Bettada Hoo Serial: ಸತ್ಯ ಒಪ್ಪಿಕೊಂಡ ರಾಹುಲ್ : ಹೂವಿಯನ್ನು ಸೊಸೆಯಾಗಿ ಸ್ವೀಕರಿಸ್ತಾರಾ ಮನೆಯವರು?
ಹೂವಿಯ ಬದುಕನ್ನು ನೋಡಿದರೆ ಎಂಥವರಿಗೂ ಕರುಳು ಚುರ್ ಎನ್ನದೆ ಇರಲಾರದು. ಏನು ತಿಳಿಯದ ಮುಗ್ಧೆಗೆ ಇಂಥ ಸ್ಥಿತಿ ಬಂತಲ್ಲ ಅಂತ ಅದೆಷ್ಟು ಬಾರಿ ಪ್ರೇಕ್ಷಕರು ಮನಸ್ಸೊಳಗೆ ಶಾಪ ಹಾಕಿದ್ದರೋ, ಮರೆಯಲ್ಲೇ ಕಣ್ಣೀರು ಸುರಿಸಿದ್ದರೋ ಗೊತ್ತಿಲ್ಲ. ಆ ನೋವಿನಲ್ಲೂ ತಾವೂ ನಂಬುವ ದೇವರನ್ನು ಬೇಡಿಕೊಂಡಿದ್ದರು. ಹೇಗಾದರೂ ಆಗಲಿ ರಾಹುಲ್ ಬದಲಾಗಲಿ ಅಂತ. ಇದೊಂದು ಧಾರಾವಾಹಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದೆ ಏನೋ ನಮ್ಮ ಮನೆಯ ಅಕ್ಕಪಕ್ಕದಲ್ಲೇ ಈ ಘಟನೆ ನಡೆಯುತ್ತಿದೆ ಎಂದು ಭಾವಿಸಿ ಫೀಲ್ ಮಾಡಿಕೊಂಡಿರುವವರ ಸಂಖ್ಯೆ ಕೊಂಚ ಹೆಚ್ಚಾಗಿಯೇ ಇತ್ತು.
ಮಹಿಳಾ ಮಣಿಗಳ ಮನಸ್ಸು ನಿರ್ದೇಶಕರಿಗೂ ತಿಳಿದಿತ್ತು. ನೊಂದ ಜೀವವನ್ನು ಮತ್ತೆ ಮತ್ತೆ ನೋಯಿಸುವುದು ಬೇಡ ಎಂದು ಡಿಸೈಡ್ ಮಾಡಿದ ನಿರ್ದೇಶಕರು ಕಡೆಗೂ ರಾಹುಲ್‌ಗೆ ಬುದ್ಧಿ ಬರುವಂತೆ ಮಾಡಿದ್ದಾರೆ. ಮುಳುಗಿ ಹೋಗುತ್ತಿದ್ದ ಹೂವಿಯ ಬಾಳಿಗೆ ರಾಹುಲ್ ಮತ್ತೆ ಬೆಳಕಾಗಿದ್ದಾನೆ. ಹೂವಿಯೇ ನನ್ನ ಹೆಂಡತಿ ಅಂತ ಎಲ್ಲರೆದುರು ರಾಜಾರೋಷವಾಗಿ ಒಪ್ಪಿಕೊಂಡಿದ್ದಾನೆ.

ಪ್ರೋಮೊ ನೋಡಿ ವೀಕ್ಷಕರು ಖುಷ್
ಇದು ಜಸ್ಟ್ ಟ್ರಯಲ್ ಅಂತಾರಲ್ಲ ಹಾಗೆ ಆಯಿತು ನೋಡಿ 'ಬೆಟ್ಟದ ಹೂ' ಧಾರಾವಾಹಿ ಆ ಒಂದು ಪ್ರೋಮೋ ಕಟ್. ಮಹಿಳಾ ಮಣಿಗಳೆಲ್ಲಾ ಈಗ ಸಿಕ್ಕಾಪಟ್ಟೆ ಬುದ್ಧಿವಂತರಾಗಿ ಬಿಟ್ಟಿದ್ದಾರೆ. ರಾತ್ರಿ ಬರುವ ಧಾರಾವಾಹಿಗಳನ್ನು ಮಧ್ಯಾಹ್ನದ ಪ್ರೋಮೋದಲ್ಲೇ ಡಿಸೈಡ್ ಮಾಡಿ ಬಿಡುತ್ತಾರೆ. ಇವತ್ತು ಫುಲ್ ಎಪಿಸೋಡ್ ನೋಡುವುದಕ್ಕೆ ನಾವೂ ಫ್ರೀ ಆಗಬೇಕಾ ಬೇಡವಾ ಎಂಬುದನ್ನು ಅಲ್ಲಿಯೇ ನಿರ್ಧರಿಸಿ ಬಿಡುತ್ತಾರೆ. ಹೀಗಾಗಿಯೇ ಒಂದಷ್ಟು ಧಾರಾವಾಹಿಗಳನ್ನು ಕೆಲವೊಂದು ದಿನ ಸ್ಕಿಪ್ ಮಾಡಬೇಕಾದ ಅನಿವಾರ್ಯತೆ ಬಂದು ಒದಗುತ್ತೆ. ಆ ಅನಿವಾರ್ಯತೆಯನ್ನು ಕ್ರಿಯೇಟ್ ಮಾಡೋದು ಇದೇ ಪ್ರೋಮೋಗಳು. ಆದರೆ ಇಂದಿನ 'ಬೆಟ್ಟದ ಹೂ' ಪ್ರೋಮೋ ಇದೆಯಲ್ಲಾ ವ್ಹಾ... ಮಿಸ್ ಮಾಡೋ ಮಾತೇ ಇಲ್ಲ ಎಂಬಷ್ಟು ಖುಷಿಯನ್ನು ಸೃಷ್ಟಿ ಮಾಡಿದೆ.

ರಾಹುಲ್ ಕೈನಲ್ಲಿ ತಾಳಿ.. ವೀಕ್ಷಕರು ಫುಲ್ ಗಾಬರಿ..!
'ಬೆಟ್ಟದ ಹೂ' ಧಾರಾವಾಹಿ ಪ್ರಿಯರಾಗಿದ್ದರೆ ನಿಮಗೆಲ್ಲಾ ಈಗಾಗಲೇ ಸ್ಟೋರಿ ಗೊತ್ತಿರುತ್ತೆ. ಸದ್ಯ ರಾಹುಲ್ ಮತ್ತು ಮಾಲಿನಿ ಮದುವೆ ತಾಳಿ ಕಟ್ಟುವ ಸಮಯದವರೆಗೂ ಬಂದು ನಿಂತಿದೆ. ವಿಧಿ ಹಾಗೋ ಹೀಗೋ ಅರ್ಧಕ್ಕೆ ಹೊರಟು ನಿಂತ ಹೂವಿಯನ್ನೇನೋ ತಡೆದು ನಿಲ್ಲಿಸಿದೆ. ಗಂಡ ಹಸೆಮಣೆ ಏರಿ ಮತ್ತೊಬ್ಬಳನ್ನು ಮದುವೆಯಾಗಲೂ ರೆಡಿಯಾದರೆ. ಪಾಪ ಹೂವಿ ತನ್ನೆಲ್ಲಾ ನೋವನ್ನು ನುಂಗಿಕೊಂಡು ತಾಳಿಗೆ ಎಲ್ಲರ ಆಶೀರ್ವಾದವನ್ನು ಬೇಡಿ ತಂದಿದ್ದಾಳೆ. ಇನ್ನೇನು ನನ್ನ ಜೀವನ ಮುಗಿದ ಅಧ್ಯಾಯ ಎಂದು ಮಂಕಾಗಿ ನಿಂತಿದ್ದ ಹೂವಿಯ ಬಾಳಲ್ಲಿ ಕಡೆಗೂ ತಂಗಾಳಿ ಬೀಸುವ ಸಮಯ ಬಂದಿದೆ. ಗಂಡ ವಾಪಾಸು ಬರುವ ಎಲ್ಲಾ ಲಕ್ಷಣಗಳು ಸುಳಿದಾಡಿದೆ.
ರಾಹುಲ್ ಮನಸ್ಸು ಬದಲಾಯ್ತಾ?
ಪ್ರೀತಿನಾ-ಹೆಂಡತಿನಾ ಎಂಬ ಆಯ್ಕೆಯಲ್ಲಿ ರಾಹುಲ್ ಆಯ್ದುಕೊಂಡಿದ್ದು ತಾನು ಪ್ರೀತಿಸಿದ್ದವಳನ್ನು. ಹೂವಿ ಮನಸ್ಸಿಗೆ ಅದೆಷ್ಟೇ ನೋವಾದರೂ ಆಕೆಯ ಯಾವ ಭಾವನೆಗೂ ಬೆಲೆ ಕೊಡಲಿಲ್ಲ. ತನ್ನ ಖುಷಿ, ತನ್ನ ಜೀವನವನ್ನಷ್ಟೇ ಬಯಸಿದ ರಾಹುಲ್ ಕಡೆಗೂ ಹೂವಿಯ ಮುಗ್ಧತೆ ರಾಹುಲ್‌ಗೆ ಅರ್ಥವಾಗಿದೆ. ಇನ್ನೇನು ತಾಳಿ ಕಟ್ಟಲು ಹೊರಟಾಗ ತಾನು ಮಾಡುತ್ತಿರುವ ತಪ್ಪು ಅರಿವಿಗೆ ಬಂದಿದೆ. ನಾನು ಮಾಲಿನಿಯನ್ನು ಮದುವೆಯಾಗಲ್ಲ. ಈಗಾಗಲೇ ಮದುವೆಯಾಗಿದ್ದೀನಿ. ಹೂವಿಯೇ ನನ್ನ ಹೆಂಡತಿ ಎಂದಿದ್ದಾನೆ.
Recommended Video


ಸೀರಿಯಲ್‌ನಲ್ಲಿ ಹೂವಿ ಕಥೆಯೇನು?
ಇದು ಮನೆಯವರಿಗೆಲ್ಲಾ ಅರಗಿಸಿಕೊಳ್ಳಲು ಅಸಾಧ್ಯವಾದ ವಿಚಾರವಾಗಿದೆ. ಮುಂದೆ ಹೂವಿಯ ಬದುಕು ಎತ್ತ ಸಾಗುತ್ತೆ. ಮನೆ ಮಂದಿಯೆಲ್ಲಾ ಕೆಲಸದಾಳಾಗಿ ಇಷ್ಟಪಟ್ಟಿದ್ದ ಹೂವಿಯನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಸದ್ಯ ಎಲ್ಲರ ತಲೆಯಲ್ಲೂ ಕೊರೆಯುತ್ತಿದೆ.


Click it and Unblock the Notifications











