಬಗ್ಗೆ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಈ ಹೂವಿ ಯಾಕೆ ಈ ರೀತಿ ಮಾಡುತ್ತಿದ್ದಾಳೆ. ರಾಹುಲ್ ಗಾದರೂ ಬುದ್ಧಿ ಬೇಡವಾ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಇದನ್ನು ಕೇಳಿಸಿಕೊಂಡ ದೀಪ್ತಿ ಅಮ್ಮ ಮತ್ತು ದೊಡ್ಡಮ್ಮನಿಗೆ ಹೂವಿ ಬಗ್ಗೆ ತಿಳಿಸಿ ಹೇಳುತ್ತಿದ್ದಾಳೆ.


Click it and Unblock the Notifications











