ಬೆಟ್ಟದ ಹೂ : ಹೂವಿ ಮನೆಯವರ ಮುಂದೆ ಏಳೇಳು ಜನ್ಮಕ್ಕೂ ಮಾಲಿನಿಯೇ ಹೆಂಡ್ತಿ ಎಂದ ರಾಹುಲ್..!

By ಎಸ್ ಸುಮಂತ್

ಬಿಟ್ಟು ಬಿಡದ ನಂಟು ರಾಹುಲ್ ಮತ್ತು ಹೂವಿಯದ್ದು. ಕಾಟ ಕಳೆಯಿತು ಅಂತ ಅದೆಷ್ಟೇ ದೂರ ಹೋದರೂ ಕಟ್ಟಿದ ತಾಳಿಯ ನಂಟು ಮತ್ತೆ ಮತ್ತೆ ಹತ್ತಿರ ಮಾಡುತ್ತಿದೆ. ಕಳೆದ ಬಾರಿ ಚನವಲ್ಸೆಗೆ ಬಂದಿದ್ದ ರಾಹುಲ್ ಏನೋ ಮಾಡಲು ಹೋಗಿ ಮದುವೆ ಬಂಧನಕ್ಕೆ ಕಟ್ಟು ಬಿದ್ದಿದ್ದ. ಊರಿನವರ ಬೆದರಿಕೆಗೆ ಕಟ್ಟುಬಿದ್ದು, ಹೂವಿಯನ್ನು ಮದುವೆಯಾಗಿ, ಮನೆಗೂ ಕರೆದುಕೊಂಡು ಹೋಗಿದ್ದ. ಮನೆಯ ಕೆಲಸದವಳಂತೆ ಕಂಡರೂ ಹೂವಿ ಎಲ್ಲದಕ್ಕೂ ಬೆಲೆ ಕೊಟ್ಟು, ಕೆಲಸವನ್ನು ಜವಾಬ್ದಾರಿಯೆಂದು ಬಾಳುತ್ತಿದ್ದಳು. ಆದರೆ ರಾಹುಲ್ ಹೂವಿ ಎದುರು ಮತ್ತೊಂದು ಮದುವೆಯಾಗಿ ಮೋಸ ಮಾಡಿದ್ದಾನೆ.

ಹೂವಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ರಾಹುಲ್ ಭಾವನೆಗಳಿಗೆ, ರಾಹುಲ್ ಪ್ರೀತಿಗೆ ಬೆಲೆ ಕೊಟ್ಟಳು. ಮನೆಯವರೆದುರು ಸತ್ಯವನ್ನೇ ಹೇಳದೆ ಎಲ್ಲವನ್ನೂ ಮುಚ್ಚಿಟ್ಟು, ತನಗೆಷ್ಟೇ ನೋವಾದರೂ ನಗುತ್ತಾ ಮನೆಯವರೆದುರು ನಿಂತು, ಶಾಸ್ತ್ರಗಳಲ್ಲೆಲ್ಲಾ ಭಾಗಿಯಾಗಿದ್ದಳು. ಆದರೆ ವಿಧಿ ಎಂಬ ಮಾಯೆ ಅದಲ್ಲೆವನ್ನೂ ಬಿಡಬೇಕಲ್ಲ. ಮತ್ತೆ ಗಂಡ ಹೆಂಡತಿಯನ್ನು ಒಂದು ಮಾಡಿದೆ.

ರಾಹುಲ್ ಫ್ಲ್ಯಾನ್ ಫ್ಲಾಪ್ ಆಗಿದ್ದೇಗೆ?

ರಾಹುಲ್ ಫ್ಲ್ಯಾನ್ ಫ್ಲಾಪ್ ಆಗಿದ್ದೇಗೆ?

ಹೂವಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ರಾಹುಲ್ ಆಕೆಯ ಮುಂದೆಯೇ ಮಾಲಿನಿಯನ್ನು ಮದುವೆಯಾಗಿದ್ದು, ಹೆಂಡತಿಯನ್ನು ಹೆಚ್ಚು ಪ್ರೀತಿ ಮಾಡುತ್ತಾನೆ. ರಾಹುಲ್‌ನ ಈ ನಡತೆ ಹೂವಿಗೆ ಆಗಾಗ ಬೇಸರ ತರಿಸಿದರೂ ಕೂಡ ಮನಸ್ಸಲ್ಲೇ ನೊಂದು, ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾಳೆ. ಹೂವಿನ ಆದಷ್ಟು ಬೇಗ ಊರಿಗೆ ಕಳುಹಿಸಬೇಕೆಂಬ ರಾಹುಲ್ ಆಲೋಚನೆ ಕೈಗೂಡಿದೆ. ಚನವಲ್ಸೆಗೆ ಹೊರಟು ನಿಂತ ರಾಹುಲ್ ಜೊತೆಗೆ ಮನೆಯವರು ಹೂವಿಯನ್ನು ಕಳುಹಿಸಿದ್ದಾರೆ. ರಾಹುಲ್ ಮತ್ತಿನ್ಯಾವತ್ತೂ ಹೂವಿಯನ್ನು ಕರೆದುಕೊಂಡು ಬರಬಾರದು ಎಂದೇ ನಿರ್ಧರಿಸಿದ್ದಾನೆ. ಅದರಂತೆ ಹೂವಿಗೂ ಈ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾನೆ. ಆದರೆ ಚನವಲ್ಸೆಗೆ ಹೋದ ಬಳಿಕ ಎಲ್ಲವೂ ಉಲ್ಟಾ ಆಗಿದೆ. ಊರಿನವರ ಕೈಗೆ ಮತ್ತೆ ಸಿಕ್ಕಿಬಿದ್ದಿದ್ದು, ಊರಿನ ಅಳಿಯನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಮಾಲಿನಿ ಜೊತೆ ಮಾತಾಡುವಾಗ ಸಿಕ್ಕಿ ಬೀಳುತ್ತಿದ್ದ ರಾಹುಲ್!

ಮಾಲಿನಿ ಜೊತೆ ಮಾತಾಡುವಾಗ ಸಿಕ್ಕಿ ಬೀಳುತ್ತಿದ್ದ ರಾಹುಲ್!

ರಾಹುಲ್ ಮತ್ತು ಹೂವಿ ಚನವಲ್ಸೆಯಲ್ಲಿದ್ದಾರೆ. ಅಂದು ಅರೆಬರೆ ರೀತಿಯಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ಅಳಿಯನ ಬಳಿ ಕ್ಷಮೆಯಾಚಿಸಿ, ಊರಿನವರ ಮುಂದೆ ಶಾಸ್ತ್ರಬದ್ಧವಾಗಿ ವಿವಾಹ ಮಾಡಿದ್ದಾರೆ. ಗಂಡು ಹೆಣ್ಣಿನ ದಿಬ್ಬಣವು ಹೊರಟು ಬಂದಿದೆ. ದಿಬ್ಬಣ ಬರುವ ಸಮಯಕ್ಕೆ ಸರಿಯಾಗಿ ಮಾಲಿನಿಯ ಕರೆ ಬಂದಿದೆ. ರಾಹುಲ್‌ಗೆ ಒಂದು ಕಡೆ ಭಯ. ಮಾಲಿನಿಗೆ ಮೋಸ ಮಾಡುತ್ತಿದ್ದೇನೆ ಎಂಬುದು. ಆದರೂ ಎಲ್ಲವನ್ನೂ ಸಹಿಸಿ ಮಾತನಾಡುತ್ತಿರುವಾಗ, ಡೋಲು ಶಬ್ಧ ಕೇಳಿ ಮಾಲಿನಿಗೆ ಅನುಮಾನ ಬಂದಿದೆ. ಕಡೆಗೂ ಆ ಬಗ್ಗೆ ಕೇಳಿದಾಗ ಇದು ಯಾರದ್ದೋ ಮದುವೆ ದಿಬ್ಬಣ ಎಂದು ರಾಹುಲ್ ಯಾಮಾರಿಸಿದ್ದಾನೆ. ಅಷ್ಟೇ ಅಲ್ಲ ಹೂವಿ ಊರಿನ ಮಹಿಳೆಯರು 'ಅಳಿಯಂದಿರೆ ಬನ್ನಿ' ಅಂತ ಕರೆದಾಗ ರಾಹುಲ್ ಬೆಚ್ಚಿ ಬಿದ್ದಿದ್ದ. ಆಗಲೂ ಮಾಲಿನಿ ಒಂದು ಕ್ಷಣ ಶಾಕ್ ಆಗಿದ್ದಳು. ಅದೇ ಕ್ಷಣ ಹೂವಿ ಬಂದು ಹೇಗೋ ಸಮಸ್ಯೆಯನ್ನು ಬಗೆಹರಿಸಿದ್ದಾಳೆ. ಬೇರೆ ಯಾರನ್ನೋ ಅಳಿಯರೆಂದರು ಅಂತ ರಾಹುಲ್ ಮತ್ತೊಂದು ಸುಳ್ಳು ಹೇಳಿ ಸಮಾಧಾನ ಮಾಡಿದ್ದಾನೆ.

ಹೂವಿ ಮನೆಯವರ ಎದುರು ಮಾಲಿನಿ ಹೆಸರೇಳಿದ ರಾಹುಲ್!

ಹೂವಿ ಮನೆಯವರ ಎದುರು ಮಾಲಿನಿ ಹೆಸರೇಳಿದ ರಾಹುಲ್!

ಹೂವಿ ಮತ್ತು ರಾಹುಲ್‌ಗೆ ಚನವಲ್ಸೆಯವರೆಲ್ಲಾ ಸೇರಿ ಮತ್ತೆ ಮದುವೆ ಮಾಡಿದ್ದಾರೆ. ಏಳೇಳು ಜನುಮಕ್ಕೂ ನೀನೆ ನನ್ನ ಹೆಂಡತಿಯಾಗಿರಬೇಕು ಎಂಬ ವಾಕ್ಯವನ್ನು ಹೇಳಿಸಿದ್ದಾರೆ. ಆದರೆ ಈ ಮಂತ್ರ ಹೇಳುವಾಗ ರಾಹುಲ್ ಎಡವಿದ್ದಾನೆ. ಹೂವಿ ಹೆಸರೇಳುವ ಬದಲಿಗೆ ಮಾಲಿನಿ ಹೆಸರೇಳಿದ್ದಾನೆ. ಏಳೇಳು ಜನ್ಮಕ್ಕೂ ನೀನೆ ನನ್ನ ಹೆಂಡತಿಯಾಗಿ ಬರಬೇಕು ಮಾಲಿನಿ ಎಂದಿದ್ದಾನೆ. ಈ ಮಾತು ಕೇಳಿ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ.

ಮಾಲಿನಿ ತಾಯಿಗೆ ಹೂವಿ ಊರು ಕಂಡ್ರೆ ಭಯ

ಮಾಲಿನಿ ತಾಯಿಗೆ ಹೂವಿ ಊರು ಕಂಡ್ರೆ ಭಯ

ಮಾಲಿನಿ ತಾಯಿ ಈಗಾಗಲೇ ಮನೆಗೆ ಬಂದು ಜಗಳವಾಡಿ ಹೋಗಿದ್ದಾಳೆ. ಮಗಳ ಜೀವನ ಸರಿಯಾಗುತ್ತಿಲ್ಲ ಎಂದು. ಯಾಕೆಂದರೆ ಚನವಲ್ಸೆ ಎಂದರೆ ಗಂಡನ ಪ್ರೀತಿ ಕಳೆದುಕೊಂಡೆ ಎಂಬ ಭಯ ಅವಳದ್ದು. ಆದರೆ ನಿಜವಾಗಲೂ ಪ್ರೀತಿ ಕಳೆದುಕೊಂಡು, ಅನ್ಯಾಯದಲ್ಲಿರುವುದು ಗೌರ. ಗಂಡನ ಪ್ರೀತಿಯೂ ಇಲ್ಲದೆ, ಅಧಿಕೃತ ಸಂಬಂಧವೂ ಇಲ್ಲದೆ ಗೌರ ಒಬ್ಬ ಮಗಳನ್ನು ಸಾಕುತ್ತಾ ಇದ್ದಾಳೆ. ಆಕೆಯೇ ಹೂವಿ. ಈಗ ಹೂವಿಗೂ ತನ್ನ ಅಕ್ಕನಿಂದಲೇ ಮತ್ತೆ ಅನ್ಯಾಯವಾಗಿದೆ. ಹೂವಿಯ ಗಂಡನನ್ನೇ ಮಾಲಿನಿ ಮದುವೆಯಾಗಿದ್ದಾಳೆ. ಅದೇ ಚನವಲ್ಸೆಯಲ್ಲಿ ಮತ್ತೊಂದು ಮದುವೆಯಾಗಿದ್ದಾನೆ ನನ್ನ ಅಳಿಯ ಎಂಬ ಸತ್ಯ ತಿಳಿದರೆ ಮಾಲಿನಿ ತಾಯಿ ಇನ್ನೇನು ಮಾಡಬಹುದು ಎಂಬ ಆತಂಕವಿದೆ.

More from Filmibeat

English summary
Star Suvarna Serial Bettada Hoo Written Update On April 29th Episode. Here is the details about Rahul tells to malini name at home home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X