ಬೆಟ್ಟದ ಹೂ: ಮತ್ತೆ ಸಿಕ್ಕಿಬಿದ್ದ ರಾಹುಲ್ : ಹೂವಿ ಜೋಡಿ ಎರಡನೇ ಬಾರಿ ಲಗ್ನ..!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿರುವ ಬೆಟ್ಟದ ಹೂ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ಒಂದೊಂದು ಟರ್ನಿಂಗ್ ಪಾಯಿಂಟ್ ನಲ್ಲೂ ಮನಸ್ಸು ರೋಮಾಂಚನಕಾರಿಯಾದಂತ ಸಂಗತಿಗಳು ಕಾಣ ಸಿಗುತ್ತಿವೆ. ಪ್ರೇಕ್ಷಕರನ್ನು ರಂಜಿಸುವಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಹಳ್ಳಿಯ ಮುಗ್ಧ ಹುಡುಗಿ ಮತ್ತು ನಗರದ ಅಮಾಯಕ ಹುಡುಗನ ಮದುವೆಯೇ ದೊಡ್ಡ ಹೈಲೇಟ್ ಪಾಯಿಂಟ್. ಈ ಮದುವೆಯ ಸುತ್ತ ಸುತ್ತುವ ಕೆಲವೊಂದು ಸಂಗತಿಗಳೆ ಧಾರಾವಾಹಿಯಲ್ಲಿ ಪ್ರಮುಖವಾಗಿದೆ.
ಮನೆಯವರಿಗೆ ಗೊತ್ತಿಲ್ಲದೆ ಆದ ಮದುವೆಯನ್ನು ಅಷ್ಟೇ ಜೋಪಾನವಾಗಿ ಗೊತ್ತಾಗದಂತೆ ಕಾಪಾಡಿಕೊಂಡು ಬಂದಿದ್ದಾರೆ. ಬೇರೊಂದು ಮದುವೆಯನ್ನು ಆಗಿ ಆಗಿದೆ. ಆದರೂ ಬ್ರಹ್ಮ ಬೆಸೆದ ಗಂಟು ಬಿಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರುವುದಿಲ್ಲ ಅಲ್ಲವಾ..? ಅದಕ್ಕಾಗಿಯೇ ಇದೀಗ ಹಳ್ಳಿ ಜನರ ಕೈಗೆ ಮತ್ತೆ ತಗಲಾಕಿಕೊಂಡಿದ್ದಾನೆ ರಾಹುಲ್.

ಇನ್ಮುಂದೆ ನಾನ್ಯಾರೋ ನೀನ್ಯಾರೋ ಎಂದ ರಾಹುಲ್
ರಾಹುಲ್ ಗೆ ಹೂವಿ ಬೇಡವಾಗಿದ್ದಾಳೆ. ಆದರೆ ಮನೆಯವರಿಗೆ ಮುತ್ತಿನಂಥ ಮಗಳು. ಅವಳನ್ನು ಬಿಟ್ಟು ಇರುವುದು ಅಷ್ಟು ಸುಲಭದ ಮಾತು ಅಲ್ಲ. ಹೀಗಾಗಿಯೇ ಮನೆಯವರು ಆಗಾಗ ಕರೆ ಮಾಡಿ, ರಾಹುಲ್ ಬಳಿ ಹೂವಿಯ ಬಗ್ಗೆಯೇ ಹೆಚ್ಚು ವಿಚಾರಿಸುತ್ತಿರುವುದು. ಇನ್ನು ರಾಹುಲ್‌ಗೆ ಯಾವಾಗ ಹೂವಿಯ ಕಾಟದಿಂದ ತಪ್ಪಿಸಕೊಳ್ಳುತ್ತೇನೋ ಎಂಬ ಗಡಿಬಿಡಿ ಹೆಚ್ಚಾಗಿಯೇ ಇತ್ತು. ಇದಕ್ಕಾಗಿಯೇ ಚನ್ವಲ್ಸೆಗೆ ಪ್ರಾಜೆಕ್ಟ್ ಮೇಲೆ ಬಂದ ರಾಹುಲ್, ಹೂವಿಯನ್ನು ಜೊತೆಗೆ ಕರೆದುಕೊಂಡು ಬಂದು, ಅರ್ಧ ದಾರಿಯಲ್ಲಿ ನೀನು ಆ ಕಡೆ ನಾನು ಈ ಕಡೆ ಅಂತ ಹೊರಟು ಬಿಟ್ಟರು. ತನ್ನ ಬದುಕಿಗೆ ಅಂಟಿಕೊಂಡಿದ್ದ ಹೂವಿ ತೊಲಗಿದಳು ಎಂದೇ ರಾಹುಲ್ ಭಾವಿಸಿದ್ದಾನೆ.

ಮತ್ತೆ ರಾಹುಲ್ – ಹೂವಿಯನ್ನು ಒಂದು ಮಾಡಿದೆ ವಿಧಿ
ಮದುವೆ ಎಂಬುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಎಂದು ಹೇಳಲಾಗುತ್ತೆ. ಹಾಗಂತ ಇದನ್ನೆಲ್ಲಾ ಧಾರಾವಾಹಿಗಳಿಗೆ ಹೋಲಿಕೆ ಮಾಡಲು ಆಗುವುದಿಲ್ಲ. ಆದರೆ ಕಥೆ ಎಣೆದ ರೀತಿಗೆ ಈ ಗಾಧೆ ಮಾತನ್ನು ನಾವೂ ನೀವೂ ಹೋಲಿಕೆ ಮಾಡಿಕೊಳ್ಳಬಹುದು. ಅದರಂತೆ ರಾಹುಲ್ ಹೂವಿಯಿಂದ ಅದೆಷ್ಟೇ ದೂರ ಸರಿದರೂ ವಿಧಿಯೆಂಬ ಮಾಯೆ ಇಬ್ಬರನ್ನು ಮತ್ತೆ ಮತ್ತೆ ಒಂದು ಮಾಡಿಯೇ ಮಾಡುತ್ತೆ. 'ಬೆಟ್ಟದ ಹೂ'ನಲ್ಲಿ ಆಗುತ್ತಿರುವುದು ಅದೇ ಕಾಟ ತಪ್ಪಿದೆ. ಇನ್ನೇನಿದ್ದರೂ, ತಾನು ಪ್ರೀತಿಸಿದ ಹುಡುಗಿಯ ಜೊತೆಗೆ ಆರಾಮವಾಗಿ ಇರಬಹುದು ಎಂದು ಲಾಡ್ಜ್‌ನಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಡುವಷ್ಟರಲ್ಲಿ, ಲಾಡ್ಜ್‌ನ ಹೊರಭಾಗದಲ್ಲಿ ಹುಲಿಯಾನ ಸೌಂಡ್ ಜೋರಾಗಿ ಕೇಳಿಸಿದೆ. ನಾನೊಂದು ತೀರ ನೀನೊಂದು ತೀರ ಎಂದು ಖುಷಿಪಟ್ಟಿದ್ದ ರಾಹುಲ್‌ಗೆ ಗಂಡ ಹೆಂಡತಿ ಎಂದರೆ ಒಂದೇ ಎಂಬುದನ್ನು ಚನ್ವಲ್ಸೆ ಜನ ಮತ್ತೆ ತೋರಿಸುತ್ತಿದ್ದಾರೆ.

ಹೂವಿ-ರಾಹುಲ್‌ಗೆ ಮತ್ತೊಮ್ಮೆ ಮದುವೆ
ಇದಕ್ಕೂ ಹೂವಿಗೂ ಪಾಪ ಯಾವುದೇ ಸಂಬಂಧವಿಲ್ಲ. ರಾಹುಲ್ ಸರ್ ಊರಿಗೆ ಬಂದಿರುವುದನ್ನು ಹೂವಿ ತಾನಾಗಿಯೇ ಯಾವುದನ್ನು ಹೇಳಿಲ್ಲ. ಆದರೆ ಮನೆಯವರ ಒತ್ತಡಕ್ಕೆ ಮಣಿದು, ತಾಯಿಯ ಆರೋಗ್ಯದ ಸ್ಥಿತಿ ಕಂಡು ಸತ್ಯವನ್ನು ಬಾಯಿ ಬಿಡಲೇಬೇಕಾಯಿತು. ರಾಹುಲ್ ಸರ್ ಇಲ್ಲೆ ಲಾಡ್ಜ್‌ನಲ್ಲಿದ್ದಾರೆ ಎಂದಿದ್ದೆ ತಡ, ಊರ ಅಳಿಯನನ್ನು ಕರೆ ತರಲು ಎಲ್ಲರೂ ಸಿದ್ಧವಾಗಿಯೇ ಬಿಟ್ಟರು. ಆದರೆ ಇದಕ್ಕೆ ಹೂವಿ ಸುತರಾಮ್ ಒಪ್ಪುತ್ತಿಲ್ಲ. ಹಾಗಂತ ಮನೆಯವರು ಅಳಿಯನನ್ನು ಕರೆತರದೆ ಇರುವುದಕ್ಕೆ ಆಗುತ್ತದೆಯೇ. ನೋ ವೇ ಚಾನ್ಸೇ ಇಲ್ಲ. ಹೂವಿಯನ್ನು ನಯಾ ನಾಜೂಕಾಗಿ ಒಳಗೆ ಕಳುಹಿಸಿ, ಲಾಡ್ಜ್ ನತ್ತ ಹೊರಟು ಬಿಟ್ಟರು. ಅಲಿಯನ ಬಳಿ ಕ್ಷಮೆ ಕೇಳಿ ಕರೆತರಲು. ಮೊದಲೇ ಚನ್ವಲ್ಸೆ ಜನ ಎಂದರೆ ರಾಹುಲ್‌ಗೆ ಎಲ್ಲಿಲ್ಲದ ಭಯ ಭಕ್ತಿ. ಅದರಲ್ಲೂ ಹುಲಿಯಾನನ್ನು ಕಂಡರೆ ಕೊಂಚ ಹೆಚ್ಚೆ ಭಯ. ಗಂಡ ಹೆಂಡತಿ ಇಬ್ಬರಿಗೂ ಹಾರ ಹಾಕಿ, ಮೆರವಣಿಗೆ ಮೂಲಕ ಕರೆತಂದು ಮತ್ತೆ ಮದುವೆ ಮಾಡಿಸಿಯೇ ಬಿಟ್ಟಿದ್ದಾರೆ. ರಾಹುಲ್‌ಗೆ ಅದೇನು ಪುಣ್ಯವೋ ಏನೋ ಮತ್ತೆ ಮತ್ತೆ ತಾಳಿ ಕಟ್ಟುತ್ತಲೇ ಇದ್ದಾರೆ.

ಮತ್ತೆ ರಾಹುಲ್ ಹೂವಿಗೆ ಹೆಂಡತಿ ಸ್ಥಾನ ನೀಡುತ್ತಾನಾ?
ಹೂವಿಯನ್ನು ಚನ್ವಲ್ಸೆಗೆ ಕರೆದುಕೊಂಡು ಬಂದ ರಾಹುಲ್ ಮೊದಲೇ ಫಿಕ್ಸ್ ಆಗಿದ್ದ. ಇನ್ನು ಮುಂದೆ ನನ್ನ ಜೀವನದಲ್ಲಿ ಹೂವಿ ಇರುವುದಿಲ್ಲ. ಮಾಲಿನಿ ಜೊತೆಗೆ ಚೆಂದವಾಗಿ ಬದುಕಬಹುದು ಎಂದು. ಆದರೆ ಚನ್ವಲ್ಸೆ ಜನ ಅದಕ್ಕೆ ಬಿಡಬೇಕಲ್ಲ. ಮಗಳು ಬಂದ ಖುಷಿಯ ಜೊತೆಗೆ ಅಳಿಯ ಜೊತೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಅಂದು ತರಾತುರಿಯಲ್ಲಿ ಹೆಂಗೆಗೋ ಮದುವೆ ಮಾಡಿಕೊಟ್ಟಿದ್ದರು. ಇದೀಗ ಮತ್ತೆ ಶಾಸ್ತ್ರಬದ್ಧವಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಇಲ್ಲಿಯೇ ಬಿಟ್ಟು ಹೋಗುವ ರಾಹುಲ್ ಫ್ಲ್ಯಾನ್ ಫ್ಲಾಫ್ ಆಗಿದ್ದಂತು ಸತ್ಯ.


Click it and Unblock the Notifications











